ಉಮಾಂಗ್ ಆಪ್ ಎಂದೇ ಪ್ರಸಿದ್ಧವಾದ ಆದ ಯುನಿಫೈಡ್ ಮೊಬೈಲ್ ಅಪ್ಲಿಕೇಷನ್ ಫಾರ್ ನ್ಯೂ-ಏಜ್ ಗವರ್ನೆನ್ಸ್ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಮೊಬೈಲ್ ಅಪ್ಲಿಕೇಷನ್ ಆಗಿದೆ. ಇದನ್ನು ಕೇಂದ್ರ ಸರ್ಕಾರವು ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಜಾರಿ ಮಾಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೇವೆಯನ್ನು ಸಾಮಾನ್ಯ ಜನರು ಕೂಡಾ ಪಡೆಯಲು ಸಾಧ್ಯವಾಗಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈ ಉಮಾಂಗ್ ಆಪ್ ಅನ್ನು ಜಾರಿ ಮಾಡಿದೆ. ಈ ಮೂಲಕ ದೇಶದಲ್ಲಿ ಡಿಜಿಟಲ್ ಇಂಡಿಯಾಕ್ಕೆ ಉತ್ತೇಜನ ನೀಡುವ ಪ್ರಯತ್ನವನ್ನು ಕೇಂದ್ರ ಸರ್ಕಾರವು ಮಾಡಿದೆ.
ಉಮಾಂಗ್ ಆಪ್‌ನಲ್ಲಿ ನಾವು ಹಲವಾರು ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಮೊಬೈಲ್ ಆಪ್‌ನಲ್ಲಿ ನಾವು ಸುಮಾರು 13 ಭಾರತೀಯ ಭಾಷೆಯಲ್ಲಿ ಸೇವೆ ಪಡೆಯಬಹುದಾಗಿದೆ. ಅಂಡ್ರಾಯ್ಡ್, iOS ಮತ್ತು ವಿಂಡೋಸ್‌ಗಳಲ್ಲಿ ಈ ಉಮಾಂಗ್ ಆಪ್ ಕಾರ್ಯನಿರ್ವಹಣೆಯಾಗುತ್ತದೆ. 2017ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಆಪ್ ಅನ್ನು ಬಿಡುಗಡೆ ಮಾಡಿದ್ದು, ಸದ್ಯ ಆಪ್ ಹೊಸ ವರ್ಜನ್ ಅಪ್‌ಡೇಟ್‌ಗಳನ್ನು ಕಂಡಿದೆ. ನಾವು ಈ ಆಪ್‌ನಲ್ಲಿ ಭಾರತೀಯ ರೈಲ್ವೆಯ ಸೇವೆಗಳನ್ನು ಕೂಡಾ ಪಡೆಯಲು ಸಾಧ್ಯವಾಗುತ್ತದೆ. ಉಮಾಂಗ್ ಆಪ್‌ನಲ್ಲಿಯೇ ಭಾರತೀಯ ರೈಲ್ವೆ ಸಂಬಂಧಿತ ಮಾಹಿತಿಯನ್ನು ಪಡೆಯಬಹುದಾಗಿದೆ.

ಉಮಾಂಗ್ ಆಪ್‌ನಲ್ಲಿ ಲಭ್ಯವಾಗುವ ಭಾರತೀಯ ರೈಲ್ವೆ ಸೇವೆಗಳು
* ಪಿಎನ್‌ಆರ್ ಸ್ಟೇಟಸ್ ಪರಿಶೀಲನೆ
* ರೈಲಿನ ಸಮಯ ಪರಿಶೀಲನೆ
* ರೈಲುಗಳ ಹುಡುಕಾಟ
* ಲೈವ್ ಸ್ಟೇಷನ್ ಮಾಹಿತಿ
* ಲಭ್ಯವಿರುವ ಸೀಟು, ರೈಲಿನ ಟಿಕೆಟ್ ದರದ ಮಾಹಿತಿ
* ರದ್ದಾದ ರೈಲಿನ ಮಾಹಿತಿ
* ಮರುನಿಗದಿಯಾದ ರೈಲಿನ ಮಾಹಿತಿ
* ರೈಲು ಪ್ರಸ್ತುತ ಎಲ್ಲಿದೆ ಎಂದು ತಿಳಿಯಬಹುದು
ಉಮಾಂಗ್ ಆಪ್‌ನಲ್ಲಿ ಸೇವೆ ಪಡೆಯುವುದು ಹೇಗೆ ತಿಳಿಯಿರಿ
ಹಂತ 1: ಸ್ಮಾರ್ಟ್‌ಫೋನ್‌ನಲ್ಲಿ ಉಮಾಂಗ್ ಆಪ್ ಅನ್ನು ತೆರೆಯಿರಿ
ಹಂತ 2: ಹೋಮ್‌ಪೇಜ್‌ನ ಕೊನೆಯಲ್ಲಿರುವ ಉಮಾಂಗ್ AI ಚಾಟ್‌ಬಾಟ್ (UMANG AI chatbot) ಮೇಲೆ ಕ್ಲಿಕ್ ಮಾಡಿ
ಹಂತ 3: ಕ್ವಿಕ್ ಲಿಂಕ್ ಸೆಕ್ಷನ್ ಅಡಿಯಲ್ಲಿ 'Indian Railways' ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 4: ಉಮಾಂಗ್‌ನಲ್ಲಿ ಲಭ್ಯವಿರು ಭಾರತೀಯ ರೈಲ್ವೆಯ ಸೇವೆಯನ್ನು ಚಾಟ್‌ಬಾಟ್ ತೋರಿಸಲಿದೆ
ಹಂತ 5: ನಿಮಗೆ ಬೇಕಾದ ಸೇವೆಯ ಮೇಲೆ ಕ್ಲಿಕ್ ಮಾಡಿ ಮುಂದುವರಿದರೆ ಮಾಹಿತಿ ಲಭ್ಯವಾಗಲಿದೆ.
ಉಮಾಂಗ್ ಆಪ್‌ನಲ್ಲಿ ಭಾರತೀಯ ರೈಲ್ವೆ ಸೇವೆ
ಉದಾಹರಣೆಗೆ ನೀವು ಪಿಎನ್‌ಆರ್ ಸ್ಟೇಟಸ್ ಚೆಕ್ ಮಾಡುವ ಆಯ್ಕೆಗೆ ಕ್ಲಿಕ್ ಮಾಡಿದರೆ, ನೀವು ಹತ್ತು ಡಿಜಿಟ್‌ನ ಪಿಎನ್‌ಆರ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಬಳಿಕ ಚಾಟ್‌ಬಾಟ್ ಸ್ವಯಂಚಾಲಿತವಾಗಿ ನಿಮಗೆ ಮಾಹಿತಿಯನ್ನು ನೀಡುತ್ತದೆ.
ಇನ್ನು ಪ್ರತಿದಿನ ಭಾರತೀಯ ರೈಲ್ವೆಯು ಪ್ರಮುಖವಾಗಿ ನಿರ್ವಹಣಾ ಕಾರ್ಯಗಳು, ಹವಾಮಾನ ಕಾರಣಗಳಿಂದಾಗಿ ರೈಲುಗಳನ್ನು ರದ್ದು ಮಾಡುತ್ತದೆ ಅಥವಾ ಮರುನಿಗದಿ ಮಾಡುತ್ತದೆ. ಈ ಬಗ್ಗೆ ಮಾಹಿತಿಯನ್ನು ನಾವು ಉಮಾಂಗ್ ಆಪ್‌ನಲ್ಲಿ ಪಡೆಯಬಹುದಾಗಿದೆ. ನಾವು ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕವು ಚೆಕ್ ಮಾಡಿಕೊಳ್ಳಬಹುದು. indianrail.gov.in/mntes ಗೆ ಭೇಟಿ ನೀಡಿ, ನೀವು ಯಾವ ದಿನ ಪ್ರಯಾಣ ಮಾಡಲಿದ್ದೀರಿ ಎಂಬುವುದನ್ನು ಆಯ್ಕೆ ಮಾಡಿಕೊಳ್ಳಿ, ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ರದ್ದಾದ ರೈಲುಗಳ ಪಟ್ಟಿಯನ್ನು ನೋಡಿ, ರದ್ದಾದ ರೈಲುಗಳ ಪಟ್ಟಿಯ ಆಯ್ಕೆಯನ್ನು ಕ್ಲಿಕ್ ಮಾಡಿ, ಸಂಪೂರ್ಣ ಅಥವಾ ಭಾಗಶಃ ಎಂಬ ಆಯ್ಕೆಯನ್ನು ಮಾಡಿ, ರದ್ದಾದ ರೈಲಿನ ಸಮಯ, ದಾರಿ, ಇತರೆ ಮಾಹಿತಿ ಪರಿಶೀಲಿಸಬಹುದು.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications