ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ವರ್ಷಗಳಿಂದ ಜನರಿಗೆ ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಈ ಪೈಕಿ ಕೆಲವು ಧಾರ್ಮಿಕ ಸ್ಥಳಗಳಿಗೆ ಪ್ರವಾಸವಾದರೆ ಇನ್ನು ಕೆಲವು ಕೆಲವು ಪ್ರವಾಸಿ ತಾಣಗಳಿಗಾಗಿ ಇರುವ ಪ್ಯಾಕೇಜ್ ಆಗಿದೆ. ಇಂತಹ ಪ್ರವಾಸ ಪ್ಯಾಕೇಜ್‌ಗಳಲ್ಲಿ ಬೆಂಗಳೂರಿನಿಂದ ತಿರುಪತಿಗೆ ಹೋಗುವ ಪ್ರವಾಸ ಕೂಡಾ ಒಂದಾಗಿದೆ.
ಬೆಂಗಳೂರಿನಿಂದ ಈ ಪ್ರವಾಸ ಆರಂಭವಾಗಲಿದೆ. ಬೇರೆ ಬೇರೆ ಊರುಗಳಿಂದ ಪ್ರವಾಸ ಪ್ಯಾಕೇಜ್‌ಗಳಿದ್ದು, ಈ ಪೈಕಿ ಬೆಂಗಳೂರಿನಿಂದ ಕೂಡಾ ಕೆಲವೊಂದು ಪ್ರವಾಸ ಆರಂಭವಾಗುತ್ತದೆ. ಆ ಪ್ರವಾಸ ಪ್ಯಾಕೇಜ್ ಹೆಸರು ಬೆಂಗಳೂರು ತಿರುಪತಿ ಬಾಲಜಿ ದರ್ಶನ ಆಗಿದೆ. ಇದು ಐಎಸ್‌ಆರ್‌ಟಿಸಿಯ ಬಸ್ ಪ್ರವಾಸ ಪ್ಯಾಕೇಜ್ ಆಗಿದೆ. ಈ ಪ್ಯಾಕೇಜ್ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ಪ್ಯಾಕೇಜ್ ವಿವರ ತಿಳಿಯಿರಿ
ಪ್ಯಾಕೇಜ್ ಹೆಸರು: ಬೆಂಗಳೂರು ತಿರುಪತಿ ಬಾಲಜಿ ದರ್ಶನ
ಯಾವೆಲ್ಲ ಪ್ರದೇಶಕ್ಕೆ ಪ್ರವಾಸ?: ತಿರುಚನೂರು ಮತ್ತು ತಿರುಮಲ
ಪ್ರವಾಸ ಹೇಗೆ?: ಮಲ್ಟಿ ಎಕ್ಸ್‌ಲ್ ಎಸಿ ಬಸ್
ದಿನ: ಒಂದು ರಾತ್ರಿ ಎರಡು ದಿನ
ಸಮಯ, ಪ್ರದೇಶ: ಬೆಂಗಳೂರು ನಗರ, ರಾತ್ರಿ 9:30 ಕ್ಕೆ, ಫೆಬ್ರವರಿ 24
ದರ ಎಷ್ಟಿದೆ?: 1,930 ರೂಪಾಯಿ
ಪ್ಯಾಕೇಜ್‌ನಲ್ಲಿ ಏನಿದೆ?
* ಮಲ್ಟಿ ಆಕ್ಸಲ್ ಎಸಿ ಬಸ್‌ನಿಂದ ಪ್ರಯಾಣ.
* ಸ್ನಾನಕ್ಕಾಗಿ ಹೋಟೆಲ್‌ನಲ್ಲಿ ಸೌಲಭ್ಯವಿದೆ.
* ಎಪಿಎಸ್‌ಆರ್‌ಟಿಸಿ ನಾನ್ ಎಸಿ ಬಸ್ ಮೂಲಕ ತಿರುಪತಿಯಿಂದ ತಿರುಮಲಕ್ಕೆ ಪ್ರಯಾಣ
* ತಿರುಮಲ ಬಾಲಾಜಿ ಶೀಘ್ರ ದರ್ಶನ ಟಿಕೆಟ್
* ತಿರುಪತಿಯಲ್ಲಿ ಪ್ರವಾಸಿ ಮಾರ್ಗದರ್ಶಿಯ ಸೇವೆಗಳು
* ಪ್ರಯಾಣದ ಪ್ರಕಾರ ದೇವಾಲಯಗಳಿಗೆ ಭೇಟಿ ನೀಡಿ
* 02 x 500 ಮಿಲಿ ಪ್ಯಾಕ್ ಮಾಡಿದ ಕುಡಿಯುವ ನೀರು
* ಪ್ರವಾಸ ವಿಮೆ, ಜಿಎಸ್‌ಟಿ
ಪ್ಯಾಕೇಜ್‌ನಲ್ಲಿ ಏನೆಲ್ಲ ಸೇರುವುದಿಲ್ಲ?
* ವೆಚ್ಚವು ಎಲ್ಲಾ ಊಟಗಳನ್ನು ಹೊರತುಪಡಿಸಿದೆ.
* ದೂರವಾಣಿ, ಪಾನೀಯಗಳು, ಪೋರ್ಟರೇಜ್ ಮುಂತಾದ ಯಾವುದೇ ವೈಯಕ್ತಿಕ ವೆಚ್ಚಗಳು ಪ್ಯಾಕೇಜ್‌ನಲ್ಲಿ ಸೇರದು.
* ಪಟ್ಟಿಯಲ್ಲಿರದ ಯಾವುದೇ ಸೇವೆಗಳು
* ತಿರುಮಲದಲ್ಲಿ ಹೇರ್ ಶೇವ್/ಮುಂಡನ ಶುಲ್ಕಗಳು.
* ಸ್ಟಿಲ್/ವೀಡಿಯೊ ಕ್ಯಾಮರಾ ಪ್ರವೇಶ ಶುಲ್ಕಗಳು.
ಯಾವ ದಿನ ಎಲ್ಲಿ ಪ್ರವಾಸ?
- ದಿನ 1: ಬೆಂಗಳೂರಿನಿಂದ ರಾತ್ರಿ 9:30 ಗಂಟೆಗೆ ಪ್ರಯಾಣ ಆರಂಭವಾಗಲಿದೆ.
- ದಿನ 2: ಮುಂಜಾನೆ 3:30 ಗಂಟೆಗೆ ನೀವು ತಿರುಪತಿ ತಲುಪುವುದು. ಹೊಟೇಲ್‌ನಲ್ಲಿ ಫ್ರೆಶ್ ಅಪ್ ಆಗಿ ಬಳಿಕ ತಿರುಚಾನೂರ್ ದೇವಸ್ಥಾನಕ್ಕೆ ಭೇಟಿ ನೀಡುವುದು. ಅದಾದ ಬಳಿಕ ಅಲಮೇಲು ಮಂಗಾಪುರದ ಪದ್ಮಾವತಿ ದೇವಿ ದರ್ಶನ. 8 ಗಂಟೆ ಸುಮಾರಿಗೆ ತಿರುಪತಿಯಿಂದ ತಿರುಮಲಕ್ಕೆ ನಾನ್ ಎಸಿ ಬಸ್‌ನಲ್ಲಿ ಪ್ರಯಾಣ. ತಲೆ ಬೋಳಿಸಿ ಮುಡಿ ಅರ್ಪಣೆ ಮಾಡಲು ಬಿಡುವಿನ ಸಮಯ ನೀಡಲಾಗುತ್ತದೆ. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 01.30 ರವರೆಗೆ ವೆಂಕಟೇಶ್ವರನ ಶೀಘ್ರ ದರ್ಶನವನ್ನು ಮಾಡಿ. ನಂತರ ಲಡ್ಡು ಪ್ರಸಾದವನ್ನು ಸಂಗ್ರಹಿಸಿ ಮಧ್ಯಾಹ್ನ 02.00 ರ ಸುಮಾರಿಗೆ ತಿರುಪತಿಗೆ ಹಿಂತಿರುಗಿ. ತಿರುಪತಿಯಿಂದ ಮಧ್ಯಾಹ್ನ 03.30 ರ ಸುಮಾರಿಗೆ ಹಿಂತಿರುಗಿ ರಾತ್ರಿ 09.00 ರ ಸುಮಾರಿಗೆ ಬೆಂಗಳೂರು ನಗರಕ್ಕೆ ತಲುಪಲಿದ್ದೀರಿ. ಇಲ್ಲಿಗೆ ಪ್ರವಾಸ ಕೊನೆಯಾಗುತ್ತದೆ.


Click it and Unblock the Notifications