ಶೀಘ್ರದಲ್ಲೇ ವಂದೇ ಭಾರತ್ ಸ್ಲೀಪರ್ ರೈಲು ಆರಂಭವಾಗಲಿದೆ. ಭಾರತೀಯ ರೈಲ್ವೆಯು ಮುಂಬರುವ ತಿಂಗಳುಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮೊದಲ ಸ್ಲೀಪರ್ ರೈಲನ್ನು ಆರಂಭಿಸಲು ಸಜ್ಜಾಗಿದೆ. ಇದು ಫೆಬ್ರವರಿ, ಮಾರ್ಚ್ 2024 ರ ವೇಳೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ರಾಜಧಾನಿ ಎಕ್ಸ್‌ಪ್ರೆಸ್‌ಗಿಂತ ಉತ್ತಮವಾದ ಹೊಸ ವಂದೇ ಭಾರತ್ ಸ್ಲೀಪರ್ ರೈಲನ್ನು ಭಾರತೀಯ ರೈಲ್ವೇ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯ ಸಹಯೋಗದೊಂದಿಗೆ ಬಿಇಎಂಎಲ್ ತಯಾರಿಸುತ್ತಿದೆ. ವಂದೇ ಭಾರತ್ ಸ್ಲೀಪರ್ ರೈಲಿನ ಮೊದಲ ಮಾದರಿಯ ಉತ್ಪಾದನಾ ಕಾರ್ಯವು ಕಳೆದ ವರ್ಷ ಅಕ್ಟೋಬರ್ ಅಂತ್ಯದಲ್ಲಿ ಪ್ರಾರಂಭವಾಗಿದೆ. ಹಾಗಿರುವಾಗ ರಾಜಧಾನಿ ಎಕ್ಸ್‌ಪ್ರೆಸ್‌ಗಿಂತ ವಂದೇ ಭಾರತ್ ಸ್ಲೀಪರ್ ಉತ್ತಮ ಹೇಗೆಂದು ತಿಳಿಯೋಣ ಮುಂದೆ ಓದಿ...

ರಾಜಧಾನಿ ಎಕ್ಸ್‌ಪ್ರೆಸ್‌ಗಿಂತ ಉತ್ತಮ ಹೇಗೆ?
ಭಾರತೀಯ ರೈಲ್ವೇ ನೆಟ್‌ವರ್ಕ್‌ನಲ್ಲಿ ಪ್ರಸ್ತುತ ಓಡುತ್ತಿರುವ ಪ್ರೀಮಿಯಂ ರಾಜಧಾನಿ ಎಕ್ಸ್‌ಪ್ರೆಸ್ ಮತ್ತು ತೇಜಸ್ ಎಕ್ಸ್‌ಪ್ರೆಸ್ ರೈಲುಗಳಿಗಿಂತ ಉತ್ತಮವಾದ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಕೆಲವು ಹೆಚ್ಚುವರಿ ಪ್ರಯಾಣಿಕ ಸ್ನೇಹಿ ಫೀಚರ್‌ಗಳನ್ನು ಹೊಂದಿದೆ ಎಂದು ಟಿಒಐ ವರದಿ ಮಾಡಿದೆ.
ಉದಾಹರಣೆಗೆ, ಪ್ರಯಾಣಿಕರ ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು, ಬರ್ತ್‌ಗಳ ಬದಿಯಲ್ಲಿ ಹೆಚ್ಚುವರಿ ಮೆತ್ತನೆ ಮಾಡಲಾಗಿದೆ. ಇದರಿಂದ ಪ್ರಯಾಣಿಕರು ಮಲಗುವಾಗ ಅಥವಾ ವಿಶ್ರಾಂತಿ ಪಡೆಯುವಾಗ ತಿರುಗಿದಾಗ ಅದು ಹೆಚ್ಚು ಆರಾಮದಾಯಕವಾಗಿರುತ್ತದೆ.
ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿರುವ ಕೆಲವು ಆಸಕ್ತಿದಾಯಕ ಫೀಚರ್‌ಗಳಿವು
* ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳಿಗಿಂತ ಉತ್ತಮ ಮೆತ್ತನೆಯ, ಆರಾಮದಾಯಕ ಬರ್ತ್‌ಗಳು
* ಮೇಲಿನ ಬರ್ತ್‌ಗಳಿಗೆ ಸುಲಭವಾಗಿ ಏರಲು ಉತ್ತಮ ವಿನ್ಯಾಸದ ಏಣಿ
* ಉತ್ತಮ ಸಂಯೋಜಕಗಳೊಂದಿಗೆ ಅಡೆತಡೆ ಇಲ್ಲದ ಪ್ರಯಾಣ
* ಕೆನೆ, ಹಳದಿ ಮತ್ತು ಮರದ ಬಣ್ಣದ ಒಳಾಂಗಣ
* ಸಾಮಾನ್ಯ ಪ್ರದೇಶಗಳಲ್ಲಿ ಸೆನ್ಸರ್ ಬೆಳಕು
* ಕೋಚ್ ಪ್ರದೇಶದಲ್ಲಿ ಸುಲಭವಾಗಿ ಆಚೆ ಈಚೆ ಓಡಾಡಲು ಸ್ಟ್ರಿಪ್‌ಗಳ ಮೂಲಕ ನೆಲದ ಮೇಲೆ ಉತ್ತಮ ರಾತ್ರಿ ಬೆಳಕು
* ಎನರ್ಜಿ ಎಫಿಷಿಯಂಟ್ ಓವರ್ಹೆಡ್ ಲೈಟಿಂಗ್
* ಆಂಟಿ-ಸ್ಪಿಲ್ ಫೀಚರ್ ಇರುವ ವಾಷ್ ಬೇಸಿನ್
ಕೆಲವು ಮುಖ್ಯ ಫೀಚರ್‌ಗಳು
* ರೈಲಿನ ಹೆಡ್‌ಲೈಟ್ ಹದ್ದು ಹಕ್ಕಿಯ ಕಣ್ಣುಗಳಿಂದ ಸ್ಫೂರ್ತಿ ಪಡೆದ ಬಾಹ್ಯನೋಟ ಹೊಂದಿದೆ.
* ಜಿಎಫ್‌ಆರ್‌ಪಿ ಪ್ಯಾನೆಲ್‌ಗಳೊಂದಿಗೆ ಅತ್ಯುತ್ತಮ ದರ್ಜೆಯ ಒಳಾಂಗಣ
* ಆಟೋಮಾಟಿಕ್ ಎಕ್ಸ್‌ಟೆರಿಯರ್ ಪ್ಯಾಜೆಂಸರ್ ಬಾಗಿಲುಗಳು
* ಮಾಡ್ಯುಲರ್ ಪ್ಯಾಂಟ್ರಿ
* ವಿಕಲಚೇತನರಿಗಾಗಿ ವಿಶೇಷ ಬರ್ತ್‌ಗಳು ಮತ್ತು ಶೌಚಾಲಯಗಳು
* ಮೊದಲ ಎಸಿ ಕಾರ್‌ನಲ್ಲಿ ಬಿಸಿ ನೀರಿನ ಶವರ್
* ಸಾರ್ವಜನಿಕ ಪ್ರಕಟಣೆ ಮತ್ತು ದೃಶ್ಯ ಮಾಹಿತಿ ವ್ಯವಸ್ಥೆ
* ವಿಶಾಲವಾದ ಲಗೇಜ್ ಕೋಣೆ
* ವಾಸನೆ ಮುಕ್ತ ಶೌಚಾಲಯ ವ್ಯವಸ್ಥೆ
ಚೇರ್ ಕಾರ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಂತೆಯೇ, ಸ್ಲೀಪರ್ ರೈಲುಗಳು ಸಹ 160 ಪ್ರತಿ ಗಂಟೆಗೆ ಕಿ.ಮೀ. ವೇಗದ ಸಾಮರ್ಥ್ಯ ಹೊಂದಿದೆ. ವೇಗವಾಗಿ ಸ್ಪೀಡ್ ಹೆಚ್ಚಿಸುವ ಮತ್ತು ನಿಧಾನಗೊಳಿಸುವ ಸಾಮರ್ಥ್ಯವು ವಂದೇ ಭಾರತ್ ಸ್ಲೀಪರ್ ರೈಲಿಗೆ ಇದೆ. ಇದರಿಂದಾಗಿ ನಮ್ಮ ಪ್ರಯಾಣದ ಅವಧಿಯು ಕಡಿಮೆಯಾಗುತ್ತದೆ. ಇದು ರಾತ್ರಿಯ ರೈಲು ಪ್ರಯಾಣಕ್ಕೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.


Click it and Unblock the Notifications