ಭಾರತದಲ್ಲಿ ಪ್ರತಿ ದಿನ ಸಾವಿರಾರು ಜನರು ರೈಲಿನ ಪ್ರಯಾಣ ಮಾಡುತ್ತಾರೆ. ಪ್ರತಿ ದಿನ ಕಾಲೇಜು, ಉದ್ಯೋಗಕ್ಕೆ ರೈಲಿನಲ್ಲೇ ಸಂಚಾರ ಮಾಡುವ ಮಂದಿ ಅಧಿಕವಾಗಿದ್ದಾರೆ. ಈ ನಡುವೆ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದ ಭಾರತೀಯ ರೈಲ್ವೆ ಡಿಜಿಟಲ್ ಇಂಡಿಯಾದ ಭಾಗವಾಗಿ, ಡಿಜಿಟಲ್ ಪುಶ್ ನೀಡಲಾಗುವುದು ಎಂದು ತಿಳಿಸಿತ್ತು.
ರೈಲ್ವೆ ಸ್ಟೇಷನ್‌ಗಳಲ್ಲಿ ಐಆರ್‌ಸಿಟಿಸಿ ಅಡಿಯಲ್ಲಿ ಆಹಾರವನ್ನು ಖರೀದಿ ಮಾಡುವುದಕ್ಕೆ ಪ್ರಸ್ತುತ ಉತ್ತೇಜನ ನೀಡಲಾಗುತ್ತಿದೆ. ಅದು ಕೂಡಾ ಆನ್‌ಲೈನ್ ವಹಿವಾಟಿಗೆ ಅಧಿಕ ಒತ್ತು ನೀಡಲಾಗುತ್ತಿದೆ. ಡಿಜಿಟಲ್ ಪಾವತಿಗೆ ಉತ್ತೇಜನ ನೀಡುವ 8,878 ಘಟಕಗಳನ್ನು ಐಆರ್‌ಸಿಟಿಸಿ ಆರಂಭ ಮಾಡಿದೆ.
ರೈಲ್ವೆಯ ಇ-ಕೇಟರಿಂಗ್ ಸೇವೆಗಳೊಂದಿಗೆ, ಪ್ರಯಾಣಿಕರು ಇ-ಟಿಕೆಟ್ ಬುಕ್ ಮಾಡುವ ಸಮಯದಲ್ಲಿ ಅಥವಾ ರೈಲಿನಲ್ಲಿ ಪ್ರಯಾಣಿಸುವಾಗ ಅಪ್ಲಿಕೇಶನ್/ಕಾಲ್ ಸೆಂಟರ್/ವೆಬ್‌ಸೈಟ್ ಬಳಸಿ/1323 ಗೆ ಕರೆ ಮಾಡುವ ಮೂಲಕ ತಮ್ಮ ಆಯ್ಕೆಯ ಆಹಾರವನ್ನು ಆರ್ಡರ್ ಮಾಡಿಕೊಳ್ಳಬಹುದು. ಆದರೆ ಟಿಕೆಟ್ ಅನ್ನು ಕೂಡಾ ಆನ್‌ಲೈನ್‌ನಲ್ಲೇ ಡೌನ್‌ಲೋಡ್ ಮಾಡಬಹುದು ಎಂಬವುದು ತಿಳಿದಿದೆಯೇ?, ಇಲ್ಲಿದೆ ಮಾಹಿತಿ ಮುಂದೆ ಓದಿ...

ಆನ್‌ಲೈನ್‌ನಲ್ಲಿ ಟಿಕೆಟ್ ಡೌನ್‌ಲೋಡ್ ಮಾಡುವುದು ಹೇಗೆ?
ಹಂತ 1: ರೈಲ್ವೆಯ ಅಧಿಕೃತ ವೆಬ್‌ಸೈಟ್ irctc.co.in ಗೆ ಲಾಗಿನ್ ಆಗಿ
ಹಂತ 2: ಯೂಸರ್ ನೇಮ್, ಪಾಸ್‌ವರ್ಡ್ ನಮೂದಿಸಿ ಲಾಗಿನ್ ಆಗಿ
ಹಂತ 3: ಕ್ಯಾಪ್ಚಾ ಹಾಕಿ ಅಥವಾ ಒಟಿಪಿ ಮೂಲಕ ಲಾಗಿನ್ ಆಗಬಹುದು.
ಹಂತ 4: ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ಲಾಗಿನ್ ಆದ ಬಳಿಕ booked ticket history ಪೇಜ್ ತೆರೆಯಲಿದೆ
ಹಂತ 5: ಐಆರ್‌ಸಿಟಿಸಿ ಟಿಕೆಟ್ ಬುಕ್ಕಿಂಗ್ ಹಿಸ್ಟರಿ ನಿಮಗೆ ಲಭ್ಯವಾಗಲಿದೆ.
ಹಂತ 6: ನೀವು ಪಿಎನ್‌ಆರ್ ಸಂಖ್ಯೆ ಬಳಸಿಕೊಂಡು ರೈಲ್ವೆ ಟಿಕೆಟ್ ಅನ್ನು ಗುರುತಿಸಬಹುದು.
ಹಂತ 7: Print E-Ticket ಆಯ್ಕೆ ಮಾಡಿ, ಪಿಡಿಎಫ್ ರೂಪದಲ್ಲಿ ಸೇವ್ ಮಾಡಿಕೊಳ್ಳಿ
ಹಂತ 8: ಪಿಡಿಎಫ್ ಅನ್ನು ಸೇವ್ ಮಾಡಿಕೊಂಡರೆ ಇದನ್ನೇ ನೀವು ಪ್ರಯಾಣದ ವೇಳೆ ತೋರಿಸಬಹುದು.


Click it and Unblock the Notifications