ವಾಷಿಂಗ್‌ಟನ್, ಆಗಸ್ಟ್ 8: ಕೋವಿಡ್ ಮುಗಿದ ಬಳಿಕ ಟೆಕ್ ಉದ್ಯೋಗಿಗಳನ್ನು ಆಫೀಸ್‌ಗೆ ಕರೆತರಲು ಹೆಣಗಾಡುತ್ತಿರುವ ಕಂಪೆನಿಗಳ ಮಧ್ಯೆ ಟೆಕ್ ದೈತ್ಯ ಕಂಪೆನಿ ಗೂಗಲ್ ತನ್ನ ನೌಕರರಿಗೆ ಬಂಪರ್ ಆಫರ್ ನೀಡಿದೆ.
ಉದ್ಯೋಗಿಗಳಿಗೆ ಸಾಕಷ್ಟು ಫೆಕ್ಸಿಬಲ್ ಉದ್ಯೋಗಗಳು ಈಗ ಬೇಡಿಕೆಯಲ್ಲಿವೆ. ಇಂಟರ್‌ನೆಟ್ ಇದ್ದರೆ ಸಾಕು ವಿದೇಶದಲ್ಲಿರುವ ಯಾವುದೇ ಕಂಪೆನಿಗೆ ಇಲ್ಲಿ ಕೂತು ಕೆಲಸ ಮಾಡುವುದು ಈಗ ಸಾಧ್ಯವಾಗಿದೆ.

ಗೂಗಲ್ ಕಂಪೆನಿ ತನ್ನ ಉದ್ಯೋಗಿಗಳಿಗೆ ಇಷ್ಟ ಬಂದಾಗ ಆಫೀಸ್‌ಗೆ ಬನ್ನಿ ಎಂದು ಹೇಳಿದೆ. ಆದರೆ ಇದು ಆಫೀಸ್ ಎಂದರೆ ನಾವು ತಿಳಿದಿರುವ ಆಫೀಸ್ ಅಲ್ಲ. ಇದೊಂದು ಹೋಟೆಲ್ ಆಗಿದ್ದು, ಇಲ್ಲಿಯೇ ನೌಕರರು ಕೆಲಸ ಮಾಡಬಹುದಾಗಿದೆ. ಯಾವ ದಿನ ಬರಬೇಕು ಎಂಬುದನ್ನು ನೌಕರರ ಇಚ್ಚೆಗೇ ಕಂಪೆನಿ ಬಿಟ್ಟಿದೆ. ಬಂದರೆ ಅಲ್ಲೇ ಕೂಡ ತಂಗಲು ವ್ಯವಸ್ಥೆಯನ್ನೂ ಕಂಪೆನಿ ಮಾಡಿಕೊಟ್ಟಿದೆ.
ಇಂತಹದೊಂದು ಆಫರ್‌ನ್ನು ತನ್ನ ನೌಕರರಿಗೆ ಗೂಗಲ್ ನೀಡಿದೆ. ವರ್ಕ್ ಫ್ರಮ್ ಹೋಮ್‌ನಲ್ಲಿರುವ ಉದ್ಯೋಗಿಗಳನ್ನು ಕಚೇರಿ ಕೆಲಸಕ್ಕೆ ಬರುವಂತೆ ಮಾಡಲು ಈ ಅವಕಾಶ ಒದಗಿಸಲಾಗಿದೆ. ಇಲ್ಲಿ ಒಂದು ರಾತ್ರಿಗೆ 99 ಡಾಲರ್ (8,189 ರೂ.) ದರವಿದೆ. ಈ ಸಮ್ಮರ್ ಸ್ಪೆಷಲ್ ಆಫರ್ ಅನ್ನು ಗೂಗಲ್ ನೀಡಿದ್ದು, ಆದರೆ ಕೆಲವು ಉದ್ಯೋಗಿಗಳು ಇದಕ್ಕೆ ಒಪ್ಪಿಲ್ಲ.
ಗೂಗಲ್ ಉದ್ಯೋಗಿ ಕಂಪೆನಿಯ ಹೋಟೇಲ್‌ನಲ್ಲಿ 30 ದಿನಗಳ ಕಾಲ ಉಳಿದರೆ, ತಿಂಗಳಿಗೆ ಸುಮಾರು 2,970 ಡಾಲರ್ (2,50 ಲಕ್ಷ ರೂ.) ಶುಲ್ಕವಾಗುತ್ತದೆ. ಈ ಮೊತ್ತವನ್ನು ಉದ್ಯೋಗಿಗಳೇ ಪಾವತಿಸಬೇಕು ಎಂದು ಕಂಪೆನಿ ಹೇಳಿದೆ.
ವರ್ಕ್ ಫ್ರಮ್ ಹೋಮ್ ತ್ಯಜಿಸಿ ಹೋಟೆಲ್‌ನ ಐಷಾರಾಮಿ ವ್ಯವಸ್ಥೆಯಲ್ಲಾದರೂ ಕೆಲಸ ಮಾಡಲಿ ಎನ್ನುವುದು ಕಂಪೆನಿಯ ಆಶಯ. ಆದರೆ ಇದಕ್ಕಿಂತ ಕಡಿಮೆ ಮೊತ್ತಕ್ಕೆ ನಮ್ಮ ಅಪಾರ್ಟ್‌ಮೆಂಟ್‌ನಲ್ಲೇ ಸುಖವಾಗಿದ್ದೇವೆ. ನಿಮ್ಮ ಆಫರ್ ನಮಗೆ ಬೇಡ, ಥ್ಯಾಂಕ್ಸ್ ಎಂದು ಉದ್ಯೋಗಿಯೊಬ್ಬರು ರಿಪ್ಲೇ ಮಾಡಿದ್ದಾರೆ.


Click it and Unblock the Notifications