ಹೊಸ ವರ್ಷ ಆರಂಭವಾಗಲು ಇನ್ನು ಒಂದು ತಿಂಗಳುಗಳ ಅವಧಿ ಮಾತ್ರ ಬಾಕಿ ಉಳಿದಿದೆ. ಇದಕ್ಕೂ ಮುನ್ನವೇ ನೀವು ಹಣಕಾಸಿನ ಬಗ್ಗೆ ಕೊಂಚ ತಿಳಿದಿರುವುದು ಮುಖ್ಯವಾಗುತ್ತದೆ. ಆದಾಯ ತೆರಿಗೆ ಯೋಜನೆಯು ಹಣಕಾಸಿನ ಯೋಜನೆಗೆ ಅತ್ಯಗತ್ಯವಾಗಿದೆ. ಏಕೆಂದರೆ ಸಂಬಳ ಪಡೆಯುವ ವ್ಯಕ್ತಿಯು ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಎರಡು ತೆರಿಗೆ ಪದ್ಧತಿಗಳನ್ನು ಅರ್ಥಮಾಡಿಕೊಳ್ಳುವುದು, ಕಡಿತಗಳನ್ನು ಗರಿಷ್ಠಗೊಳಿಸುವುದು ಮತ್ತು ಹೂಡಿಕೆಯ ಆಯ್ಕೆಗಳನ್ನು ಅನ್ವೇಷಿಸುವುದು ತೆರಿಗೆ ಕಡಿತವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ. 2023 ರ ಅಂತ್ಯದತ್ತ ಸಾಗುತ್ತಿರುವಾಗ, ನಿಮ್ಮ ತೆರಿಗೆಗಳನ್ನು ಹೇಗೆ ಯೋಜಿಸಬೇಕು ಮತ್ತು ಅದು ಏಕೆ ಮುಖ್ಯವಾಗಿದೆ ಎಂಬುವುದನ್ನು ಈ ಲೇಖನದ ಮೂಲಕ ಅರ್ಥ ಮಾಡಿಕೊಳ್ಳೋಣ, ಮುಂದೆ ಓದಿ...

1. ಹೊಸ vs ಹಳೆಯ ಆದಾಯ ತೆರಿಗೆ ಪದ್ಧತಿ
ಎರಡು ತೆರಿಗೆ ಪದ್ಧತಿಗಳನ್ನು (ಹೊಸ ತೆರಿಗೆ ಪದ್ಧತಿ, ಹಳೆಯ ತೆರಿಗೆ ಪದ್ಧತಿ) ಅರ್ಥಮಾಡಿಕೊಳ್ಳಲು ನಿಮಗೆ ಇನ್ನೂ ಅವಕಾಶವಿಲ್ಲದಿದ್ದರೆ, ಯಾವುದು ನಿಮಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿಯುವುದು ಅತೀ ಮುಖ್ಯವಾಗುತ್ತದೆ.
ITR Refund Delay: ಈ ಎರಡು ವಿಭಾಗಗಳಿಗೆ ಐಟಿಆರ್ ರಿಫಂಡ್ ಪ್ರಕ್ರಿಯೆ ನಡೆಸಲು ಇಲಾಖೆಗೆ ಸಾಧ್ಯವಿಲ್ಲ
ನೀವು 7 ಲಕ್ಷ ರೂಪಾಯಿವರೆಗಿನ ಆದಾಯವನ್ನು ಹೊಂದಿದ್ದರೆ, ಹೊಸ ತೆರಿಗೆ ವ್ಯವಸ್ಥೆಯು ಉತ್ತಮವಾಗಿದೆ. ಏಕೆಂದರೆ ಈ ತೆರಿಗೆ ಪದ್ಧತಿಯಡಿಯಲ್ಲಿ 7 ಲಕ್ಷ ರೂಪಾಯಿವರೆಗೆ ಯಾವುದೇ ತೆರಿಗೆ ಇರುವುದಿಲ್ಲ. ಹೆಚ್ಚುವರಿಯಾಗಿ, ಹೊಸ ತೆರಿಗೆ ಪದ್ಧತಿಯಲ್ಲಿ 50 ಸಾವಿರ ರೂಪಾಯಿ ಕಡಿತವೂ ಲಭ್ಯವಾಗುತ್ತದೆ.
ಕೇಂದ್ರ ಬಜೆಟ್ 2023 ರಲ್ಲಿ ಪ್ರಸ್ತಾಪಿಸಲಾದ ಬದಲಾವಣೆಗಳ ಪ್ರಕಾರ, ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ 7 ಲಕ್ಷ ರೂಪಾಯಿವರೆಗಿನ ವಾರ್ಷಿಕ ಆದಾಯ ಹೊಂದಿರುವ ಜನರಿಗೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಆದರೆ ತೆರಿಗೆ ವಿನಾಯಿತಿಗಳನ್ನು ಒದಗಿಸುವ ಹಳೆಯ ತೆರಿಗೆ ಪದ್ಧತಿಯಲ್ಲಿ ಮುಂದುವರಿಯುವವರಿಗೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.
2. ಹೆಚ್ಚು ಅನುಕೂಲಕರವಾದ ತೆರಿಗೆ ಪದ್ಧತಿ ಆಯ್ಕೆ
"ನಿಮ್ಮ ಐಟಿಆರ್ ಅನ್ನು ಸಲ್ಲಿಸುವ ಸಮಯದಲ್ಲಿ ಹೆಚ್ಚು ಅನುಕೂಲಕರವಾದ ಪದ್ಧತಿಕ್ಕೆ ಬದಲಾಯಿಸುವ ಆಯ್ಕೆಯನ್ನು ನೀವು ಹೊಂದಿದ್ದರೂ ಸಹ, ತೆರಿಗೆಗಳನ್ನು ಸುಲಭವಾಗಿ ನಿರ್ವಹಿಸಲು ಕಲಿಯುವುದು ಮುಖ್ಯವಾಗುತ್ತದೆ. ಎಲ್ಲಿ ಅತೀ ಕಡಿಮೆ ತೆರಿಗೆ ಹೋಗುತ್ತದೆ ಎಂದು ನೋಡಿಕೊಳ್ಳಿ," ಎಂದು ಕ್ಲಿಯರ್‌ನ ಸಂಸ್ಥಾಪಕ ಮತ್ತು ಸಿಇಒ ಅರ್ಚಿತ್ ಗುಪ್ತಾ ಹೇಳಿದ್ದಾರೆ.
ಕೆಲವು ಹೂಡಿಕೆಗಳು ಮತ್ತು ವೆಚ್ಚಗಳ ಮೇಲಿನ ವಿನಾಯಿತಿಗಳನ್ನು ಹಳೆಯ ತೆರಿಗೆ ಪದ್ಧತಿಯು ಹೊಂದಿದ್ದು, ಮನೆ ಬಾಡಿಗೆಯನ್ನು ಪಾವತಿಸುವ ಅಥವಾ ಮನೆ ಸಾಲವನ್ನು ಹೊಂದಿರುವ ತೆರಿಗೆದಾರರಿಗೆ ಉತ್ತಮವಾಗಿದೆ. "ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡುವವರು ಸೆಕ್ಷನ್ 80 ಸಿ ಕಡಿತವನ್ನು ಗರಿಷ್ಠಗೊಳಿಸಲು ಯೋಚನೆ ಮಾಡಬೇಕು. ಇದರಿಂದಾಗಿ ಒಟ್ಟು ತೆರಿಗೆಯ ಆದಾಯವನ್ನು 1.5 ಲಕ್ಷ ರೂಪಾಯಿಗೆ ಕಡಿಮೆ ಮಾಡಬಹುದು ಎಂದು ಅರ್ಚಿತ್ ಗುಪ್ತಾ ಹೇಳಿದರು.
3. ತೆರಿಗೆ ಮತ್ತು ಸ್ಟಾಕ್ ಮಾರುಕಟ್ಟೆ
ಸ್ಟಾಕ್ ಮಾರುಕಟ್ಟೆಗಳು ಇತ್ತೀಚೆಗೆ ಏರಿಳಿತ ಕಾಣುತ್ತಿದ್ದು, ಆದಾಯ ತೆರಿಗೆ ಪಾವತಿಸುವ ಹೂಡಿಕೆದಾರರಿಗೆ ಇದು ದೊಡ್ಡ ಅವಕಾಶವಾಗಿ ಬದಲಾಗಬಹುದು. ನಷ್ಟವನ್ನು ಸರಿಹೊಂದಿಸುವ ಮೂಲಕ ತಮ್ಮ ಆದಾಯ ತೆರಿಗೆ ಕಡಿತ ಮೊತ್ತವನ್ನು ಕಡಿಮೆ ಮಾಡಬಹುದು.
"ಬಂಡವಾಳ ಲಾಭದ ತೆರಿಗೆಗೆ ಸಂಬಂಧಿಸಿದಂತೆ ನಿಮ್ಮ ತೆರಿಗೆ ಬಾಕಿಗಳನ್ನು ಪರಿಶೀಲಿಸಲು ಇದು ಸಹಾಯ ಮಾಡುತ್ತದೆ. ನಿಮ್ಮ ಲಾಭವನ್ನು ತೆರಿಗೆಯೊಂದಿಗೆ ಲೆಕ್ಕ ಹಾಕುವ ಮೂಲಕ ತೆರಿಗೆ ಕಡಿತ ಕಡಿಮೆ ಮಾಡುವ ಸಾಧ್ಯತೆಯಿದೆಯೇ ಎಂದು ನೋಡಿ," ಎಂದು ಅರ್ಚಿತ್ ಗುಪ್ತಾ ಹೇಳಿದರು.
4. ಉದ್ಯೋಗ ಬದಲಾವಣೆ
ಒಬ್ಬ ವ್ಯಕ್ತಿಯ ತೆರಿಗೆ ಮೊತ್ತವನ್ನು ಎಲ್ಲಾ ಮೂಲಗಳಿಂದ ಒಟ್ಟುಗೂಡಿಸಿ ವರ್ಷದಲ್ಲಿ ಗಳಿಸಿದ ಒಟ್ಟು ಆದಾಯದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. "ನೀವು ವರ್ಷದಲ್ಲಿ ಉದ್ಯೋಗವನ್ನು ಬದಲಾಯಿಸಿದ್ದರೆ, ಅದನ್ನು ಪರಿಶೀಲಿಸುವುದು ಮುಖ್ಯ," ಎಂದು ಅರ್ಚಿತ್ ಗುಪ್ತಾ ತಿಳಿಸಿದರು.
"ಸರಿಯಾದ ತೆರಿಗೆ ಲೆಕ್ಕಾಚಾರಕ್ಕಾಗಿ ಮತ್ತು ಫೈಲ್ ಮಾಡುವಾಗ ನೀವು ಹೆಚ್ಚಿನ ತೆರಿಗೆಯನ್ನು ಪಾವತಿಸುವುದನ್ನು ತಪ್ಪಿಸಲು ನಿಮ್ಮ ಈಗಿನ ಉದ್ಯೋಗದಾತರಿಗೆ ಸಲ್ಲಿಸಬೇಕಾದ ನಿಮ್ಮ ಪಾವತಿ ಮತ್ತು ತೆರಿಗೆ ಲೆಕ್ಕಾಚಾರವನ್ನು ನೀವು ಮೊದಲ ಅಥವಾ ಈ ಹಿಂದಿನ ಉದ್ಯೋಗದಾತರಿಂದ ಪಡೆದುಕೊಳ್ಳಿ," ಎಂದು ಅರ್ಚಿತ್ ಗುಪ್ತಾ ಮಾಹಿತಿ ನೀಡಿದ್ದಾರೆ.


Click it and Unblock the Notifications