For Quick Alerts
ALLOW NOTIFICATIONS  
For Daily Alerts

ಟ್ರಾಫಿಕ್ ದಂಡ ಆನ್‌ಲೈನ್ ಪಾವತಿಸುವುದು ಹೇಗೆ?, ಇಲ್ಲಿದೆ ಹಂತ

|

ಜನರು ಈಗ ಟ್ರಾಫಿಕ್ ನಿಯಮಗಳನ್ನು ಮುರಿಯುವುದು ಜೀವನದ ಸಾಮಾನ್ಯ ಭಾಗವೆಂಬಂತೆ ಆಗಿದೆ. ಈ ಹಿಂದೆ ಟ್ರಾಫಿಕ್ ನಿಯಮ ಬ್ರೇಕ್ ಮಾಡಿದಾಗ ಸಾಲಿನಲ್ಲಿ ನಿಂತು ದಂಡವನ್ನು ಕಟ್ಟಿಕೊಳ್ಳಬೇಕಾಗಿತ್ತು. ಇದು ಬಹಳ ತಲೆ ನೋವಿನ ಕೆಲಸವಾಗಿತ್ತು. ಆದರೆ ಈಗ ಎಲ್ಲವೂ ಆನ್‌ಲೈನ್ ಆಗಿದೆ.

ಈ ಡಿಜಿಟಲ್ ಯುಗದಲ್ಲಿ ಟ್ರಾಫಿಕ್ ನಿಯಮ ಬ್ರೇಕ್ ಮಾಡಿದ ದಂಡವನ್ನು ನಾವು ಆನ್‌ಲೈನ್ ಮೂಲಕವೇ ಪಾವತಿ ಮಾಡಬಹುದಾಗಿದೆ. ನಾವು ದಂಡ ಪಾವತಿ ಮಾಡಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಇನ್ನು ನಾವು ದಂಡವನ್ನು ಪಾವತಿ ಮಾಡುವುದನ್ನು ಕೂಡಾ ಮರೆಯುವ ಸಾಧ್ಯತೆ ಇದೆ. ಸಾಲಿನಲ್ಲಿ ನಿಂತು ಪಾವತಿ ಮಾಡಬೇಕಾಲ್ಲಪ್ಪ ಎಂದುಕೊಂಡು ದಂಡ ಪಾವತಿ ಮಾಡುವುದನ್ನೇ ವಿಳಂಬ ಮಾಡುತ್ತೇವೆ.

'ಹಾರ್ನ್' ಮಾರಿಗೆ ಮುಂಬೈ ಪೊಲೀಸರ ಮದ್ದು; ಬೆಂಗಳೂರಲ್ಲೂ ಇದು ಬರಬಹುದು!'ಹಾರ್ನ್' ಮಾರಿಗೆ ಮುಂಬೈ ಪೊಲೀಸರ ಮದ್ದು; ಬೆಂಗಳೂರಲ್ಲೂ ಇದು ಬರಬಹುದು!

ಸಾಮಾನ್ಯವಾಗಿ ನಮಗೆ ಸಾರಿಗೆ ನಿಯಮ ಉಲ್ಲಂಘನೆ ಮಾಡಿದಾಗ ಹಾಕಲಾಗುವ ದಂಡ ಚಲನ್ ನಮಗೆ ಆನ್‌ಲೈನ್ ಮೂಲಕವೂ ಲಭ್ಯವಾಗಲಿದೆ. ಈ ಚಲನ್ ಬಳಸಿಕೊಂಡು ನಾವು ಆನ್‌ಲೈನ್ ಮೂಲಕವೇ ಪಾವತಿ ಮಾಡಬಹುದಾಗಿದೆ. ಇಲೆಕ್ಟ್ರಾನಿಕ್ ಚಲನ್ ಸಿಸ್ಟಮ್ ಬಳಸಿಕೊಂಡು ಈ ದಾಖಲೆಯನ್ನು ಜನರೇಟ್ ಮಾಡಲಾಗಿರುತ್ತದೆ. ನಾಗರಿಕರಿಗೆ ದಂಡ ಪಾವತಿ ವಿಚಾರದಲ್ಲಿಯೂ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆನ್‌ಲೈನ್ ದಂಡ ಪಾವತಿ ವ್ಯವಸ್ಥೆಯನ್ನು ಆರಂಭ ಮಾಡಲಾಗುತ್ತದೆ.

ಟ್ರಾಫಿಕ್ ದಂಡ ಆನ್‌ಲೈನ್ ಪಾವತಿಸುವುದು ಹೇಗೆ?, ಇಲ್ಲಿದೆ ಹಂತ

ಈ ಚಲನ್ ಪಾವತಿಗೆ ಆಯಾ ರಾಜ್ಯಗಳು ತಮ್ಮದೇ ಆದ ವೆಬ್‌ಸೈಟ್ ಅನ್ನು ಹೊಂದಿದೆ. ಆದರೆ ರಸ್ತೆ ಸಾರಿಗೆ ಸಚಿವಾಲಯ ಚಲನ್ ಅನ್ನು ಆನ್‌ಲೈನ್ ಪಾವತಿ ಮಾಡುವುದಕ್ಕೆ ಅವಕಾಶ ನೀಡಿದೆ. ಸರ್ಕಾರದ ವೆಬ್‌ಸೈಟ್ ಮೂಲಕ ನೀವು ಚಲನ್ ಆನ್‌ಲೈನ್ ಪಾವತಿ ಮಾಡಬಹುದಾಗಿದೆ. ಹೇಗೆ ಚಲನ್ ಪಾವತಿ ಮಾಡುವುದು ಎಂದು ತಿಳಿಯಲು ಮುಂದೆ ಓದಿ...

ಟ್ರಾಫಿಕ್ ದಂಡ ಆನ್‌ಲೈನ್ ಪಾವತಿಸುವುದು ಹೇಗೆ?

ಹಂತ 1: https://echallan.parivahan.gov.in/index/accused-challan ಗೆ ಭೇಟಿ ನೀಡಿ
ಹಂತ 2: ನಿಮ್ಮ ಚಲನ್ ಸಂಖ್ಯೆಯನ್ನು ನಮೂದಿಸಿ
ಹಂತ 3: ವಾಹನದ ಸಂಖ್ಯೆಯನ್ನು ಕೂಡಾ ನಮೂದಿಸಿ
ಹಂತ 4: ಡಿಎಲ್ ನಂಬರ್, ಕ್ಯಾಪ್ಚಾ ಕೋಡ್ ಉಲ್ಲೇಖ ಮಾಡಿ
ಹಂತ 5: Get Details ಮೇಲೆ ಕ್ಲಿಕ್ ಮಾಡಿ
ಹಂತ 6: ಟ್ರಾಫಿಕ್ ನಿಯಮ ಉಲ್ಲಂಘನೆಯ ಮಾಹಿತಿ, ಚಲನ್ ಪರಿಶೀಲನೆ ಮಾಡಿ
ಹಂತ 7: ಕೊನೆಯದಾಗಿ ದಂಡ ಪಾವತಿಸಲು proceed ಮೇಲೆ ಕ್ಲಿಕ್ ಮಾಡಿ ದಂಡ ಪಾವತಿಸಿ

English summary

How to pay Traffic Challan online? Heres step by step guide in Kannada

How to pay Traffic challan online : Here we have listed a step by step guide for you to pay your Traffic challans online in Kannada.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X