ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡುತ್ತಿದೆ. ಈಗ ಐಆರ್‌ಸಿಟಿಸಿ ಹೊಸ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡಿದ್ದು ಅದುವೇ ಗಂಗಾ ರಾಮಾಯಣ ಯಾತ್ರೆಯಾಗಿದೆ. ಈ ಪ್ರವಾಸ ಪ್ಯಾಕೇಜ್‌ನಲ್ಲಿ ಹೈದಾರಾಬಾದ್‌ನಿಂದ ದಕ್ಷಿಣ ಭಾರತದ ಹಲವಾರು ಪ್ರದೇಶಗಳಿಗೆ ಪ್ರವಾಸ ಹೋಗಲು ಅವಕಾಶವಿದೆ.
ವಾರಾಣಾಸಿ, ಅಯೋಧ್ಯೆ, ಪ್ರಯಾಗ್, ಸಾರನಾಥ, ನೈಮಿಶಾರಣ್ಯ ಹಲವಾರು ದಾರ್ಶನಿಕ, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಅವಕಾಶವಿದೆ. ಇದು ಸುಮಾರು ಐದು ರಾತ್ರಿಗಳು ಹಾಗೂ ಆರು ದಿನಗಳ ಪ್ರವಾಸ ಪ್ಯಾಕೇಜ್ ಆಗಿದೆ. ಜುಲೈ 26, ಆಗಸ್ಟ್ 9 ಮತ್ತು ಆಗಸ್ಟ್ 27 ರಂದು ಈ ಪ್ರವಾಸ ಪ್ಯಾಕೇಜ್ ಆರಂಭವಾಗಲಿದೆ. ಈ ಪ್ರವಾಸ ಪ್ಯಾಕೇಜ್ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....

ಐಆರ್‌ಸಿಟಿಸಿ ಪ್ರವಾಸ ಪ್ಯಾಕೇಜ್ ದರ, ಪ್ರದೇಶ
ಗಂಗಾ ರಾಮಾಯಣ ಯಾತ್ರೆ ಪ್ರವಾಸ ಪ್ಯಾಕೇಜ್‌ನಲ್ಲಿ ಮೂವರಿಗೆ ತಲಾ 26,850 ರೂಪಾಯಿ, ಇಬ್ಬರಿಗೆ ತಲಾ 27,800 ರೂಪಾಯಿ ಮತ್ತು ಒಬ್ಬರಿಗೆ ತಲಾ 33,900 ರೂಪಾಯಿ ಆಗಿದೆ. ವಿಮಾನಯಾನದ ಪ್ರವಾಸ ಇದಾಗಿದೆ. ಹೈದಾರಾಬಾದ್‌ನಿಂದ ಪ್ರವಾಸ ಆರಂಭವಾಗಲಿದ್ದು, ಅಲ್ಲಿಂದ ವಿಮಾನದ ಮೂಲಕ ವಾರಾಣಾಸಿಗೆ ಮೊದಲು ನೀವು ತಲುಪಲಿದ್ದೀರಿ.
ಅಂತಿಮ ದಿನದಂದು, ಲಕ್ನೋದಿಂದ ಹೈದರಾಬಾದ್‌ಗೆ ವಾಪಾಸ್ ಬರುವುದರಿಂದ ಪ್ರವಾಸವು ಕೊನೆಯಾಗಲಿದೆ. ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಗಂಗಾ ಘಾಟ್‌ಗಳ ಭೇಟಿಯು ಕೂಡಾ ಈ ಪ್ರವಾಸ ಪ್ಯಾಕೇಜ್‌ನಲ್ಲಿ ಒಳಗೊಂಡಿರುತ್ತದೆ. ವಾರಾಣಾಸಿ ಘಾಟ್ ಮತ್ತು ದೇವಾಯದಲ್ಲಿ ಬಸ್ ನಿರ್ಬಂಧ ಇರುವ ಕಾರಣದಿಂದಾಗಿ, ಐಆರ್‌ಸಿಟಿಸಿಯು ಅಲ್ಲಿ ಪ್ರವಾಸಿಗರು ತಮ್ಮದೇ ಆದ ಸಾರಿಗೆ ವ್ಯವಸ್ಥೆಯನ್ನು ಮಾಡುವಂತೆ ತಿಳಿಸಿದೆ. ದೇವಾಲಯ, ಘಾಟ್‌ಗೆ ಭೇಟಿ ನೀಡಲು ಆಟೋ ರಿಕ್ಷಾದಂತಹ ವ್ಯವಸ್ಥೆಯನ್ನು ಮಾಡಿಕೊಳ್ಳಲು ಐಆರ್‌ಸಿಟಿಸಿ ತಿಳಿಸಿದೆ.
ಎರಡನೇ ದಿನ ಪ್ರವಾಸಿಗರು ಸಾರಾನಾಥ್ ಮತ್ತು ಸ್ಥಳೀಯ ಆಕರ್ಷಕ ಸ್ಥಳಗಳಾದ ವಾರಾಣಾಸಿಯ ಬಿರ್ಲಾ ದೇವಾಲಯ ಮೊದಲಾದವುಗಳಿಗೆ ಭೇಟಿ ನೀಡಬಹುದಾಗಿದೆ. ಅದಾದ ಬಳಿಕ ಪ್ರಯಾಗ್‌ರಾಜ್‌ನ ಅಲೋಪಿ ದೇವಿ ದೇವಾಲಯ ಮತ್ತು ತ್ರಿವೇಣಿ ಸಂಗಮ್‌ಗೆ ಪ್ರವಾಸ ಮಾಡುವ ಅವಕಾಶವಿದೆ. ಅದಾದ ಬಳಿಕ ಅಯೋಧ್ಯೆಗೆ ತಲುಪಲಿದ್ದು, ಅಲ್ಲಿ ರಾತ್ರಿ ತಂಗಲಿದ್ದೀರಿ.
ನಾಲ್ಕನೇ ದಿನದಂದು ನೀವು ಅಯೋಧ್ಯೆಯಲ್ಲಿನ ಹಲವಾರು ಪ್ರದೇಶಗಳಿಗೆ ಭೇಟಿ ನೀಡಬಹುದಾಗಿದೆ. ಅದಾದ ಬಳಿಕ ಪ್ರವಾಸವು ಲಕ್ನೋಗೆ ಮುಂದುವರಿಯಲಿದೆ. ನಂತರದ ದಿನ ಪ್ರವಾಸಿಗರು ನೈಮಿಶಾರಣ್ಯಕ್ಕೆ ಒಂದು ದಿನ ಭೇಟಿ ನೀಡಲು ಅವಕಾಶವಿದೆ. ಪ್ರವಾಸವನ್ನು ಮುಗಿಸುವ ಮೊದಲು ಬಾರಾ ಇಮಾಂಬರಕ್ಕೆ ಭೇಟಿ ನೀಡಬಹುದಾಗಿದೆ.
ಕಾರ್ಯಾಚರಣೆಯ ಸಮಸ್ಯೆಗಳು ಅಥವಾ ಸ್ಥಳೀಯ ಸಮಸ್ಯೆಗಳ ಆಧಾರದ ಮೇಲೆ ಪ್ರಯಾಣ ಮತ್ತು ವಿಮಾನಯಾನದ ಸಮಯವು ಬದಲಾವಣೆ ಆಗಬಹುದಾಗಿದೆ. ಸೌಲಭ್ಯಗಳ ಲಭ್ಯತೆ ಮತ್ತು ಮೂಲಸೌಕರ್ಯಗಳ ಗುಣಮಟ್ಟವು ಸ್ಥಳೀಯವಾಗಿ ಬದಲಾವಣೆಯಾಗಬಹುದು ಎಂದು ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ತಿಳಿಸಿದೆ.
ಪ್ರವಾಸಿಗರು ಪ್ಯಾಕ್ ಮಾಡಿದ ಆಹಾರ ಪದಾರ್ಥಗಳು ಅಥವಾ ಬಿಸ್ಕತ್ತುಗಳು, ಒಣ ಹಣ್ಣುಗಳು ಮತ್ತು ಕಡಲೆಕಾಯಿಗಳಂತಹ ತಿಂಡಿಗಳನ್ನು ಕೊಂಡೊಯ್ಯುವಂತೆ ಐಆರ್‌ಸಿಟಿಸಿ ಸಲಹೆ ನೀಡಿದೆ. ಹೆಚ್ಚುವರಿಯಾಗಿ, ದೇವಸ್ಥಾನಗಳಲ್ಲಿ ಪೂಜೆಯನ್ನು ಮಾಡಲು ಮುಂದಾಗುವವರಿಗೆ ಹೆಚ್ಚುವರಿ ಸಮಯ ಬೇಕಾಗುತ್ತದೆ. ಅಂತಹವರು ಹೊಟೇಲ್‌ಗೆ ಸ್ವಂತ ಸಾರಿಗೆಯನ್ನು ವ್ಯವಸ್ಥೆಗೊಳಿಸಬೇಕು.


Click it and Unblock the Notifications