ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ (LIC) ಸಾರ್ವಜನಿಕ ವಿತರಣೆಯ ಕೊಡುಗೆ (IPO) ನಾಳೆ ಆರಂಭವಾಗಲಿದೆ. ಬಹುನಿರೀಕ್ಷಿತ ಭಾರತದ ಅತಿದೊಡ್ಡ ಐಪಿಒ ಅಂತಿಮವಾಗಿ ಆರಂಭವಾಗಲಿದ್ದು, ಹೂಡಿಕೆದಾರರು ಕಾತುರದಿಂದ ಕಾಯುತ್ತಿದ್ದಾರೆ.
ಬುಧವಾರ, 27 ಏಪ್ರಿಲ್ 2022 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರವು ಬಿಡುಗಡೆ ದಿನಾಂಕ, ಹಂಚಿಕೆ ಗಾತ್ರ ಮತ್ತು ಇತರೆ ಮಾಹಿತಿಯನ್ನು ಹಂಚಿಕೊಂಡಿದೆ. ಮುಂಬರುವ ಮೆಗಾ ಐಪಿಒ ಭಾರತೀಯ ಬಂಡವಾಳ ಮಾರುಕಟ್ಟೆಯ ಇತಿಹಾಸದಲ್ಲಿ ಅತಿದೊಡ್ಡ ಐಪಿಒ ಆಗಿರಲಿದೆ.
ನೀವು ಎಲ್‌ಐಸಿ ಐಪಿಒದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಎಲ್‌ಐಸಿ ಪಾಲಿಸಿದಾರರಾಗಿದ್ದರೆ, ನಿಮ್ಮ ಪ್ಯಾನ್ ಸಂಖ್ಯೆಯನ್ನು ಪಾಲಿಸಿಯೊಂದಿಗೆ ಲಿಂಕ್ ಮಾಡುವುದು ಅಗತ್ಯವಾಗಿದೆ. ಹಾಗೆಯೇ ನೀವು ಡಿಮ್ಯಾಟ್ ಖಾತೆಯನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಎಲ್‌ಐಸಿ ಹಂಚಿಕೆ ಸ್ಥಿತಿಯನ್ನು ಪರಿಶೀಲಿಸಲು ನಿಮ್ಮ ಪ್ಯಾನ್ ಎಲ್‌ಐಸಿ ಹಾಗೂ ಡಿಮ್ಯಾಟ್ ಖಾತೆ ಎರಡರಲ್ಲೂ ಲಿಂಕ್ ಆಗಿರಬೇಕು.

ಪಾಲಿಸಿದಾರರಲ್ಲದವರು ಸಹ ಎಲ್‌ಐಸಿ ಐಪಿಒಗೆ ಅರ್ಜಿ ಸಲ್ಲಿಕೆ ಮಾಡಬಹುದು. ಹಾಗಾದರೆ ನೀವು ಎಲ್‌ಐಸಿ ಐಪಿಒ ಷೇರು ಹಂಚಿಕೆ ಸ್ಥಿತಿಯನ್ನು ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ..
ಎಲ್ಐಸಿ ಐಪಿಒ ಷೇರು ಹಂಚಿಕೆ ಪರಿಶೀಲನೆ ಹೇಗೆ?
ಎಲ್‌ಐಸಿ ಐಪಿಒ ಚಂದಾದಾರರಾದ ನಂತರ, ಹೂಡಿಕೆದಾರರು ಷೇರುಗಳನ್ನು ಹಂಚಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಅದಕ್ಕಾಗಿ ನೀವು ನಾಲ್ಕು ಹಂತಗಳನ್ನು ಪಾಲನೆ ಮಾಡಬೇಕು. ಆ ಹಂತಗಳು ಈ ಕೆಳಗಿದೆ.
ಹಂತ 1: https://www.bseindia.com/investors/appli_check.aspx ಗೆ ಭೇಟಿ ನೀಡಿ
ಹಂತ 2: ಯಾವ ಪ್ರಕಾರ ಎಂದು ಆಯ್ಕೆಮಾಡಿ
ಹಂತ 3: ವಿಷಯ, ಅಪ್ಲಿಕೇಶನ್ ಸಂಖ್ಯೆ, ಪ್ಯಾನ್ ವಿವರಗಳನ್ನು ನಮೂದಿಸಿ
ಹಂತ 4: search ಮೇಲೆ ಕ್ಲಿಕ್ ಮಾಡಿದರೆ ಮಾಹಿತಿ ಲಭ್ಯವಾಗಲಿದೆ
ಎಲ್‌ಐಸಿ ಐಪಿಒ ಬುಧವಾರ, ಮೇ 4, 2022 ರಂದು ತೆರೆಯಲಿದೆ. ಸೋಮವಾರ, ಮೇ 9 ರಂದು ಮುಕ್ತಾಯಗೊಳ್ಳುತ್ತದೆ. ಐಪಿಒ ನ ಬೆಲೆ ಪಟ್ಟಿಯನ್ನು ಪ್ರತಿ ಷೇರಿಗೆ 902-949 ರೂ.ಗಳಿಗೆ ನಿಗದಿಪಡಿಸಲಾಗಿದೆ. ವಿಮಾ ಕಂಪನಿಯ ಶೇಕಡ 3.5 ರಷ್ಟು ಪಾಲನ್ನು ಐಪಿಒ ಮೂಲಕ ಮಾರಾಟ ಮಾಡಲಾಗುತ್ತಿದೆ. ಐಪಿಒ ಮೂಲಕ 21,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ಸರ್ಕಾರ ಗುರಿ ಹೊಂದಿದೆ. ಐಪಿಒ ಮೂಲಕ 221.37 ಮಿಲಿಯನ್ ಷೇರುಗಳ ಮಾರಾಟ ಮಾಡಲಾಗುತ್ತದೆ.


Click it and Unblock the Notifications