ಯಶಸ್ಸು ಎನ್ನುವುದು ಜೀವನದಲ್ಲಿ ನಿಧಾನವಾಗಿ ಏರಬೇಕಾದ ಏಣಿಯಾಗಿದೆ. ರಾತ್ರೋರಾತ್ರಿ ಅದನ್ನು ತಲುಪಲು ಸಾಧ್ಯವಾಗುವುದಿಲ್ಲ. ಏಕೆಂದರೆ ನಿರಂತರ ಬದ್ಧತೆಯನ್ನು ಹೊಂದಿರುವವರಿಗೆ ಕನಸುಗಳನ್ನು ನನಸು ಮಾಡಬಹುದು. ಅದೇರೀತಿ ಸ್ವಯಂ ನಿರ್ಮಿತ ಬಿಲಿಯನೇರ್‌ಗಳ ಪೈಕಿ ಒಬ್ಬರಾಗಿರುವ ಬೆನ್ ಫ್ರಾನ್ಸಿಸ್ ಅವರ ಸ್ಫೂರ್ತಿದಾಯಕ ಹಾಗೂ ಅಪರೂಪದ ಯಶಸ್ವಿನ ಕಥೆ ಇಲ್ಲಿದೆ.
ಬ್ರಿಟನ್‌ನ ಅತ್ಯಂತ ಕಿರಿಯ ಬಿಲಿಯನೇರ್ ಆಗಿರುವ ಫ್ಯಾಶನ್ ದೊರೆ ತಮ್ಮ ಅಜ್ಜಿಗೆ ಹೊಲಿಗೆಯ ಮೂಲಭೂತ ವಿಚಾರಗಳನ್ನು ಹೇಳಿಕೊಡುವಂತೆ ಕೇಳಿಕೊಂಡಿದ್ದರು. ಅದರ ಪರಿಣಾಮವಾಗಿ ಪ್ರಸ್ತುವ ಫೋರ್ಬ್ಸ್ ಶ್ರೀಮಂತರ ಪಟ್ಟಿಯ ಪ್ರಕಾರ, ಬೆನ್ ಫ್ರಾನ್ಸಿಸ್ ಅವರು ತಮ್ಮ ಪೋಷಕರ ಗ್ಯಾರೇಜ್‌ನಲ್ಲಿ ಕ್ರೀಡಾ ಬ್ರಾಂಡ್ ಜಿಮ್‌ಶಾರ್ಕ್ ಅನ್ನು ಸ್ಥಾಪಿಸಿದ ಕೇವಲ 11 ವರ್ಷಗಳಲ್ಲಿ 1,14,90,85,00,000 ಕೋಟಿ ರೂಪಾಯಿ ಅಥವಾ 1.4 ಬಿಲಿಯನ್ ಡಾಲರ್ ಸಂಪತ್ತು ಗಳಿಸಿದ್ದಾರೆ.
ಬೆನ್ ಫ್ರಾನ್ಸಿಸ್ ಯಾರು?
ತಮ್ಮ ಖರ್ಚು- ವೆಚ್ಚವನ್ನು ನಿಭಾಯಿಸುವುದಕ್ಕೆ 30 ವರ್ಷ ವಯಸ್ಸಿನ ವ್ಯಕ್ತಿಯು 2012ರಲ್ಲಿ ಆಸ್ಟಿನ್ ಯೂನಿವರ್ಸಿಟಿ ತೊರೆಯುವ ತನಕ ಪಿಜ್ಜಾ ಡೆಲಿವರಿ ಹುಡುಗನಾಗಿ ಕೆಲಸ ಮಾಡುತ್ತಿದ್ದರು. ಆದರೆ ಸ್ವಂತ ಉದ್ಯಮವನ್ನು ಸ್ಥಾಪಿಸಿ ಅದನ್ನು ಒಂದು ಬ್ರಾಂಡ್ ಆಗಿ ಬೆಳೆಸಬೇಕೆಂಬ ಫ್ರಾನ್ಸಿಸ್ ಅವರ ಸತತ ಪ್ರಯತ್ನವು ಅವರಿಗೆ ಬಹುದೊಡ್ಡ ಯಶಸ್ಸನ್ನು ತಂದು ಕೊಟ್ಟಿದೆ.
ಜಿಮ್‌ಶಾರ್ಕ್ ಬಹಳ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಸಾಧಿಸಿದರೂ ಫ್ರಾನ್ಸಿಸ್ ಅವರು ಇಂದಿಗೂ ಸಮುದಾಯದ ಅಭಿವೃದ್ಧಿ ಹಾಗೂ ಪ್ರಾಮಾಣಿಕತೆಯನ್ನು ಉತ್ತೇಜಿಸುವ ಕಂಪನಿಯ ಮೂಲ ತತ್ತ್ವಗಳಿಗೆ ಬದ್ಧರಾಗಿದ್ದಾರೆ. ತಮ್ಮ ಕಂಪನಿಯ ಯಶಸ್ವಿನ ಬಹುಪಾಲು ಕೂಡ ತಮ್ಮ ಹೆತ್ತವರು ಹಾಗೂ ಅಜ್ಜಿಯ ಕೆಲಸದ ನೈತಿಕತೆಗೆ ಸಲ್ಲುತ್ತದೆ ಎಂಬುದನ್ನು ಮುಕ್ತವಾಗಿ ಹೇಳುತ್ತಿದ್ದಾರೆ.
ಫ್ರಾನ್ಸಿಸ್ ಅವರು ತಮ್ಮ ಜೀವನದಲ್ಲಿ ಸದಾ ಪ್ರಭಾವ ಬೀರುವ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸಿದ್ದರು. ಜಿಮ್ ಬಗ್ಗೆ ಇದ್ದ ಆಸಕ್ತಿ ಅವರಿಗೆ ಎಲ್ಲ ರೀತಿಯ ಪ್ರೋತ್ಸಾಹವನ್ನು ಕೂಡ ನೀಡಿತ್ತು. ಕೇವಲ 19ನೇ ವಯಸ್ಸಿನಲ್ಲಿ ಅಂದರೆ 2011ರಲ್ಲಿ ಜಿಮ್‌ಶಾರ್ಕ್ ಅನ್ನು ಸ್ಥಾಪಿಸಿದ್ದರು. ಆ ಮೂಲಕ ಎಂಟರ್‌ಪ್ರೈಸ್, ಐಟಿ ಹಾಗೂ ಫಿಟ್‌ನೆಸ್ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ಕಂಡುಕೊಂಡರು.
ತಮಗೆ ಸರಿ ಹೊಂದುವ ಯಾವುದೇ ವ್ಯಾಯಾಮದ ಉಡುಪುಗಳು ಮಾರುಕಟ್ಟೆಯಲ್ಲಿ ಕಾಣಿಸದಾಗ ಅಮೆರಿಕನ್ ದೇಹದಾರ್ಢ್ಯ ಶೈಲಿಯನ್ನು ಸಂಯೋಜಿಸುವ ಕಂಪನಿಯನ್ನು ಹುಟ್ಟು ಹಾಕಲು ನಿರ್ಧರಿಸಿದ್ದರು. ಹೊಲಿಗೆ ಯಂತ್ರ ಹಾಗೂ ಸ್ಕ್ರೀನಿಂಗ್ ಮೆಷಿನ್ ಅನ್ನು ಇಟ್ಟುಕೊಂಡು ಸುಮಾರು ಎರಡು ವರ್ಷಗಳ ಕಾಲ ಯುರೋಪಿಯನ್ ವಿನ್ಯಾಸವನ್ನು ತಮ್ಮ ಕೈಯಾರೆ ತಯಾರಿಸುವುದಕ್ಕೆ ತೀರ್ಮಾನಿಸಿದ್ದರು. ಅದು ಅವರ ಪಟ್ಟು ಬಿಡದ ಕೆಲಸದ ನೀತಿಗೆ ಸ್ಪಷ್ಟ ನಿದರ್ಶನವಾಗಿದೆ.
ಫ್ರಾನ್ಸಿಸ್ ಕಿರಿಯ ಬಿಲಿಯನೇರ್ ಹೇಗಾದರು?
ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಫ್ರಾನ್ಸಿಸ್ ತಮ್ಮ ಜಿಮ್‌ಶಾರ್ಕ್ ಬ್ರಾಂಡ್ ಅನ್ನು ಗ್ರಾಹಕರ ವಿಶ್ವಾಸ ಗಿಟ್ಟಿಸುವಲ್ಲಿ ಯಶಸ್ವಿಯಾದರು. ಯುಕೆಯಲ್ಲಿ ಜಿಮ್‌ಶಾರ್ಕ್ ವತಿಯಿಂದ ಮೊದಲ ಫಿಟ್‌ನೆಸ್ ಉತ್ಸವವನ್ನು ಮಾಡುವ ಮೂಲಕ ಅವರ ಬ್ರಾಂಡ್ ಯೂಟ್ಯೂಬ್‌ನಲ್ಲಿ ನಿಧಾನಕ್ಕೆ ಹೆಚ್ಚು-ಹೆಚ್ಚು ಗುರುತಿಸಿಕೊಳ್ಳಲು ತೊಡಗಿತ್ತು. ಇದರಿಂದಾಗಿ ಜಿಮ್‌ಶಾರ್ಕ್‌ನ ದೈನಂದಿನ ಗಳಿಕೆಯು 300 ಡಾಲರ್‌ನಿಂದ 50,000 ಡಾಲರ್‌ಗೆ ಏರಿತ್ತು.
ಆ ಬಳಿಕ ಅವರು ಫಿಜಾ ಹಟ್‌ಗೆ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದರು. ಈ ರೀತಿಯ ದೃಢ ವಿಶ್ವಾಸವು ಜಿಮ್‌ಶಾರ್ಕ್ ಕಂಪನಿಯನ್ನು ಈ ಮಟ್ಟಕ್ಕೆ ಬೆಳೆಸುವುದಕ್ಕೆ ಅವರಿಂದ ಸಾಧ್ಯವಾಗಿದೆ. ಫ್ರಾನ್ಸಿಸ್ ಅವರು 2021ರಲ್ಲಿ ಕೆನಡಾದ ಪ್ರಭಾವಿ ಫಿಟ್‌ನೆಸ್ ಪರಿಣತೆ ಹಾಗೂ ಮಾಡೆಲ್ ರಾಬಿನ್ ಅವರನ್ನು ವಿವಾಹವಾದರು. ಒಂದು ವರ್ಷದ ಬಳಿಕ ಈ ದಂಪತಿಯು ಅವಳಿ ಮಕ್ಕಳಿಗೆ ಜನ್ಮ ನೀಡಿರುವುದಾಗಿ ತಮ್ಮ ಫೇಸ್‌ಬುಕ್ & ಇನ್‌ಸ್ಟಾದಲ್ಲಿ ಪೋಸ್ಟ್ ಹಾಕಿದ್ದರು.


Click it and Unblock the Notifications
