ರತನ್ ಟಾಟಾ ಅವರು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಬೃಹತ್ ಅಭಿಮಾನಿ ಬಳಗವನ್ನು ಹೊಂದಿರುವ ಪ್ರಸಿದ್ಧ ಬಿಲಿಯನೇರ್‌ಗಳಲ್ಲಿ ಒಬ್ಬರು. ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷರಾಗಿರುವ ರತನ್ ಟಾಟಾ ತಮ್ಮ ಬುದ್ಧಿವಂತಿಕೆ, ವ್ಯವಹಾರಿಕ ಜ್ಞಾನ, ಹೂಡಿಕೆಗಳು ಮತ್ತು ಲೋಕೋಪಕಾರಿ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಾರೆ.
ಸಾಮಾನ್ಯವಾಗಿ ರತನ್ ಟಾಟಾ ಅವರು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಆದರೆ ಪಾಪರಾಜಿಗಳ ಕಣ್ಣಿಗೆ ಬಿದ್ದಾಗಲೆಲ್ಲಾ ಅವರು ತಮ್ಮ ಕಂಪನಿಯ ಜನರಲ್ ಮ್ಯಾನೇಜರ್ ಆಗಿರುವ ಅವರ ಪರ್ಸನಲ್ ಅಸಿಸ್ಟೆಂಟ್ ಶಾಂತನು ನಾಯ್ಡು ಅವರೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.
ಶಂತನು ನಾಯ್ಡು ಅವರು ರತನ್ ಟಾಟಾ ಅವರ ಜನ್ಮದಿನವನ್ನು ಆಚರಿಸುವ ವೀಡಿಯೊ ವೈರಲ್ ಆದ ಬಳಿಕ ಬೆಳಕಿಗೆ ಬಂದಿದ್ದರು.

ರತನ್ ಟಾಟಾ ಅವರೊಂದಿಗೆ ಚಿಗುರುಮೀಸೆಯ ಯುವಕ ಯಾರೆಂದು ನೆಟ್ಟಿಗರು ಆಶ್ಚರ್ಯಪಟ್ಟಿದ್ದರು. ನಾಯ್ಡು ಅವರು ಗುಡ್‌ಫೆಲೋಸ್‌ನ ಸಂಸ್ಥಾಪಕ ಮತ್ತು ರತನ್ ಟಾಟಾ ಅವರ ಆಪ್ತ ಸಹಾಯಕ ಎಂದು ಹಲವರಿಗೆ ತಿಳಿದಿದ್ದರೂ, ರತನ್ ಟಾಟಾ ಅವರಿಗೆ ಹೇಗೆ ಹತ್ತಿರವಾದರೂ, ಅವರಿಗಾಗಿ ಯಾವೆಲ್ಲಾ ಕೆಲಸ ಮಾಡಿದ್ದರು ಎಂಬುದು ಬಹಳ ಮಂದಿ ತಿಳಿದಿಲ್ಲ.
ಶಂತನು ನಾಯ್ಡು ಜೀವನದ ಬಗ್ಗೆ ತಿಳಿಯಿರಿ
1993ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದ, ಶಂತನು ನಾಯ್ಡು ಪ್ರಾಥಮಿಕ ಶಿಕ್ಷಣದ ಬಳಿಕ 2014 ರಲ್ಲಿ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾನಿಲಯದಿಂದ ಎಂಜಿನಿಯರಿಂಗ್ ನಲ್ಲಿ ಪದವಿಯನ್ನು ಪಡೆದರು. ಇದಾದ ಬಳಿಕ 2016 ರಲ್ಲಿ ಕಾರ್ನೆಲ್ ಜಾನ್ಸನ್ ಗ್ರಾಜುಯೇಟ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ನಂತರ ಶಂತನು ಪುಣೆಯ ಟಾಟಾ ಎಲಕ್ಸಿಯಲ್ಲಿ ಆಟೋಮೊಬೈಲ್ ಡಿಸೈನ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿದರು.
ಯುವರ್ ಸ್ಟೋರಿ ವಿಶೇಷ ವರದಿಯಲ್ಲಿ ಉಲ್ಲೇಖಿಸಿರುವಂತೆ, ಒಂದು ದಿನ ಶಂತನು ನಾಯ್ಡು ಕೆಲಸ ಮುಗಿಸಿ ಮನೆಗೆ ಮರಳುವಾಗ ಬೀದಿ ನಾಯಿಯೊಂದರ ಮೇಲೆ ಕಾರು ಹರಿದ ಘಟನೆ ಕಂಡರು. ನಾಯಿಗಳು ಕಾಣಿಸದೆ ವಾಹನ ಚಾಲಕರು ಅವುಗಳ ಮೇಲೆ ಗಾಡಿ ಚಲಾಯಿಸುವ ನೋವಿನ ಘಟನೆಗಳನ್ನು ತಗ್ಗಿಸಲು ನಿರ್ಧರಿಸಿದರು.
ಈ ಸಮಸ್ಯೆಯನ್ನು ಪರಿಹರಿಸಲು ಬೀದಿ ದೀಪಗಳಿಲ್ಲದಿದ್ದರೂ ನಾಯಿಗಳು ಓಡಾಡುವುದು ರಾತ್ರಿಯಲ್ಲಿ ಗೋಚರಿಸವೇಕು ಎಂದು ಅವುಗಳಿಗಾಗಿ ಕಾಲರ್‌ಗಳನ್ನು ಮಾಡುವ ಆಲೋಚನೆ ಮಾಡಿ ಅದನ್ನು ಕಾರ್ಯಗತಗೊಳಿಸಿದರು. ಕೆಲವು ಸ್ನೇಹಿತರ ಜತೆಗೂಡಿ ಡಾಗ್ ಕಾಲರ್‌ಗಳನ್ನು ತಯಾರಿಸಿದರು. ಮರು ದಿನವೇ, ಈ ಕಾಲರ್‌ನಿಂದ ನಾಯಿಯೊಂದರ ಜೀವ ಉಳಿದಿದ್ದಾಗಿ ಅವರಿಗೆ ತಿಳಿದುಬಂದಿತ್ತು.
ಇಂತಹ ಮತ್ತಷ್ಟು ಕಾಲರ್‌ಗಳನ್ನು ತಯಾರಿಸಲು ಅವರು ಬಯಸಿದ್ದರು. ಆದರೆ ಅದಕ್ಕೆ ಆಗ ಸಾಕಷ್ಟು ಹಣ ಇರಲಿಲ್ಲ. ಇದಕ್ಕೆ ನೆರವಾಗುವಂತೆ, ನಾಯ್ಡು ಅವರು ರತನ್ ಟಾಟಾ ಅವರಿಗೆ ತಮ್ಮ ಅಲೋಚನೆಗಳು ವಿವರಗಳೊಂದಿಗೆ ಪತ್ರ ಬರೆದರು. ಆಶ್ಚರ್ಯವೆಂದರೆ , ಶಂತನು ಅವರ ಅಲೋಚನೆಗಳ ಬಗ್ಗೆ ಚರ್ಚಿಸಲು ರತನ್ ಟಾಟಾ ಅವರನ್ನು ಮುಖತಃ ಭೇಟಿಯಾಗುವಂತೆ ಆಹ್ವಾನಿಸಿದರು.
ಇಬ್ಬರು ಶ್ವಾನ ಪ್ರೇಮಿಗಳ ಭೇಟಿಯು ಮುಂದೆ ಅವರ ಸ್ನೇಹಕ್ಕೆ ಕಾರಣವಾಯಿತು, ಮಾತ್ರವಲ್ಲದೇ ಇದೇ ವಿಚಾರ ಶಂತನು ಅವರಿಗೆ ರತನ್ ಟಾಟಾ ಅವರ ಆಪ್ತ ಸಹಾಯಕರಾಗಿ ಕೆಲಸ ಮಾಡಲು ಸಹಾಯ ಮಾಡಿತು. ಹೀಗೆ ಟಾಟಾ ಟ್ರಸ್ಟ್‌ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿರುವ ಶಂತನು ನಾಯ್ಡು, ತಮಗಿಂತ ಮೂರು ಪಟ್ಟು ಹಿರಿಯರಾದ ರತನ್ ಟಾಟಾ ಅವರ ಆಪ್ತ ಸ್ನೇಹಿತ ಹಾಗೂ ಅವರ ನಂಬಿಕಸ್ಥರಾದರು.
ಬಿಲಿಯನೇರ್ ರತನ್ ಟಾಟಾ ಕೂಡ ನಾಯ್ಡು ಅವರ ಹೊಸ ಸ್ಟಾರ್ಟಪ್ ಗುಡ್‌ಫೆಲೋಸ್‌ನಲ್ಲಿ ಹೂಡಿಕೆ ಮಾಡಿದರು, ಗುಡ್‌ಫೆಲೋಸ್ ಹಿರಿಯ ನಾಗರಿಕರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ. ಈ ಸ್ಟಾರ್ಟಪ್ ಸುಮಾರು 5 ಕೋಟಿ ರೂಪಾಯಿ ಮೌಲ್ಯ ಸಂಸ್ಥೆಯಾಗಿ ಬೆಳೆದಿದೆ. ಟಾಟಾ ಟ್ರಸ್ಟ್‌ನ ಡಿಜಿಎಂ ಆಗಿರುವ ಶಂತನು, ಅದರ ಜನರಲ್ ಮ್ಯಾನೇಜರ್ ಅಧೀನದಲ್ಲಿ ಕಂಪೆನಿಯ ಯೋಜನೆಗಳಿಗೆ ಸಹಾಯ ಮಾಡುವ ಕೆಲಸ ಮಾಡುತ್ತಿದ್ದಾರೆ.


Click it and Unblock the Notifications