ಈ ರಜೆಯ ಸೀಸನ್‌ನಲ್ಲಿ ನಾವು ಪ್ರವಾಸಕ್ಕೆ ಹೋಗುವ ಪ್ಲ್ಯಾನ್ ಅನ್ನು ಮಾಡುತ್ತಿರುತ್ತೇವೆ. ಆದರೆ ಜೇಬು ಖಾಲಿಯಾಗಿದ್ದರೆ ಏನು ಮಾಡುವುದು? ಭಾರತೀಯ ರೈಲ್ವೆ ಕ್ಯಾಟೆರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಅದಕ್ಕಾಗಿ ಪ್ರಯಾಣಿಕರಿಗೆ ಉತ್ತಮ ಆಫರ್ ಒಂದನ್ನು ನೀಡಿದೆ. ನೀವು ರೈಲ್ವೆ ಟಿಕೆಟ್ ಅನ್ನು ಖರೀದಿ ಮಾಡಿ, ಪ್ರಯಾಣದ ಬಳಿಕ ನಿರ್ದಿಷ್ಟ ಅವಧಿಯ ಒಳಗೆ ಪಾವತಿಸಬಹುದಾಗಿದೆ.
ಕ್ಯಾಷ್‌ಇ ಜೊತೆಗೆ ಸಹಭಾಗಿತ್ವವನ್ನು ಮಾಡಿಕೊಂಡಿರುವ ಐಆರ್‌ಸಿಟಿಸಿ ಟ್ರಾವೆಲ್ ನೌ ಪೇ ಲೇಟರ್ (ಈಗ ಪ್ರಯಾಣ ಮಾಡಿ ಟಿಕೆಟ್ ಮೊತ್ತ ನಂತರ ಪಾವತಿಸಿ) ಎಂಬ ಆಫರ್ ಅನ್ನು ನೀಡಿದೆ. ಐಆರ್‌ಸಿಟಿಸಿಯಲ್ಲಿ ನಾವು ರೈಲ್ವೆ ಟಿಕೆಟ್ ಬುಕ್ ಮಾಡಿದಾಗ ಈ ಆಫರ್ ನಮಗೆ ಲಭ್ಯವಾಗುತ್ತದೆ. ಈ ಆಯ್ಕೆಯ ಮೂಲಕ ಪ್ರಯಾಣಿಕರು ಸುಲಭವಾಗಿ ಟಿಕೆಟ್ ಬುಕ್ ಮಾಡಿ, ಇಎಂಐ ಮೂಲಕ ಹಣ ಪಾವತಿಸಬಹುದು.

ನೀವು ಪ್ರಯಾಣಕ್ಕಾಗಿ ಟಿಕೆಟ್ ಬುಕ್ ಮಾಡಿದ ಬಳಿಕ ಮೂರರಿಂದ ಆರು ತಿಂಗಳ ಅವಧಿಯಲ್ಲಿ ಇಎಂಐ ಮೂಲಕ ಪಾವತಿ ಮಾಡಬಹುದಾಗಿದೆ. ಆದರೆ ಎಲ್ಲರಿಗೂ ಈ ಸೌಲಭ್ಯ ಲಭ್ಯವಾಗದು. ಪೇಟಿಎಂ ಬಳಕೆದಾರರಿಗೆ ಮಾತ್ರ ಈ ಆಫರ್ ಇರುತ್ತದೆ. ಐಆರ್‌ಸಿಟಿಸಿ ಪೋರ್ಟಲ್ ಮೂಲಕ ಪೇಟಿಎಂನಲ್ಲಿ ಪಾವತಿ ಮಾಡಿದರೆ, ಈ ಟ್ರಾವೆಲ್ ನೌ ಪೇ ಲೇಟರ್ ಆಫರ್ ಲಭ್ಯವಾಗುತ್ತದೆ.
ಪೇಟಿಎಂ ಪೋಸ್ಟ್‌ಪೇಡ್ ಸೇವೆ: ನೀವು ತಿಳಿದಿರಬೇಕಾದ ಮಾಹಿತಿ
ರೈಲ್ವೆ ಪ್ರಯಾಣಿಕರು ಪೇಟಿಎಂ ಪೋಸ್ಟ್‌ಪೇ ಮೂಲಕ ಬಡ್ಡಿದರವಿಲ್ಲದೆ 30 ದಿನಗಳ ಅವಧಿಗೆ ಸುಮಾರು 60,000 ರೂಪಾಯಿವರೆಗೆ ಸಾಲವನ್ನು ಪಡೆಯಬಹುದಾಗಿದೆ. ಇದು ನಗದು ಸಾಲವಲ್ಲ, ಬದಲಾಗಿ ರೈಲಿನ ಟಿಕೆಟ್ ಪಡೆಯಲು ನೀಡಲಾಗುವ ಸಾಲವಾಗಿದೆ. ಈ ಪ್ರಕ್ರಿಯೆಯಲ್ಲಿ ಜನರು ಎಲ್ಲ ಬಿಲ್ ಅನ್ನು ತಿಂಗಳ ಕೊನೆಯಲ್ಲಿ ನಡೆಯುವ ಬಿಲ್ಲಿಂಗ್ ಪ್ರಕ್ರಿಯೆ ವೇಳೆ ಪಾವತಿ ಮಾಡಬಹುದಾಗಿದೆ.
ಪೇಟಿಎಂ ಪೋಸ್ಟ್‌ಪೇಯನ್ನು ಬಳಸುವುದು ಹೇಗೆ?
ಹಂತ 1: ಮೊದಲು ನೀವು ಐಆರ್‌ಸಿಟಿಸಿ ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು ಅಥವಾ ನಿಮ್ಮ ಮೊಬೈಲ್‌ನಲ್ಲೇ ಐಆರ್‌ಸಿಟಿಸಿ ಆಪ್‌ನಲ್ಲಿ ಲಾಗಿನ್ ಆಗಬೇಕು.
ಹಂತ 2: ಅದಾದ ಬಳಿಕ ನಿಮ್ಮ ಪ್ರಯಾಣದ ಮಾಹಿತಿಗಳಾದ ಸ್ಥಳ, ದಿನಾಂಕ ಮೊದಲಾದ ವಿವರಗಳನ್ನು ಭರ್ತಿ ಮಾಡಿ, ಟಿಕೆಟ್ ಅನ್ನು ಆಯ್ಕೆ ಮಾಡಿಕೊಳ್ಳಿ.
ಹಂತ 3: ಬಳಿಕ ಪಾವತಿ ಸೆಕ್ಷನ್‌ಗೆ ಹೋಗಿ, 'pay later' ಮೇಲೆ ಕ್ಲಿಕ್ ಮಾಡಿ
ಹಂತ 4: ಪೇಟಿಎಂ ಲಾಗಿನ್ ಆಗಿ, ಪೇಟಿಎಂ ಪೋಸ್ಟ್‌ಪೇಡ್ ಅನ್ನು ಆಯ್ಕೆ ಮಾಡಿ
ಹಂತ 5: ನಿಮ್ಮ ಮೊಬೈಲ್‌ಗೆ ಒಟಿಪಿ ಬರಲಿದೆ, ಅದನ್ನು ಹಾಕಿದರೆ ರೈಲ್ವೆ ಪೋಸ್ಟ್‌ಪೇಡ್ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಪೂರ್ಣವಾಗಲಿದೆ.


Click it and Unblock the Notifications