ಹೂಡಿಕೆ ನಮ್ಮ ಜೀವನದಲ್ಲಿ ಅತೀ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ನಾವು ಇಂದು ಹೂಡಿಕೆ ಮಾಡಿದರೆ ನಮ್ಮ ಭವಿಷ್ಯ ಸುರಕ್ಷಿತ. ಆದರೆ ಹೂಡಿಕೆ ಮಾಡುವಾಗ ನಮ್ಮ ಹಣದ ಸುರಕ್ಷತೆ ಕೂಡಾ ಮುಖ್ಯ ಅಲ್ವ? ಹಾಗಿದ್ದಾಗ ನಮ್ಮ ಮುಂದೆ ಇರುವ ಉತ್ತಮ ಆಯ್ಕೆ ಎಲ್‌ಐಸಿ. ಎಲ್‌ಐಸಿಯ ಒಂದು ಯೋಜನೆಯಲ್ಲಿ ನೀವು ಪ್ರತಿ ತಿಂಗಳು 16000 ರೂಪಾಯಿ ಪಡೆಯಬಹುದಾಗಿದೆ.
ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತನ್ನ ವಿಶ್ವಾಸಾರ್ಹ ಹೂಡಿಕೆ ಪಾಲಿಸಿಗಳಿಗಾಗಿ ಹೆಸರುವಾಸಿಯಾಗಿದೆ. ಎಲ್ಲ ಗ್ರಾಹಕರಿಗೂ ಬೇಕಾಗುವಂತಹ ಹೂಡಿಕೆ ಪಾಲಿಸಿಗಳನ್ನು ಎಲ್‌ಐಸಿ ಹೊಂದಿದೆ. ಸುರಕ್ಷತೆಯ ಖ್ಯಾತಿಯೊಂದಿಗೆ, ಎಲ್ಐಸಿ ಪಾಲಿಸಿಗಳು ಹೂಡಿಕೆದಾರರಿಗೆ ಉತ್ತಮ ಬಡ್ಡಿದರ ನೀಡುತ್ತದೆ.

ಖಾಸಗಿ ವಲಯದಲ್ಲಿ ದುಡಿಯುವವರಿಗೆ ವಯಸ್ಸಾದಾಗ ಪಿಂಚಣಿ ಅತೀ ಮುಖ್ಯವಾಗುತ್ತದೆ. ಪಿಂಚಣಿ ಇಲ್ಲದೆ, ಕೆಲಸ ಇಲ್ಲದೆ ಹೇಗೆ ಜೀವನ ನಡೆಸಲು ಸಾಧ್ಯ ಹೇಳಿ. ಹೀಗಿರುವಾಗ ಪಿಂಚಣಿ ಭದ್ರತೆಯನ್ನು ನೀಡುವ ಎಲ್‌ಐಸಿಯ ಯೋಜನೆ ಇದೆ. ಇದರಲ್ಲಿ ಮಾಸಿಕವಾಗಿ 16 ಸಾವಿರ ಪಿಂಚಣಿ ನೀವು ಪಡೆಯಬಹುದು. ಪಾಲಿಸಿ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಎಲ್‌ಐಸಿ ಜೀವನ್ ಅಕ್ಷಯ್ ಪಾಲಿಸಿ
ಎಲ್‌ಐಸಿಯ ಜೀವನ್ ಅಕ್ಷಯ್ ಪಾಲಿಸಿಯು ನೀವು ಯಾವುದೇ ಚಿಂತೆಯಿಲ್ಲದೆ ನಿವೃತ್ತಿ ಜೀವನವನ್ನು ಕಳೆಯಲು ಸಹಾಯ ಮಾಡಲಿದೆ. ಈ ನಿಟ್ಟಿನಲ್ಲೇ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಇದು ಸಿಂಗಲ್ ಪ್ರೀಮಿಯಂ ಪಾಲಿಸಿಯಾಗಿದ್ದು, ನೀವು ಒಂದು ಬಾರಿಯೇ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವುದು ಅಗತ್ಯವಾಗಿದೆ.
ಮಾಸಿಕ, ತ್ರೈಮಾಸಿಕ, ಅರೆ-ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ನೀವು ವರ್ಷಾಶನ ಪಾವತಿಗಳನ್ನು ಆಯ್ಕೆ ಮಾಡಬಹುದು. ಗಮನಾರ್ಹವಾಗಿ, ಪಾವತಿಯು ಯೋಜನೆಯ ಖರೀದಿ ಮಾಡಿದ ಆರಂಭದಲ್ಲೇ ಶುರುವಾಗುತ್ತದೆ. ನೀವು ಆಯ್ಕೆ ಮಾಡಿದ ಪಾವತಿ ಸಮಯಕ್ಕೆ ಅನುಗುಣವಾಗಿ ಪಾವತಿ ಆಗುತ್ತದೆ.
ನೀವು ಎಷ್ಟು ಪಿಂಚಣಿ ಪಡೆಯಬಹುದು?
ಪಿಂಚಣಿ ಮೊತ್ತವು ಈ ಯೋಜನೆಯಲ್ಲಿ ನಿಮ್ಮ ಹೂಡಿಕೆಯೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ನೀವು ಈ ಪಾಲಿಸಿಯನ್ನು ಖರೀದಿ ಮಾಡಲು ಕನಿಷ್ಠ 1 ಲಕ್ಷ ರೂಪಾಯಿಯಷ್ಟು ಹೂಡಿಕೆ ಮಾಡಬೇಕಾಗುತ್ತದೆ. ನಿಷ್ಠ ವಯಸ್ಸು 30 ವರ್ಷ ಆಗಿರಬೇಕಾಗುತ್ತದೆ.
ನೀವು 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ 28,625 ರೂಪಾಯಿ ವಾರ್ಷಿಕ ಆದಾಯ ಪಡೆಯಬಹುದಾಗಿದೆ. ಅಂದರೆ ತಿಂಗಳಿಗೆ 2,315 ರೂಪಾಯಿ, ಪ್ರತಿ ತ್ರೈಮಾಸಿಕ 6,988 ರೂಪಾಯಿ, ಅರ್ಧ ವಾರ್ಷಿಕ 14,088 ರೂಪಾಯಿಯನ್ನು ಪಡೆಯಬಹುದಾಗಿದೆ.
16 ಸಾವಿರ ಪಿಂಚಣಿ ಪಡೆಯುವ ಗುರಿ ಇರಲಿ
ಎಲ್‌ಐಸಿ ಜೀವನ್ ಅಕ್ಷಯ್ ಪಾಲಿಸಿ ಮೂಲಕ ತಿಂಗಳಿಗೆ 16,000 ರೂಪಾಯಿಗಳ ಪಿಂಚಣಿಯನ್ನು ಪಡೆಯಲು ಕೂಡಾ ಸಾಧ್ಯವಾಗುತ್ತದೆ. ಆದರೆ ಅದಕ್ಕಾಗಿ ನಿಮ್ಮಲ್ಲಿ 35 ಲಕ್ಷ ರೂಪಾಯಿ ಹೂಡಿಕೆ ಮೊತ್ತ ಇರುವುದು ಅಗತ್ಯವಾಗಿದೆ. 35 ಲಕ್ಷ ರೂಪಾಯಿ ಇದ್ದರೆ ನೀವು ಮಾಸಿಕವಾಗಿ 16 ಸಾವಿರ ರೂಪಾಯಿ ಪಿಂಚಣಿಯಾಗಿಯೇ ಪಡೆಯಬಹುದು.
ಈ ಹೂಡಿಕೆಯಿಂದಾಗಿ ನೀವು 16,479 ರೂಪಾಯಿ ಮಾಸಿಕ ಪಿಂಚಣಿ, 49,744 ರೂಪಾಯಿ ತ್ರೈಮಾಸಿಕ ಪಿಂಚಣಿ, 1,00,275 ರೂಪಾಯಿ ಅರ್ಧ ವಾರ್ಷಿಕ ಪಿಂಚಣಿ ಮತ್ತು 2,03,700 ರೂಪಾಯಿ ವಾರ್ಷಿಕ ಪಿಂಚಣಿಯನ್ನು ಪಡೆಯಲು ಸಾಧ್ಯವಾಗುತ್ತದೆ. ನಿಮ್ಮಲ್ಲಿ ದೊಡ್ಡ ಪ್ರಮಾಣದಲ್ಲಿ ಹಣವಿದ್ದರೆ ಅದರಿಂದ ನೀವು ಈ ಎಲ್‌ಐಸಿ ಪಾಲಿಸಿಯನ್ನು ಖರೀದಿ ಮಾಡಿ, ನಿವೃತ್ತಿ ಜೀವನ ಸುರಕ್ಷಿತಗೊಳಿಸಬಹುದು.


Click it and Unblock the Notifications