ಕಾರ್ಡ್ ರಹಿತ ವಹಿವಾಟು, ನಗದನ್ನು ಹಿಂಪಡೆಯಬಹುದು ಇತ್ತೀಚೆಗೆ ಹೆಚ್ಚು ಪ್ರಚಲಿತಕ್ಕೆ ಬರುತ್ತಿದ್ದು ಇದು ಗ್ರಾಹಕರಿಗೆ ಹೆಚ್ಚು ಆರಾಮದಾಯಕವಾಗಿದೆ. ಜೊತೆಗೆ ಗ್ರಾಹಕರ ಅನುಕೂಲಕ್ಕಾಗಿ, ಅನೇಕ ಬ್ಯಾಂಕುಗಳು ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ನ ಅಗತ್ಯವಿಲ್ಲದೆ ಹಾಗೂ ಇತರ ಅಡೆತಡೆ ಇಲ್ಲದ ಶಾಪಿಂಗ್ ಅನುಭವಕ್ಕೆ ಇತ್ತೀಚೆಗೆ ಪ್ರೋತ್ಸಾಹ ನೀಡುತ್ತದೆ.
ಪ್ರತಿಯೊಬ್ಬರೂ ಕ್ರೆಡಿಟ್ ಅಥವಾ ಕಾರ್ಡ್ ಅನ್ನು ಹೊಂದಿರುವುದಿಲ್ಲ. ಹೀಗಿರುವಾಗ ಕ್ರೆಡಿಟ್ ಕಾರ್ಡ್ ಇಲ್ಲದೆಯೇ ಶಾಪಿಂಗ್ ಮಾಡಲು ಬಯಸಿದಾಗ ಮೊಬೈಲ್ ಫೋನ್‌ನ ತ್ವರಿತ ಸ್ವೈಪ್‌ಗಳು ಈ ಗ್ರಾಹಕರಿಗೆ ಮಾಸಿಕ ಮರುಪಾವತಿಗಾಗಿ ಕ್ರೆಡಿಟ್‌ನಲ್ಲಿ ಉತ್ಪನ್ನಗಳು ಮತ್ತು ಸೇವೆಗಳನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ. ನಿಗದಿತ ಅವಧಿಗಳಲ್ಲಿ ಕಂತುಗಳ ಮೂಲಕ ಭವಿಷ್ಯದ ಇದನ್ನು ಪಾವತಿಸಬೇಕಾಗುತ್ತದೆ.

ಪ್ರಮುಖವಾದ ಖಾಸಗಿ ವಲಯದ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ ಕೂಡ ಗ್ರಾಹಕರಿಗೆ ಇಂತಹ ಸೇವೆಗಳನ್ನು ನೀಡುತ್ತದೆ. ಗ್ರಾಹಕರು ಐಸಿಐಸಿಐ ಬ್ಯಾಂಕ್ ಕಾರ್ಡ್‌ಲೆಸ್ ಇಎಂಐಯೊಂದಿಗೆ ತಡೆರಹಿತ ಪಾವತಿ ಅನುಭವವನ್ನು ಪಡೆದುಕೊಳ್ಳಬಹುದು ನಿಮ್ಮ ಐಸಿಐಸಿಐ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಮಾತ್ರ ಬಳಸಿಕೊಂಡು ನಿಮ್ಮ ಖರೀದಿಗಳ ಮೇಲೆ ನಿಮಗೆ ಅನುಕೂಲವಾದ ಇಎಂಐ ಆಯ್ಕೆಗಳನ್ನು ನೀವು ಪಡೆಯಬಹುದು.
ಐಸಿಐಸಿಐ ಬ್ಯಾಂಕ್ ವೆಬ್‌ಸೈಟ್‌ನ ಪ್ರಕಾರ, ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ (ಅಂದರೆ ಆನ್‌ಲೈನ್ ಮತ್ತು ಇನ್-ಸ್ಟೋರ್) ನೀವು ನಡೆಸಿದ ವಹಿವಾಟುಗಳನ್ನು ಸುಲಭವಾಗಿ ಇಎಂಐಗಳಿಗೆ ನಿಮ್ಮಅನುಕೂಲಕ್ಕೆ ತಕ್ಕಂತೆ ಪರಿವರ್ತಿಸಬಹುದು.
ಲೆಟೆಸ್ಟ್ ಆಗಿರುವ ಗ್ಯಾಜೆಟ್‌ಗಳು, ಟ್ರೆಂಡಿ ವಸ್ತ್ರಗಳು ಮತ್ತು ಎಕ್ಸಸರೀಸ್ ಖರೀದಿಸುವುದರಿಂದ ಹಿಡಿದು ನಿಮ್ಮ ರಜಾದಿನ ಪ್ರವಾಸಕ್ಕಾಗಿ ಪ್ಲ್ಯಾನ್ ಕೂಡಾ ಇದರಲ್ಲಿ ಕವರ್ ಮಾಡಬಹುದಾಗಿದೆ. ಸುಲಭವಾದಂತಹ ಒಟಿಪಿ ಆಧಾರಿತ ಅಪ್ರೋವಲ್ ಪ್ರಕ್ರಿಯೆಯ ಮೂಲಕ ಗ್ರಾಹಕರು ಸುಲಭ ಕಂತುಗಳಲ್ಲಿ ತಮ್ಮ ಖರೀದಿಗಳನ್ನು ಮಾಡಬಹುದು.
ICICI ಬ್ಯಾಂಕ್‌ನಲ್ಲಿ ಕಾರ್ಡ್‌ಲೆಸ್ EMI ಆಯ್ಕೆಯನ್ನು ಪಡೆಯುವುದು ಹೇಗೆ?
ಕಾರ್ಡ್‌ಲೆಸ್ EMI ಆಯ್ಕೆಯಲ್ಲಿ point of sale (PoS):
- ಹಂತ 1: ರಿಟೇಲ್ ಔಟ್‌ಲೆಟ್‌ನಲ್ಲಿ ನಿಮ್ಮ ಮೆಚ್ಚಿನ ಪ್ರೋಡಕ್ಟ್ ನ್ನು ಆಯ್ಕೆ ಮಾಡಿ.
- ಹಂತ 2: ರಿಟೇಲ್ ಔಟ್‌ಲೆಟ್‌ನಲ್ಲಿ ಕಾರ್ಡ್‌ಲೆಸ್ ಇಎಂಐ ಆಯ್ಕೆಯ ಬಗ್ಗೆ ಪರಿಶೀಲಿಸಿ.
- ಹಂತ 3: ಅಗತ್ಯವಿರುವ ಆಯ್ಕೆಗಳನ್ನು ಆರಿಸುವ ಮೂಲಕ ರಿಟೇಲ್ ಸಿಬ್ಬಂದಿ, ವ್ಯಾಪಾರಿ POS ಟರ್ಮಿನಲ್‌ನಲ್ಲಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ
- ಹಂತ 4: ನಿಮ್ಮ ಮೊಬೈಲ್ ಸಂಖ್ಯೆಯನ್ನು ರಿಟೇಲರ್ ಗೆ ನೀಡಿ
- ಹಂತ 5: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ನೀವು ಸ್ವೀಕರಿಸುವ ನಿಮ್ಮ ಪ್ಯಾನ್ ಮತ್ತು ಒನ್-ಟೈಮ್ ಪಾಸ್‌ವರ್ಡ್ (ಒಟಿಪಿ) ನಮೂದಿಸಿ.
- ಹಂತ 6: ತ್ವರಿತ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು
SBI Loan: ಸಾಲ ಮರುಪಾವತಿ ಮಾಡಲು ಸಾಧ್ಯವಾಗಲ್ವ?, ಎಸ್‌ಬಿಐ ಚಾಕೊಲೇಟ್ ಕಳುಹಿಸುತ್ತೆ!
ಆನ್‌ಲೈನ್ ಮೂಲಕ ಕಾರ್ಡ್‌ಲೆಸ್ ಇಎಂಐ ಆಯ್ಕೆ:
- ಹಂತ 1: ನಿಮ್ಮ ಮೆಚ್ಚಿನ ಆನ್‌ಲೈನ್ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಮೊಬೈಲ್‌ಗಳು, ಎಲೆಕ್ಟ್ರಾನಿಕ್ಸ್, ಫ್ಯಾಷನ್, ಟ್ರಾವೆಲ್, ಪೀಠೋಪಕರಣಗಳು, ವಿಮೆ, ಶಿಕ್ಷಣ ಹೀಗೆ ಬೇಕಾಗಿರುವ ಕೆಟಗೆರಿಗೆ ಹೋಗಿ
- ಹಂತ 2: ನಿಮ್ಮ ಮೆಚ್ಚಿನ ಪ್ರೋಡಕ್ಟ್ ಆಯ್ಕೆಮಾಡಿ ಅದನ್ನು ಕಾರ್ಟ್‌ಗೆ ಸೇರಿಸಿ.
- ಹಂತ 3: ವೆಬ್‌ಸೈಟ್ ಚೆಕ್‌ಔಟ್ ಪೇಜ್ ನಲ್ಲಿ ಕಾರ್ಡ್‌ಲೆಸ್ ಇಎಂಐ ಆಯ್ಕೆಯನ್ನು ಪರಿಶೀಲಿಸಿ.
- ಹಂತ 4: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
- ಹಂತ 5: ನಿಮ್ಮ ಅನುಕೂಲಕ್ಕ್ಕೆ ತಕ್ಕದಾಗಿರುವ ಇಎಂಐ ಅವಧಿಯನ್ನು ಆಯ್ಕೆಮಾಡಿ.
- ಹಂತ 6: ಪ್ಯಾನ್ ನಮೂದಿಸಿ ಜೊತೆಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಮತ್ತು ಒನ್-ಟೈಮ್ ಪಾಸ್‌ವರ್ಡ್ (ಒಟಿಪಿ) ನಮೂದಿಸಿ.
- ಹಂತ 7: ತ್ವರಿತ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು
ನೀವು ಆನ್‌ಲೈನ್‌ನಲ್ಲಿ ಅಥವಾ ನಿಮ್ಮ ಮೊಬೈಲ್ ಫೋನ್ ಮೂಲಕ ಕಾರ್ಡ್‌ಲೆಸ್ EMI ಆಯ್ಕೆಗೆ ನೀವು ಅರ್ಹರಿದ್ದೀರಾ ಎಂಬುದನ್ನು ಸಹ ನೀವು ಪರಿಶೀಲಿಸಬಹುದು. ನೀವು ಮಾಡಬೇಕಾಗಿರುವುದು '5676766' ಗೆ 'CARDLESS' ಎಂದು SMS ಕಳುಹಿಸುವುದು ಅಥವಾ ಕಾರ್ಡ್‌ಲೆಸ್ / ಗ್ರಾಹಕ ಹಣಕಾಸು ಮಿತಿಗಾಗಿ iMobile Pay ಅಪ್ಲಿಕೇಶನ್‌ನಲ್ಲಿನ ಕೊಡುಗೆಗಳ ವಿಭಾಗವನ್ನು ಪರಿಶೀಲಿಸಿ.


Click it and Unblock the Notifications