ಉದ್ಯೋಗಿಗಳಿಗೆ ತಾವು ದುಡಿಯುವ ಸಂಸ್ಥೆಯು ಯೂನಿವರ್ಸಲ್ ಅಕೌಂಟ್ ನಂಬರ್ (ಯುಎಎನ್ ನಂಬರ್) ಅನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಒ) ವೆಬ್‌ಸೈಟ್ ಬಳಸಿಕೊಂಡು ರಚಿಸಬಹುದು. ಸರಳ ಹಂತಗಳನ್ನು ಪಾಲಿಸಿಯೇ ಯುಎಎನ್ ನಂಬರ್ ಆಕ್ಟಿವೇಟ್, ಜನರೇಟ್ ಮಾಡಬಹುದು.
ಉದ್ಯೋಗಿಗಳು ಸರಳ ಹಂತವನ್ನು ಪಾಲಿಸಿ ತಾವಾಗಿಯೇ ಯುಎಎನ್ ಸಂಖ್ಯೆಯನ್ನು ರಚನೆ ಮಾಡಬಹುದು. ನಿಮ್ಮ 12-ಅಂಕಿಯ ಯುಎಎನ್ ಸಂಖ್ಯೆಯನ್ನು ನೀವು ಪಡೆದ ಬಳಿಕ ನೀವು ಉದ್ಯೋಗಿ ಭವಿಷ್ಯ ನಿಧಿ (ಇಪಿಎಫ್) ಖಾತೆಯನ್ನು ಪರಿಶೀಲನೆ ಮಾಡಲು ಸಾಧ್ಯವಾಗಲಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಒ) ವೆಬ್‌ಸೈಟ್ ಮೂಲಕ ನೀವು ನಿಮ್ಮ ಇಪಿಎಫ್ ಪಾಸ್‌ಬುಕ್ ಅನ್ನು ಪರಿಶೀಲನೆ ಕೂಡಾ ಮಾಡಬಹುದು. ನಿಮ್ಮ ಇಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಕೂಡಾ ಪರಿಶೀಲನೆ ಮಾಡಲು ಸಾಧ್ಯವಾಗುತ್ತದೆ. ನೀವು ಸರಳವಾಗಿ ಯುಎಎನ್ ಜನರೇಟ್ ಮಾಡುವುದು ಹೇಗೆ ಎಂಬುವುದು ಇಲ್ಲಿದೆ ಮುಂದೆ ಓದಿ...

ಸರಳವಾಗಿ ಯುಎಎನ್ ಜನರೇಟ್ ಹೀಗೆ ಮಾಡಿ
ಹಂತ 1: ಯುಎಎನ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: Direct UAN allotment ಮೇಲೆ ಕ್ಲಿಕ್ ಮಾಡಿ
ಹಂತ 3: ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ಕ್ಯಾಪ್ಚಾ ಕೋಡ್ ನಮೂದಿಸಿ
ಹಂತ 4: ಮೊಬೈಲ್ ಸಂಖ್ಯೆಗೆ ಬಂದ ಒಟಿಪಿ ನಮೂದಿಸಿ
ಹಂತ 5: Are you employed in any private company ಎಂಬಲ್ಲಿ Yes ಅನ್ನು ಆಯ್ಕೆ ಮಾಡಿ
ಹಂತ 6: In the establishment /company/factory ಎಂದು ಆಯ್ಕೆಯಾಗಿದ್ದರೆ ಡ್ರಾಪ್‌ಡೌನ್‌ನಿಂದ Employment Category ಆಯ್ಕೆ ಮಾಡಿ, ಇಲ್ಲವಾದರೆ ನಿಮ್ಮ ಸಂಸ್ಥೆ ಮಾಹಿತಿ ನಮೂದಿಸಿ
ಹಂತ 7: ಸಂಸ್ಥೆಗೆ ಸೇರಿದ ದಿನಾಂಕ ನಮೂದಿಸಿ, identity Proof Type ಆಯ್ಕೆ ಮಾಡಿ ಅದನ್ನು ಅಪ್‌ಲೋಡ್ ಮಾಡಿ
ಹಂತ 8: ನಿಮ್ಮ ಆಧಾರ್ ಅಥವಾ ವರ್ಚುವಲ್ ಐಡಿ ಮತ್ತು ಕ್ಯಾಪ್ಚಾ ನಮೂದಿಸಿ
ಹಂತ 9: Generate OTP ಕ್ಲಿಕ್ ಮಾಡಿ ಒಟಿಪಿ ನಮೂದಿಸಿ
ಹಂತ 10: Register button ಮೇಲೆ ಕ್ಲಿಕ್ ಮಾಡಿದರೆ ಯುಎಎನ್ ಜನರೇಟ್ ರಚನೆಯಾಗುತ್ತದೆ. ನಿಮ್ಮ ಮೊಬೈಲ್‌ಗೆ ಸಂದೇಶ ಬರಲಿದೆ.

ಯುಎಎನ್ ಜನರೇಟ್ ಆದ ಬಳಿಕ ಅದನ್ನು ಆಕ್ಟಿವೇಟ್ ಮಾಡುವುದು ಹೇಗೆ?
ಹಂತ 1: ಮುಖಪುಟದಲ್ಲಿ Activate UAN ಅನ್ನು ಕ್ಲಿಕ್ ಮಾಡಿ
ಹಂತ 2: ಯುಎಎನ್, ಆಧಾರ್, ಹೆಸರು, DoB, ಇತರೆ ಮಾಹಿತಿ ನಮೂದಿಸಿ
ಹಂತ 3: captcha ನಮೂದಿಸಿ, ಟಿಕ್ ಮಾರ್ಕ್ ಒತ್ತಿ
ಹಂತ 4: Get Authorisation Pin ಮೇಲೆ ಕ್ಲಿಕ್ ಮಾಡಿ
ಹಂತ 5: ಮೊಬೈಲ್‌ಗೆ ಬಂದ ಒಟಿಪಿ ನಮೂದಿಸಿ
ಹಂತ 6: Validate OTP and Activate UAN ಮೇಲೆ ಕ್ಲಿಕ್ ಮಾಡಿ
ನಿಮ್ಮ ಮೊಬೈಲ್ ಸಂಖ್ಯೆಗೆ ಪಾಸ್‌ವರ್ಡ್ ಬರಲಿದೆ. ಅದನ್ನು ಬಳಸಿಕೊಂಡು ಲಾಗಿನ್ ಆಗಬಹುದು.


Click it and Unblock the Notifications