ಪ್ರವಾಸದ ವಿಚಾರಕ್ಕೆ ಬಂದಾಗ ಎಂದಿಗೂ ಕೂಡಾ ಬೇಸಿಗೆ ಸೀಸನ್ ಉತ್ತಮ. ಈ ಸಂದರ್ಭದಲ್ಲೇ ರಜೆ ಇರಲಿದೆ ಅಲ್ಲವೆ?. ಪ್ರವಾಸ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಕೂಡಾ ನಮ್ಮ ಅತೀ ನೆಚ್ಚಿನ ಸ್ಥಳಗಳನ್ನು ಆಯ್ಕೆ ಮಾಡುತ್ತೇವೆ. ಹಾಗೆಯೇ ಭಾರತದ ಶ್ರೀಮಂತವಾದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವುದು ಹಲವಾರು ಮಂದಿಯ ಆಸೆಯಾಗಿದೆ.
ತಾಜ್‌ಮಹಲ್, ಮೈಸೂರು ಪ್ಯಾಲೇಸ್ ಮೊದಲಾದವುಗಳು ನಮ್ಮ ಪ್ರವಾಸ ಪಟ್ಟಿಯನಲ್ಲಿ ಇರುವಂತೆಯೇ ಕೆಲವೊಂದು ಪವಿತ್ರ ಸ್ಥಳಗಳಿಗೂ ಭೇಟಿ ನೀಡುವುದು ಕೂಡಾ ಆದ್ಯತೆಯಾಗಿರುತ್ತದೆ. ಅಂತಹ ಸ್ಥಳಗಳಿಗೆ ನಾವು ಭೇಟಿ ನೀಡುವ ಆಯ್ಕೆಯನ್ನು ನಮಗೆ ಭಾರತೀಯ ರೈಲ್ವೆಯು ನೀಡುತ್ತದೆ. ಈ ಬೇಸಿಗೆ ರಜೆಯ ಸಂದರ್ಭದಲ್ಲಿ ನಮಗೆ ಪ್ರಯಾಣಕ್ಕೆ ವಿಶೇಷ ರೈಲನ್ನು ಕೂಡಾ ಆರಂಭ ಮಾಡಿದೆ.

ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಸ್ (ಎಲ್‌ಟಿಟಿ) ಮತ್ತು ಬಿಹಾರದ ಸಮಸ್ತಿಪುರ್ ನಡುವೆ ಬೇಸಿಗೆ ವಿಶೇಷ ರೈಲುಗಳನ್ನು ಪ್ರಾರಂಭಿಸುವುದಾಗಿ ಸೆಂಟ್ರಲ್ ರೈಲ್ವೆ ಗುರುವಾರ ತಿಳಿಸಿದೆ. ರೈಲ್ವೆ ವೇಳಾಪಟ್ಟಿಯ ಪ್ರಕಾರ, ರೈಲು ವಾರದಲ್ಲಿ 6 ದಿನಗಳು ಮಾತ್ರ ಚಲಿಸುತ್ತದೆ. ಪ್ರತಿ ದಿನ 6 ಟ್ರಿಪ್‌ಗಳು ಇರಲಿದೆ.
ಸಮ್ಮರ್ ವಿಶೇಷ ರೈಲು: ಸಮಯ, ದಿನಾಂಕ ಚೆಕ್ ಮಾಡಿ
ರೈಲು ಸಂಖ್ಯೆ 01043 ಗುರುವಾರದಂದು (ಮೇ 4, 11, 18, 25, ಮತ್ತು ಜೂನ್ 1 ಮತ್ತು 8) ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ ಪ್ರಾರಂಭವಾಗಲಿದೆ. ರಾತ್ರಿ 9:15 ಕ್ಕೆ ಸಮಸ್ತಿಪುರವನ್ನು ತಲುಪುವ ಮೊದಲು ಇಟಾರ್ಸಿಯಲ್ಲಿ ಮಧ್ಯಾಹ್ನ 12:15 ಕ್ಕೆ ನಿಲ್ದಾಣ ಇರಲಿದೆ.
ರೈಲು ಸಂಖ್ಯೆ 01044 ಸಮಸ್ತಿಪುರದಿಂದ ಶುಕ್ರವಾರದಂದು (ಮೇ 5, 12, 19, 26, ಮತ್ತು ಜೂನ್ 2 ಮತ್ತು 9) ಪ್ರಾರಂಭವಾಗಲಿದೆ. ರಾತ್ರಿ 7:55 ಕ್ಕೆ ಇಟಾರ್ಸಿಯಲ್ಲಿ ನಿಲುಗಡೆ ಇರಲಿದೆ. 07:40 ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಸ್‌ಗೆ ತಲುಪಲಿದೆ.
ವಿಶೇಷ ರೈಲು: ಸೌಲಭ್ಯಗಳನ್ನು ಪರಿಶೀಲನೆ ಮಾಡಿ
ಲೋಕಮಾನ್ಯ ತಿಲಕ್ ಟರ್ಮಿನಸ್ ಮತ್ತು ಸಮಸ್ತಿಪುರ ನಡುವಿನ ಹೊಸ ಬೇಸಿಗೆ ವಿಶೇಷ ರೈಲು 22 ಆಧುನಿಕ ಲಿಂಕ್ ಹಾಫ್‌ಮನ್ ಬುಷ್ (ಎಲ್‌ಹೆಚ್‌ಬಿ) ಕೋಚ್‌ಗಳನ್ನು ಹೊಂದಿರುತ್ತದೆ. ಪ್ರಯಾಣದ ಸಮಯದಲ್ಲಿ ಸೌಕರ್ಯ ಮತ್ತು ಸುರಕ್ಷತೆಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ಹೇಳಿದೆ.
ಒಟ್ಟು 22 ಕೋಚ್‌ಗಳಲ್ಲಿ 6 ಹವಾನಿಯಂತ್ರಿತ ಮೂರನೇ ದರ್ಜೆಯ ಕೋಚ್‌ಗಳು, 6 ಸ್ಲೀಪರ್ ಕ್ಲಾಸ್ ಕೋಚ್‌ಗಳು ಮತ್ತು 8 ಸಾಮಾನ್ಯ ದರ್ಜೆಯ ಕೋಚ್‌ಗಳು ಇರಲಿದೆ. ಇದರ ಜೊತೆಗೆ, ರೈಲು 1 ಎಸ್‌ಎಲ್‌ಆರ್‌ಡಿ (ಸೀಟಿಂಗ್ ಕಮ್ ಲಗೇಜ್ ರೇಕ್) ಕೋಚ್ ಮತ್ತು 1 ಜನರೇಟರ್ ಕಾರ್ ಅನ್ನು ಹೊಂದಿರುತ್ತದೆ. ಪ್ರಯಾಣದ ಉದ್ದಕ್ಕೂ ನಿರಂತರ ವಿದ್ಯುತ್ ಪೂರೈಕೆ ಇರಲಿದೆ.
ವಿಶೇಷ ರೈಲು: ಯಾವ ಸ್ಥಳದಲ್ಲಿರಲಿದೆ?
ಈ ವಿಶೇಷ ರೈಲು ಕಲ್ಯಾಣ ಮತ್ತು ಇಗಾತ್‌ಪುರಿಯಲ್ಲಿ ಸಂಚಾರ ಮಾಡಿ ಬಳಿಕ ನಾಸಿಕ್ ರೋಡ್‌ಗೆ ತಲುಪಲಿದೆ. ಮಧ್ಯ ಪ್ರದೇಶದಲ್ಲಿ ರೈಲು ಬೋಸವಲ್, ಕಾಂಡ್ವಾ, ಇತರ್ಸಿ, ಪಿಪಾರಿಯಾ, ಜಬಲ್‌ಪುರ, ಕಟ್ನಿಯಲ್ಲಿ ಸಾಗಲಿದೆ. ಇದನ್ನು ಹೊರತುಪಡಿಸಿ ರೈಲು ಮೈಹಾರ್, ಸತ್ನಾ, ಮನಿಕ್‌ಪುರ, ಪ್ರಯಾಗ್‌ರಾಜ್ ಚೀವ್ಕಿ, ದೀನದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸರ್ ಮತ್ತು ಅರ್ರಾದಲ್ಲಿಯು ನಿಲ್ದಾಣ ಇರಲಿದೆ.
ಇತರೆ ವಿಶೇಷ ರೈಲುಗಳು
ಇದಕ್ಕೂ ಮೊದಲು, ಭಾರತೀಯ ರೈಲ್ವೇಯು ಈ ಬೇಸಿಗೆ ರಜೆಯ ಸೀಸನ್‌ನಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಹಲವಾರು ಬೇಸಿಗೆ ವಿಶೇಷ ರೈಲುಗಳನ್ನು ಪ್ರಾರಂಭಿಸಿದೆ. ರೈಲ್ವೆ ನೌಕರರಿಗೆ ಮತ್ತು ಸಾರ್ವಜನಕರಿಗೆ ಯಾವುದೇ ತೊಂದರೆ ಉಂಟಾಗಬಾರದು ಎಂಬ ನಿಟ್ಟಿನಲ್ಲಿ ಈ ನಿರ್ಧಾರವನ್ನು ಕೈಗೊಂಡಿದೆ. ಗೋರಖ್‌ಪುರದಿಂದ ಲೋಕಮಾನ್ಯ ತಿಲಕ್ (05018) ರೈಲು, ಲೋಕಮಾನ್ಯ ತಿಲಕ್‌ನಿಂದ ಪ್ರಯಾಗ್‌ರಾಜ್ ವಿಶೇಷ (02129) ರೈಲುಗಳು ಇತರೆ ವಿಶೇಷ ರೈಲುಗಳು ಆಗಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications