ನಾವು ರೈಲಿನಲ್ಲಿ ಪ್ರಯಾಣ ಮಾಡುವಾಗ ಯಾವುದೇ ಸೀಟು ಲಭ್ಯವಾಗದಿದ್ದರೆ, ಲಭ್ಯವಿರುವ ಸೀಟುಗಳನ್ನು ಖರೀದಿ ಮಾಡುವ ಟಿಟಿಇಯ ಹಿಂದೆ ಓಡಬೇಕಾಗುತ್ತದೆ. ಆದರೆ ರೈಲಿನಲ್ಲಿ ಖಾಲಿ ಸೀಟುಗಳಿವೆಯೇ ಎಂದು ಕೇಳಲು ನಾವೀಗ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) ಹಿಂದೆ ಓಡಬೇಕಾಗಿಲ್ಲ. ಅದಕ್ಕಾಗಿ ಸರಳ, ಸುಲಭ ಮಾರ್ಗಗಳು ನಿಮಗಿದೆ.
ನೀವು ಲಾಗಿನ್ ಆಗದೆಯೇ ಐಆರ್‌ಸಿಟಿಸಿ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಬಳಸಿ ರೈಲಿನಲ್ಲಿ ಇರುವ ಖಾಲಿ ಸೀಟುಗಳನ್ನು ಸರಳವಾಗಿ ಹುಡುಕಬಹುದಾಗಿದೆ. ರೈಲಿನಲ್ಲಿ ಖಾಲಿ ಇರುವ ಸೀಟುಗಳನ್ನು ಹುಡುಕಲು ಇದು ತ್ವರಿತ ಮತ್ತು ಸುಲಭವಾದ ಮಾರ್ಗವಾಗಿದೆ. ನೀವು ಕನ್ಫರ್ಮ್ ಟಿಕೆಟ್ ಹೊಂದಿಲ್ಲದಿದ್ದರೂ ಸಹ, ಇಲ್ಲಿ ತಿಳಿಸಿರುವ ವಿಧಾನವನ್ನು ಪಾಲಿಸಿ ಆಸನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಹೇಗೆ ಎಂದು ತಿಳಿಯಿರಿ, ಮುಂದೆ ಓದಿ...

ಐಆರ್‌ಸಿಟಿಸಿ ವೆಬ್‌ಸೈಟ್ ಬಳಸಿ ಖಾಲಿ ಸೀಟುಗಳನ್ನು ಹೀಗೆ ಹುಡುಕಿ
ಹಂತ 1: ಐಆರ್‌ಸಿಟಿಸಿ ವೆಬ್‌ಸೈಟ್‌ಗೆ ಭೇಟಿ ನೀಡಿ, ಮುಖ್ಯ ಪುಟದಲ್ಲಿ, ಬುಕ್ ಟಿಕೆಟ್ ಬಾಕ್ಸ್‌ನ ಮೇಲ್ಭಾಗದಲ್ಲಿ, ನೀವು Charts/Vacancy ಎಂಬ ಆಯ್ಕೆ ನಿಮಗೆ ಕಾಣುತ್ತದೆ.
ಹಂತ 2: Charts/Vacancy ಮೇಲೆ ಕ್ಲಿಕ್ ಮಾಡಿ, ಆಗ Reservation Chart ಹೆಸರಿನ ಹೊಸ ಟ್ಯಾಬ್ ತೆರೆಯುತ್ತದೆ.
ಹಂತ 3: ಮೊದಲ ಬಾಕ್ಸ್‌ನಲ್ಲಿ ರೈಲಿನ ಹೆಸರು/ಸಂಖ್ಯೆ ಮತ್ತು ಎರಡನೇ ಬಾಕ್ಸ್‌ನಲ್ಲಿ ಬೋರ್ಡಿಂಗ್ ಸ್ಟೇಷನ್ ನಮೂದಿಸಿ.
ಹಂತ 4: ಗೆಟ್ ಟ್ರೈನ್ ಚಾರ್ಟ್ ಅನ್ನು ಕ್ಲಿಕ್ ಮಾಡಿ. ಇಲ್ಲಿ ಖಾಲಿ ಇರುವ ಸೀಟುಗಳ ವಿವರಗಳೊಂದಿಗೆ ಮೀಸಲಾತಿ ಚಾರ್ಟ್ ವಿವರ ನಿಮಗೆ ಲಭ್ಯವಾಗುತ್ತದೆ.
ಹಂತ 5: ನೀವು ವಿವಿಧ ಕ್ಲಾಸ್‌ಗಳಲ್ಲಿ ಮತ್ತು ವಿವಿಧ ಕೋಚ್‌ಗಳಲ್ಲಿ ಖಾಲಿ ಇರುವ ಸೀಟುಗಳನ್ನು ಬರ್ತ್‌ವಾರು ಸಹ ಕಾಣಬಹುದು.
ಐಆರ್‌ಸಿಟಿಸಿ ಆಪ್ ಬಳಸಿಕೊಂಡು ರೈಲಿನಲ್ಲಿ ಖಾಲಿ ಇರುವ ಸೀಟು ಹುಡುಕಿ
ಮೊಬೈಲ್ ಫೋನ್‌ನಲ್ಲಿ, ನೀವು ಅಧಿಕೃತ ಐಆರ್‌ಸಿಟಿಸಿ ಅಪ್ಲಿಕೇಶನ್ ಅನ್ನು ಬಳಸಬಹುದು. ಇದು ಆಂಡ್ರಾಯ್ಡ್ ಮತ್ತು ಐಒಎಸ್ ಆಪ್ ಸ್ಟೋರ್‌ಗಳಲ್ಲಿ ಲಭ್ಯವಿದೆ. ಒಮ್ಮೆ ಅದನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿದ ನಂತರ, ರೈಲಿನಲ್ಲಿ ಖಾಲಿ ಇರುವ ಆಸನಗಳನ್ನು ಕಾಯ್ದಿರಿಸಲು ಕೆಳಗಿನ ಹಂತಗಳನ್ನು ನೀವು ಅನುಸರಿಸಬಹುದು.
ಹಂತ 1: ಐಆರ್‌ಸಿಟಿಸಿ ಅಪ್ಲಿಕೇಶನ್ ತೆರೆಯಿರಿ.
ಹಂತ 2: ರೈಲು ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ 3: Chart Vacancy ಮೇಲೆ ಕ್ಲಿಕ್ ಮಾಡಿ. ಇದು ಮೊಬೈಲ್ ವೆಬ್ ಬ್ರೌಸರ್‌ನಲ್ಲಿ ಮೀಸಲಾತಿ ಚಾರ್ಟ್ ಪುಟವನ್ನು ತೆರೆಯುತ್ತದೆ.
ಹಂತ 4: ರೈಲಿನ ಹೆಸರು/ಸಂಖ್ಯೆ ಹಾಗೂ ಬೋರ್ಡಿಂಗ್ ನಿಲ್ದಾಣದಂತಹ ಪ್ರಯಾಣದ ವಿವರಗಳನ್ನು ನಮೂದಿಸಿ.
ಪರದೆಯ ಮೇಲೆ ಖಾಲಿ ಇರುವ ಸ್ಕ್ರೀನ್‌ಗಳ ಸಂಖ್ಯೆಯ ಜೊತೆಗೆ ಲಭ್ಯವಿರುವ ಖಾಲಿ ಬರ್ತ್‌ಗಳನ್ನು ನೀವು ಕಾಣಬಹುದು. ಆದರೆ ವಿವರಗಳನ್ನು ಟಿಟಿಇ ಮಾತ್ರ ಹಂಚಿಕೊಳ್ಳಬಹುದಾದರೆ, ಅದನ್ನು ನಮೂದಿಸಲಾಗುವುದು. ಅಲ್ಲದೆ, ಈ ಎಲ್ಲಾ ವಿವರಗಳನ್ನು ಪಡೆಯಲು ನೀವು ಐಆರ್‌ಸಿಟಿಸಿ ಅಪ್ಲಿಕೇಶನ್‌ಗೆ ಲಾಗ್ ಇನ್ ಆಗಬೇಕಾಗಿಲ್ಲ. ಆದ್ದರಿಂದ, ಐಆರ್‌ಸಿಟಿಸಿ ಅಪ್ಲಿಕೇಶನ್‌ನಲ್ಲಿ ಖಾಲಿ ಇರುವ ಸೀಟುಗಳನ್ನು ಹುಡುಕಲು ಯಾವುದೇ ಐಆರ್‌ಸಿಟಿಸಿ ಖಾತೆಯ ಅಗತ್ಯವಿಲ್ಲ.


Click it and Unblock the Notifications