ಪ್ರಸಕ್ತ ಜಗತ್ತಿನಲ್ಲಿ ಜೀವನದ ಸುವರ್ಣ ವರ್ಷಗಳಲ್ಲಿ ಆರ್ಥಿಕ ಸ್ಥಿರತೆಯನ್ನು ಸಾಧಿಸುವಲ್ಲಿ ನಿವೃತ್ತಿ ಯೋಜನೆಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ (ಎಲ್‌ಐಸಿ) ಹಲವು ರೀತಿಯ ಪಿಂಚಣಿ ಯೋಜನೆಗಳನ್ನು ಪರಿಚಯಿಸಿದೆ.
ಆ ಪೈಕಿ ಎಲ್ಐಸಿ ಸರಳ ಪಿಂಚಣಿ ಯೋಜನೆಯೂ ಒಂದು. ಈ ನಾನ್- ಲಿಂಕ್ಡ್ ಏಕ-ಪ್ರೀಮಿಯಂ ಪ್ಲ್ಯಾನ್ ನಿವೃತ್ತರಾದವರಿಗೆ ಆದಾಯದ ಮೂಲವನ್ನು ಒದಗಿಸುತ್ತದೆ. ಇಲ್ಲಿ ಈ ಯೋಜನೆ ಕುರಿತು ಮಾಹಿತಿ ತಿಳಿಯೋಣ.

ಈ ಯೋಜನೆ ಹೀಗಿರುತ್ತದೆ?
* ನೀವು ಎಲ್‌ಐಸಿ ಪಿಂಚಣಿ ಯೋಜನೆಯನ್ನು ವೈಯಕ್ತಿಕವಾಗಿ ಅಥವಾ ಸಂಗಾತಿ ಜತೆಯಾಗಿ ಆಯ್ಕೆ ಮಾಡಿಕೊಳ್ಳಬಹುದು.
* ಈ ಯೋಜನೆಗೆ ಒಂದು ದೊಡ್ಡ ಮೊತ್ತದ ಹೂಡಿಕೆ ಮಾಡಬೇಕಿರುತ್ತದೆ. ಅದರ ನಂತರ ನೀವು ನಿಯಮಿತವಾಗಿ ಪಿಂಚಣಿ ಮೊತ್ತವನ್ನು ಪಡೆಯಲು ಪ್ರಾರಂಭಿಸುತ್ತೀರಿ.
* ಈ ಯೋಜನೆಯಡಿ ಪಿಂಚಣಿ ಮೊತ್ತವು ನಿಮ್ಮ ಜೀವನದುದ್ದಕ್ಕೂ ಸ್ಥಿರವಾಗಿರುತ್ತದೆ ಹಾಗೂ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.
ಪ್ರೀಮಿಯಂ ಪಾವತಿಯಲ್ಲಿ ಅನುಕೂಲತೆ
* ಈ ಯೋಜನೆಯನ್ನು ಮಾಡಿಸುವ ಸಮಯದಲ್ಲಿ ಪ್ರೀಮಿಯಂ ಅನ್ನು ಮುಂಗಡವಾಗಿ ಪಾವತಿಸಲಾಗುತ್ತದೆ.
* ಈ ಯೋಜನೆಯು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಸೇರಿದಂತೆ ವಿವಿಧ ಪಿಂಚಣಿ ಪಾವತಿ ಆಯ್ಕೆಗಳನ್ನು ಒದಗಿಸುತ್ತದೆ.
* ಈ ಯೋಜನೆಯಡಿ ಮಾಸಿಕ ಪಿಂಚಣಿ ಕನಿಷ್ಠ 1000 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ ಹಾಗೂ ಗರಿಷ್ಠ ಮಿತಿ ಇರುವುದಿಲ್ಲ. ಪ್ರೀಮಿಯಂಗೆ ಅನುಗುಣವಾಗಿ ಹಾಗೂ ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನೀವು ಪಿಂಚಣಿ ಮೊತ್ತವನ್ನು ಸರಿ ಹೊಂದಿಸಬಹುದು.
ಸಾಲ ಸೌಲಭ್ಯಗಳು
* ಎಲ್‌ಐಸಿ ಸರಳ ಪಿಂಚಣಿ ಯೋಜನೆ ಪಾಲಿಸಿಯನ್ನು ಪ್ರಾರಂಭಿಸಿದ ಆರು ತಿಂಗಳ ನಂತರ ಸಾಲ ಸೌಲಭ್ಯವನ್ನು ಪಡೆಯಬಹುದು.
* ವೈದ್ಯಕೀಯ ಚಿಕಿತ್ಸೆ ಅಥವಾ ತುರ್ತು ಸಂದರ್ಭಗಳು ಸೇರಿದಂತೆ ನಾನಾ ರೀತಿಯ ಅಗತ್ಯಗಳಿಗೆ ಸಾಲವನ್ನು ಪಡೆಯಬಹದು.
ಪಾಲಿಸಿ ಸರೆಂಡರ್:
* ಆರು ತಿಂಗಳ ನಂತರ ಪಾಲಿಸಿಯನ್ನು ಸರೆಂಡರ್ ಮಾಡುವ ಆಯ್ಕೆಯನ್ನು ಈ ಯೋಜನೆ ಒದಗಿಸುತ್ತದೆ. ಅಂದರೆ, ಮೂಲ ಧನದ ಶೇಕಡ 95 ರಷ್ಟು ಮೊತ್ತವನ್ನು ಮರುಪಾವತಿಸಲಾಗುತ್ತದೆ.
* ಈ ಯೋಜನೆಗೆ ಸೇರ್ಪಡೆಯಾಗಲು ಕನಿಷ್ಠ 40 ವಯಸ್ಸಾಗಿರಬೇಕು ಹಾಗೂ ಗರಿಷ್ಠ ವಯಸ್ಸು 80 ವರ್ಷ ಆಗಿದೆ.


Click it and Unblock the Notifications