ನಾಳೆ ಗಣೇಶ ಚತುರ್ಥಿ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಇಂದು ಗೌರಿ ಗಣೇಶ ಹಬ್ಬದ ಆಚರಣೆಗೆ ಸಿದ್ಧತೆಯನ್ನು ಈಗಾಗಲೇ ನಡೆಸಲಾಗಿದ್ದು, ನಾಳೆಯ ಹಬ್ಬಕ್ಕೂ ಭಕ್ತರು ಸಜ್ಜಾಗಿದ್ದಾರೆ. ಹಣ್ಣು, ಹೂವು, ತರಕಾರಿ, ಕಬ್ಬು, ಮೋದಕ ತಯಾರಿ, ಖರೀದಿ ಭರದಿಂದ ಸಾಗಿದೆ. ಈ ನಡುವೆ ಭಾರತೀಯ ವ್ಯಾಪಾರ ನಿರ್ಧಾರಗಳನ್ನು ರೂಪಿಸುವಲ್ಲಿ ಭಗವಂತೆ ಗಣೇಶನ ಪ್ರಭಾವವು ಇದೆ ಎಂಬುವುದು ನಿಮಗೆ ತಿಳಿದಿದೆಯೇ?
ಹಿಂದೂ ಪುರಾಣದಲ್ಲಿ ಗಣೇಶನಿಗೆ ವಿಶೇಷವಾದ ಸ್ಥಾನಮಾನವನ್ನು ನೀಡಲಾಗುತ್ತದೆ. ಬುದ್ಧಿವಂತಿಕೆ, ಪ್ರಥಮ ಮತ್ತು ಮುಖ್ಯವಾಗಿ ಸಮೃದ್ಧಿಯ ದೇವರು ಎಂದು ಪೂಜಿಸಲ್ಪಟ್ಟ ಗಣೇಶನು ಭಾರತದ ಸಾಂಸ್ಕೃತಿಕ ಮತ್ತು ಆರ್ಥಿಕ ನೀತಿಗೆ ಆಳವಾದ ಸಂಪರ್ಕವನ್ನು ಹೊಂದಿರುವ ದೇವತೆ ಎಂದು ಹೇಳುವವರು ಇದ್ದಾರೆ. ಈ ಲೇಖನದಲ್ಲಿ ವಿಮರ್ಶಕರ ವಾದವನ್ನು ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ...

ಸಮೃದ್ಧಿಯ ಸಂಕೇತ
ಸಮೃದ್ಧಿಯ ಭಗವಂತನಾಗಿ ಗಣೇಶನನ್ನು ಪೂಜಿಸಲಾಗುತ್ತದೆ, ಹಾಗೆಯೇ ಅದರ ಸಂಕೇತವಾಗಿಯೇ ಪರಿಗಣಿಸಲಾಗುತ್ತದೆ. ಗಣೇಶನ ದುಂಡಗಿನ ಹೊಟ್ಟೆಯು ಭೌತಿಕ ಸಂಪತ್ತನ್ನು ಸಂಕೇತಿಸುತ್ತದೆ ಎಂದು ಹೇಳುವವರು ಇದ್ದಾರೆ. ಇನ್ನು ಅತೀ ಅಧಿಕ ಭಕ್ಷ್ಯ ಸೇವನೆಯು ಸಮೃದ್ಧಿಯನ್ನು ಮನೆಗೆ ತರುವ ಪ್ರತೀಕ ಎಂದು ನಂಬಲಾಗುತ್ತದೆ.
Ganesh Chaturthi: ಗಣೇಶ ಚತುರ್ಥಿಯಿಂದ ನಾವು ಕಲಿಯಬೇಕಾದ 5 ಆರ್ಥಿಕ ಪಾಠಗಳಿವು
ಈ ಕಲ್ಪನೆಯು ಭಾರತದಲ್ಲಿರುವ ಹಿಂದೂಗಳ ದೈನಂದಿನ ಜೀವನದಲ್ಲಿಯೂ ನಾವು ನೋಡಬಹುದಾಗಿದೆ. ಯಾವುದೇ ಹೊಸ ಉದ್ಯಮ, ವ್ಯಾಪಾರ, ಮನೆ ಅಥವಾ ಹೂಡಿಕೆಯಾಗಿರಲಿ, ಯಶಸ್ಸು ಮತ್ತು ಸಮೃದ್ಧಿಗಾಗಿ ಮೊದಲಾಗಿ ಗಣೇಶನಿಗೆ ಪ್ರಾರ್ಥನೆ ಮಾಡುವುದು ಇದೆ. ವಿಘ್ನವನ್ನು ವಿನಾಶ ಮಾಡುವ ದೇವರಾದ ಗಣೇಶನಿಗೆ ಮೊದಲ ಪ್ರಾರ್ಥನೆ ಹಿಂದೂಗಳ ನಂಬಿಕೆ.
ಆಧುನಿಕ ಭಾರತದೊಂದಿಗೆ ಸಂಪರ್ಕ!
ಸಮೃದ್ಧಿಯ ಪ್ರತೀಕವಾದ ಗಣೇಶನ ಪರಿಕಲ್ಪನೆಯು ಆಧುನಿಕ ಭಾರತಕ್ಕೆ ಪ್ರಸ್ತುತವಾಗುತ್ತದೆ. ಸ್ಟಾರ್ಟ್-ಅಪ್‌ಗಳು, ಹೂಡಿಕೆಗಳು ಮತ್ತು ಆರ್ಥಿಕ ಸುಧಾರಣೆಗಳನ್ನು ಮಾಡುವಾಗ ಸಮೃದ್ಧಿಗಾಗಿ ಗಣೇಶನ ಆಶೀರ್ವಾದ ಪಡೆಯುವ ಜೊತೆಗೆ ಗಣೇಶನ ಬುದ್ಧಿವಂತಿಕೆಯನ್ನು ಅಳವಡಿಸಿಕೊಳ್ಳುವುದು ಉತ್ತಮ ಎನ್ನುತ್ತಾರ ವಿಶ್ಲೇಷಕರು.
ಯಾವುದೇ ಪ್ರಮುಖ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಅಥವಾ ಹೊಸ ಉದ್ಯಮವನ್ನು ಪ್ರಾರಂಭಿಸುವ ಮೊದಲು, ದೇಶದಲ್ಲಿ ಹಿಂದೂಗಳು ಸಾಮಾನ್ಯವಾಗಿಯೇ ಗಣೇಶನನ್ನು ಪ್ರಾರ್ಥಿಸುತ್ತಾರೆ. ಅಕ್ಷಯ ತೃತೀಯ ದಿನ ಚಿನ್ನವನ್ನು ಖರೀದಿಸುವುದು, ಗಣೇಶ ಚತುರ್ಥಿಯ ಸಂದರ್ಭದಲ್ಲಿ ಹೊಸ ಉದ್ಯಮಗಳಲ್ಲಿ ಹೂಡಿಕೆ ಮಾಡುವ ಸಂಪ್ರದಾಯವು ಇದೆ. ಇದು ಹೂಡಿಕೆ ಹಾಗೂ ಉದ್ಯಮ ಕ್ಷೇತ್ರಕ್ಕೆ ಬಲವರ್ಧನೆ ನೀಡುತ್ತದೆ.
ಪುರಾಣದಲ್ಲಿ ಗಣೇಶನು ಯಾವುದೇ ನಿರ್ಧಾರ ಕೈಗೊಳ್ಳುವಾಗಲೂ ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತಾನೆ. ಅದರಂತೆಯೇ ನಾವು ಬುದ್ಧಿವಂತಿಕೆಯಿಂದ ಯಾವುದೇ ಹೂಡಿಕೆ ನಿರ್ಧಾರ ಮಾಡಬೇಕು ಎಂದು ವಿಶ್ಲೇಷಕರ ವಾದವಾಗಿದೆ. ಗಣೇಶನಿಂದ ನಾವು ಕಲಿಯಬೇಕಾದ ಹಲವಾರು ಆರ್ಥಿಕ ಪಾಠಗಳು ಇದೆ. ಅದನ್ನು ಅರಿತು ಹೂಡಿಕೆ ಮಾಡಿದರೆ ನಾವು ಜೀವನದಲ್ಲಿ ಎಡವುದಿಲ್ಲ ಎಂಬುವುದು ವಿಶ್ಲೇಷಕರ ನಂಬಿಕೆಯಾಗಿದೆ.


Click it and Unblock the Notifications