ನೀವು ಕಡಿಮೆ ದರದಲ್ಲಿ, ಮೋಜಿನಿಂದ ತುಂಬಿದ ಪ್ರಯಾಣದ ಅನುಭವವನ್ನು ಪಡೆಯಲು ಬಯಸುತ್ತಿದ್ದೀರಾ?. ಹಾಗಿದ್ದರೆ ನಿಮಗೆ ಉತ್ತಮ ಆಯ್ಕೆಯನ್ನು ಭಾರತೀಯ ರೈಲ್ವೆ ನೀಡುತ್ತದೆ. ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಹೊಂದಿದೆ.
ಐಆರ್‌ಸಿಟಿಸಿಯ ಅದ್ಭುತವಾದ ಪ್ರವಾಸ ಪ್ಯಾಕೇಜ್‌ಗಳಲ್ಲಿ ಒಂದಾದ ಹೈದಾರಾಬಾದ್ ಪ್ರವಾಸ ಪ್ಯಾಕೇಜ್ ಅನ್ನು ನಾವಿಲ್ಲಿ ವಿವರಿಸಿದ್ದೇವೆ. ಈ ಪ್ಯಾಕೇಜ್‌ನ ಪೂರ್ಣ ಹೆಸರು "ಸ್ಪ್ಲೆಂಡಿಡ್ ಹೈದರಾಬಾದ್ ವಿತ್ ರಾಮೋಜಿ ಎಕ್ಸ್-ಮುಂಬೈ" ಪ್ರವಾಸ ಪ್ಯಾಕೇಜ್ ಆಗಿದೆ. ಇದರಲ್ಲಿ ನಾವು ಹೈದಾರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯನ್ನು ಸುತ್ತಾಡಬಹುದು. ಅದು ಕೂಡಾ ಅತೀ ಕಡಿಮೆ ದರ ಪ್ಯಾಕೇಜ್ ಇದಾಗಿದೆ. ಪ್ರವಾಸ ಪ್ಯಾಕೇಜ್ ಬಗ್ಗೆ ಇಲ್ಲಿದೆ ವಿವರ....

ಪ್ರವಾಸ ಪ್ಯಾಕೇಜ್ ವಿವರ
ಈ ಅದ್ಭುತ ಪ್ರಯಾಣವು ಭಾರತದ ಆರ್ಥಿಕ ರಾಜಧಾನಿಯಾದ ಮುಂಬೈನಲ್ಲಿ ಪ್ರಾರಂಭವಾಗುತ್ತದೆ. ಪ್ರತಿ ಗುರುವಾರ, ನೀವು ಮನರಂಜನೆಯಿಂದ ತುಂಬಿದ ಪ್ರವಾಸವನ್ನು ಕೈಗೊಳ್ಳಬಹುದು. ಈ 4 ರಾತ್ರಿ, 5 ದಿನಗಳ ಪ್ಯಾಕೇಜ್ ರಾಮೋಜಿ ಫಿಲ್ಮ್ ಸಿಟಿ, ಗೋಲ್ಕೊಂಡ ಫೋರ್ಟ್ ಮತ್ತು ಐತಿಹಾಸಿಕ ಚಾರ್ಮಿನಾರ್‌ನಂತಹ ಸಾಂಪ್ರದಾಯಿಕ ಸ್ಥಳಗಳಿಗೆ ಭೇಟಿ ನೀಡಲು ಅವಕಾಶವನ್ನು ನೀಡುತ್ತದೆ.
ಎಷ್ಟಿದೆ ವೆಚ್ಚ ನೋಡಿ
ಈಗ ನಾವು ವೆಚ್ಚದ ಬಗ್ಗೆ ಮಾತನಾಡುವುದಾದರೆ, ಈ ಪ್ರವಾಸದ ಪ್ಯಾಕೇಜ್‌ನ ಸುಂಕವು ನೀವು ಆಯ್ಕೆ ಮಾಡುವ ವರ್ಗವನ್ನು ಅವಲಂಬಿಸಿ ಬದಲಾಗುತ್ತದೆ. ಸ್ಲೀಪರ್ (ಸ್ಟ್ಯಾಂಡರ್ಡ್ ಕ್ಲಾಸ್) ಆಯ್ಕೆಗೆ ಪ್ರತಿ ವ್ಯಕ್ತಿಗೆ ಕೇವಲ 13,900 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ನೀವು ಥರ್ಡ್ ಎಸಿ (ಕಂಫರ್ಟ್ ಕ್ಲಾಸ್) ನಲ್ಲಿ ಹೆಚ್ಚು ಆರಾಮದಾಯಕ ಪ್ರಯಾಣವನ್ನು ಬಯಸಿದರೆ, ಬೆಲೆಯು ಪ್ರತಿ ವ್ಯಕ್ತಿಗೆ 17,000 ರೂಪಾಯಿಯಿಂದ ಪ್ರಾರಂಭವಾಗುತ್ತದೆ.
ನಿಮ್ಮ ಟಿಕೆಟ್ ಅನ್ನು ನೀವು ಕಾಯ್ದಿರಿಸುವುದು ಅತೀ ಸುಲಭವಾಗಿದೆ. irctctourism.com ನಲ್ಲಿ IRCTC ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಪ್ರವಾಸದ ಪ್ಯಾಕೇಜ್ ಅನ್ನು ನೀವು ಖರೀದಿ ಮಾಡಬಹುದು. ಹೆಚ್ಚುವರಿಯಾಗಿ, ಐಆರ್‌ಸಿಟಿಸಿಯ ಟೂರಿಸ್ಟ್ ಫೆಸಿಲಿಟೇಶನ್ ಸೆಂಟರ್‌ಗಳು, ವಲಯ ಕಚೇರಿಗಳು ಮತ್ತು ಪ್ರಾದೇಶಿಕ ಕಚೇರಿಗಳ ಮೂಲಕ ಬುಕಿಂಗ್ ಮಾಡಬಹುದು. ಐಆರ್‌ಸಿಟಿಸಿಯ ಅದ್ಭುತ ಪ್ರವಾಸ ಪ್ಯಾಕೇಜ್‌ನೊಂದಿಗೆ ಹೈದರಾಬಾದ್ ಮತ್ತು ರಾಮೋಜಿ ಫಿಲ್ಮ್ ಸಿಟಿಯ ಪ್ರವಾಸ ಮಾಡಬಹುದು.
ಪ್ಯಾಕೇಜ್‌ನಲ್ಲಿ ಏನೆಲ್ಲ ಸೇರ್ಪಡೆ
1. ರೈಲು ಟಿಕೆಟ್‌ಗಳು (ಕಂಫರ್ಟ್ - 3AC & ಸ್ಟ್ಯಾಂಡರ್ಡ್ - SL).
2. ವಸತಿ: ಹೈದರಾಬಾದ್/ಸಿಕಂದರಾಬಾದ್‌ನಲ್ಲಿ 2 ರಾತ್ರಿಗಳು ಹೋಟೆಲ್‌ನಲ್ಲಿ ತಂಗುವ ವ್ಯವಸ್ಥೆ
3. ಊಟದ ವ್ಯವಸ್ಥೆ (ಬಹುತೇಕ ದಿನ ರಾತ್ರಿ ಊಟ ಮಾತ್ರ ಪ್ಯಾಕೇಜ್‌ನಲ್ಲಿ ಸೇರುತ್ತದೆ)
4. ಎಸಿ ವಾಹನದಲ್ಲಿ ಪ್ರಯಾಣ
5. ಪ್ರಯಾಣ ವಿಮೆ.
6. ರಾಮೋಜಿ ಫಿಲ್ಮ್ ಸಿಟಿಯ ಪ್ರವೇಶ ಶುಲ್ಕ
7.ಜಿಎಸ್‌ಟಿ
ಪ್ಯಾಕೇಜ್‌ನಲ್ಲಿ ಏನೆಲ್ಲ ಸೇರುವುದಿಲ್ಲ?
ಯಾವುದೇ ಪ್ರವೇಶ ಟಿಕೆಟ್‌ಗಳು, ಮಧ್ಯಾಹ್ನದ ಊಟ, ಆನ್‌ಬೋರ್ಡ್ ಊಟ, ರೈಲು ದರ ಹೆಚ್ಚಳ, ಸೇವಾ ಶುಲ್ಕ ಹೆಚ್ಚಳ, ಮೆನುವಿನಲ್ಲಿದ್ದ ಆಹಾರಕ್ಕಿಂತ ಬೇರೆ ಆಹಾರ, ಚಾಲಕರು, ಮಾರ್ಗದರ್ಶಿಗಳು, ಪ್ರತಿನಿಧಿಗಳು, ಇಂಧನ ಸರ್ಚಾರ್ಜ್ ಇತ್ಯಾದಿಗಳಿಗೆ ಖರ್ಚು ಪ್ಯಾಕೇಜ್‌ನಲ್ಲಿ ಸೇರುವುದಿಲ್ಲ. ಲಾಂಡ್ರಿ ವೆಚ್ಚಗಳು, ವೈನ್‌ಗಳು, ಮಿನರಲ್ ವಾಟರ್, ಆಹಾರ ಮತ್ತು ಪಾನೀಯಗಳಂತಹ ವೈಯಕ್ತಿಕ ವೆಚ್ಚಗಳು ಇದರಲ್ಲಿ ಸೇರ್ಪಡೆಯಾಗುವುದಿಲ್ಲ.


Click it and Unblock the Notifications