ಸವರನ್ ಗೋಲ್ಡ್ ಬಾಂಡ್ ಯೋಜನೆಯ ಎರಡನೇ ಭಾಗವು ಸೆಪ್ಟೆಂಬರ್ 11 ರಂದು ಚಂದಾದಾರಿಕೆಗಾಗಿ ತೆರೆದಿದ್ದು, ಇದು ಸೆಪ್ಟೆಂಬರ್ 15, 2023 ರವರೆಗೆ ಅಂದರೆ ಶುಕ್ರವಾರದವರೆಗೆ ಬಿಡ್ಡಿಂಗ್‌ಗಾಗಿ ತೆರೆದಿರುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪ್ರತಿ ಗ್ರಾಂಗೆ 5,923 ರೂಪಾಯಿ ಬೆಲೆಯನ್ನು ನಿಗದಿಪಡಿಸಿದೆ.
"ಕಳೆದ ಕೆಲವು ದಿನಗಳ ಬೆಲೆಯ ಆಧಾರದಲ್ಲಿ ಸವರನ್ ಗೋಲ್ಡ್ ಬಾಂಡ್‌ನ ಬೆಲೆಯು (999 ಶುದ್ಧತೆಯ ಚಿನ್ನಕ್ಕೆ) ಪ್ರತಿ ಗ್ರಾಂ ಚಿನ್ನಕ್ಕೆ 5,923 ರೂಪಾಯಿವರೆಗೆ ಕಾರ್ಯನಿರ್ವಹಣೆ ಮಾಡುತ್ತದೆ," ಎಂದು ಸವರನ್ ಗೋಲ್ಡ್ ಬಾಂಡ್‌ನ ಯೋಜನೆ 2023-24 ರ ಎರಡನೇ ಕಂತಿನ ಬೆಲೆಯನ್ನು ವಿವರಿಸುವಾಗ ಕೇಂದ್ರ ಬ್ಯಾಂಕ್ ಹೇಳಿದೆ.

"ಇತ್ತೀಚಿನ ಸವರನ್ ಗೋಲ್ಡ್ ಬಾಂಡ್‌ಗಳ ಸಿರೀಸ್ II ಪ್ರತಿ ಗಾಂಗೆ 5873 ರೂಪಾಯಿ ನಿಗದಿಪಡಿಸಲಾಗಿದೆ. ಈ ಹಿಂದಿನ ಭಾಗಗಳಿಂದ ಮೂರು ರೂಪಾಯಿ ರಿಯಾಯಿತಿ ಇದೆ. ಕನಿಷ್ಠ 5 ವರ್ಷಗಳ ಕಾಲ ತಮ್ಮ ಹೂಡಿಕೆಯನ್ನು ವಿತ್‌ಡ್ರಾ ಮಾಡಲು ಬಯಸದವರು ಇಲ್ಲಿ ಹೂಡಿಕೆ ಮಾಡಬಹುದು. ಚಿನ್ನವು ಐತಿಹಾಸಿಕವಾಗಿ ಹಣದುಬ್ಬರಕ್ಕೆ ಹೆಡ್ಜ್ ಆಗಿ ಕಾರ್ಯನಿರ್ವಹಿಸುತ್ತದೆ," ಎಂದು ತಿಳಿಸಿದರು.
"ಕಳೆದ ವರ್ಷದಲ್ಲಿ, ಹಳದಿ ಲೋಹವು ಶೇಕಡ 13-15 ರಷ್ಟು ಲಾಭವನ್ನು ನೀಡಿದೆ. ಡಾಲರ್ ಲೆಕ್ಕಾಚಾರದಲ್ಲಿ ನಾವು ನೋಡಿದಾಗ ಶೇಕಡ 12 ರಷ್ಟು ರಿಟರ್ನ್ ಲಭ್ಯವಾಗಿದೆ. ಇನ್ನು ಭಾರತದಲ್ಲಿ ಹಬ್ಬದ ಬೇಡಿಕೆಯಿಂದಾಗಿ ಚಿನ್ನದ ಬೆಲೆಗಳು ಹೆಚ್ಚಾಗಬಹುದು. ಆದ್ದರಿಂದ ಎಸ್‌ಜಿಬಿಗಳನ್ನು ಆಯ್ಕೆ ಮಾಡುವ ಹೂಡಿಕೆದಾರರು ತಮ್ಮ ಲಾಭಗಳನ್ನು ಹೆಚ್ಚಿಸಲು ದೀರ್ಘಾವಧಿಯ ಹೂಡಿಕೆಗೆ ಉತ್ತಮ ಆಯ್ಕೆಯಾಗಿರುತ್ತದೆ," ಎಂದು ಮಿಲ್ವುಡ್ ಕೇನ್ ಇಂಟರ್‌ನ್ಯಾಷನಲ್ ಸಂಸ್ಥಾಪಕ ಮತ್ತು ಸಿಇಒ ನಿಶ್ ಭಟ್ ಹೇಳುತ್ತಾರೆ.
ಸವರನ್ ಗೋಲ್ಡ್ ಬಾಂಡ್ ರಿಯಾಯಿತಿ
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮತ್ತು ಡಿಜಿಟಲ್ ಮೋಡ್ ಮೂಲಕ ಅರ್ಜಿ ಸಲ್ಲಿಸಿ ಪಾವತಿ ಮಾಡುವ ಹೂಡಿಕೆದಾರರಿಗೆ ಆರ್‌ಬಿಐ ಪ್ರತಿ 10 ಗ್ರಾಂಗೆ 50 ರೂಪಾಯಿ ರಿಯಾಯಿತಿಯನ್ನು ಘೋಷಿಸಿದೆ. ಅಂತಹ ಹೂಡಿಕೆದಾರರಿಗೆ, ಚಿನ್ನದ ಬಾಂಡ್‌ಗಳ ವಿತರಣೆಯ ಬೆಲೆ ಪ್ರತಿ ಗ್ರಾಂಗೆ 5,873 ರೂಪಾಯಿ ಆಗಿದೆ.
"ಸುರಕ್ಷಿತ ಮತ್ತು ಖಾತರಿಯ ಲಾಭವನ್ನು ಪಡೆಯಲು ಸವರನ್ ಗೋಲ್ಡ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿ," ಎಂದು ದೇಶದ ಪ್ರಮುಖ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಎಕ್ಸ್‌ನಲ್ಲಿ (ಈ ಹಿಂದೆ ಟ್ವಿಟ್ಟರ್) ಪೋಸ್ಟ್ ಮಾಡಿದೆ. ಎಸ್‌ಬಿಐ ಹಾಗೆಯೇ ಈ ಚಿನ್ನದ ಬಾಂಡ್‌ಗಳಲ್ಲಿ ನೀವು ಏಕೆ ಹೂಡಿಕೆ ಮಾಡಬೇಕೆಂದು ಆರು ಕಾರಣಗಳನ್ನು ಲೀಸ್ಟ್ ಮಾಡಿದೆ.
ಎಸ್‌ಬಿಐ ನೀಡಿದ ಆರು ಕಾರಣಗಳು
1) ಖಚಿತವಾಗಿ ಶೇಕಡ 2.5 ರಷ್ಟು ಬಡ್ಡಿ ದರವನ್ನು ಅರ್ಧ-ವಾರ್ಷಿಕವಾಗಿ ಪಾವತಿಸಲಾಗುತ್ತದೆ.
2) ಭೌತಿಕ ಚಿನ್ನದಂತಹ ಸಂಗ್ರಹ ತೊಂದರೆಗಳು ಇಲ್ಲ
3) ವಿತ್‌ಡ್ರಾ ಮಾಡಿದರೆ ಯಾವುದೇ ತೆರಿಗೆ ಇಲ್ಲ
4) ಲಿಕ್ವಿಡಿಟಿ
5) ಸಾಲಗಳಿಗೆ ಮೇಲಾಧಾರವಾಗಿ ಬಳಸಬಹುದು
6) ಜಿಎಸ್‌ಟಿ ಮತ್ತು ಮೇಕಿಂಗ್ ಶುಲ್ಕಗಳಿಲ್ಲ
ದೇಶದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸವರನ್ ಗೋಲ್ಡ್ ಬಾಂಡ್ (ಎಸ್‌ಜಿಬಿ) ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವ ಆಯ್ಕೆಯನ್ನು ಒದಗಿಸುತ್ತದೆ. ಎಸ್‌ಜಿಬಿಯ ಹೂಡಿಕೆ ಹೇಗೆ ನೋಡಿ..
ಎಸ್‌ಬಿಐ ಮೂಲಕ ಎಸ್‌ಜಿಬಿಯಲ್ಲಿ ಹೂಡಿಕೆ ಮಾಡುವುದು ಹೇಗೆ?
ಹಂತ 1: ನಿಮ್ಮ ಎಸ್‌ಬಿಐ ನೆಟ್ ಬ್ಯಾಂಕಿಂಗ್ ಖಾತೆಗೆ ಲಾಗ್ ಇನ್ ಮಾಡಿ
ಹಂತ 2: eServices ಮೇಲೆ ಕ್ಲಿಕ್ ಮಾಡಿ, Sovereign Gold Bond ಗೆ ಹೋಗಿ
ಹಂತ 3: terms and conditions ಆಯ್ಕೆ ಮಾಡಿ, proceed ಕ್ಲಿಕ್ ಮಾಡಿ
ಹಂತ 4: ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ. ಇದು ಒಂದು ಬಾರಿ ಮಾಡಲಾಗುವ ನೋಂದಣಿಯಾಗಿದೆ.
ಹಂತ 5: submit ಮೇಲೆ ಕ್ಲಿಕ್ ಮಾಡಿ
ಹಂತ 6: ಖರೀದಿ ಫಾರ್ಮ್‌ನಲ್ಲಿ ಚಂದಾದಾರಿಕೆ ಪ್ರಮಾಣ ಮತ್ತು ನಾಮಿನಿ ವಿವರಗಳನ್ನು ನಮೂದಿಸಿ
ಹಂತ 7: ಈಗ submit ಮೇಲೆ ಕ್ಲಿಕ್ ಮಾಡಿ
ಎಸ್‌ಬಿಐ ಹೊರತಾಗಿ, ಈ ಗೋಲ್ಡ್ ಬಾಂಡ್‌ಗಳನ್ನು ಎಚ್‌ಡಿಎಫ್‌ಸಿ ಬ್ಯಾಂಕ್, ಪಿಎನ್‌ಬಿ, ಕೆನರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮೂಲಕ ನೆಟ್ ಬ್ಯಾಂಕಿಂಗ್ ಮೂಲಕ ಖರೀದಿಸಬಹುದು. ಹೂಡಿಕೆದಾರರು ವಾಣಿಜ್ಯ ಬ್ಯಾಂಕ್‌ಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಚ್‌ಸಿಐಎಲ್) ನಿಂದ ಆರ್‌ಬಿಐನಿಂದ ಗೊತ್ತುಪಡಿಸಿದ ಅಂಚೆ ಕಚೇರಿಗಳು ಮತ್ತು ಮಾನ್ಯತೆ ಪಡೆದ ಸ್ಟಾಕ್ ಎಕ್ಸ್‌ಚೇಂಜ್‌ಗಳಿಂದ ಚಿನ್ನದ ಬಾಂಡ್‌ಗಳನ್ನು ಖರೀದಿಸಬಹುದು.
ಸವರನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಕನಿಷ್ಠ ಹೂಡಿಕೆ ಮಿತಿ ಒಂದು ಗ್ರಾಂ ಆಗಿದೆ. ಆದರೆ ಚಂದಾದಾರಿಕೆಯ ಗರಿಷ್ಠ ಮಿತಿಯು ವ್ಯಕ್ತಿಗೆ 4 ಕೆಜಿ, ಎಚ್‌ಯುಎಫ್‌ಗೆ 4 ಕೆಜಿ ಮತ್ತು ಟ್ರಸ್ಟ್‌ಗಳಿಗೆ 20 ಕೆಜಿ ಗೋಲ್ಡ್ ಬಾಂಡ್ ಖರೀದಿ ಅವಕಾಶವಿದೆ. ಸವರನ್ ಗೋಲ್ಡ್ ಬಾಂಡ್ ಯೋಜನೆಯ ಅವಧಿಯು ಎಂಟು ವರ್ಷಗಳ ಅವಧಿಗೆ ಇರುತ್ತದೆ. 5 ನೇ ವರ್ಷದ ನಂತರ ಅಕಾಲಿಕವಾಗಿ ವಿತ್‌ಡ್ರಾ ಮಾಡುವ ಆಯ್ಕೆಯಿದ್ದು, ಬಡ್ಡಿಯನ್ನು ಪಾವತಿಸಬೇಕಾದ ದಿನಾಂಕದಂದು ವಿತ್‌ಡ್ರಾ ಮಾಡಬಹುದು.


Click it and Unblock the Notifications