ರೈಲ್ವೆ ಟಿಕೆಟ್ ಬುಕ್ಕಿಂಗ್ ಕೌಂಟರ್‌ಗೆ ತೆರಳಿ ಟಿಕೆಟ್ ಬುಕಿಂಗ್ ಮಾಡುವುದು ನಿಮಗೆ ಕಷ್ಟದಾಯಕ ಎನ್ನಿಸಿದರೆ ನೀವಾಗಿಯೇ IRCTC ವೆಬ್‌ಸೈಟ್ ಮೂಲಕ ರೈಲು ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡಬಹುದು.
ಭಾರತೀಯ ರೈಲ್ವೆ ಐಆರ್‌ಸಿಟಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ರೈಲ್ವೇ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಲು ಬಯಸುವ ಪ್ರಯಾಣಿಕರಿಗೆ, ಭಾರತೀಯ ರೈಲ್ವೆ ಹೊಸ ನಿಯಮಗಳನ್ನು ಪರಿಚಯಿಸುವ ಮೂಲಕ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸಿದೆ.
ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯ ಪರಿಶೀಲನೆ
ಪ್ರಯಾಣಿಕರಿಗೆ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಒಳಗೊಂಡ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ ಎಂದು ಖಚಿತಪಡಿಸಿಕೊಳ್ಳಲು IRCTC ಕೇಳಿಕೊಂಡಿದೆ.
ಈ ಪರಿಶೀಲನೆ ಪ್ರಕ್ರಿಯೆಯ ನಂತರವೇ, ಪ್ರಯಾಣಿಕರು ತಮ್ಮ ರೈಲ್ವೆ ಟಿಕೆಟ್ ಬುಕ್ಕಿಂಗ್ ಸಾಧ್ಯವಾಗುತ್ತದೆ ಎಂಬುದನ್ನು ಗಮನಿಸಬೇಕು. ಆದಾಗ್ಯೂ, ರೈಲು ಟಿಕೆಟ್‌ನ ಆನ್‌ಲೈನ್ ಬುಕ್ಕಿಂಗ್‌ನ ಈ ಸಂಪೂರ್ಣ ಪ್ರಕ್ರಿಯೆಯು ಕೇವಲ 50 ರಿಂದ 60 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ.
ರೈಲ್ವೆ ಟಿಕೆಟ್ ಬುಕ್ ಮಾಡಲು ಏನು ಮಾಡಬೇಕು?
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ, IRCTC ಈ ಪ್ರಕ್ರಿಯೆಯನ್ನು ಪರಿಚಯಿಸಿದೆ ಮತ್ತು ಪ್ರಯಾಣಿಕರು ಟಿಕೆಟ್ ಬುಕ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳದಂತೆ ನೋಡಿಕೊಳ್ಳುವಂತೆ ಅಪ್‌ಡೇಟ್ ಮಾಡಲಾಗಿದೆ.
ರೈಲ್ವೆ ಟಿಕೆಟ್ ಬುಕ್ ಮಾಡಲು ಏನೆಲ್ಲಾ ಹಂತಗಳನ್ನು ಅನುಸರಿಬೇಕಾಗಬಹುದು ಎಂಬುದನ್ನ ಈ ಕೆಳಗೆ ತಿಳಿಯಿರಿ:
* ಟಿಕೆಟ್ ಬುಕ್ ಮಾಡಲು IRCTC ಪೋರ್ಟಲ್‌ನಲ್ಲಿ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಪ್ರಯಾಣಿಕರು ರಚಿಸಬೇಕಾಗುತ್ತದೆ.
* ಲಾಗ್ ಇನ್ ಪಾಸ್‌ವರ್ಡ್ ರಚಿಸಲು, ಪ್ರಯಾಣಿಕರು ತಮ್ಮ ಇಮೇಲ್ ಮತ್ತು ಫೋನ್ ಸಂಖ್ಯೆಯನ್ನು ಒದಗಿಸಬೇಕು.
* ಇಮೇಲ್ ಮತ್ತು ಫೋನ್ ಸಂಖ್ಯೆಯನ್ನು ಪರಿಶೀಲಿಸಿದ ನಂತರ, ನೀವು ಸುಲಭವಾಗಿ ನಿಮ್ಮ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಐಆರ್‌ಸಿಟಿಸಿ ಪೋರ್ಟಲ್‌ಗೆ ಲಾಗ್ ಇನ್ ಮಾಡಿದ ನಂತರ, ಪರಿಶೀಲನಾ ವಿಂಡೋ ಕಾಣಿಸುತ್ತದೆ.
* ಪರಿಶೀಲನಾ ವಿಂಡೋದಲ್ಲಿ ಪ್ರಯಾಣಿಕರು ಈಗಾಗಲೇ ನೋಂದಾಯಿತ ಇಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸುವ ನಿರೀಕ್ಷೆಯಿದೆ. ಪರಿಶೀಲನೆ ವಿಂಡೋದಲ್ಲಿ, ಬಲಭಾಗದಲ್ಲಿ ಪರಿಶೀಲನೆಯ ಆಯ್ಕೆ ಮತ್ತು ಎಡಭಾಗದಲ್ಲಿ ಎಡಿಟ್ ಮಾಡುವ ಆಯ್ಕೆ ಇದೆ.
ಫೋನ್ ನಂಬರ್ ಅಥವಾ ಇಮೇಲ್ ಐಡಿ ಅಪ್‌ಡೇಟ್ ಮಾಡಿ
* ಪ್ರಯಾಣಿಕರು ಇಮೇಲ್ ಮತ್ತು ಫೋನ್ ಸಂಖ್ಯೆ ಸೇರಿದಂತೆ ವಿವರಗಳನ್ನು ಬದಲಾಯಿಸಲು ಬಯಸಿದರೆ, ನೀವು ಎಡಿಟ್ ಆಯ್ಕೆಯನ್ನು ಆರಿಸಿ ಮತ್ತು ಅಗತ್ಯ ಬದಲಾವಣೆಗಳನ್ನು ಮಾಡಬಹುದು.
* ನೀವು ವಿವರಗಳನ್ನು ಎಡಿಟ್ ಮಾಡಿದ ನಂತರ ನೀವು ಪರಿಶೀಲನೆ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಈ ಹಂತವನ್ನು ಅನುಸರಿಸಿ, ನಿಮಗೆ ಕೊಟ್ಟಿರುವ ಫೋನ್ ಸಂಖ್ಯೆಗೆ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್) ಕಳುಹಿಸಲಾಗುತ್ತದೆ.
* ನೀವು ಒಟಿಪಿಯನ್ನು ನಮೂದಿಸಿದ ತಕ್ಷಣ, ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲಾಗುತ್ತದೆ. ಇಮೇಲ್ ಐಡಿಯ ಪರಿಶೀಲನೆಗಾಗಿ ಇದೇ ರೀತಿಯ ಕೆಲಸವನ್ನು ನೀವು ಮಾಡಬೇಕಾಗುತ್ತದೆ. ನಂತರ ನಿಮ್ಮ ರೈಲ್ವೇ ಟಿಕೆಟ್ ಬುಕ್ ಮಾಡಲಾಗಿದೆ ಎಂದು ತೋರಿಸುವುದು, ನಂತರ ನೀವು ಪ್ರಿಂಟ್ ಔಟ್ ಪಡೆಯಬಹುದು
ಒಂದು ಲಕ್ಷ ರೂಪಾಯಿ ಗೆಲ್ಲುವ ಅವಕಾಶ
ನೀವು ಪ್ರಯಾಣವನ್ನು ಇಷ್ಟಪಡುತ್ತಿದ್ದರೆ, ನಿಮಗಾಗಿ IRCTC ಬಂಪರ್ ಆಫರ್ ಒಂದನ್ನು ನೀಡುತ್ತಿದೆ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಸ್ಪರ್ಧೆಯನ್ನು ಘೋಷಿಸಿದ್ದು, ಇದರಲ್ಲಿ ವಿಜೇತರಿಗೆ 1 ಲಕ್ಷ ರೂ. ಬಹುಮಾನವಿದ್ದು ನೀವು ಮಾಡಬೇಕಾಗಿರುವುದು ಕೇವಲ ಒಂದು ವೀಡಿಯೋ ಆಗಿದೆ.
IRCTC ಈ ಸ್ಪರ್ಧೆಗಾಗಿ CoRover ನೊಂದಿಗೆ ಪಾಲುದಾರಿಕೆ ಹೊಂದಿದೆ. ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್ ಟ್ವಿಟರ್ ಮೂಲಕ, ಪ್ರವಾಸಿ ಸ್ಥಳಗಳಲ್ಲಿ ವೀಡಿಯೊಗಳನ್ನು ಮಾಡಬೇಕಾಗಿದೆ ಎಂದು ತಿಳಿಸಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಕೊನೆಯ ದಿನಾಂಕ ಆಗಸ್ಟ್ 31 ಆಗಿದೆ.
ರನ್ನರ್ ಅಪ್‌ಗೆ 50,000 ಬಹುಮಾನ
ಈ ಸ್ಪರ್ಧೆಯಲ್ಲಿ ವಿಜೇತರಾದವರು 1 ಲಕ್ಷ ಬಹುಮಾನವನ್ನು ಪಡೆಯುತ್ತಾರೆ. ಇದರೊಂದಿಗೆ ಪ್ರಮಾಣಪತ್ರ ಮತ್ತು ಟ್ರೋಫಿಯನ್ನು ಸಹ ನೀಡಲಾಗುವುದು. ಅದೇ ಸಮಯದಲ್ಲಿ, ರನ್ನರ್‌ಅಪ್‌ಗೆ 50,000 ರೂ.ಗಳೊಂದಿಗೆ ಪ್ರಮಾಣಪತ್ರ ಮತ್ತು ಟ್ರೋಫಿಯನ್ನು ನೀಡಲಾಗುವುದು ಮತ್ತು ಮೂರನೇ ಸ್ಥಾನ ಪಡೆದವರಿಗೆ ಪ್ರಮಾಣಪತ್ರ ಮತ್ತು ಟ್ರೋಫಿಯನ್ನು 25 ಸಾವಿರ ರೂ. ನೀಡಲಾಗುವುದು. ಇದನ್ನು ಹೊರತುಪಡಿಸಿ, ಉಳಿದ ಎಲ್ಲ ವಿಜೇತರಿಗೆ 500 ರೂಪಾಯಿ ಮೌಲ್ಯದ ಉಡುಗೊರೆ ಕಾರ್ಡ್ ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
300 ವಿಜೇತರ ಘೋಷಣೆ
ಈ ಸ್ಪರ್ಧೆಯ ಅಡಿಯಲ್ಲಿ, ಒಟ್ಟು 300 ವಿಜೇತರನ್ನು ಘೋಷಿಸಲಾಗುತ್ತದೆ. ವೀಡಿಯೊದ ಗುಣಮಟ್ಟ ಮತ್ತು ವಿಷಯದ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ.
ನೀವು ಮಾಡಿದ ವೀಡಿಯೋಗಳ ಹಕ್ಕು ಪಡೆಯಲಿದೆ IRCTC
ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಅಪ್‌ಲೋಡ್ ಮಾಡಿದ ವೀಡಿಯೋಗಳ ಹಕ್ಕುಸ್ವಾಮ್ಯವನ್ನು ಐಆರ್‌ಸಿಟಿಸಿ ಪಡೆಯಲಿದೆ. ಆದರೆ ಈ ವೀಡಿಯೋ ತಯಾರಿಸಿದವರ ಹೆಸರನ್ನೂ ಉಲ್ಲೇಖಿಸುತ್ತದೆಯಾದರೂ, ಇದು ಐಆರ್‌ಸಿಟಿಸಿ ಒಡೆಯತನದಲ್ಲಿರುತ್ತದೆ ಮತ್ತು ಭಾಗವಹಿಸುವವರು ಇದನ್ನು ಹಿಂಪಡೆಯಲು ಸಾಧ್ಯವಿಲ್ಲ
ಯಾವೆಲ್ಲಾ ವಿಷಯಗಳನ್ನು ಆಯ್ಕೆ ಮಾಡಬಹುದು?
ಈ ವೀಡಿಯೊಗಳಿಗಾಗಿ, ನೀವು ಐಆರ್‌ಸಿಟಿಸಿ ಪ್ರವಾಸೋದ್ಯಮ, ಐಆರ್‌ಸಿಟಿಸಿ ಏರ್, ಐಆರ್‌ಸಿಟಿಸಿ ಐಮುದ್ರಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್, ಐಆರ್‌ಸಿಟಿಸಿ ಇ-ಕ್ಯಾಟರಿಂಗ್, ಐಆರ್‌ಸಿಟಿಸಿ ಎಸ್‌ಬಿಐ ಕಾರ್ಡ್, ಐಆರ್‌ಸಿಟಿಸಿ ಹೊಸ ಇ-ಟಿಕೆಟಿಂಗ್ ವೆಬ್‌ಸೈಟ್, ಐಆರ್‌ಸಿಟಿಸಿ ಬಸ್ ಬುಕಿಂಗ್, ಐಆರ್‌ಸಿಟಿಸಿ ತೇಜಸ್ ರೈಲು ಮತ್ತು ಐಆರ್‌ಸಿಟಿಸಿ ರಿಟೈರಿಂಗ್ ರೂಮ್‌ಗೆ ಸಂಬಂಧಿಸಿದ ವಿಷಯಗಳನ್ನು ಆಯ್ಕೆ ಮಾಡಬಹುದು.
ಸ್ಪರ್ಧೆಯಲ್ಲಿ ಭಾಗವಹಿಸಲು ಇಲ್ಲಿ ಭೇಟಿ ನೀಡಿ
ಐಆರ್‌ಸಿಟಿಸಿ ಆಯೋಜಿಸಿರುವ ವೀಡಿಯೋ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವವರು ಈ ಲಿಂಕ್‌ಗೆ ಭೇಟಿ ನೀಡುವ ಮೂಲಕ ಫಾರ್ಮ್ ಅನ್ನು ಭರ್ತಿ ಮಾಡಬಹುದು. https://corover.ai/vlog/
ಇನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ನಿರ್ದಿಷ್ಟ ಸಂಖ್ಯೆಯನ್ನು ತಿಳಿಸಿಲ್ಲ. ಆದರೆ ಈ ಸ್ಪರ್ಧೆಯಲ್ಲಿ ಯಾವುದೇ ರಾಜ್ಯದ ಜನರು ಕೂಡ ಭಾಗವಹಿಸಬಹುದಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರು ಹಣ ಗೆಲ್ಲುವುದರ ಜೊತೆಗೆ ಟ್ರೋಫಿ ಹಾಗೂ ಪ್ರಮಾಣ ಪತ್ರವನ್ನು ಪಡೆಯಬಹುದು. ಆದರೆ ಮಾಡಿದ ವೀಡಿಯೋ ಹಕ್ಕು ಪಡೆಯಲಾಗುವುದಿಲ್ಲ.


Click it and Unblock the Notifications