ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹೊಸದಾಗಿ ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಆರಂಭ ಮಾಡುತ್ತಾ ಬರುತ್ತಿದೆ. ಇನ್ನು ಕೆಲವೇ ವಾರಗಳಲ್ಲಿ 2023 ವರ್ಷ ಕೊನೆಯಾಗಲಿದ್ದು 2024 ಹೊಸ ವರ್ಷ ಆರಂಭವಾಗಲಿದೆ. ಇದಕ್ಕೂ ಮುನ್ನವೇ ಹೊಸ ವರ್ಷಕ್ಕಾಗಿ ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ಐಆರ್‌ಸಿಟಿಸಿ ಆರಂಭ ಮಾಡಿದೆ.
ಈ ಪ್ಯಾಕೇಜ್‌ನ ಹೆಸರು ಕಾಶ್ಮೀರ - ಪಾರಡೈಸ್ ಆನ್ ಅರ್ಥ್ ಆಗಿದೆ. ಇದು ಸುಮಾರು 6 ರಾತ್ರಿಗಳು ಮತ್ತು 7 ದಿನಗಳ ಪ್ರವಾಸ ಪ್ಯಾಕೇಜ್ ಆಗಿದೆ. ವಿಮಾನದಲ್ಲಿ ಈ ಪ್ರವಾಸವನ್ನು ಮಾಡಲಾಗುತ್ತದೆ. ಈ ಪ್ಯಾಕೇಜ್ ಬಗ್ಗೆ ಇಲ್ಲಿದೆ ಅಧಿಕ ವಿವರ ಮುಂದೆ ಓದಿ....

ಪ್ಯಾಕೇಜ್‌ನ ವಿವರ ತಿಳಿಯಿರಿ
ಪ್ಯಾಕೇಜ್ ಹೆಸರು: ಕಾಶ್ಮೀರ- ಪ್ಯಾರೆಡೈಸ್ ಆನ್ ಅರ್ಥ್
ಪ್ರವಾಸ ಮಾರ್ಗ: ವಿಮಾನದಲ್ಲಿ ಪ್ರವಾಸ
ಎಷ್ಟು ದಿನ?: ಆರು ರಾತ್ರಿಗಳು ಮತ್ತು ಏಳು ದಿನಗಳ ಪ್ರವಾಸ ಇರಲಿದೆ.
ಯಾವೆಲ್ಲ ಸ್ಥಳಕ್ಕೆ ಪ್ರವಾಸ?: ಶ್ರೀನಗರ, ಸೋನ್‌ಮಾರ್ಗ್, ಗುಲ್ಮಾರ್ಗ್, ಪಹಲ್ಗಾಮ್
ಪ್ರವಾಸದ ದಿನ: 2024ರ ಮಾರ್ಚ್ 22 ಮತ್ತು 2024ರ ಮಾರ್ಚ್ 25
ಪ್ರವಾಸ ಪ್ಯಾಕೇಜ್ ದರ: ಮಾರ್ಚ್ 22
ಡಿಲಕ್ಸ್‌ನಲ್ಲಿ ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 70200 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 60,220 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 58,410 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಬೆಡ್ ಸಹಿತವಾಗಿ ಪ್ಯಾಕೇಜ್ ದರ 47,820 ರೂಪಾಯಿ ಆಗಿದೆ. 2- 4 ವರ್ಷದ ಮಕ್ಕಳಿಗೆ ಬೆಡ್ ಇಲ್ಲದೆ ಪ್ಯಾಕೇಜ್ ದರ 44,570 ರೂಪಾಯಿ ಆಗಿದೆ.
ಪ್ರವಾಸ ಪ್ಯಾಕೇಜ್ ದರ: ಮಾರ್ಚ್ 25
ಡಿಲಕ್ಸ್‌ನಲ್ಲಿ ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 72960 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 63100 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 61220 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಬೆಡ್ ಸಹಿತವಾಗಿ ಪ್ಯಾಕೇಜ್ ದರ 50650 ರೂಪಾಯಿ ಆಗಿದೆ. 2- 4 ವರ್ಷದ ಮಕ್ಕಳಿಗೆ ಬೆಡ್ ಇಲ್ಲದೆ ಪ್ಯಾಕೇಜ್ ದರ 47400 ರೂಪಾಯಿ ಆಗಿದೆ.
ಯಾವ ದಿನ ಎಲ್ಲಿ ಪ್ರವಾಸ?
ದಿನ 1: ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಗೊತ್ತುಪಡಿಸಿದ ಏರ್‌ಲೈನ್ಸ್ ಕೌಂಟರ್‌ನಲ್ಲಿ ಸಮಯಕ್ಕೆ ಸರಿಯಾಗಿ ಬೋರ್ಡ್ ಆಗುವುದು. ಶ್ರೀನಗರ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ಹೋಟೆಲ್‌ನಲ್ಲಿ ಚೆಕ್‌ಇನ್ ಆಗುವುದು. ನಂತರ ಪ್ರಸಿದ್ಧ ಮೊಘಲ್ ಉದ್ಯಾನಗಳನ್ನು (ನಿಶಾತ್ ಬ್ಯಾಗ್, ಶಾಲಿಮಾರ್ ಬ್ಯಾಗ್, ಮತ್ತು ಚೆಶಮ್-ಎ-ಶಾಹಿ) ನೋಡುವುದು. ಶ್ರೀನಗರದಲ್ಲಿ ಭೋಜನ ಮಾಡಿ, ರಾತ್ರಿ ಅಲ್ಲಿಯೇ ತಂಗುವುದು.
ದಿನ 2: ಉಪಹಾರದ ನಂತರ ಗುಲ್ಮಾರ್ಗ್‌ಗೆ ಒಂದು ದಿನ ಪ್ರವಾಸ ಹೋಗುವುದು. ನಿಮ್ಮ ಸ್ವಂತ ವೆಚ್ಚದಲ್ಲಿ ಕುದುರೆ ಸವಾರಿ ಅಥವಾ ಕೇಬಲ್ ಕಾರ್ ಸವಾರಿ (ಗೊಂಡೋಲಾ) ಮಾಡಬಹುದು. ನಂತರ ಶ್ರೀನಗರಕ್ಕೆ ಹಿಂತಿರುಗಿ ರಾತ್ರಿಯ ಊಟ ಮಾಡಿ, ಅಲ್ಲಿಯೇ ರಾತ್ರಿ ತಂಗುವುದು.
ದಿನ 3: ಬೆಳಗಿನ ಉಪಾಹಾರದ ನಂತರ ಸೋನ್ಮಾರ್ಗ್‌ಗೆ ಭೇಟಿ ನೀಡಿ. ಸುಮಾರು 2 ಗಂಟೆ 30 ನಿಮಿಷಗಳ ಪ್ರಯಾಣ ಇರಲಿದೆ. ಸೋನ್‌ಮಾರ್ಗ್‌ನಲ್ಲಿ ಪ್ರವಾಸ ಮಾಡಿ ಅಲ್ಲಿಯೇ ಹೊಟೇಲ್‌ನಲ್ಲಿ ಊಟ, ಅಲ್ಲಿಯೇ ತಂಗುವುದು.
ದಿನ 4: ಉಪಹಾರದ ನಂತರ ಚೆಕ್ಔಟ್ ಆಗಿ. ಪಹಲ್‌ಗಾಮ್‌ಗೆ ಭೇಟಿ ನೀಡಿ. ಆಗಮನದ ನಂತರ ಹೋಟೆಲ್‌ಗೆ ಭೇಟಿ ನೀಡಿ. ನದಿಯ ಬದಿಯಲ್ಲಿ ಸಂಜೆ ವಿರಾಮ ಮಾಡಿ. ಪಹಲ್‌ಗಾಮ್‌ನಲ್ಲಿ ರಾತ್ರಿ ಊಟ ಅಲ್ಲಿಯೇ ತಂಗುವುದು.
ದಿನ 5: ಬೆಳಗಿನ ಉಪಾಹಾರದ ನಂತರ ಮತ್ತು ಚಂದನವಾಡಿ ಸ್ಥಳೀಯ ಸ್ಥಳಗಳಾದ ಬೇಟಾಬ್ ವ್ಯಾಲಿ, ಬಾಬಿ ಹೌಸ್ ನೋಡಲು ಪಹಲ್‌ಗಾಮ್‌ಗೆ ಭೇಟಿ ನೀಡುವುದು. ಪಹಲ್‌ಗಾಮ್‌ನಲ್ಲಿ ರಾತ್ರಿ ಊಟ, ಅಲ್ಲಿಯೇ ತಂಗುವುದು.
ದಿನ 6: ಹೋಟೆಲ್‌ನಿಂದ ಉಪಹಾರ ಮಾಡಿ ಚೆಕ್‌ಔಟ್ ಆಗುವುದು. ಅಲ್ಲಿಂದ ಶ್ರೀನಗರಕ್ಕೆ ಭೇಟಿ ನೀಡುವುದು. ಅವಂತಿಪುರ ಅವಶೇಷಗಳು ಮತ್ತು ಕೇಸರಿ ಕ್ಷೇತ್ರಗಳ ಮೂಲಕ ಚಾಲನೆ ಮಾಡುವುದು. ಶ್ರೀನಗರ-ಹೌಸ್‌ಬೋಟ್‌ನಲ್ಲಿ ಪ್ರಯಾಣ. ರಾತ್ರಿ ಊಟ, ಅಲ್ಲಿಯೇ ತಂಗುವುದು.
ದಿನ 7: ಉಪಹಾರದ ನಂತರ ಹೌಸ್‌ಬೋಟ್‌ನಿಂದ ಚೆಕ್‌ಔಟ್ ಆಗುವುದು. ಗೊತ್ತುಪಡಿಸಿದ ವಿಮಾನ ಮತ್ತು ನಿಗದಿತ ಸಮಯದ ಪ್ರಕಾರ ಹಿಂದಿರುಗುವುದು.


Click it and Unblock the Notifications