ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಧಾರ್ಮಿಕ ಪ್ರದೇಶಗಳಿಗೆ ಪ್ರವಾಸವನ್ನು ಕೂಡಾ ಐಆರ್‌ಸಿಟಿಸಿ ಹೊಂದಿದೆ. ಈ ಪ್ಯಾಕೇಜ್‌ಗಳಲ್ಲಿ ಏಳು ಜ್ಯೋತಿರ್ಲಿಂಗ ಯಾತ್ರೆ ಕೂಡಾ ಒಂದಾಗಿದೆ.
ಇದು ಸುಮಾರು 9 ರಾತ್ರಿಗಳು ಮತ್ತು 10 ದಿನಗಳ ಪ್ರವಾಸ ಪ್ಯಾಕೇಜ್ ಆಗಿದೆ. ಜನವರಿ 1ರಂದು ಪ್ರವಾಸ ಆರಂಭವಾಗಲಿದೆ. ಈ ಪ್ರವಾಸ ಯೋಜನೆಯಲ್ಲಿ ಬೆಟ್ ದ್ವಾರಕಾ, ಭೀಮಶಂಕರ, ದ್ವಾರಕಾಧೀಶ, ಘೃಷ್ಣೇಶ್ವರ, ಮಹಾಕಾಳೇಶ್ವರ, ನಾಗೇಶ್ವರ, ಓಂಕಾರೇಶ್ವರ, ಸೋಮನಾಥ, ತ್ರಯಂಬಕೇಶ್ವರದಲ್ಲಿ ನೀವು ಪ್ರವಾಸ ಮಾಡಬಹುದು. ಇಲ್ಲಿದೆ ಈ ಪ್ರವಾಸ ಪ್ಯಾಕೇಜ್‌ನ ವಿವರ ಮುಂದೆ ಓದಿ.....

ಈ ಪ್ರವಾಸ ಪ್ಯಾಕೇಜ್ ವಿವರ ಇಲ್ಲಿದೆ
ಓಂಕಾರೇಶ್ವರ ಜ್ಯೋತಿರ್ಲಿಂಗ, ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಸೋಮನಾಥ ಜ್ಯೋತಿರ್ಲಿಂಗ, ದ್ವಾರಕಾಧೀಶ ದೇವಸ್ಥಾನ ಆಂಡ್ ನಾಗೇಶ್ವರ ಜ್ಯೋತಿರ್ಲಿಂಗ, ತ್ರಯಂಬಕೇಶ್ವರ ಜ್ಯೋತಿರ್ಲಿಂಗ, ಗೃಹೇಶ್ವರ ಜ್ಯೋತಿರ್ಲಿಂಗ, ಭೀಮಾಶಂಕರ ಜ್ಯೋತಿರ್ಲಿಂಗಕ್ಕೆ ಈ ಪ್ರವಾಸ ಪ್ಯಾಕೇಜ್‌ನಲ್ಲಿ ತಲುಪಬಹುದಾಗಿದೆ.
ಪ್ರವಾಸ ಪ್ಯಾಕೇಜ್‌ನ ದರ ಎಷ್ಟಿದೆ?
ಕಂಫರ್ಟ್ ಕ್ಯಾಟೆಗರಿಯಲ್ಲಿ ಅಂದರೆ 2ಎ ಅಲ್ಲಿ ನೀವು ಪ್ರವಾಸ ಮಾಡಬೇಕಾದರೆ ಸಿಂಗಲ್/ ಡಬಲ್/ ಟ್ರಿಪಲ್ ಅಕ್ಯುಪೆನ್ಸಿಗೆ 42350 ರೂಪಾಯಿ ಪ್ಯಾಕೇಜ್ ದರವಾಗಿದೆ. ಇದೇ ಕ್ಯಾಟೆಗರಿಯ 5 ರಿಂದ 11 ವರ್ಷದ ಮಕ್ಕಳಿಗೆ ಈ ಪ್ಯಾಕೇಜ್ ದರವು 40800 ರೂಪಾಯಿ ಆಗಿದೆ.
ಸ್ಟಾಡರ್ಡ್ ಕ್ಯಾಟೆಗರಿಯಲ್ಲಿ ಅಂದರೆ 3ಎ ಅಲ್ಲಿ ನೀವು ಪ್ರವಾಸ ಮಾಡಬೇಕಾದರೆ ಸಿಂಗಲ್/ ಡಬಲ್/ ಟ್ರಿಪಲ್ ಅಕ್ಯುಪೆನ್ಸಿಗೆ 31900 ರೂಪಾಯಿ ಪ್ಯಾಕೇಜ್ ದರವಾಗಿದೆ. ಇದೇ ಕ್ಯಾಟೆಗರಿಯ 5 ರಿಂದ 11 ವರ್ಷದ ಮಕ್ಕಳಿಗೆ ಈ ಪ್ಯಾಕೇಜ್ ದರವು 30600 ರೂಪಾಯಿ ಆಗಿದೆ.
ಇಕಾಮನಿ ಕ್ಯಾಟೆಗರಿಯಲ್ಲಿ ಅಂದರೆ ಎಸ್‌ಎಲ್ ಅಲ್ಲಿ ನೀವು ಪ್ರವಾಸ ಮಾಡಬೇಕಾದರೆ ಸಿಂಗಲ್/ ಡಬಲ್/ ಟ್ರಿಪಲ್ ಅಕ್ಯುಪೆನ್ಸಿಗೆ 19000 ರೂಪಾಯಿ ಪ್ಯಾಕೇಜ್ ದರವಾಗಿದೆ. ಇದೇ ಕ್ಯಾಟೆಗರಿಯ 5 ರಿಂದ 11 ವರ್ಷದ ಮಕ್ಕಳಿಗೆ ಈ ಪ್ಯಾಕೇಜ್ ದರವು 17900 ರೂಪಾಯಿ ಆಗಿದೆ.
ಯಾವ ದಿನ, ಎಲ್ಲಿ ಪ್ರವಾಸ?
ದಿನ 1: ಜನವರಿ 1, 2024 ರಂದು ಪ್ರವಾಸ ಆರಂಭವಾಗಲಿದೆ.
ದಿನ 2: ಉಜ್ಜಯಿನಿಗೆ ತಲುಪಿ ಹೊಟೇಲ್ ಚೆಕ್ ಇನ್ ಆಗುವುದು. ಓಂಕಾರೇಶ್ವರ ಜ್ಯೋತಿರ್ಲಿಂಗದ ದರ್ಶನ ಮಾಡಿ, ರಾತ್ರಿ ಉಜ್ಜಯಿನಿಯಲ್ಲಿ ತಂಗುವುದು.
ದಿನ 3: ಮಹಾಕಾಳೇಶ್ವರ ದೇವಸ್ಥಾನದ ದರ್ಶನ ಮತ್ತು ಸೋಮನಾಥಕ್ಕೆ ನಿರ್ಗಮನ.
ದಿನ 4: ರಸ್ತೆಯ ಮೂಲಕ ಸೋಮನಾಥಕ್ಕೆ ಭೇಟಿ. ರೈಲಿನಲ್ಲಿ ದ್ವಾರಕೆಗೆ ತಲುಪಿ, ಸೋಮನಾಥ ಜ್ಯೋತಿರ್ಲಿಂಗದ ದರ್ಶನ.
ದಿನ 5: ದ್ವಾರಕಾಧೀಶ ದೇವಸ್ಥಾನದ ದರ್ಶನ ಮತ್ತು ನಾಗೇಶ್ವರ ಜ್ಯೋತಿರ್ಲಿಂಗ, ಸ್ಥಳೀಯ ದೇವಸ್ಥಾನ, ಭೇಟ್ ದ್ವಾರಿಕಾ ಭೇಟಿ. ನಾಸಿಕ್‌ಗೆ ಪ್ರವಾಸ.
ದಿನ 6: ತ್ರಯಂಬಕೇಶ್ವರದ ದರ್ಶನ ನಂತರ ಔರಂಗಾಬಾದ್‌ಗೆ ಬಸ್‌ನಲ್ಲಿ ಪ್ರವಾಸ ಗ್ರಿಷ್ಣೇಶ್ವರ ದೇವಸ್ಥಾನಕ್ಕೆ ಭೇಟಿ. ಪುಣೆಯಲ್ಲಿ ರಾತ್ರಿ ತಂಗುವುದು.
ದಿನ 7: ಪುಣೆಗೆ ಆಗಮಿಸಿ, ಭೀಮಾಶಂಕರ ಜ್ಯೋತಿರ್ಲಿಂಗದ ದರ್ಶನ. ಅದಾದ ಬಳಿಕ ಅಲ್ಲಿಂದ ಹಿಂದಿರುಗುವುದು.
ದಿನ 8: ಲಲಿತ್‌ಪುರ ಜಂಕ್ಷನ್, ವಿರಂಗಣ್ಣ ಲಕ್ಷ್ಮೀಬಾಯಿ ಇಳಿಯುವುದು.
ದಿನ 9: , ಕಾನ್ಪುರ, ಲಕ್ನೋ, ಹಾರ್ಡೋಯಿ, ಷಹಜಹಾನ್‌ಪುರ, ಬರೇಲಿ, ಮೊರಾದಾಬಾದ್, ಹರಿದ್ವಾರ, ಯೋಗ ನಗರಿ ಋಷಿಕೇಶಯಲ್ಲಿ ಇಳಿಯುವುದು.


Click it and Unblock the Notifications