ಯಾರೇ ಆದರೂ ತನ್ನ ಬಳಿ ಸಂಪತ್ತು ವೃದ್ಧಿಯಾದಷ್ಟು ಸಂತಸ ಪಡುವುದು ಸಹಜವಲ್ಲವೇ?. ತಮ್ಮ ಹಾಗೂ ತಮ್ಮ ಸಂಸ್ಥೆಯ ಆದಾಯವನ್ನು ಬೆಳೆಸುವ ನಿಟ್ಟಿನಲ್ಲಿ ಅದೆಷ್ಟೋ ಉದ್ಯಮಿಗಳು ಶ್ರಮಿಸುತ್ತಿದ್ದಾರೆ. ಆದರೆ ಇಲ್ಲೋರ್ವ ಉದ್ಯಮಿಯು ತನ್ನಲ್ಲಿ ಅಗತ್ಯಕ್ಕಿಂತ ಅಧಿಕ ಸಂಪತ್ತಿದೆ ಎಂದು ತಮ್ಮ ಎಲ್ಲಾ ಸಂಪತ್ತನ್ನು ಬೆರಳೆಣಿಕೆಯಷ್ಟು ಉದ್ಯೋಗಿಗಳಿಗೆ ನೀಡಿದ್ದಾರೆ.
ಹೌದು, ವಿಶ್ವದ ಅತೀ ವಿರಳ, ಸರಳ ವ್ಯಕ್ತಿ ಆರ್ ತ್ಯಾಗರಾಜನ್ ಆಗಿದ್ದಾರೆ. ತನ್ನ ಶ್ರೀರಾಮ್ ಗ್ರೂಪ್ ಸಂಪತ್ತನ್ನು ತನ್ನ ಉದ್ಯೋಗಿಗಳಿಗೆ ತ್ಯಾಗರಾಜನ್ ನೀಡಿದ್ದಾರೆ. 86 ವರ್ಷ ವಯಸ್ಸಿನ ತ್ಯಾಗರಾಜನ್ ಬ್ಲೂಮ್‌ಬರ್ಗ್ ನ್ಯೂಸ್‌ಗೆ ನೀಡಿದ ಅಪರೂಪದ ಸಂದರ್ಶನದಲ್ಲಿ ಶ್ರೀರಾಮ್ ಗ್ರೂಪ್‌ನ 750 ಮಿಲಿಯನ್ ಡಾಲರ್‌ನಷ್ಟು ಸಂಪತ್ತನ್ನು ಉದ್ಯೋಗಿಗಳಿಗೆ ನೀಡುವ ನಿರ್ಧಾರ ಬಗ್ಗೆ ಮಾಹಿತಿ ನೀಡಿದ್ದಾರೆ.

"ನಾನು ಸ್ವಲ್ಪ ಎಡಪಂಥೀಯ," ಎಂದು ತ್ಯಾಗರಾಜನ್ ದಕ್ಷಿಣ ಭಾರತದ ನಗರವಾದ ಚೆನ್ನೈನಲ್ಲಿ ಹೇಳಿದ್ದಾರೆ. ಹಾಗೆಯೇ "ಈಗಾಗಲೇ ಅಧಿಕ ಆದಾಯವನ್ನು ಹೊಂದಿರುವ ಜನರಿಗೆ ಜೀವನವನ್ನು ಇನ್ನಷ್ಟು ಉತ್ತಮಗೊಳಿಸುವುದರಲ್ಲಿ ನನಗೆ ಆಸಕ್ತಿಯಿಲ್ಲ, ಬದಲಾಗಿ ಸಮಸ್ಯೆಯಲ್ಲಿ ಸಿಲುಕಿರುವ ಜನರ ಜೀವನವನ್ನು ನಾನು ಸುಧಾರಿಸಲು ಬಯಸುತ್ತೇನೆ," ಎಂದು ಕೂಡಾ ಹೇಳಿದ್ದಾರೆ.
ಆರ್ ತ್ಯಾಗರಾಜನ್ ಬಗ್ಗೆ ತಿಳಿಯಿರಿ
ಆರ್ ತ್ಯಾಗರಾಜನ್ 90000 ಕೋಟಿ ರೂಪಾಯಿಯ ಶ್ರೀರಾಮ್ ಗ್ರೂಪ್ ಅನ್ನು ಸ್ಥಾಪಿಸಿದರು. ಕಂಪನಿಯನ್ನು 1974 ರಲ್ಲಿ ಚೆನ್ನೈನಲ್ಲಿ ಸ್ಥಾಪಿಸಲಾಯಿತು. ತ್ಯಾಗರಾಜನ್ ಅವರು ಬ್ಯಾಂಕ್‌ಗಳಿಂದ ಸಾಲ ಪಡೆಯದ ಕಡಿಮೆ ಆದಾಯದ ಸಾಲಗಾರರಿಗೆ ಸಾಲ ನೀಡುವ ಮೂಲಕ ತಮ್ಮ ಸಾಮ್ರಾಜ್ಯವನ್ನು ನಿರ್ಮಿಸಿದರು. ಸಾಕಷ್ಟು ಆದಾಯ ಇದ್ದರೂ ಕೂಡಾ ಆರ್ ತ್ಯಾಗರಾಜನ್ ಮಿತವ್ಯಯದ ಬದುಕನ್ನು ನಡೆಸುತ್ತಿದ್ದಾರೆ.
ಹಾಗೆಯೇ ತ್ಯಾಗರಾಜನ್ ತಮ್ಮ ಹೆಚ್ಚಿನ ಹಣವನ್ನು ದೇಣಿಗೆ ನೀಡಿದ್ದಾರೆ. 6 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಹೊಂದಿದ್ದಾರೆ. ಗ್ರೂಪ್ 1,08,000 ಜನರನ್ನು ನೇಮಿಸಿಕೊಂಡಿದೆ. ಕಂಪನಿಯು ಟ್ರಕ್‌ಗಳು, ಟ್ರ್ಯಾಕ್ಟರ್‌ಗಳು ಮತ್ತು ಇತರ ವಾಹನಗಳನ್ನು ಖರೀದಿಸುವ ಬಡ ವಲಯಕ್ಕೆ ಸಾಲವನ್ನು ನೀಡುವ ಕಾರ್ಯವನ್ನು ಮಾಡುತ್ತದೆ.
ಆರ್ ತ್ಯಾಗರಾಜನ್ ತಮಿಳುನಾಡಿನ ಶ್ರೀಮಂತ ಕೃಷಿ ಕುಟುಂಬದಲ್ಲಿ ಜನಿಸಿದರು. ಅವರು ಗಣಿತಶಾಸ್ತ್ರದಲ್ಲಿ ಪದವಿ ಪಡೆದರು. ಬಳಿಕ ಅವರು ಕೋಲ್ಕತ್ತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಆರ್ ತ್ಯಾಗರಾಜನ್ 1961 ರಲ್ಲಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಗೆ ಸೇರಿದರು. ಅದಾದ ಬಳಿಕ ಹಲವಾರು ಹಣಕಾಸು ಕಂಪನಿಗಳಲ್ಲಿ ಉದ್ಯೋಗಿಯಾಗಿ ಎರಡು ದಶಕಗಳ ಕಾಲ ಕೆಲಸ ಮಾಡಿದರು.
37 ನೇ ವಯಸ್ಸಿನಲ್ಲಿ ಉದ್ಯಮವನ್ನು ಆರಂಭಿಸಿದರು. ಈಗ ಗುಂಪು 30 ಕಂಪನಿಗಳನ್ನು ಹೊಂದಿದೆ. ತ್ಯಾಗರಾಜನ್ ಸಾಮಾನ್ಯ ಕಾರನ್ನು ಓಡಿಸುತ್ತಾರೆ. ಹಾಗೆಯೇ ತಮ್ಮ ಸ್ವಂತ ಮೊಬೈಲ್ ಅನ್ನು ಹೊಂದಿಲ್ಲ. ಚಿಕ್ಕ ಮನೆಯಲ್ಲಿ ವಾಸವಾಗಿದ್ದಾರೆ.
ಕಂಪನಿಯು 23 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಪ್ರಮುಖ ಕಂಪನಿಯಾದ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನ ಮಾರುಕಟ್ಟೆ ಮೌಲ್ಯವು ಸುಮಾರು 8.5 ಬಿಲಿಯನ್ ಡಾಲರ್ ಆಗಿದೆ. ಜೂನ್ ತ್ರೈಮಾಸಿಕದಲ್ಲಿ ಲಾಭ ಸುಮಾರು 200 ಮಿಲಿಯನ್ ಡಾಲರ್ ಆಗಿತ್ತು. ಅವರು ತಮ್ಮ ಎಲ್ಲಾ ಷೇರುಗಳನ್ನು ಉದ್ಯೋಗಿಗಳಿಗೆ ನೀಡಿದ್ದು, ಸಂಪೂರ್ಣ ಹಣವನ್ನು ಶ್ರೀರಾಮ್ ಮಾಲೀಕತ್ವ ಟ್ರಸ್ಟ್‌ಗೆ ವರ್ಗಾಯಿಸಿದರು.


Click it and Unblock the Notifications