ಕಳೆದ ಕೆಲವು ದಿನಗಳಿಂದ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹದಗೆಡುತ್ತಾ ಸಾಗುತ್ತಿದೆ. ಹೂಡಿಕೆ ಒಪ್ಪಂದಗಳ ಮುಂದುವರಿಕೆ ಸೇರಿದಂತೆ ವೀಸಾದವರೆಗೂ ಭಾರತ ಮತ್ತು ಕೆನಡಾ ಎರಡೂ ಸರ್ಕಾರಗಳು ಮಾತುಕತೆ ನಿಲ್ಲಿಸಿದೆ. ಭಾರತವು ಕೆನಡಾದ ನಾಗರಿಕರಿಗೆ ವೀಸಾ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಭಾರತದಲ್ಲಿ ಕೆನಡಾದ ಹೂಡಿಕೆ ಬಗ್ಗೆ ಕ್ರಮಕೈಗೊಂಡಿಲ್ಲ.
ಈ ನಡುವೆಯೂ ಭಾರತೀಯ ಆರ್ಥಿಕತೆ ಮತ್ತು ಮಾರುಕಟ್ಟೆಯು ಎನ್‌ಆರ್‌ಐಗಳು ಸೇರಿದಂತೆ ವಿದೇಶಿ ಹೂಡಿಕೆದಾರರಿಗೆ ಆಕರ್ಷಕ ಹೂಡಿಕೆ ಕೇಂದ್ರವಾಗಿದೆ. ಕೆನಡಾದ ಎನ್‌ಆರ್‌ಐಗಳು ಭಾರತ ದೇಶದಲ್ಲಿ ಹೂಡಿಕೆ ಆಯ್ಕೆಗಳನ್ನು ಹೊಂದಿದ್ದಾರೆ. ಭಾರತದಲ್ಲಿ ಹೂಡಿಕೆ ಮಾಡಲು, ಎನ್‌ಆರ್‌ಐಗಳು ಎನ್‌ಆರ್‌ಇ ಅಥವಾ ಎನ್‌ಆರ್‌ಒ ಖಾತೆಯನ್ನು ತೆರೆಯಬೇಕಾಗುತ್ತದೆ. ಈ ಪ್ರಕ್ರಿಯೆ ಸರಳವಾಗಿದೆ. ಈ ಖಾತೆಗಳು ಕೆನಡಾದ ಎನ್‌ಆರ್‌ಐಗಳಿಗೆ ತಮ್ಮ ವಿದೇಶಿ ಗಳಿಕೆಯನ್ನು ಭಾರತೀಯ ಕರೆನ್ಸಿಯಲ್ಲಿ ಭಾರತೀಯ ಖಾತೆಗಳಿಗೆ ವರ್ಗಾಯಿಸಲು ಅನುವು ಮಾಡಿಕೊಡುತ್ತದೆ.

ಕೆನಡಾದಲ್ಲಿರುವ ಎನ್‌ಆರ್‌ಇಗಳಿಗಿರುವ ಹೂಡಿಕೆ ಆಯ್ಕೆಗಳು
ಕೆನಡಾದಲ್ಲಿರುವ ಎನ್‌ಆರ್‌ಇಗಳಿಗೆ ಭಾರತದಲ್ಲಿ ಹಲವಾರು ಹೂಡಿಕೆ ಆಯ್ಕೆಗಳು ಇದೆ. ಅಪಾಯ ಹೊಂದಿರುವ ಹೂಡಿಕೆಯಿಂದ ಹಿಡಿದು, ಯಾವುದೇ ಅಪಾಯವಿಲ್ಲದ ಹೂಡಿಕೆ ಆಯ್ಕೆವರೆಗೆ ಹಲವಾರು ಹೂಡಿಕೆಗಳು ಲಭ್ಯವಿದೆ. ಅಂತಹ 7 ಹೂಡಿಕೆ ಆಯ್ಕೆಗಳು ಈ ಕೆಳಗಿದೆ. ಮುಂದೆ ಓದಿ...
1. ಮ್ಯೂಚುವಲ್ ಫಂಡ್
ಮ್ಯೂಚುಯಲ್ ಫಂಡ್ ಹಲವಾರು ಹೂಡಿಕೆದಾರರಿಂದ ಹಣವನ್ನು ಹೂಡಿಕೆ ಮಾಡಲು ಮೊದಲು ಕಾಣಿಸುವ ಆಯ್ಕೆಯಾಗಿದೆ. ಇಕ್ವಿಟಿಗಳು, ಬಾಂಡ್‌ಗಳು, ಸರ್ಕಾರಿ ಭದ್ರತೆಗಳು ಮೊದಲಾದವುಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಹೂಡಿಕೆಯ ಉದ್ದೇಶಕ್ಕೆ ಅನುಗುಣವಾಗಿ ನಾವು ಹೂಡಿಕೆ ಮಾಡಬಹುದಾಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ, ಮ್ಯೂಚುಯಲ್ ಫಂಡ್‌ಗೆ ಅರ್ಜಿ ಸಲ್ಲಿಸುವ ಮೊದಲ ಹಂತವು ಕೆವೈಸಿ ಮಾಡುವುದು ಆಗಿದೆ. ಅಗತ್ಯವಿರುವ ದಾಖಲೆಗಳಲ್ಲಿ ಗುರುತು ಮತ್ತು ವಿಳಾಸದ ಪುರಾವೆಗಳು, ಜೊತೆಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇನ್ನು ಎಲ್ಲಾ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿ (ಎಎಂಸಿ) ಕೆನಡಾದ ಎನ್‌ಆರ್‌ಐಗಳಿಂದ ಹೂಡಿಕೆಗೆ ಸ್ವೀಕರಿಸದು. ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಈ ಪ್ರಕ್ರಿಯೆ ಸರಳಗೊಳಿಸಲಾಗಿದೆ.
2. ಆಫ್‌ಶೋರ್ (ಕಡಲಾಚೆಯ) ಹೂಡಿಕೆಗಳು
ಕಡಲಾಚೆಯ ಆಸ್ತಿಗಳಲ್ಲಿ ಹೂಡಿಕೆದಾರರು ಇಕ್ವಿಟಿ ಮತ್ತು ಸ್ಥಿರ ಆದಾಯದ ಬಾಂಡ್‌ಗಳಿಂದ ಸರಕುಗಳವರೆಗೆ ಹೂಡಿಕೆ ಮಾಡಬಹುದು. ಆಫ್‌ಶೋರ್ ಫಂಡ್‌ಗಳು ಕೆಲವು ಪ್ರಯೋಜನಗಳನ್ನು ನೀಡುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶ ಕಲ್ಪಿಸುತ್ತದೆ. ಹಾಗೆಯೇ ನಿರ್ದಿಷ್ಟ ದೇಶಗಳು ಅಥವಾ ವಲಯಗಳಲ್ಲಿ ಬೆಳವಣಿಗೆಗೆ ಅವಕಾಶ ಹೆಚ್ಚಿಸುತ್ತದೆ.
3. ರಿಯಲ್ ಎಸ್ಟೇಟ್
ಪ್ರಸ್ತುತ, ಭಾರತದ ರಿಯಲ್ ಎಸ್ಟೇಟ್ ಮಾರುಕಟ್ಟೆಯು ಬೆಳವಣಿಗೆ ಕಾಣುತ್ತಿದೆ. ಐಬಿಇಎಫ್ ಮಾಹಿತಿ ಪ್ರಕಾರ, 2022-23 ರ ಹಣಕಾಸು ವರ್ಷದಲ್ಲಿ, ಭಾರತೀಯ ವಸತಿ ಪ್ರಾಪರ್ಟಿ ಮಾರುಕಟ್ಟೆಯು ಸಾರ್ವಕಾಲಿಕ ಮಾರಾಟ ದಾಖಲಿಸಿದೆ. 3.47 ಲಕ್ಷ ಕೋಟಿ ರೂಪಾಯಿ (42 ಬಿಲಿಯನ್ ಡಾಲರ್) ದಾಖಲಿಸಿದೆ. ವರ್ಷದಿಂದ ವರ್ಷಕ್ಕೆ ಶೇಕಡ 48 ರಷ್ಟು ಹೆಚ್ಚಳ ಕಂಡಿದೆ. ಇಲ್ಲಿ ಎನ್‌ಆರ್‌ಐಗಳು ಹೂಡಿಕೆ ಮಾಡಬಹುದು.
4. ಫಿಕ್ಸಿಡ್ ಡೆಪಾಸಿಟ್
ಫಿಕ್ಸಿಡ್ ಡೆಪಾಸಿಟ್‌ಗಳು ಸಾಮಾನ್ಯವಾಗಿಯೇ ಹೆಚ್ಚಿನ ಬಡ್ಡಿದರ ನೀಡುತ್ತದೆ. ಈ ಹೂಡಿಕೆ ರಿಸ್ಕ್ ಇಲ್ಲ, ಖಾತರಿ ಆದಾಯವು ಲಭ್ಯವಾಗುತ್ತದೆ. ಇದು ಕೇವಲ ಭಾರತೀಯ ನಿವಾಸಿಗಳಿಗೆ ಅಲ್ಲ, ಎನ್‌ಆರ್‌ಐಗಳಿಗೂ ಕೂಡಾ ಉತ್ತಮ ಆಯ್ಕೆಯಾಗಿದೆ. ಬ್ಯಾಂಕ್‌ಗಳು ಸಾಮಾನ್ಯವಾಗಿ ಎನ್‌ಆರ್‌ಐಗಳಿಗೆ ಶೇಕಡ 4 ರಿಂದ ಶೇಕಡ 8 ರ ವ್ಯಾಪ್ತಿಯಲ್ಲಿ ಬಡ್ಡಿದರ ನೀಡುತ್ತದೆ. ಹೂಡಿಕೆ ಅವಧಿ ಮಾತ್ರ ಬದಲಾವಣೆಯಾಗುತ್ತದೆ.
5. ವಿದೇಶಿ ಕರೆನ್ಸಿ ಅನಿವಾಸಿ ಠೇವಣಿಗಳು (FCNR)
ಎಫ್‌ಸಿಎನ್‌ಆರ್ ಖಾತೆಯು ತಮ್ಮ ಆಯ್ಕೆಯ ವಿದೇಶಿ ಕರೆನ್ಸಿಯಲ್ಲಿ ಡೆಪಾಸಿಟ್ ಮಾಡಲಯ ಬಯಸುವವರಿಗೆ ಮೀಸಲಾಗಿದೆ. ಪ್ರಸ್ತುತ ಎಫ್‌ಸಿಎನ್‌ಆರ್ (ಬಿ) ಡೆಪಾಸಿಟ್‌ಗಳನ್ನು ಯುಎಸ್ ಡಾಲರ್ (ಯುಎಸ್‌ಡಿ), ಪೌಂಡ್ ಸ್ಟರ್ಲಿಂಗ್ (ಜಿಬಿಪಿ), ಜಪಾನೀಸ್ ಯೆನ್ (ಜೆಪಿವೈ), ಯೂರೋ (EURO), ಸ್ಟ್ರೇಲಿಯನ್ ಡಾಲರ್ (ಎಯುಡಿ), ಕೆನಡಿಯನ್ ಡಾಲರ್ (ಸಿಎಡಿ) 6 ಕರೆನ್ಸಿಗಳಲ್ಲಿ ಇರಿಸಬಹುದು.
6. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್)
ಭಾರತದಲ್ಲಿ ಹೂಡಿಕೆಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಉತ್ತಮ ಆಯ್ಕೆಯಾಗಿದೆ. ಎನ್‌ಆರ್‌ಐಗಳಿಗೆ ಎನ್‌ಪಿಎಸ್ ಖಾತೆ ತೆರೆಯಲು ಅವಕಾಶವಿದೆ. ಎನ್‌ಆರ್‌ಐಗಳು ಆಸ್ತಿ ವರ್ಗಗಳನ್ನು ನಿರ್ಧರಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಎನ್‌ಪಿಎಸ್ ಅಡಿಯಲ್ಲಿ ಡೀಫಾಲ್ಟ್ ಆಯ್ಕೆ, ಚಂದಾದಾರರ ವಯಸ್ಸಿನ ಪ್ರೊಫೈಲ್ ಅನ್ನು ಆಧರಿಸಿ ಫಂಡ್‌ಗಳ ಹೂಡಿಕೆಯ ನಿರ್ವಹಣೆಯನ್ನು ಆಟೋಮೇಟಿವ್ ಆಗಿ ಮಾಡಲಾಗುತ್ತದೆ.
7. ಯುಲಿಪ್ಸ್ (ಯುನೈಟೆಡ್ ಲಿಂಕ್ಡ್ ಇನ್ಶುರೆನ್ಸ್ ಪ್ಲ್ಯಾನ್‌ಗಳು)
ಯುಲಿಪ್ಸ್‌ಗಳಲ್ಲಿನ ಹೂಡಿಕೆಯು ಎನ್‌ಆರ್‌ಐಗಳಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಇದು ಡ್ಯುಯಲ್ ಹೂಡಿಕೆ ಪ್ರಯೋಜನಗಳನ್ನು ನೀಡುತ್ತದೆ. ನಿಮ್ಮ ಹಣಕಾಸುಗಳನ್ನು ರಕ್ಷಿಸಲು ಲೈಫ್ ಕವರ್ ನೀಡುತ್ತದೆ. ಯುಲಿಪ್ಸ್‌ಗಳು ತೆರಿಗೆ ಪ್ರಯೋಜನ ನೀಡುತ್ತದೆ. ಎಲ್ಲಾ ಭಾರತೀಯ ನಾಗರಿಕರು ಮತ್ತು ಎನ್‌ಆರ್‌ಐಗಳು ಐಟಿ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಯುಲಿಪ್ಸ್ ಪಾಲಿಸಿಗೆ ಪಾವತಿಸಿದ ಪ್ರೀಮಿಯಂಗಳ ಮೇಲೆ 1.5 ಲಕ್ಷ ರೂಪಾಯಿವರೆಗೆ ಯುಲಿಪ್ಸ್ ತೆರಿಗೆ ವಿನಾಯಿತಿ ಪಡೆಯಬಹುದು.
ಗಮನಿಸಿ: ಮಾರುಕಟ್ಟೆ ವಿಶ್ಲೇಷಕರು ಮತ್ತು ಲೇಖಕರು ಅಥವಾ ಗ್ರೇನಿಯಮ್ ಮಾಹಿತಿ ತಂತ್ರಜ್ಞಾನಗಳು ನೀಡಿದ ಸಲಹೆಯಲ್ಲ. ಈ ಲೇಖನದ ಆಧಾರದಲ್ಲಿ ಮಾಡಿದ ಹೂಡಿಕೆಯಿಂದ ಯಾವುದೇ ನಷ್ಟವಾದರೂ ಲೇಖಕರು, ಅಥವಾ ಬ್ರೋಕರೇಜ್ ಸಂಸ್ಥೆ ಅಥವಾ ಗ್ರೇನಿಯಮ್ ಜವಾಬ್ದಾರಿಯಲ್ಲ. ಯಾವುದೇ ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಲು ಗುಡ್‌ರಿಟರ್ನ್ಸ್ ತಿಳಿಸುತ್ತದೆ.


Click it and Unblock the Notifications