ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡುತ್ತಿದೆ. ಅಮೆಜಾನ್ ಅಂಡಮಾನ್, ಬಾಲಿ ಪ್ರವಾಸ ಪ್ಯಾಕೇಜ್ ಅನ್ನು ಇತ್ತೀಚೆಗೆ ಐಆರ್‌ಸಿಟಿಸಿ ಪರಿಚಯಿಸಿದ್ದು, ಈಗ ಗೋವಾ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಅದು ಕೂಡಾ ವಿಮಾನಯಾನವನ್ನು ಒಳಗೊಂಡ ಪ್ರವಾಸ ಪ್ಯಾಕೇಜ್ ಇದಾಗಿದೆ.
ಗೋವಾ ಎಂದಾಗ ಸುಂದರವಾದ ಬೀಚ್‌ಗಳನ್ನು ಹೊಂದಿರುವ ಪ್ರದೇಶವಾಗಿ ನಮ್ಮ ಕಣ್ಣ ಮುಂದೆ ಬರುತ್ತದೆ. ಗೋವಾ ಬೀಚ್‌ಗಳಿಂದಲೇ ಸುತ್ತುವರಿದಿರುವ ರಾಜ್ಯವಾಗಿದೆ. ಕೊಲ್ವಾಕಾಂಡೋಲಿಮ್, ಮಿರಾಮರ್, ಮೊಬೋರ್, ಮಜೋರ್ಡಾ, ಅಂಜುನಾ ಮತ್ತು ವರ್ಕಾ ಸೇರಿದಂತೆ ಹಲವಾರು ಪ್ರಸಿದ್ಧ ಬೀಚ್‌ಗಳು ಗೋವಾದಲ್ಲಿದೆ. ಹಾಗೆಯೇ ಕ್ರೂಸ್‌ಗಳಿದೆ. ಹಾಗಿರುವಾಗ ಈ ಪ್ಯಾಕೇಜ್‌ನಲ್ಲಿ ಏನೆಲ್ಲ ಇದೆ, ಇಲ್ಲ ಎಂದು ತಿಳಿಯೋಣ ಮುಂದೆ ಓದಿ...

ಗೋವಾ ಡಿಲೈಟ್ ಪ್ರವಾಸ ಪ್ಯಾಕೇಜ್ ವಿವರ
ಗೋವಾ ಡಿಲೈಟ್ ಪ್ರವಾಸ ಪ್ಯಾಕೇಜ್ ಒಟ್ಟು ನಾಲ್ಕು ರಾತ್ರಿಗಳು, ಐದು ದಿನಗಳ ಪ್ರವಾಸ ಪ್ಯಾಕೇಜ್ ಆಗಿದೆ. ವಿಶಾಖಪಟ್ಟಣದಿಂದ ಈ ಪ್ರವಾಸ ಪ್ಯಾಕೇಜ್ ಆರಂಭವಾಗುತ್ತದೆ. ವಿಮಾನಯಾನವು ಈ ಪ್ರವಾಸ ಪ್ಯಾಕೇಜ್‌ನಲ್ಲಿ ಒಳಗೊಳ್ಳುತ್ತದೆ. ಹಾಗೆಯೇ ಹೊಟೇಲ್ ವ್ಯವಸ್ಥೆ ಊಟದ ವ್ಯವಸ್ಥೆಯು ಕೂಡಾ ಒಳಗೊಳ್ಳುತ್ತದೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬಸ್ ವ್ಯವಸ್ಥೆಯು ಕೂಡಾ ಇರುತ್ತದೆ. ವಿಮೆ ಕೂಡ ಈ ಪ್ಯಾಕೇಜ್‌ನಲ್ಲಿ ಒಳಗೊಳ್ಳುತ್ತದೆ.
ಒಟ್ಟು ನಾಲ್ಕು ರಾತ್ರಿಗಳಿಗೆ ಎಸಿ ಹೊಟೇಲ್ ವ್ಯವಸ್ಥೆ ಇರುತ್ತದೆ. ಗೋವಾದಲ್ಲಿ ನಾಲ್ಕು ಹೊಟೇಲ್‌ಗಳಲ್ಲಿ ಈ ವ್ಯವಸ್ಥೆ ಇರುತ್ತದೆ. ಒಟ್ಟಾಗಿ 4 ಉಪಾಹಾರ, 4 ಭೋಜನ ಈ ಪ್ಯಾಕೇಜ್‌ನಲ್ಲಿ ಸೇರುತ್ತದೆ. ಮಧ್ಯಾಹ್ನದ ಭೋಜನ ಪ್ಯಾಕೇಜ್‌ನಲ್ಲಿ ಸೇರುವುದಿಲ್ಲ. ಮಾಂಡೋವಿ ರಿವರ್ ಕ್ರೂಸ್ ಟಿಕೆಟ್, ಪ್ರಯಾಣ ವಿಮೆ, ಪ್ರವಾಸದ ಸಂದರ್ಭದಲ್ಲಿ ಐಆರ್‌ಸಿಟಿಸಿ ಬೆಂಗಾವಲು ಸೇವೆಗಳು ಇರುತ್ತದೆ. ಆದರೆ ಉಳಿದೆಡೆ ಎಂಟ್ರಿ ಫೀಸ್ ಅಥವಾ ಟಿಕೆಟ್ ಈ ಪ್ಯಾಕೇಜ್‌ನಲ್ಲಿ ಸೇರುವುದಿಲ್ಲ. ವಿಮಾನದಲ್ಲಿ ನಿಡಲಾಗುವ ಆಹಾರ ಪ್ಯಾಕೇಜ್‌ನಲ್ಲಿ ಇರುವುದಿಲ್ಲ.
ಪ್ಯಾಕೇಜ್‌ನ ಹೆಸರು Goa Delight Ex Vishakhapatnam ಆಗಿದ್ದು, ವಿಶಾಖಪಟ್ಟಣ ವಿಮಾನನಿಲ್ದಾಣದಿಂದ ಪ್ರಯಾಣ ಆರಂಭವಾಗುತ್ತದೆ. ಅಕ್ಟೋಬರ್ 20ರಿಂದ ಪ್ರಯಾಣ ಆರಂಭವಾಗುತ್ತದೆ. 24ರಂದು ಗೋವಾದಿಂದ ವಾಪಾಸ್ ಬರಲಾಗುತ್ತದೆ. ಲಾಂಡ್ರಿ ವೆಚ್ಚ, ವೈನ್, ಮಿನರಲ್ ನೀರು, ಇತರೆ ಆಹಾರ ಪಾನೀಯಗಳು ಈ ಪ್ಯಾಕೇಜ್‌ನಲ್ಲಿ ಸೇರ್ಪಡೆಯಾಗುವುದಿಲ್ಲ. ಉಪಾಹಾರ, ರಾತ್ರಿ ಭೋಜನ ಮಾತ್ರ ಇರುತ್ತದೆ.
ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 39010 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 28750 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 27640 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಬೆಡ್ ಸಹಿತವಾಗಿ ಪ್ಯಾಕೇಜ್ ದರ 25660 ರೂಪಾಯಿ ಆಗಿದೆ. ಬೆಡ್ ಇಲ್ಲದೆ 5-11 ವರ್ಷದ ಮಗುವಿಗೆ ಪ್ಯಾಕೇಜ್ ದರ 25165 ರೂಪಾಯಿ ಆಗಿದೆ.
ಯಾವೆಲ್ಲ ಪ್ರದೇಶಕ್ಕೆ ಪ್ರವಾಸ ತಿಳಿಯಿರಿ
ದಿನ 1: ವಿಶಾಖಪಟ್ಟಣದಿಂದ ಗೋವಾಕ್ಕೆ ಪ್ರವಾಸ. ಕಲಂಗುಟ್‌ನ ಪಾರೆಡೈಸ್ ವಿಲೇಜ್ ಬೀಚ್ ರೆಸಾರ್ಟ್‌ನಲ್ಲಿ ಚೆಕ್‌ಇನ್ ಆಗವುದು. ರಾತ್ರಿ ಊಟದ ವ್ಯವಸ್ಥೆ.
ದಿನ 2: ಉಪಾಹಾರ ಆದ ಬಳಿಕ ದಕ್ಷಿಣ ಗೋವಾ ಪ್ರವಾಸ ಆರಂಭ. ಫೋರ್ಟ್ ಅಗುಡಾ, ಕ್ಯಾಂಡೋಲಿಮ್ ಬೀಚ್, ಬಾಗಾ ಬೀಚ್, ಅಂಜುನಾ ಬೀಚ್, ಭಾಗ್ತೋರ್ ಬೀಚ್ ಮತ್ತು ಚಾಪ್ರಾ ಕೋಟೆ
ದಿನ 3: ಹೋಟೆಲ್‌ನಲ್ಲಿ ಉಪಾಹಾರ. ಗೋವಾದಲ್ಲಿ ಶಾಪಿಂಗ್‌ಗಾಗಿ ದಿನ ಫ್ರೀ ಇರುತ್ತದೆ.
ದಿನ 4: ಉಪಾಹಾರದ ನಂತರ ದಕ್ಷಿಣ ಗೋವಾ ಪ್ರವಾಸ. ಓಲ್ಡ್ ಗೋವಾ ಚರ್ಚ್, ವ್ಯಾಕ್ಸ್ ವರ್ಲ್ಡ್ ಮ್ಯೂಸಿಯಂ, ಶ್ರೀ ಮಂಗೇಶಿ ದೇವಸ್ಥಾನ, ಮಿರಾಮಾರ್ ಬೀಚ್, ಮಾಂಡೋವಿ ರಿವರ್
ದಿನ 5: ಉಪಾಹಾರದ ಬಳಿಕ ಹೋಟೆಲ್‌ನಿಂದ ಚೆಕ್‌ಔಟ್. 1 ಗಂಟೆಗೆ ವಿಮಾನ ನಿಲ್ದಾಣ, ಅಲ್ಲಿಂದ 3:40ಕ್ಕೆ ವಿಮಾನ ಹತ್ತಿದರೆ, 5:35ಕ್ಕೆ ವಿಶಾಖಪಟ್ಟಣಕ್ಕೆ ವಾಪಾಸ್.


Click it and Unblock the Notifications