ಭಾರತದ ಅತೀ ದೊಡ್ಡ ವಿಮಾ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಇತ್ತೀಚೆಗೆ ಆನ್‌ಲೈನ್ ವಹಿವಾಟನ್ನು ಆರಂಭ ಮಾಡಿದೆ. ತನ್ನ ಸದಸ್ಯರಿಗಾಗಿ ಎಲ್‌ಐಸಿ 24 ಗಂಟೆಗಳ ವಾಟ್ಸಾಪ್ ಸೇವೆಯನ್ನು ಆರಂಭ ಮಾಡಿದೆ. ಈ ಮೂಲಕ ಎಲ್‌ಐಸಿ ಗ್ರಾಹಕರು ಸುಲಭವಾಗಿ ಹಾಗೂ ಸರಳವಾಗಿ ವಾಟ್ಸಾಪ್ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ.
ಎಲ್‌ಐಸಿ ವಾಟ್ಸಾಪ್ ಸೇವೆಯನ್ನು ಆರಂಭ ಮಾಡಿದ್ದು ಎಲ್‌ಐಸಿ ವಾಟ್ಸಾಪ್ ಚಾಟ್‌ಬಾಟ್ ಮೂಲಕ ಪಾಲಿಸಿದಾರರು ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಸೇವೆಗಳನ್ನು ತ್ವರಿತವಾಗಿ ಪಡೆಯಲು ಸಾಧ್ಯವಾಗುತ್ತದೆ. ಇನ್ನು ಎಲ್‌ಐಸಿ ಮಾತ್ರವಲ್ಲ ಈಗಾಗಲೇ ಹಲವಾರು ಬ್ಯಾಂಕ್‌ಗಳಲ್ಲಿ ವಾಟ್ಸಾಪ್ ಸೇವೆಯನ್ನು ಆರಂಭ ಮಾಡಲಾಗಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಯಾವೆಲ್ಲ ಸೇವೆಗಳು ವಾಟ್ಸಾಪ್ ಮೂಲಕ ಲಭ್ಯ
ಎಲ್‌ಐಸಿ ಪಾಲಿಸಿದಾರರು ಸುಮಾರು 11ಕ್ಕೂ ಅಧಿಕ ಸೇವೆಗಳನ್ನು ವಾಟ್ಸಾಪ್ ಮೂಲಕ ಪಡೆಯಲು ಸಾಧ್ಯವಾಗುತ್ತದೆ. ಸಾಲ ಅರ್ಹತೆ, ಮರುಪಾವತಿ ಅವಧಿ, ಪಾಲಿಸಿ ಸ್ಟೇಟಸ್, ಬೋನಸ್ ಮಾಹಿತಿ, ಪಾಲಿಸಿ ಸ್ಟೇಟ್‌ಮೆಂಟ್, ಎಲ್‌ಐಸಿ ಸೇವೆಯ ಲಿಂಕ್, ಪ್ರೀಮಿಯಂ ಕೊನೆಯ ದಿನಾಂಕದ ಅಪ್‌ಡೇಟ್‌ಗಳು, ಸಾಲ ಮರುಪಾವತಿಯ ಕೊನೆಯ ದಿನಾಂಕದ ಮಾಹಿತಿ, ಪ್ರೀಮಿಯಂ ಬಗ್ಗೆ ಮಾಹಿತಿ, ಮೊದಲಾದ ಮಾಹಿತಿಯನ್ನು ವಾಟ್ಸಾಪ್ ಸೇವೆ ಮೂಲಕ ಪಡೆಯಬಹುದಾಗಿದೆ.
ಎಲ್‌ಐಸಿ ವಾಟ್ಸಾಪ್ ಸೇವೆ ಆಕ್ಟಿವೇಟ್ ಮಾಡುವುದು ಹೇಗೆ?
ಹಂತ 1: ಮೊದಲಾಗಿ ನೀವು ನಿಮ್ಮ ಮೊಬೈಲ್‌ನಲ್ಲಿ ವಾಟ್ಸಾಪ್ ಸೇವೆಯ ನಂಬರ್ ಅನ್ನು ಸೇವ್ ಮಾಡಬೇಕಾಗುತ್ತದೆ. ಎಲ್‌ಐಸಿಯ ವಾಟ್ಸಾಪ್ ಸೇವಾ ಸಂಖ್ಯೆ +91 8976862090 ಆಗಿದೆ.
ಹಂತ 2: ಅದಾದ ಬಳಿಕ ನಿಮ್ಮ ರಿಜಿಸ್ಟಾರ್ ಆದ ಮೊಬೈಲ್ ಸಂಖ್ಯೆಯಿಂದ +91 8976862090 ಸಂಖ್ಯೆಗೆ 'Hi' ಎಂದು ಮೆಸೇಜ್ ಮಾಡಿ.
ಹಂತ 3: ಅದಾದ ಬಳಿಕ ನೀವು ಒಂದರಿಂದ 11ರವರೆಗಿನ ಸೇವೆಗಳ ಪೈಕಿ ಯಾವುದಾದರೂ ಒಂದು ಸೇವೆಯನ್ನು ಆಯ್ಕೆ ಮಾಡಬೇಕಾಗುತ್ತದೆ.
ಹಂತ 4: ಸೇವೆಗಳ ಆಯ್ಕೆಗಾಗಿ ನಿಮಗೆ ನೀಡಲಾದ ಆಯ್ಕೆ ಸಂಖ್ಯೆಯೊಂದಿಗೆ ಚಾಟ್‌ನಲ್ಲಿ ಪ್ರತ್ಯುತ್ತರಿಸಿ --ಉದಾ 1 ಪ್ರೀಮಿಯಂ ದಿನಾಂಕಕ್ಕಾಗಿ, 2 ಬೋನಸ್ ಮಾಹಿತಿಗಾಗಿ ಇತ್ಯಾದಿ
ಹಂತ 5: ನಿಮ್ಮ ಆಯ್ಕೆಗೆ ಅನುಗುಣವಾಗಿ ವಾಟ್ಸಾಪ್ ಚಾಟ್‌ನಲ್ಲಿ ಎಲ್‌ಐಸಿ ಪ್ರತಿಕ್ರಿಯೆಯನ್ನು ನಿಮಗೆ ನೀಡಲಿದೆ.
ಇನ್ನು ನೀವು ಸೇವೆಗಳನ್ನು ಪಡೆಯಲು, ಪಾಲಿಸಿದಾರರು ಮೊದಲು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಅಧಿಕೃತ ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಎಲ್‌ಐಸಿಯ ಆನ್‌ಲೈನ್‌ನಲ್ಲಿ ನೋಂದಾಯಿಸುವುದು ಹೇಗೆ? ಹಂತ ಹಂತದ ಪ್ರಕ್ರಿಯೆಯನ್ನು ನಾವಿಲ್ಲಿ ವಿವರಿಸಿದ್ದೇವೆ.
ಎಲ್‌ಐಸಿಯಲ್ಲಿ ರಿಜಿಸ್ಟಾರ್ ಮಾಡುವುದು ಹೇಗೆ?
ಹಂತ 1: www.licindia.in ಕ್ಕೆ ಲಾಗಿನ್ ಆಗಿ 'Customer Portal' ಮೇಲೆ ಕ್ಲಿಕ್ ಮಾಡಿ.
ಹಂತ 2: ನೀವು ಕಸ್ಟಮರ್ ಪೋರ್ಟಲ್‌ನಲ್ಲಿ ಈವರೆಗೂ ರಿಜಿಸ್ಟಾರ್ ಆಗಿಲ್ಲದಿದ್ದರೆ, 'New user' ಮೇಲೆ ಕ್ಲಿಕ್ ಮಾಡಿ.
ಹಂತ 3: ಮುಂದಿನ ಸ್ಕ್ರೀನ್‌ನಲ್ಲಿ ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ಅನ್ನು ಹಾಕಿ, submit ಮಾಡಿ.
ಹಂತ 4: ಹೊಸದಾಗಿ ಕ್ರಿಯೇಟ್ ಮಾಡಿ ಯೂಸರ್ ಐಡಿ ಹಾಕಿ ಲಾಗಿನ್ ಆಗಿ
ಹಂತ 5: Basic Services ಮೇಲೆ ಕ್ಲಿಕ್ ಮಾಡಿ, Add Policy ಮೇಲೆ ಹಾಕಿ
ಹಂತ 6: ನಿಮ್ಮ ಎಲ್ಲ ಪಾಲಿಸಿಯನ್ನು ಎಲ್‌ರೋಲ್ ಮಾಡಿಕೊಳ್ಳಿ.
ಹಂತ 7: ಎಲ್‌ರೋಲ್ ಆದ ಪಾಲಿಸಿ ಅಡಿಯಲ್ಲಿ ಎಲ್ಲ ಮೂಲ ಸೇವೆಗಳು ಇರಲಿದೆ.
ಅದಾದ ಬಳಿಕ ಮೂರು ಹಂತಗಳ ಪ್ರಕ್ರಿಯೆಯನ್ನು ಬಳಸಿ ಪ್ರೀಮಿಯರ್ ಸರ್ವಿಸ್‌ಗಾಗಿ ರಿಜಿಸ್ಟಾರ್ ಆಗಬಹುದಾಗಿದೆ. ಎಲ್‌ಐಸಿ ವೆಬ್‌ಸೈಟ್ ಪ್ರಕಾರ ಯಾವುದೇ ಗ್ರಾಹಕರು ತಮ್ಮ ಸ್ವಂತ ಜೀವನ ಅಥವಾ ಅವರ ಅಪ್ರಾಪ್ತ ಮಕ್ಕಳ ಜೀವನದ ಮೇಲೆ ಪಾಲಿಸಿಯನ್ನು ಹೊಂದಲು ಅರ್ಹರಾಗಿರುತ್ತಾರೆ.


Click it and Unblock the Notifications