ಉದ್ಯೋಗಿಗಳು ಇಪಿಎಫ್ ಖಾತೆಯನ್ನು ಆಧಾರ್ ಮತ್ತು ಇತರೆ ದಾಖಲೆಯೊಂದಿಗೆ ಲಿಂಕ್ ಮಾಡುವುದು ಮುಖ್ಯವಾಗಿದೆ. ಸರ್ಕಾರವು ಈ ನಿಯಮವನ್ನು ಕಡ್ಡಾಯಗೊಳಿಸಿದೆ. ಇಪಿಎಫ್‌ಒ ಜನರು ಸುಲಭವಾಗಿ ಕೆವೈಸಿ ಮಾಹಿತಿಯನ್ನು ಅಪ್‌ಡೇಟ್ ಮಾಡಲು ಸಾಧ್ಯವಾಗಬೇಕೆಂದು ಆನ್‌ಲೈನ್ ಪೋರ್ಟಲ್ ಅನ್ನು ಆರಂಭಿಸಿದೆ.
ನೀವು ಕೆವೈಸಿ ಮಾಹಿತಿಯನ್ನು ಅಪ್‌ಡೇಟ್ ಮಾಡುವುದರಿಂದ ಹಲವಾರು ಪ್ರಯೋಜನಗಳು ನಿಮಗೆ ಲಭ್ಯವಾಗಲಿದೆ. ಸುಲಭವಾಗಿ ಖಾತೆ ನಿರ್ವಹಣೆ ಮಾಡುವುದು, ವಿತ್‌ಡ್ರಾ ಮೇಲೆ ಟಿಡಿಎಸ್ ಕಡಿತ ಮೊದಲಾದ ಲಾಭಗಳು ಲಭ್ಯವಾಗಲಿದೆ. ಇಪಿಎಫ್‌ಒ ಸದಸ್ಯರು ಯುಎಎನ್ ಇಪಿಎಫ್‌ಒ ವೆಬ್‌ಸೈಟ್ ಮೂಲಕ ಇಪಿಎಫ್ ಕೆವೈಸಿ ಮಾಹಿತಿ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಿಕೊಳ್ಳಬಹುದು.
ಇದಕ್ಕಾಗಿ ಖಾತೆದಾರರಲ್ಲಿ ಯುಎಎನ್ ಸಂಖ್ಯೆ ಇರುವುದು ಮುಖ್ಯವಾಗಿದೆ. ಯುಎಎನ್ ಸಂಖ್ಯೆ ಇದ್ದರೆ ಮಾತ್ರ ಯುಎಎನ್ ಇಪಿಎಫ್ ಪೋರ್ಟಲ್ ಮೂಲಕ ಕೆವೈಸಿ ಅಪ್‌ಡೇಟ್ ಮಾಡಲು ಅಥವಾ ಬದಲಾವಣೆಯನ್ನು ಮಾಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...
ಕೆವೈಸಿ ಎಂದರೇನು?
ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ ಅಥವಾ Know Your Customer (KYC) ಎಂಬುವುದು ಚಂದಾದಾರರ ಗುರುತನ್ನು ಖಚಿತಪಡಿಸುವ ನಿಟ್ಟಿನಲ್ಲಿ ಮಾಡಲಾಗುವ ಪ್ರಕ್ರಿಯೆಯಾಗಿದೆ. ಯುಎಎನ್‌ಅನ್ನು ಕೆವೈಸಿ ಮಾಹಿತಿಯೊಂದಿಗೆ ಲಿಂಕ್ ಮಾಡಿ ಈ ಪ್ರಕ್ರಿಯೆ ನಡೆಸಲಾಗುತ್ತದೆ. ಉದ್ಯೋಗ ನೀಡಿರುವ ಸಂಸ್ಥೆ ಮತ್ತು ಉದ್ಯೋಗಿಗಳು ಕೆವೈಸಿ ಮಾಹಿತಿಗಳಾದ ಆಧಾರ್, ಪ್ಯಾನ್, ಬ್ಯಾಂಕ್ ವಿವರವನ್ನು ನೀಡಬೇಕಾಗುತ್ತದೆ.
ಕೆವೈಸಿ ಅಪ್‌ಡೇಟ್ ಮಾಡುವುದರಿಂದಾಗುವ ಪ್ರಯೋಜನ
* ಕೆವೈಸಿ ಮಾಹಿತಿಯನ್ನು ಅಪ್‌ಡೇಟ್ ಮಾಡಿದ ಬಳಿಕ ಮಾತ್ರ ನಿಮಗೆ ವಿತ್‌ಡ್ರಾ ಮೊತ್ತವನ್ನು ಕ್ಲೈಮ್ ಮಾಡಲು ಸಾಧ್ಯವಾಗುತ್ತದೆ.
* ಕೆವೈಸಿ ಅಪ್‌ಡೇಟ್ ಆಗಿದ್ದರೆ, ಇಪಿಎಫ್ ಖಾತೆ ವಹಿವಾಟು ಸರಳವಾಗುತ್ತದೆ.
* ಕೆವೈಸಿ ಅಪ್‌ಡೇಟ್ ಬಳಿಕ ಮಾಸಿಕವಾಗಿ ಎಸ್‌ಎಂಎಸ್ ಮೂಲಕ ಪಿಎಫ್ ಮಾಹಿತಿ ಲಭ್ಯವಾಗಲಿದೆ.
* ಖಾತೆಗೆ ಪ್ಯಾನ್ ಅಪ್‌ಡೇಟ್ ಆಗಿಲ್ಲದಿದ್ದರೆ, 5 ವರ್ಷದ ಸೇವೆಗೂ ಮುನ್ನ ಪಿಎಫ್ ಮೊತ್ತವನ್ನು ವಿತ್‌ಡ್ರಾ ಮಾಡಿದರೆ, ಶೇಕಡ 10ರಷ್ಟು ಟಿಡಿಎಸ್ ವಿಧಿಸಲಾಗುತ್ತದೆ.
ಯುಎಎನ್‌ನೊಂದಿಗೆ ಕೆವೈಸಿ ಮಾಹಿತಿ ಅಪ್‌ಡೇಟ್ ಮಾಡುವುದು ಹೇಗೆ?
ಹಂತ 1: ಇಪಿಎಫ್ ಖಾತೆಗೆ ಲಾಗಿನ್ ಆಗಿ
ಹಂತ 2: "Manage" ಸೆಕ್ಷನ್‌ನಲ್ಲಿ "KYC" ಆಯ್ಕೆ ಕ್ಲಿಕ್ ಮಾಡಿ
ಹಂತ 3: ನೀವು ಲಿಂಕ್ ಮಾಡಲು ಬಯಸುವ ಮಾಹಿತಿಯನ್ನು ಆಯ್ಕೆ ಮಾಡಿ
ಹಂತ 4: ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ
ಹಂತ 5: "Save" ಅನ್ನು ಕ್ಲಿಕ್ ಮಾಡಿ
ಹಂತ 6: "KYC Pending for Approval" ಎಂದು ತೋರಿಸಲಾಗುತ್ತದೆ.
ಹಂತ 7: ಈ ಮಾಹಿತಿಯನ್ನು ನೀವು ಉದ್ಯೋಗ ಮಾಡುವ ಸಂಸ್ಥೆ ಅಪ್ರೂವ್ ಮಾಡಿದ ಬಳಿಕ "Digitally approved by the employer" ಎಂದು ಇರುತ್ತದೆ.
ಹಂತ 8: ಯುಐಡಿಎಐ ನಿಮ್ಮ ಮಾಹಿತಿ ಖಚಿತಪಡಿಸಿದ ಬಳಿಕ "Verified by UIDAI" ಎಂದು ತೋರಿಸಲಿದೆ. ಅಲ್ಲಿಗೆ ಎಲ್ಲ ಪ್ರಕ್ರಿಯೆ ಪೂರ್ಣ
ಬ್ಯಾಂಕ್ ಖಾತೆ ಮಾಹಿತಿ ಅಪ್‌ಡೇಟ್ ಮಾಡುವುದು ಹೇಗೆ?
ಹಂತ 1: ಯುನಿಫೈಡ್ ಮೆಂಬರ್ ಪೋರ್ಟಲ್‌ಗೆ ಹೋಗಿ, ಇಪಿಎಫ್ ಖಾತೆಗೆ ಲಾಗಿನ್ ಆಗಿ
ಹಂತ 2: ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ಮತ್ತು IFSC code ನಮೂದಿಸಿ
ಹಂತ 3: ಇದನ್ನು ಕೂಡಾ ನೀವು ಉದ್ಯೋಗ ಮಾಡುವ ಸಂಸ್ಥೆ ಅನುಮೋದಿಸಬೇಕು.
ಹಂತ 4: ಅನುಮೋದನೆ ಮಾಡಿದ ಬಳಿಕ ಬ್ಯಾಂಕ್ ಖಾತೆ ಅಪ್‌ಡೇಟ್ ಆಗುತ್ತದೆ.
ಇಪಿಎಫ್ ಖಾತೆಯಲ್ಲಿ ಸಂಪರ್ಕ ಮಾಹಿತಿ ಅಪ್‌ಡೇಟ್
ಹಂತ 1: ನಿಮ್ಮ ಯುಎಎನ್ ಮತ್ತು ಪಾಸ್‌ವರ್ಡ್ ಅನ್ನು ಹಾಕಿ ಲಾಗಿನ್ ಆಗಿ
ಹಂತ 2:'Manage' ಸೆಕ್ಷನ್‌ನಲ್ಲಿರುವ Contact Details ಆಯ್ಕೆ ಕ್ಲಿಕ್ ಮಾಡಿ
ಹಂತ 3: ಇಪಿಎಫ್ ಖಾತೆಯಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಇರಲಿದೆ.
ಹಂತ 4: ಮಾಹಿತಿಯನ್ನು ಅಪ್‌ಡೇಟ್ ಮಾಡಲು 'Change mobile number' ಅಥವಾ 'Change email id' ಕ್ಲಿಕ್ ಮಾಡಿ
ಹಂತ 5: 'Get Authorization Pin' ಮೇಲೆ ಕ್ಲಿಕ್ ಮಾಡಿ
ಹಂತ 6: ಒಟಿಪಿ ನಮೂದಿಸಿದ ಬಳಿಕ ನಿಮ್ಮ ಮೊಬೈಲ್/ಇಮೇಲ್ ಮಾಹಿತಿಯನ್ನು ಅಪ್‌ಡೇಟ್ ಮಾಡಲು ಸಾಧ್ಯವಾಗುತ್ತದೆ.


Click it and Unblock the Notifications