ಬಾಲಿವುಡ್‌ನ ಖ್ಯಾತ ನಟಿ ಕತ್ರಿನಾ ಕೈಫ್ ಅವರು ನಟಿ ಮಾತ್ರವಲ್ಲ, ಅವರೊಬ್ಬ ಉದ್ಯಮಿಯೂ ಹೌದು. ಹಲವು ವ್ಯಾಪಾರ ಉದ್ಯಮಗಳ ಮೂಲಕ ತಮ್ಮ ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಪೈಕಿ ಸೌಂದರ್ಯ ಬ್ರ್ಯಾಂಡ್ ಕೇ ಬ್ಯೂಟಿ ಕೂಡ ಒಂದು. ಕತ್ರಿನಾ ಅವರ ಕೇ ಬ್ಯೂಟಿ ಬ್ರಾಂಡ್ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇದ್ದರೂ, ಈ ಬ್ರ್ಯಾಂಡ್ ನ್ನು ಭಾರತದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾದ ಫಲ್ಗುಣಿ ನಾಯರ್ ಅವರ ಸಹಾಯದಿಂದ ಸ್ಥಾಪಿಸಲಾಗಿದೆ ಎಂಬುದು ಅನೇಕರಿಗೆ ಗೊತ್ತಿರಲಿಕ್ಕಿಲ್ಲ.
ಕತ್ರಿನಾ ಕೈಫ್ ಅವರು ಕೇ ಬ್ಯೂಟಿಯೊಂದಿಗೆ ಉದ್ಯಮಿಯಾಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದು, ಆದರೆ ಅದೀಗ ಬಹುಕೋಟಿ ಮೌಲ್ಯದ ಸೌಂದರ್ಯ ಮತ್ತು ಸ್ಕಿನ್ ಕೇರ್ ಬ್ರ್ಯಾಂಡ್ ಆಗಿದೆ. ಆದರೆ ಇದನ್ನು ಭಾರತದ ಪ್ರಮುಖ ಆನ್‌ಲೈನ್ ಬ್ಯೂಟಿ ಪ್ಲ್ಯಾಟ್ ಫಾರ್ಮ್ ನೈಕಾದ ಸ್ಥಾಪಕ ಮತ್ತು ಸಿಇಒ ಆಗಿರುವ ಫಲ್ಗುಣಿ ನಾಯರ್ ಅವರ ಸಹಾಯ ಪಡೆದು ಮಾಡಲಾಗಿದೆ.

ಫಲ್ಗುಣಿ ನಾಯರ್ ಕತ್ರಿನಾ ಕೈಫ್ ಅವರ ಕೇ ಬ್ಯೂಟಿಯನ್ನುಉತ್ಪನ್ನಗಳನ್ನು ನೈಕಾದಲ್ಲಿ ಮಾರಾಟ ಮಾಡಲು ಸಹಾಯ ಮಾಡುವ ಮೂಲಕ ಉತ್ತೇಜನ ನೀಡಿದರು. ನೈಕಾ ಪ್ಲ್ಯಾಟ್ ಫಾರ್ಮ್ ಬ್ಯೂಟಿ ಉತ್ಪನ್ನ (ಶೃಂಗಾರ ಸಾಮಗ್ರಿ) ಮಾರಾಟ ಮಾಡುವ ಭಾರತದ ಪ್ರಮುಖ ಆನ್ ಲೈನ್ ವೇದಿಕೆಯಾಗಿದೆ. ಇದು ಬಾಲಿವುಡ್ ನಟಿಯ ಬ್ರ್ಯಾಂಡ್ ಅನ್ನು ಬಹುಕೋಟಿ ವ್ಯವಹಾರಕ್ಕೆ ಕೊಂಡೊಯ್ಯಿತು.
ಫಲ್ಗುಣಿ ನಾಯರ್ ಅವರು ಸ್ವಯಂ ದುಡಿಮೆಯಿಂದ ಮಹಿಳಾ ಭಾರತೀಯ ಬಿಲಿಯನೇರ್‌ಗಳಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟಿದ್ದಾರೆ. ಬ್ಯೂಟಿ ಪ್ಲ್ಯಾಟ್ ಫಾರ್ಮ್ ನೈಕಾ ವನ್ನು ತಮ್ಮ 50 ನೇ ವಯಸ್ಸಿನಲ್ಲಿ 16 ಕೋಟಿ ರೂಪಾಯಿಗಳ ಸ್ವಂತ ಹಣದಿಂದ ಪ್ರಾರಂಭಿಸಿರುವುದು. ಫಂಡಿಂಗ್ ಗಳ ಸಂಗ್ರಹ ಲಾಕ್ಮೆ, LÓreal ಮತ್ತು ಇತರ ದೊಡ್ಡ ಬ್ರ್ಯಾಂಡ್‌ಗಳೊಂದಿಗೆ ನಿರಂತರವಾಗಿ ಟೈ ಅಪ್ ಮಾಡುವ ಮೂಲಕ, ನೈಕಾ ಶೀಘ್ರದಲ್ಲೇ ಶತಕೋಟಿ ಡಾಲರ್ ವ್ಯವಹಾರವಾಗಿ ಬೆಳೆಯಿತು.
ಕತ್ರಿನಾ ಕೈಫ್ ಮತ್ತು ಫಲ್ಗುಣಿ ನಾಯರ್ ನಡುವೆ ಪರಿಚಯವಾಗಿದ್ದು ನಟಿಯ ಬಿಸಿನೆಸ್ ಮ್ಯಾನೇಜರ್ ವಿವೇಕ್ ಕಾಮತ್ ಮೂಲಕ. ನಾಯರ್ ಕತ್ರಿನಾಗೆ ಪ್ರೇರಣೆ ನೀಡಿದ್ದು ಮಾತ್ರವಲ್ಲದೇ ಕೇ ಬ್ಯೂಟಿ ಉತ್ಪನ್ನಗಳನ್ನು ನೈಕಾದಲ್ಲಿ ತನ್ನ ಮಾರಾಟ ಮಾಡುವ ಮೂಲಕ ಕೈಫ್ ಗೆ ಮುಂದಡಿ ಇಡಲು ಪ್ರೇರೇಪಿಸಿದರು.
ಕೇ ಬ್ಯೂಟಿಯು ಕೇವಲ ಕತ್ರಿನಾ ಕೈಫ್ ನಡೆಸುತ್ತಿದ್ದ ಒಂದು ಸಣ್ಣ ಬ್ಯೂಟಿ ಬ್ರ್ಯಾಂಡ್ ಆಗಿ ಪ್ರಾರಂಭವಾದರೂ ನಾಯರ್ ಅವರು ಸೌಂದರ್ಯ ಮಾರುಕಟ್ಟೆ ಮತ್ತು ಗ್ರಾಹಕರನ್ನು ತಿಳಿದುಕೊಳ್ಳಲು ಸಹಾಯ ಮಾಡಿದ ಪರಿಣಾಮ ಇಂದು ಈ 100 ಕೋಟಿಗೂ ಹೆಚ್ಚು ಆದಾಯವನ್ನು ಹೊಂದಿರುವ ಕಂಪನಿಯಾಗಿ ರೂಪಾಂತರಗೊಂಡಿದೆ. 2022ರಲ್ಲಿ ಫಲ್ಗುಣಿ ನಾಯರ್ ಅವರು ಭಾರತದ ಶ್ರೀಮಂತ ಮಹಿಳೆಯಾಗಿದ್ದು, ಅವರ ಆಸ್ತಿ ಮೌಲ್ಯವು 20,000 ಕೋಟಿ ರೂಪಾಯಿ ಆಗಿದೆ.
ಯಶಸ್ವಿ ಉದ್ಯಮಿ ಫಲ್ಗುಣಿ ನಾಯರ್ ಪುತ್ರಿ ಬಗ್ಗೆ ತಿಳಿಯಿರಿ
ಯುವ ಹಾಗೂ ಉನ್ನತ ಶಿಕ್ಷಣ ಪಡೆದಿರುವ ಅದ್ವೈತಾ ನಾಯರ್ ಅವರು 2012ರಲ್ಲಿ ಅಮೆರಿಕದ ಬೈನ್ ಅಂಡ್ ಕಂಪೆನಿಯಲ್ಲಿ ಕನ್ಸಲ್‌ಟೆಂಟ್ ಆಗಿ ಕೇವಲ ಆರು ತಿಂಗಳನ್ನು ಪೂರ್ಣಗೊಳಿಸಿರಬೇಕಾದರೆ ತಮ್ಮ 50 ವರ್ಷದ ತಾಯಿ ಫಲ್ಗುಣಿ ನಾಯರ್ ಅವರು ತಮ್ಮ ಸ್ವಂತ ಉದ್ಯಮದ ಜರ್ನಿ ಪ್ರಾರಂಭಿಸಲು ನಿರ್ಧರಿಸಿದರು. ಸೌಂದರ್ಯ ಉತ್ಪನ್ನಗಳ ಆನ್‌ಲೈನ್ ಮಾರುಕಟ್ಟೆಯಾದ ನೈಕಾ ಅನ್ನು ಪ್ರಾರಂಭಿಸುವ ಉದ್ದೇಶದಿಂದ ಆ ಮಹಿಳೆಯು ಕೋಟಕ್‌ನಲ್ಲಿ ತಮ್ಮ ಉನ್ನತ ಸ್ಥಾನವನ್ನು ತೊರೆದಿದ್ದಳು. ನಾಯರ್ ಅವರು ನ್ಯೂಯಾರ್ಕ್‌ನಲ್ಲಿ ತಮ್ಮ ಹೆಚ್ಚಿನ ಸಂಬಳದ ಉದ್ಯೋಗವನ್ನೇ ತೊರೆದು ನೈಕಾದಲ್ಲಿ ಸಹ- ಸಂಸ್ಥಾಪಕರಾಗಿ ತಾಯಿಯ ವ್ಯಾಪಾರದ ಜತೆ ಸೇರಿಕೊಂಡರು.
ಈ ಇಬ್ಬರು ಮಹಿಳೆಯರು ಸೇರಿಕೊಂಡು ಅಂದಿನಿಂದ ಉದ್ಯಮದ ಕ್ಷೇತ್ರದಲ್ಲಿ ಯಾರು ಕೂಡ ಊಹಿಸಲಾಗದಷ್ಟು ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದ್ದಾರೆ. ಅವರ ತಾಯಿ ಫಲ್ಗುಣಿ ನಾಯರ್ ಅವರು ಸ್ವಯಂ ನಿರ್ಮಿತ ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಾರೆ. ಅವರು ನೈಕಾ ಕಂಪೆನಿಯ ಸಿಇಒ ಆಗಿದ್ದು, 2021ರಲ್ಲಿ ಯಶಸ್ವಿ ಐಪಿಒ ಪ್ರವೇಶದ ನಂತರ ಅದು 36,000 ಕೋಟಿ ರೂ. ಬಂಡವಾಳವನ್ನು ಹೊಂದಿದೆ. ಕಂಪೆನಿಯು ಫ್ಯಾಶನ್ ಎಂಬ ಫ್ಯಾಶನ್ ವಿಭಾಗವನ್ನು ಹೊಂದಿದ್ದು, ಅದ್ವೈತಾ ನಾಯರ್ ಅವರು ಅದನ್ನು ಮುನ್ನಡೆಸುತ್ತಿದ್ದಾರೆ.
More From GoodReturns

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications