ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ರತನ್ ಟಾಟಾರ ಸಂಸ್ಥೆಯಾದ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಭಾರತದ ಪ್ರಮುಖ ತಿಂಡಿ ಮತ್ತು ಸಿಹಿತಿಂಡಿಗಳ ಬ್ರ್ಯಾಂಡ್ ಆದ ಹಲ್ದಿರಾಮ್ಸ್‌ನ ಶೇಕಡ 51ರಷ್ಟು ಪಾಲನ್ನು ಖರೀದಿ ಮಾಡಲು ಚಿಂತನೆ ನಡೆಸಿದೆ, ಈ ಬಗ್ಗೆ ಮಾತುಕತೆ ನಡೆದಿದೆ ಎಂದು ಈ ಹಿಂದೆ ವರದಿಯಾಗಿದೆ. ಆದರೆ ಟಾಟಾ ಗ್ರೂಪ್ ಈ ಬಗ್ಗೆ ಶೀಘ್ರವೇ ಸ್ಪಷ್ಟೀಕರಣವನ್ನು ನೀಡಿದ್ದು, ಈ ವರದಿಯನ್ನು ತಳ್ಳಿಹಾಕಿದೆ.
ಹಲ್ದಿರಾಮ್ಸ್ ಪಾಲು ಖರೀದಿ ಸುದ್ದಿಯಾಗುತ್ತಿದ್ದಂತೆ ಟಾಟಾ ಗ್ರೂಪ್ ಸ್ಟಾಕ್ ಜಿಗಿದಿದ್ದು, ವರದಿ ನಿರಾಕರಣೆ ಬಳಿಕ ಕುಸಿದಿದೆ. ಈ ಬೆನ್ನಲ್ಲೇ ಹಲ್ದಿರಾಮ್ಸ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಹಲ್ದಿರಾಮ್ಸ್ ಈ ಡೀಲ್‌ಗಾಗಿ 10 ಬಿಲಿಯನ್ ಯುಎಸ್ ಡಾಲರ್ ಅಥವಾ 83,000 ಕೋಟಿ ರೂಪಾಯಿ ಬೇಡಿಕೆ ಇಟ್ಟಿದೆ ಎಂದು ವರದಿ ಹೇಳಿದೆ. ಈ ನಡುವೆ ಹಲ್ದಿರಾಮ್ಸ್ ಮತ್ತು ಅದರ ಇತರ ಕಂಪನಿಗಳು ಕಳೆದ ಕೆಲವು ವರ್ಷಗಳಿಂದ ಗಳಿಸುತ್ತಿರುವ ಬೃಹತ್ ಆದಾಯದ ಗಮನ ಸೆಳೆಯುತ್ತಿದೆ.

ಹಲ್ದಿರಾಮ್ಸ್ ಐದು ವರ್ಷದ ಆದಾಯವೆಷ್ಟಿದೆ?
ವರದಿಯೊಂದರ ಪ್ರಕಾರ ಹಲ್ದಿರಾಮ್ಸ್ ಮತ್ತು ಭಾರತದಲ್ಲಿ ಇರುವ ಅದರ ಇತರ ನೋಂದಾಯಿತ ಕಂಪನಿಗಳು ಮಾರ್ಚ್ 2022 ರಲ್ಲಿ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ 981 ಮಿಲಿಯನ್ ಯುಎಸ್ ಡಾಲರ್ ಆದಾಯವನ್ನು ಗಳಿಸಿದೆ. ನಾವು ಭಾರತೀಯ ಕರೆನ್ಸಿಯಲ್ಲಿ ಲೆಕ್ಕಾಚಾರ ಮಾಡಿದಾಗ, ಕಂಪನಿಯು 8,162 ಕೋಟಿ ರೂಪಾಯಿ ಗಳಿಸಿದೆ ಎಂದು ಹೇಳಬಹುದು.
ವರದಿ ಪ್ರಕಾರ ಈ ಡೀಲ್‌ಗಾಗಿ ಹಲ್ದಿರಾಮ್ಸ್ ಕಂಪನಿಯು 10 ಬಿಲಿಯನ್ ಡಾಲರ್ (83,000 ಕೋಟಿ ರೂಪಾಯಿ) ಬೇಡಿಕೆಯನ್ನು ಇಟ್ಟಿದೆ. ಇದು ಸಂಸ್ಥೆಯ ಪ್ರಸ್ತುತ ಕಳೆದ ವರ್ಷದ ಆದಾಯಕ್ಕಿಂತ ಹೆಚ್ಚಾಗಿದೆ. ಈ ವರದಿಯ ಮೌಲ್ಯದ ಪ್ರಕಾರವಾಗಿ ಕಳೆದ ಐದು ವರ್ಷಗಳಲ್ಲಿ ಹಲ್ದಿರಾಮ್ಸ್ ಮತ್ತು ಅದರ ಇತರ ಕಂಪನಿಗಳ ಆದಾಯ ಸುಮಾರು 5 ಬಿಲಿಯನ್ ಯುಎಸ್ ಡಾಲರ್ ಆಗಿರಬೇಕು. ಅಂದರೆ ಭಾರತೀಯ ರೂಪಾಯಿಯಲ್ಲಿ 41,500 ಕೋಟಿ ರೂಪಾಯಿ ಆಗಿರಬೇಕು.
ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಟಿಸಿಪಿಎಲ್) ಜನಪ್ರಿಯ ಭಾರತೀಯ ಸ್ನಾಕ್ ತಯಾರಕ ಹಲ್ದಿರಾಮ್‌ನ ಕನಿಷ್ಠ ಶೇಕಡ 51 ರಷ್ಟು ಖರೀದಿಸಲು ಮಾತುಕತೆ ನಡೆಸುತ್ತಿದೆ. ಇದಕ್ಕಾಗಿ ಹಲ್ದಿರಾಮ್ಸ್ 10 ಬಿಲಿಯನ್ ಡಾಲರ್ ಅಥವಾ 83100 ಕೋಟಿ ರೂಪಾಯಿಯನ್ನು ಕೋರಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಹಲ್ದಿರಾಮ್ಸ್‌ನ ವಾರ್ಷಿಕ ಆದಾಯವು ಸುಮಾರು 1.5 ಬಿಲಿಯನ್ ಡಾಲರ್ ಆಗಿದೆ. ಆದರೆ ಹಲ್ದಿರಾಮ್ಸ್ 10 ಬಿಲಿಯನ್ ಡಾಲರ್ ಡೀಲ್‌ಗೆ ಮುಂದಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ತಿಳಿಸಿದೆ.
ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಈ ಹಿಂದೆ ವರದಿಯನ್ನು ನಿರಾಕರಿಸಿದೆ. ಹಲ್ದಿರಾಮ್ಸ್ ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ. "ನಾವು ಶೇಕಡ 51ರಷ್ಟು ಪಾಲನ್ನು ಮಾರಾಟ ಮಾಡುವ ಇತ್ತೀಚಿನ ವರದಿಯನ್ನು ಸ್ಪಷ್ಟವಾಗಿ ನಿರಾಕರಿಸುತ್ತೇವೆ. ನಾವು ನಮ್ಮ ಸಂಸ್ಥೆಯ ಷೇರುಗಳನ್ನು ಟಾಟಾ ಗ್ರಾಹಕ ಉತ್ಪನ್ನಕ್ಕೆ ಮಾರಾಟ ಮಾಡುವ ಬಗ್ಗೆ ಟಾಟಾ ಗ್ರೂಪ್ ಜೊತೆ ಯಾವುದೇ ಚರ್ಚೆಯಲ್ಲಿ ತೊಡಗಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇವೆ," ಎಂದು ಹಲ್ದಿರಾಮ್ಸ್ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.


Click it and Unblock the Notifications