ದೀಪಾವಳಿ ಎಂದರೆ ಮನೆಮಂದಿ ಒಟ್ಟಾಗಿ ಸೇರಿ ಸಂಭ್ರಮಿಸುವ ಹಬ್ಬ , ಶಿಕ್ಷಣ ,ಉದ್ಯೋಗ ಹೀಗೆ ನಾನಾ ಕಾರಣಗಳಿಗೆ ಊರು ಬಿಟ್ಟು ಪರವೂರು ತೆರಳಿವರು ತಮ್ಮೂರಿಗೆ ಈ ಹಬ್ಬ ಆಚರಿಸಲೆಂದೇ ಹಿಂತಿರುಗುತ್ತಾರೆ. ದೀಪಾವಳಿ ಹಬ್ಬಕ್ಕೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು ಇದಕ್ಕಾಗಿ ಭಾರತೀಯ ರೈಲ್ವೇ ಟಿಕೆಟ್ ಬುಕಿಂಗ್ ತೆರೆದಿದೆ. ಹೀಗಾಗಿ ಸಾವಿರಾರು ಮಂದಿ ಹಬ್ಬದ ಪ್ರಯಾಣಕ್ಕಾಗಿ ತಮ್ಮ ರೈಲು ಟಿಕೆಟ್ ಕಾಯ್ದಿರಿಸುವ ನಿರೀಕ್ಷೆಯಿದೆ.
ಇದರಲ್ಲೂ ಮುಖ್ಯವಾಗಿ ಪ್ರಯಾಣಿಕರು ತಮ್ಮ ರೈಲು ಟಿಕೆಟ್‌ಗಳನ್ನು ಇಂಡಿಯನ್ ರೈಲ್ವೆ ಕ್ಯಾಟೆರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಪೋರ್ಟಲ್‌ನಲ್ಲಿ ಮತ್ತು ರೈಲ್ವೇ ಕೌಂಟರ್‌ಗಳಲ್ಲಿ ಬುಕ್ ಮಾಡಲು ಪ್ರಾರಂಭಿಸಬಹುದಾಗಿದೆ. ಪ್ರತೀ ವರ್ಷವೂ ದೀಪಾವಳಿ ಹಬ್ಬಕ್ಕೆ 4 ತಿಂಗಳು ಮುಂಚೆಯೇ ಟಿಕೆಟ್ ಬುಕಿಂಗ್ ತೆರೆಯಲಾಗುತ್ತದೆ.

ಈ ವರ್ಷದ ದೀಪಾವಳಿ ಹಬ್ಬವನ್ನು ನವೆಂಬರ್ 12ರಂದು ಭಾನುವಾರ ಆಚರಿಸಲಾಗುತ್ತದೆ ಇದಕ್ಕಾಗಿ ರೈಲು ಟಿಕೆಟ್ ಬುಕ್ಕಿಂಗ್ ಅನ್ನು ಸಾಮಾನ್ಯವಾಗಿ ಎಲ್ಲಾ ರೈಲುಗಳಿಗೆ 120 ದಿನಗಳ ಮುಂಚಿತವಾಗಿ ಮಾಡಲು ಅವಕಾಶ ನೀಡಲಾಗುತ್ತದೆ. ಜುಲೈ 12 ರಿಂದ ದೀಪಾವಳಿ ರೈಲು ಟಿಕೆಟ್ ಬುಕಿಂಗ್ ಪ್ರಾರಂಭವಾಗಿದ್ದು ಪ್ರಯಾಣಿಕರು ತಮ್ಮ ಟಿಕೆಟ್ ಕಾಯ್ದಿರಿಸಲು ರೈಲು ಟಿಕೆಟ್ ಕೌಂಟರ್‌ಗಳಲ್ಲಿ ನೇರವಾಗಿ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್ ಐಆರ್‌ಸಿಟಿಸಿ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಬಹುದು ಎಂದು ರೈಲ್ವೆ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜುಲೈ 12ರ ಬುಧವಾರದಂದು ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರು ನವೆಂಬರ್ 9 ರಂದು ಪ್ರಯಾಣಿಸಬಹುದಾಗಿದೆ. ನವೆಂಬರ್ 10 ರಂದು ಪ್ರಯಾಣಿಸಲು ಪ್ಲ್ಯಾನ್ ಮಾಡಿಕೊಂಡವರು ಜುಲೈ 12 ರಂದು ಬುಕಿಂಗ್ ಸ್ಲಾಟ್ ತೆರೆದಿದೆ. ಅದೇ ರೀತಿಯಲ್ಲಿ, ನವೆಂಬರ್ 11 ರ ಬುಕಿಂಗ್ ಅನ್ನು ಜು.13 ರಿಂದ ಪ್ರಾರಂಭಿಸಬಹುದು. ನವೆಂಬರ್ 12 ಕ್ಕೆ ಬುಕಿಂಗ್ ಮಾಡುವ ವಿಂಡೋ ಜುಲೈ 14 ರಂದು ತೆರೆಯುತ್ತದೆ.
ಈ ಬಾರಿ ದೀಪಾವಳಿಯು ಭಾನುವಾರದಂದು ಇರುವುದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಕೊನೆ ಕ್ಷಣದಲ್ಲಿ ಪ್ರಯಾಣ ದಟ್ಟಣೆಯನ್ನು ತಪ್ಪಿಸಲು ಪ್ರಯಾಣಿಕರಿಗೆ ಮುಂಚಿತವಾಗಿ ಬುಕಿಂಗ್ ಮಾಡಲು ಸಲಹೆ ನೀಡಿದೆ. ಇನ್ನು ಇದಲ್ಲದೆ ದೀಪಾವಳಿಯಲ್ಲಿ ವಿಶೇಷ ರೈಲುಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಬೇಡಿಕೆಯ ಆಧಾರದ ಮೇಲೆ ದೀಪಾವಳಿ ವಿಶೇಷ ರೈಲುಗಳ ವಿವರಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಹೇಳಿದ್ದರೂ ಈ ಬಾರಿ ಹೆಚ್ಚುವರಿ ವಿಶೇಷ ರೈಲುಗಳನ್ನು ಎಷ್ಟು ಸಂಖ್ಯೆಯಲ್ಲಿ ಓಡಿಸಲಾಗುವುದು ಎಂಬ ಮಾಹಿತಿಯನ್ನು ರೈಲ್ವೆ ಇಲಾಖೆ ಇನ್ನೂ ಬಹಿರಂಗಪಡಿಸಿಲ್ಲ. ಸ್ವಚ್ಛ ಮತ್ತು ಸುಸ್ಥಿತಿಯಲ್ಲಿರುವ ಕೋಚ್‌ಗಳು ದೀಪಾವಳಿ ರೈಲಿನಲ್ಲಿದ್ದು, ಆನ್-ಬೋರ್ಡ್ ಕ್ಯಾಟರಿಂಗ್ ಸೇವೆಗಳು ಮತ್ತು ಸಾಕಷ್ಟು ಭದ್ರತಾ ಕ್ರಮಗಳಂತಹ ವಿವಿಧ ಸೌಕರ್ಯಗಳನ್ನು ರೈಲ್ವೆ ಇಲಾಖೆ ಒದಗಿಸುತ್ತದೆ ಎಂಬುದನ್ನು ಗಮನಾರ್ಹ ಸಂಗತಿಯಾಗಿದೆ.


Click it and Unblock the Notifications