ಸವರನ್ ಗೋಲ್ಡ್ ಬಾಂಡ್ ಯೋಜನೆಯ (ಎಸ್‌ಜಿಬಿ) ಎರಡನೇ ಸಿರೀಸ್ ಸೆಪ್ಟೆಂಬರ್ 11 ರಂದು ಚಂದಾದಾರಿಕೆಗಾಗಿ ತೆರೆದಿದ್ದು, ಇದು ಸೆಪ್ಟೆಂಬರ್ 15, 2023 ರವರೆಗೆ ಅಂದರೆ ಇಂದಿನವರೆಗೆ ಬಿಡ್ಡಿಂಗ್‌ಗಾಗಿ ತೆರೆದಿರುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪ್ರತಿ ಗ್ರಾಂ ಸವರನ್ ಗೋಲ್ಡ್‌ಗೆ 5,923 ರೂಪಾಯಿ ಬೆಲೆಯನ್ನು ನಿಗದಿಪಡಿಸಿದೆ.
"ಇತ್ತೀಚಿನ ಸವರನ್ ಗೋಲ್ಡ್ ಬಾಂಡ್‌ಗಳ ಸಿರೀಸ್ II ಪ್ರತಿ ಗಾಂಗೆ 5873 ರೂಪಾಯಿ ನಿಗದಿಪಡಿಸಲಾಗಿದೆ. ಈ ಹಿಂದಿನ ಭಾಗಗಳಿಂದ ಮೂರು ರೂಪಾಯಿ ರಿಯಾಯಿತಿ ಇದೆ. ಕನಿಷ್ಠ 5 ವರ್ಷಗಳ ಕಾಲ ತಮ್ಮ ಹೂಡಿಕೆಯನ್ನು ವಿತ್‌ಡ್ರಾ ಮಾಡಲು ಬಯಸದವರು ಇಲ್ಲಿ ಹೂಡಿಕೆ ಮಾಡಬಹುದು. ಚಿನ್ನವು ಐತಿಹಾಸಿಕವಾಗಿ ಹಣದುಬ್ಬರಕ್ಕೆ ಹೆಡ್ಜ್ ಆಗಿ ಕಾರ್ಯನಿರ್ವಹಿಸುತ್ತದೆ," ಎಂದು ಮಿಲ್ವುಡ್ ಕೇನ್ ಇಂಟರ್ನ್ಯಾಷನಲ್ ಸಂಸ್ಥಾಪಕ ಮತ್ತು ಸಿಇಒ ನಿಶ್ ಭಟ್ ಹೇಳುತ್ತಾರೆ.

ಸವರನ್ ಗೋಲ್ಡ್ ಬಾಂಡ್ ರಿಯಾಯಿತಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮತ್ತು ಡಿಜಿಟಲ್ ಮೋಡ್ ಮೂಲಕ ಅರ್ಜಿ ಸಲ್ಲಿಸಿ ಪಾವತಿ ಮಾಡುವ ಹೂಡಿಕೆದಾರರಿಗೆ ಆರ್‌ಬಿಐ ಪ್ರತಿ 10 ಗ್ರಾಂಗೆ 50 ರೂಪಾಯಿ ರಿಯಾಯಿತಿಯನ್ನು ಘೋಷಿಸಿದೆ. ಅಂತಹ ಹೂಡಿಕೆದಾರರಿಗೆ, ಚಿನ್ನದ ಬಾಂಡ್‌ಗಳ ವಿತರಣೆಯ ಬೆಲೆ ಪ್ರತಿ ಗ್ರಾಂಗೆ 5,873 ರೂಪಾಯಿ ಆಗಿದೆ.
ಈ ಹೂಡಿಕೆದಾರರಿಗೆ ಎಸ್‌ಜಿಬಿ ಸೂಕ್ತ
"ಕಳೆದ ವರ್ಷದಲ್ಲಿ, ಹಳದಿ ಲೋಹವು ಶೇಕಡ 13-15 ರಷ್ಟು ಲಾಭವನ್ನು ಕಂಡಿದೆ. ಇನ್ನು ಭಾರತದಲ್ಲಿ ಹಬ್ಬದ ಬೇಡಿಕೆಯಿಂದಾಗಿ ಚಿನ್ನದ ಬೆಲೆಗಳು ಹೆಚ್ಚಾಗಬಹುದು. ಆದ್ದರಿಂದ ಎಸ್‌ಜಿಬಿಗಳನ್ನು ಆಯ್ಕೆ ಮಾಡುವ ಹೂಡಿಕೆದಾರರು ತಮ್ಮ ಲಾಭಗಳನ್ನು ಹೆಚ್ಚಿಸಲು ದೀರ್ಘಾವಧಿಯ ಹೂಡಿಕೆಗೆ ಉತ್ತಮ ಆಯ್ಕೆಯಾಗಿರುತ್ತದೆ," ಎಂದು ಕೂಡಾ ಮಿಲ್ವುಡ್ ಕೇನ್ ಇಂಟರ್ನ್ಯಾಷನಲ್ ಸಂಸ್ಥಾಪಕ ಮತ್ತು ಸಿಇಒ ನಿಶ್ ಭಟ್ ತಿಳಿಸಿದರು.
ಸವರನ್ ಗೋಲ್ಡ್ ಬಾಂಡ್‌ನಲ್ಲಿ ಯಾಕೆ ಹೂಡಿಕೆ ಮಾಡಬೇಕು?
1. ಖಚಿತ ಬಡ್ಡಿದರ: ಶೇಕಡ 2.5 ರಷ್ಟು ಖಚಿತವಾದ ಆದಾಯವನ್ನು ನೀಡುವ ಪಡೆಯಬಹುದು. ಬಡ್ಡಿದರವನ್ನು ಅರ್ಧ-ವಾರ್ಷಿಕವಾಗಿ ಪಾವತಿಸಲಾಗುತ್ತದೆ. ಹೂಡಿಕೆದಾರರಿಗೆ ವಾರ್ಷಿಕವಾಗಿ ಸವರನ್ ಗೋಲ್ಡ್ ಬಾಂಡ್ ಖರೀದಿ ಮೌಲ್ಯದ ಮೇಲೆ ಈ ಬಡ್ಡಿದರವನ್ನು ಪಾವತಿಸಲಾಗುತ್ತದೆ.
2.ಚಿನ್ನ ಸಂಗ್ರಹ: ಪ್ರಮುಖವಾಗಿ ಚಿನ್ನ ಸುರಕ್ಷಿತ ಸಂಗ್ರಹದ ತಲೆಬಿಸಿಯಿಲ್ಲ. ಭೌತಿಕ ಚಿನ್ನವನ್ನು ಖರೀದಿ ಮಾಡಿದಾಗ ಆ ಚಿನ್ನವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವ ಹೊಣೆ ನಮ್ಮದಾಗಿರುತ್ತದೆ. ಅದೊಂದು ತಲೆಬಿಸಿಯೇ ಹೌದು. ಆದರೆ ಎಸ್‌ಜಿಬಿ ಖರೀದಿಸಿದರೆ ಈ ಸಂಗ್ರಹರಣೆ ಸಮಸ್ಯೆಯಿಲ್ಲ. ಆದ್ದರಿಂದ ಗೋಲ್ಡ್ ಬಾಂಡ್ ಸುರಕ್ಷಿತ.
3. ತೆರಿಗೆ: ಸರ್ಕಾರವು ನವೆಂಬರ್ 2015 ರಲ್ಲಿ ಚಿನ್ನದ ನಗದೀಕರಣ ಯೋಜನೆಯಡಿಯಲ್ಲಿ ಸವರನ್ ಗೋಲ್ಡ್ ಬಾಂಡ್ ಯೋಜನೆಯನ್ನು ಪ್ರಾರಂಭಿಸಿತು. ಈ ಯೋಜನೆಯಡಿಯಲ್ಲಿ, ನೀವು ವಿತ್‌ಡ್ರಾ ಮಾಡುವ ಲಾಭದ ಮೊತ್ತಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.
4. ಸಾಲಕ್ಕೆ ಮೇಲಾಧಾರ: ಸವರನ್ ಗೋಲ್ಡ್ ಬಾಂಡ್ ಅನ್ನು ಸಾಲಗಳಿಗೆ ಮೇಲಾಧಾರವಾಗಿ ಬಳಸಬಹುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪ್ರಕಾರ ಸಾಮಾನ್ಯ ಚಿನ್ನದ ಸಾಲಕ್ಕೆ ಸಮಾನವಾಗಿ ಈ ಗೋಲ್ಡ್ ಬಾಂಡ್ ಸಾಲವು ಲಭ್ಯವಿರುತ್ತದೆ.
5. ಜಿಎಸ್‌ಟಿ ಮತ್ತು ಮೇಕಿಂಗ್ ಶುಲ್ಕಗಳಿಲ್ಲ: ಚಿನ್ನದ ಆಭರಣಗಳನ್ನು ನೀವು ಮಾಡಿಸುವಾಗ ಅಥವಾ ಖರೀದಿಸುವಾಗ ಜಿಎಸ್‌ಟಿ ಹಾಗೂ ಮೇಕಿಂಗ್ ಚಾರ್ಜ್‌ಗಳನ್ನು ಪಾವತಿ ಮಾಡಬೇಕಾಗುತ್ತದೆ. ಇದು ಚಿನ್ನದ ಮೇಲೆ ಹೆಚ್ಚುವರಿ ಖರ್ಚಾಗಿದೆ. ಹಾಗೆಯೇ ಚಿನ್ನದ ನಾಣ್ಯಗಳು ಮತ್ತು ಬಾರ್‌ಗಳಿಗೆ ತೆರಿಗೆ ವಿಧಿಸಲಾಗುತ್ತದೆ. ಆದರೆ ಸವರನ್ ಗೋಲ್ಡ್ ಬಾಂಡ್‌ಗಳ ಮೇಲೆ ಯಾವುದೇ ಜಿಎಸ್‌ಟಿ ವಿಧಿಸಲಾಗುವುದಿಲ್ಲ. ಎಸ್‌ಜಿಬಿಗೆ ಮೇಕಿಂಗ್ ಚಾರ್ಜ್ ಕೂಡಾ ಇಲ್ಲ.


Click it and Unblock the Notifications