ಚೀನಾದ ಬೈಟ್ ಡ್ಯಾನ್ಸ್ ಟೆಕ್ನಾಲಜಿ ಕಂಪನಿಯ ಖ್ಯಾತ ವಿಡಿಯೋ ಆ್ಯಪ್ ಟಿಕ್‌ಟಾಕ್ ಸದ್ಯ ಯಾರಿಗೆ ಗೊತ್ತಿಲ್ಲ ಹೇಳಿ?. ಮಕ್ಕಳಿಂದ - ಮಧ್ಯ ವಯಸ್ಸಿನವರು ಈ ಆ್ಯಪ್ ಬಳಸುತ್ತಿದ್ದಾರೆ. ಕಾಲೇಜಿನ ಯುವಕರು-ಯುವತಿಯರು ಇದಕ್ಕೆ ಮಾರು ಹೋಗಿದ್ದಾರೆ. ಈ ಆ್ಯಪ್‌ನಲ್ಲಿ ವಿಡಿಯೋ ಪೋಸ್ಟ್ ಮಾಡುವುದರ ಜೊತೆಗೆ ಹಣ ಗಳಿಕೆಗೂ ಅವಕಾಶವಿದೆ.
ಟಿಕ್‌ಟಾಕ್ ಅಪ್ಲಿಕೇಶನ್ ಜಗತ್ತಿನಾದ್ಯಂತ 150 ಕೋಟಿಯಷ್ಟು ಡೌನ್‌ಲೋಡ್ ಆಗಿದೆ. ಇದರಲ್ಲಿ ಭಾರತದ ಡೌನ್‌ಲೋಡ್ ಆದ ಲೆಕ್ಕವೇ 46.68 ಕೋಟಿ. ಅಂದರೆ ಒಟ್ಟಾರೆ ಶೇಕಡಾ 31ರಷ್ಟು ಭಾರತದಲ್ಲೇ ಡೌನ್‌ಲೋಡ್ ಆಗಿರೋದು ಆಶ್ಚರ್ಯ ಮೂಡಿಸುತ್ತದೆ.
ಟಿಕ್‌ಟಾಕ್ ಅಪ್ಲಿಕೇಶನ್ ಚೀನಾ ಮೂಲದ್ದೇ ಆದರೂ ಭಾರತದಲ್ಲಿ ಬಲು ಫೇಮಸ್. ಇದರಲ್ಲಿ ವಿಡಿಯೋ ಅಪ್‌ಲೋಡ್ ಮಾಡಿ ಫೇಮಸ್ ಆಗುವುದರ ಜೊತೆಗೆ ಹಣ ಕೂಡ ಸಂಪಾದಿಸಬಹುದು. ಹೇಗೆ ಎಂಬುದರ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ವಿವರಣೆ ಓದಿ.
1. ನೀವು ಅನನ್ಯ(Unique) ಟಿಕ್‌ಟಾಕ್ ಪ್ರೊಫೈಲ್ ಹೊಂದಿರಬೇಕು
ಗುಂಪಿನಲ್ಲಿ ಒಬ್ಬ ವ್ಯಕ್ತಿಯು ಎಲ್ಲರಿಗಿಂತ ಚೆನ್ನಾಗಿ ಗುರುತಿಸಿಕೊಳ್ಳುವುದು ತನ್ನ ವಿಶಿಷ್ಟತೆಯಿಂದ. ನೀವು ಸಾಮಾನ್ಯರಾಗಿದ್ದರೆ ನಿಮಗೆ ಫಾಲೋವರ್ಸ್ ಸಿಗೋದು ಕಡಿಮೆ. ಹಾಗಾಗಿ ನೀವು ಯೂನಿಕ್ ಆಗಿರುವಂತಹ ಪ್ರೊಫೈಲ್ ಮಾಡಬೇಕು. ಜನರು ನಿರಂತರವಾಗಿ ಸ್ವಾಗತಿಸುವ ಮತ್ತು ಇಷ್ಟಪಡುವಂತಹ ವಿಷಯಗಳನ್ನು ಆಧರಿಸಿದ ವಿಡಿಯೋಗಳ ಬಗ್ಗೆ ಯೋಚಿಸಿ. ಟಿಕ್‌ಟಾಕ್ ಖಾತೆಯಲ್ಲಿ ನಿಮ್ಮ ಧ್ಯೇಯವಾಕ್ಯವೇ ಫಾಲೋವರ್ಸ್ ಹೆಚ್ಚಿಸುತ್ತಿರಬೇಕು.
2. ಟ್ರೆಂಡಿಂಗ್ ಇರುವಂತಹ ವಿಡಿಯೋಗಳ ಆಯ್ಕೆ
ಯಾವುದೇ ವಿಚಾರ ಹೆಚ್ಚು ಪ್ರಚಾರ ಕಂಡುಬರುವುದು ಆ ಕ್ಷಣದಲ್ಲಿ ಟ್ರೆಂಡಿಂಗ್ ಇದ್ದರೆ ಮಾತ್ರ. ಇಂಟರ್‌ನೆಟ್‌ನಲ್ಲಿ ಟ್ರೆಂಡಿಂಗ್ ಆಗಿರುವ ಹಾಡುಗಳು ಅಥವಾ ಪರಿಕಲ್ಪನೆಗಳನ್ನು ನೀವು ಆರಿಸಬೇಕಾಗುತ್ತದೆ. ಜೊತೆಗೆ ಪ್ರೇಕ್ಷಕರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ಹುಡುಕಬೇಕು.
3. ಯೂ ಟ್ಯೂಬ್, ಇನ್‌ಸ್ಟಾಗ್ರಾಮ್ ಅಕೌಂಟ್ ಲಿಂಕ್
ನೀವು ನಿಮ್ಮ ಯೂ ಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್ ಅಕೌಂಟ್ ಅನ್ನು ಟಿಕ್‌ಟಾಕ್‌ಗೆ ಲಿಂಕ್ ಮಾಡಬಹುದು. ಇದರಿಂದ ನಿಮ್ಮ ಟಿಕ್ ಟಾಕ್ ವಿಡಿಯೋಗಳಿಗಾಗಿ ಪ್ರೇಕ್ಷಕರ ವ್ಯಾಪ್ತಿಯನ್ನು ಹೆಚ್ಚಿಸಲು ಸಹಾಯವಾಗುತ್ತದೆ. ನಿಮ್ಮ ಯೂ ಟ್ಯೂಬ್ ಅಕೌಂಟ್ ಸೇರಿಸಲು ಟಿಕ್‌ಟಾಕ್‌ನಲ್ಲಿರುವ ಪ್ರೊಫೈಲ್ ಟ್ಯಾಬ್‌ಗೆ ನ್ಯಾವಿಗೇಟ್ ಮಾಡಬೇಕಾಗುತ್ತದೆ. ಟಿಕ್‌ಟಾಕ್‌ನ Profile tab ನಲ್ಲಿ Edit Profile ಟ್ಯಾಪ್ ಮಾಡಿ add youtube ಆಯ್ಕೆಯನ್ನು ಟ್ಯಾಪ್ ಮಾಡಿ.
ಇನ್‌ಸ್ಟಾಗ್ರಾಮ್ ಅಕೌಂಟ್ ಲಿಂಕ್ ಮಾಡಲು, Edit Profile ಟ್ಯಾಪ್ ಮಾಡಿ Add Instagram ಆಯ್ಕೆ ಮಾಡಿ.
4. ನಿಮ್ಮ ವಿಡಿಯೋ ಹೆಚ್ಚು ಜನರಿಗೆ ತಲುಪಿಸಬೇಕು
ನೀವು ಯಾವುದೇ ವಿಡಿಯೋ ಅಪ್‌ಲೋಡ್ ಮಾಡಿದರೆ ಅದು ಹೆಚ್ಚಿನ ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕು. ಹೀಗೆ ಮಾಡಿದರೆ ಸರ್ಚ್ ಟ್ರಾಫಿಕ್‌ನಲ್ಲಿ ನಿಮ್ಮ ವಿಡಿಯೋ ಹೆಚ್ಚು ಹರಿದಾಡುವುದಲ್ಲದೆ Views ಕೂಡ ಹೆಚ್ಚಾಗುತ್ತದೆ.
5. ಹ್ಯಾಶ್ ಟ್ಯಾಗ್ ಬಳಸಬೇಕು
ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ನಂತೆಯೇ ನಿಮ್ಮ ವಿಷಯದ ಗೋಚರತೆಯನ್ನು ಹೆಚ್ಚಿಸಲು ನೀವು ಪೋಸ್ಟ್ ಮಾಡುತ್ತಿರುವ ಸಂಬಂಧಿತ ಹ್ಯಾಶ್ ಟ್ಯಾಗ್‌ಗಳನ್ನು ಸೇರಿಸಿ. ಇದರಿಂದ ಹೆಚ್ಚು ಜನರಿಗೆ ತಲುಪಲು ಸಹಾಯವಾಗುವುದಲ್ಲದೆ Views ಕೂಡ ಹೆಚ್ಚಾಗುತ್ತದೆ.
6. ಸೆಲೆಬ್ರಿಟಿಗಳು ಅಥವಾ ಪ್ರಭಾವಿಗಳ ಮೂಲಕ ಪ್ರಚಾರ
ನೀವು ವಿಡಿಯೋ ಪೋಸ್ಟ್ ಮಾಡುವುದರ ಜೊತೆಗೆ ಸೆಲೆಬ್ರಿಟಿಗಳು ಅಥವಾ ಸಾಮಾಜಿಕವಾಗಿ ಗುರುತಿಸಿಕೊಂಡಿರುವ ಪ್ರಭಾವಿಗಳ ಮೂಲಕ ವಿಡಿಯೋ ಪೋಸ್ಟ್ ಮಾಡಬಹುದು. ಇದರಿಂದ ನಿಮ್ಮ ವಿಷಯದ ಕುರಿತಾಗಿ ಜನತೆಯ ಗಮನವನ್ನು ಸೆಳೆಯಲು ಸಹಾಯವಾಗುತ್ತದೆ.
ನಿಮ್ಮ ಪ್ರೊಫೈಲ್‌ನಲ್ಲಿ ಉತ್ತಮವಾದ ಮಟ್ಟದಲ್ಲಿ ಫಾಲೋವರ್ಸ್ ಬಂದ ಬಳಿಕ ವಿವಿಧ ಬ್ರ್ಯಾಂಡ್ ಕಂಪನಿಗಳು ನಿಮ್ಮ ವಿಡಿಯೋದಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ನಿಮ್ಮನ್ನು ಸಂಪರ್ಕಿಸಬಹುದು. ಸಾಮಾನ್ಯವಾಗಿ ಕಂಪನಿಗಳು ತಮ್ಮ ಉತ್ಪನ್ನಗಳ ಪ್ರಚಾರಕ್ಕಾಗಿ ಹಣವನ್ನು ನೀಡುತ್ತವೆ.
ಈ ಮೇಲ್ಕಂಡ ಹಂತಗಳು ನಿಮ್ಮ ಫಾಲೋವರ್ಸ್ ಹೆಚ್ಚಾಗಲು ಸಹಾಯ ಮಾಡುತ್ತವೆ. ಜೊತೆಗೆ ಹಣವನ್ನು ಸಂಪಾದಿಸುವ ಆಯ್ಕೆಯನ್ನು ಸಹ ಒದಗಿಸುತ್ತವೆ.


Click it and Unblock the Notifications