For Quick Alerts
ALLOW NOTIFICATIONS  
For Daily Alerts

ಚಿನ್ನದ ಮೈನಿಂಗ್ ಸ್ಟಾಕ್ ಮೇಲೆ ಹೂಡಿಕೆ ಭಾರತದಿಂದಲೂ ಮಾಡಬಹುದಾ?

|

ಚಿನ್ನದ ಮೇಲೆ ಹೂಡಿಕೆ ಮಾಡುವುದಕ್ಕೆ ಹಲವು ದಾರಿಗಳಿವೆ. ಚಿನ್ನ ಮತ್ತು ಅದಕ್ಕೆ ಹೊಂದಿಕೊಂಡಂಥ ವಲಯದಲ್ಲಿ ನೇರವಾಗಿ ಹೂಡಿಕೆ ಮಾಡುವುದಲ್ಲದೆ ಬೇರೆ ದಾರಿ ಇದೆಯೇ ಎಂದು ನೀವು ಚಿಂತೆ ಮಾಡುತ್ತಿದ್ದಲ್ಲಿ ಚಿನ್ನದ ಗಣಿಯ ಷೇರುಗಳ (ಗೋಲ್ಡ್ ಮೈನಿಂಗ್ ಸ್ಟಾಕ್ಸ್) ಬಗ್ಗೆ ಆಲೋಚನೆ ಮಾಡಬಹುದು.

 

ಬಿಲ್ ಇಲ್ಲದ ನಿಮ್ಮ ಬಳಿಯ ಚಿನ್ನ ಮಾರಾಟ ಮಾಡೋದು ಹೇಗೆ?ಬಿಲ್ ಇಲ್ಲದ ನಿಮ್ಮ ಬಳಿಯ ಚಿನ್ನ ಮಾರಾಟ ಮಾಡೋದು ಹೇಗೆ?

ಹೇಗೆ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾದಲ್ಲಿ ತೈಲ ಸಂಸ್ಕರಣಾ ಕಂಪೆನಿಗಳಿಗೆ ಹೇಗೆ ಲಾಭ ಆಗುತ್ತದೋ ಅದೇ ರೀತಿಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಅಥವಾ ಇಳಿಕೆ ಆದಲ್ಲಿ ಮೈನಿಂಗ್ ಕಂಪೆನಿಯ ಷೇರುಗಳಲ್ಲಿ ಏರಿಕೆ ಅಥವಾ ಇಳಿಕೆ ಆಗುತ್ತದೆ. ಜಗತ್ತು ಕಂಡ ಯಶಸ್ವಿ ಹೂಡಿಕೆದಾರ ವಾರೆನ್ ಬಫೆಟ್ ಕೂಡ ಕೊರೊನಾ ಬಿಕ್ಕಟ್ಟಿನ ಮಧ್ಯೆ ಚಿನ್ನದ ಗಣಿ ಕಂಪೆನಿಗಳಲ್ಲಿ ಷೇರು ಖರೀದಿಸಿದ್ದಾರೆ. ನೆನಪಿರಲಿ, ಚಿನ್ನದ ಮೇಲೆ ಹೂಡಿಕೆ ಮಾಡುವುದು ವಾರೆನ್ ಬಫೆಟ್ ಗೆ ಸ್ವಲ್ಪ ಕೂಡ ಇಷ್ಟವಿಲ್ಲದಿದ್ದರೂ ಅವರು ಮೈನಿಂಗ್ ಕಂಪೆನಿಗಳ ಷೇರು ಖರೀದಿಸಿದ್ದಾರೆ.

ಬ್ಯಾರಿಕ್ ಗೋಲ್ಡ್ ಕಾರ್ಪೊರೇಷನ್ ನಲ್ಲಿ ಹೂಡಿಕೆ

ಬ್ಯಾರಿಕ್ ಗೋಲ್ಡ್ ಕಾರ್ಪೊರೇಷನ್ ನಲ್ಲಿ ಹೂಡಿಕೆ

ರೆಗ್ಯುಲೇಟರಿ ಫೈಲಿಂಗ್ ಗಾಗಿ ಕಳೆದ ಆಗಸ್ಟ್ ನಲ್ಲಿ ವಾರೆನ್ ಬಫೆಟ್ ಅವರ ಬರ್ಕ್ ಶೈರ್ ಹಾಥ್ ವೇ ನೀಡಿದ ಮಾಹಿತಿ ಪ್ರಕಾರ, ಬ್ಯಾರಿಕ್ ಗೋಲ್ಡ್ ಕಾರ್ಪೊರೇಷನ್ ನಲ್ಲಿ 56.36 ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡಿ, 2.09 ಕೋಟಿ ಷೇರುಗಳನ್ನು ಖರೀದಿ ಮಾಡಿದ್ದಾರೆ. ಈ ಕಂಪೆನಿಯು ವಿಶ್ವದ ಅತಿ ದೊಡ್ಡ ಚಿನ್ನದ ಗಣಿ ಕಂಪೆನಿಗಳಲ್ಲಿ ಒಂದಾಗಿದ್ದು, ಮೂಲತಃ ಕೆನಡಾ ದೇಶದ ಟೊರೆಂಟೊದಲ್ಲಿದೆ. ಈ ಬಗ್ಗೆ ಹಲವು ಚರ್ಚೆಗಳಾದವು. ಯುಎಸ್ ಆರ್ಥಿಕತೆ ಬಗ್ಗೆ ಬಫೆಟ್ ಗೆ ಅನುಮಾನ ಇರುವುದರಿಂದ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಬಂದಿತ್ತು. ಆದರೆ ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಚಿನ್ನದ ಮೇಲೆ ಹೂಡಿಕೆ ಮಾಡುವುದು ಬೇರೆ ಹಾಗೂ ಚಿನ್ನದ ಗಣಿಯ ಕಂಪೆನಿಗಳ ಮೇಲಿನ ಹೂಡಿಕೆ ಬೇರೆ. ಚಿನ್ನದ ಗಟ್ಟಿಯ ಬೆಲೆ ಮೇಲೆ ಹೋಗುತ್ತಿದೆ ಅಂತ ಷೇರಿನ ಬೆಲೆಯೂ ಮೇಲೇರಬೇಕು ಅಂತೇನೂ ಇಲ್ಲ.

ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಬೇಕು
 

ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಬೇಕು

ಚಿನ್ನವನ್ನು ಖರೀದಿಸಿ, ಅದರ ಕಾವಲಿಗೆ ಲಾಕರ್ ಶುಲ್ಕ, ಇನ್ಷೂರೆನ್ಸ್, ತೆರಿಗೆ ಪಾವತಿಸುವುದು ಇವೆಲ್ಲ ನಷ್ಟದ ಬಾಬ್ತು ಎಂಬುದು ವಾರೆನ್ ಬಫೆಟ್ ನಂಬಿಕೆ. ಹಾಗಿದ್ದರೆ ಅವರ ಆಸಕ್ತಿ ಏನು? ಬ್ಯಾರಿಕ್ ಗೋಲ್ಡ್ ಕಾರ್ಪೊರೇಷನ್ ಅಂದರೆ ಹಲವು ಸಂಗತಿಗಳು ಇವೆ. ಬ್ಯಾಲೆನ್ಸ್ ಶೀಟ್, ಆಸ್ತಿ ಹಾಗೂ ಡಿವಿಡೆಂಡ್ ಹೀಗೆ. ಜತೆಗೆ ಈ ಕಂಪೆನಿ ಕೇವಲ ಚಿನ್ನದ ಗಣಿಗಾರಿಕೆ ಮಾತ್ರ ಮಾಡಲ್ಲ. ಜತೆಗೆ ತಾಮ್ರದ್ದು ಮಾಡುತ್ತದೆ. ಚಿನ್ನ ಅಥವಾ ತಾಮ್ರದ ಬೆಲೆ ಹೆಚ್ಚಾದಲ್ಲಿ ಕಂಪೆನಿಯ ಲಾಭವೂ ಹೆಚ್ಚಾಗುವ ಅವಕಾಶ ಇರುತ್ತದೆ. ಇದು ಉದ್ಯಮವಾದ್ದರಿಂದ ಈ ಕಂಪೆನಿಯ ಫಲಿತಾಂಶ ಮತ್ತು ಭವಿಷ್ಯದಲ್ಲಿ ಕಂಪೆನಿ ಗಳಿಕೆ ಹೇಗಿದೆ ಎಂಬುದರ ಆಧಾರದಲ್ಲಿ ಷೇರಿನ ಬೆಲೆ ನಿಂತಿರುತ್ತದೆ. ಬೇರೆಲ್ಲ ಕಂಪೆನಿಗಳಂತೆಯೇ ತನ್ನ ಬಂಡವಾಳವನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದರ ಮೇಲೆ ಯಶಸ್ಸು ನಿಂತಿರುತ್ತದೆ. ಜತೆಗೆ ಚಿನ್ನದ ಗಣಿಗಾರಿಕೆ ಕಂಪೆನಿಯು ಡಿವಿಡೆಂಡ್ ಕೂಡ ನೀಡುತ್ತದೆ. ಇಂಥ ಕಂಪೆನಿಗಳಿಗೆ ಅದರದೇ ಅನುಕೂಲ ಅನನುಕೂಲ ಎರಡೂ ಇದೆ.

ಭಾರತದಿಂದ ಗೋಲ್ಡ್ ಮೈನಿಂಗ್ ಕಂಪೆನಿಯಲ್ಲಿ ಹೂಡಿಕೆ

ಭಾರತದಿಂದ ಗೋಲ್ಡ್ ಮೈನಿಂಗ್ ಕಂಪೆನಿಯಲ್ಲಿ ಹೂಡಿಕೆ

ಚಿನ್ನದ ಮೈನಿಂಗ್ ವಲಯದಲ್ಲಿ ಮುನ್ನೂರಕ್ಕೂ ಹೆಚ್ಚು ಸಾರ್ವಜನಿಕವಾಗಿ ಲಿಸ್ಟಿಂಗ್ ಆದ ಕಂಪೆನಿಗಳಿವೆ. ಎಲ್ಲವೂ ಭಾರತದ ಹೊರಗಿವೆ. ಈ ಪೈಕಿ ಹಲವು ಕೆನಡಾ, ಯುಎಸ್, ಯುಕೆ ಹಾಗೂ ಆಸ್ಟ್ರೇಲಿಯಾದಲ್ಲಿ ಇವೆ. ಭಾರತೀಯರು ಮ್ಯೂಚುವಲ್ ಫಂಡ್ ಗಳ ಮೂಲಕ ಇವುಗಳಲ್ಲಿ ಹೂಡಿಕೆ ಮಾಡಬಹುದು. ಡಿಎಸ್ ಪಿ ಗೋಲ್ಡ್ ಮೈನಿಂಗ್ ಫಂಡ್ ಎಂಬುದು ಹೆಸರಾಂತ ಫಂಡ್. ಅದು ಬ್ಲ್ಯಾಕ್ ರಾಕ್ ಗ್ಲೋಬಲ್ ಫಂಡ್ಸ್- ವರ್ಲ್ಡ್ ಗೋಲ್ಡ್ ಫಂಡ್ ನಲ್ಲಿ ಹೂಡಿಕೆ ಮಾಡುತ್ತದೆ. ಈ ಫಂಡ್ ಮೂಲಕ ಸ್ವಲ್ಪ ಪ್ರಮಾಣದಲ್ಲಿ ಬೆಳ್ಳಿ, ಪ್ಲಾಟಿನಂ, ತಾಮ್ರ, ನಿಕ್ಕಲ್ ಹಾಗೂ ವಜ್ರದ ಷೇರುಗಳಲ್ಲೂ ಹೂಡಿಕೆ ಮಾಡಲಾಗಿದೆ. ಆದರೆ ಪ್ರಮುಖವಾಗಿ ಚಿನ್ನದ ಮೈನಿಂಗ್ ಷೇರುಗಳ ಮೇಲೆ ಹೂಡಲಾಗುತ್ತದೆ.

ಇತರ ಆಯ್ಕೆಗಳ ಕಡೆಗೂ ನೋಡಬಹುದು

ಇತರ ಆಯ್ಕೆಗಳ ಕಡೆಗೂ ನೋಡಬಹುದು

ಫಂಡ್ ಹೇಗಿದೆ ಎಂದು ನೋಡುವುದಕ್ಕೆ ಇರುವ ಮಾರ್ಗ ಅಂದರೆ ಎಫ್ ಟಿಎಸ್ ಇ ಗೋಲ್ಡ್ ಮೈನ್ಸ್ ಸೂಚ್ಯಂಕದ ಜತೆಗೆ ಹೋಲಿಕೆ ಮಾಡುವುದು. ಇದರಲ್ಲಿ ಎಲ್ಲ ಗೋಲ್ಡ್ ಮೈನಿಂಗ್ ಕಂಪೆನಿಗಳಿವೆ. ಅವು ಒಂದು ವರ್ಷಕ್ಕೆ ಕನಿಷ್ಠ ಮೂರು ಲಕ್ಷ ಔನ್ಸ್ ಚಿನ್ನ ಉತ್ಪಾದಿಸುತ್ತವೆ. ಶೇಕಡಾ ಐವತ್ತೊಂದು ಮತ್ತು ಅದಕ್ಕಿಂತ ಹೆಚ್ಚಿನ ಆದಾಯವನ್ನು ಚಿನ್ನದ ಗಣಿಗಾರಿಕೆ ಮೂಲಕ ಪಡೆಯುತ್ತವೆ. ಯಾವ ಕಂಪೆನಿಯ ಪ್ರಮುಖ ವ್ಯವಹಾರ ಚಿನ್ನದ ಮೈನಿಂಗ್ ಆಗಿದ್ದು, ವಿಶ್ವದಾದ್ಯಂತ ಮಾರ್ಕೆಟ್ ಹೇಗೆ ಕೆಲಸ ಮಾಡುತ್ತಿವೆ ಎಂದು ತಿಳಿದುಕೊಳ್ಳಲು ಈ ಬೆಂಚ್ ಮಾರ್ಕ್ ಸೂಚ್ಯಂಕವನ್ನು ರೂಪಿಸಲಾಗಿದೆ.

ಈ ಲೇಖನದಲ್ಲಿರುವುದು ಕೇವಲ ಮಾಹಿತಿಗಾಗಿಯೇ ಹೊರತು ಯಾವುದೇ ಖರೀದಿ ಅಥವಾ ಮಾರಾಟಕ್ಕೆ ಶಿಫಾರಸಲ್ಲ. ಹೂಡಿಕೆದಾರರು ವೈಯಕ್ತಿಕವಾಗಿ ಆಲೋಚಿಸಿ, ತೀರ್ಮಾನ ಕೈಗೊಳ್ಳಬೇಕು ವಿನಾ ಲೇಖಕರಾಗಲಿ, Greynium Information Technologies Pvt Ltd ಆಗಲಿ, ಅದರ ಅಂಗಸಂಸ್ಥೆಗಳಾಗಲೀ ಅಥವಾ ಸಹವರ್ತಿ ಕಂಪೆನಿಳಾಗಲೀ ಜವಾಬ್ದಾರರಲ್ಲ.

English summary

Investment Opportunity: How To Invest In Gold Mining Stocks From India?

What is gold mining stocks and how to invest from India? Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X