ಪ್ರವಾಸ ಮಾಡುವ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಕೂಡಾ ನಮ್ಮ ಅತೀ ನೆಚ್ಚಿನ ಸ್ಥಳಗಳನ್ನು ಆಯ್ಕೆ ಮಾಡುತ್ತೇವೆ. ತಾಜ್‌ಮಹಲ್, ಮೈಸೂರು ಪ್ಯಾಲೇಸ್ ಮೊದಲಾದವುಗಳು ನಮ್ಮ ಲೀಸ್ಟ್‌ನಲ್ಲಿ ಇರುವಂತೆಯೇ ಲಡಾಖ್ ಕೂಡಾ ಹಲವಾರು ಮಂದಿ ಪ್ರವಾಸ ಮಾಡಲು ಬಯಸುವ ಪಟ್ಟಿಯಲ್ಲಿರುವ ತಾಣದ ಹೆಸರಾಗಿದೆ. ಅತೀ ಎತ್ತರದ ಪ್ರದೇಶದಲ್ಲಿ ದಾರಿಯನ್ನು ಹೊಂದಿರುವ ಈ ಪ್ರದೇಶವನ್ನು land of the passes ಎಂದು ಕರೆಯಲಾಗುತ್ತದೆ.
ನೀವು ಈ ಸುಂದರವಾದ ಜಾಗಕ್ಕೆ ಭೇಟಿ ನೀಡಲು ಬಯಸಿದರೆ, ನೀವು ಐಆರ್‌ಟಿಸಿಟಿ (ಭಾರತೀಯ ರೈಲ್ವೆ ಕ್ಯಾಟೆರಿಂಗ್ ಮತ್ತು ಟೂರಿಸಂ ಕಾರ್ಪೋರೇಷನ್) ಅನ್ನು ಚೆಕ್ ಮಾಡಬೇಕಾಗುತ್ತದೆ. ಭಾರತೀಯ ರೈಲ್ವೆಯು ಹಲವಾರು ಪ್ರವಾಸ ಪ್ಯಾಕೇಜ್ ಅನ್ನು ನೀಡುತ್ತದೆ. ನಾವು ಒಮ್ಮೆ ಪ್ಯಾಕೇಜ್ ಅನ್ನು ಪಾವತಿಸಿದರೆ ಬಳಿಕ ರೈಲಿನಲ್ಲಿ ಆರಾಮವಾಗಿ ಪ್ರವಾಸ ಮಾಡುವ ಅವಕಾಶವಿದೆ. ಹಾಗೆಯೇ ವಿಮಾನದಲ್ಲಿ ಪ್ರವಾಸ ಮಾಡುವ ಅವಕಾಶವನ್ನು ಕೂಡಾ ಐಆರ್‌ಸಿಟಿಸಿ ನೀಡುತ್ತದೆ. ಅದರಂತೆಯೇ ಈ ಲಡಾಖ್ ಪ್ಯಾಕೇಜ್ ಕೂಡಾ ಒಂದಾಗಿದೆ. ಈ ಪ್ಯಾಕೇಜ್ ಏಪ್ರಿಲ್ 22ರಿಂದ ಆರಂಭವಾಗಲಿದೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ...

ಲಡಾಖ್ ಪ್ರವಾಸ ಪ್ಯಾಕೇಜ್ ಬಗ್ಗೆ ಮಾಹಿತಿ
ಲಡಾಖ್ ಪ್ರವಾಸ ಪ್ಯಾಕೇಜ್ ದೆಹಲಿಯಿಂದ ಆರಂಭವಾಗಲಿದೆ. ನೀವು ದೆಹಲಿಯಿಂದ ವಿಮಾನದಲ್ಲಿ ಲಡಾಖ್ ಪ್ಯಾಕೇಜ್‌ನ ಪ್ರವಾಸವನ್ನು ಆರಂಭ ಮಾಡಬಹುದಾಗಿದೆ. ನೀವು ಲಡಾಖ್ ಪ್ಯಾಕೇಜ್ ಅಡಿಯಲ್ಲಿ ಪ್ರವಾಸವನ್ನು ಮಾಡಲು ಬಯಸಿದರೆ, ಬೇರೆ ಬೇರೆ ದಿನಾಂಕಗಳನ್ನು ಆಯ್ಕೆ ಮಾಡಬಹುದಾಗಿದೆ. ಏಪ್ರಿಲ್ 22, 29 ಮತ್ತು ಮೇ ತಿಂಗಳ 1, 6, 8, 13, 15, 20, 22, 27, 29ರಂದು ನೀವು ಲಡಾಖ್ ಪ್ರವಾಸ ಇರಲಿದೆ. ಈ ದಿನದ ಪ್ಯಾಕೇಜ್ ಖರೀದಿಸಿದರೆ ನೀವು ಲಡಾಖ್‌ಗೆ ಭೇಟಿ ನೀಡಲು ಸಾಧ್ಯವಾಗಲಿದೆ.
ಲಡಾಖ್ ಪ್ರವಾಸ ಪ್ಯಾಕೇಜ್ ಅಡಿಯಲ್ಲಿ ವಿಮಾನವು ದೆಹಲಿ ವಿಮಾನ ನಿಲ್ದಾಣದಿಂದ ಆರಂಭವಾಗಲಿದೆ. ಮೇ ತಿಳಿಸಿದ ದಿನಾಂಕಗಳಂದು ದೆಹಲಿ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 08:40ಕ್ಕೆ ಹೊರಡಲಿದೆ. ಅದಾದ ಬಳಿಕ ಲೇಹ್ ವಿಮಾನ ನಿಲ್ದಾಣಕ್ಕೆ 09:55ಕ್ಕೆ ವಿಮಾನವು ತಲುಪಲಿದೆ. ಲಡಾಖ್ ಪ್ರವಾಸ ಪ್ಯಾಕೇಜ್ ಆರು ರಾತ್ರಿಗಳ 7 ದಿನಗಳ ಪ್ಯಾಕೇಜ್ ಆಗಿದೆ. ಈ ಪ್ರವಾಸ ಪ್ಯಾಕೇಜ್‌ನಲ್ಲಿ ಶ್ಯಾಮ್ ವ್ಯಾಲಿ, ಲೇಹ್, ನುಬ್ರಾ, ತುರ್ತುಕ್ ಮತ್ತು ಪಾಂಗಾಂಗ್‌ಗೆ ಭೇಟಿ ನೀಡಬಹುದಾಗಿದೆ. ಲಡಾಖ್‌ನ ಪ್ರಮುಖ ಪ್ರದೇಶಗಳ ಸೌದರ್ಯವನ್ನು ನೀವು ಸವಿಯಬಹುದಾಗಿದೆ.
ಲಡಾಖ್ ಪ್ರವಾಸ ಪ್ಯಾಕೇಜ್‌ನ ದರ
ಲಡಾಖ್ ಪ್ರವಾಸ ಪ್ಯಾಕೇಜ್‌ನಲ್ಲಿ ಹಲವಾರು ಆಯ್ಕೆಗಳು ಇದೆ. ಸಿಂಗಲ್, ಡಬಲ್, ಟ್ರಿಪಲ್ ಎಂಬ ಮೂರು ಪ್ಯಾಕೇಜ್ ಆಯ್ಕೆಗಳು ಇದೆ. ನೀವು ಟ್ರಿಪಲ್ ಆಕ್ಯುಪೆನ್ಸಿ ಆಯ್ಕೆಯಡಿಯಲ್ಲಿ ಏಕ ವ್ಯಕ್ತಿಗೆ ನೀವು 38,990 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಇನ್ನು ಡಬಲ್ ಆಕ್ಯುಪೆನ್ಸಿ ಆಯ್ಕೆಯಡಿಯಲ್ಲಿ ಏಕ ವ್ಯಕ್ತಿಗೆ 39,900 ರೂಪಾಯಿ ಪಾವತಿಸಬೇಕಾಗುತ್ತದೆ. ಸಿಂಗಲ್ ಆಕ್ಯುಪೆನ್ಸಿ ಆಯ್ಕೆಯಡಿಯಲ್ಲಿ ಏಕ ವ್ಯಕ್ತಿಗೆ 46,950 ರೂಪಾಯಿ ಪಾವತಿಸಬೇಕಾಗುತ್ತದೆ. ಈ ಪ್ರವಾಸ ಪ್ಯಾಕೇಜ್ ಅಡಿಯಲ್ಲಿ 5ರಿಂದ 11 ವರ್ಷದ ಮಕ್ಕಳು ಕೂಡಾ ಬೆಡ್ ಸಹಿತ 36,300 ರೂಪಾಯಿಗೆ ಬೆಡ್ ರಹಿತ 31,800 ರೂಪಾಯಿಗೆ ಲಭ್ಯವಾಗುತ್ತದೆ.
ಈ ಟೂರ್ ಪ್ಯಾಕೇಜ್‌ನಲ್ಲಿ 6 ಬ್ರೇಕ್‌ಫಾಸ್ಟ್ (ಉಪಾಹಾರ), ಆರು ಮಧ್ಯಾಹ್ನದ ಊಟ ಹಾಗೂ ಆರು ರಾತ್ರಿಯ ಊಟ ಸೇರ್ಪಡೆಯಾಗುತ್ತದೆ. ವಿಮಾನದಲ್ಲಿ ರಿಟರ್ನ್ ಬರುವ ಗೋ ಏರ್ ವಿಮಾನ (ದೆಹಲಿ - ಲೇಹ್ - ದೆಹಲಿ) ಟಿಕೆಟ್ ವೆಚ್ಚವು ಕೂಡಾ ಸೇರ್ಪಡೆಯಾಗುತ್ತದೆ. ಲೇಹ್‌ನಲ್ಲಿ ಮೂರು ರಾತ್ರಿಗಳಿಗಾಗಿ ರೂಮ್ ವ್ಯವಸ್ಥೆ, ನುಬ್ರಾದಲ್ಲಿ ಎರಡು ರಾತ್ರಿಗಳು ತಂಗಲು ರೂಮ್ ವ್ಯವಸ್ಥೆ ಹಾಗೂ ಪಾಂಗಾಂಗ್‌ನಲ್ಲಿ 1 ರಾತ್ರಿ ತಂಗಲು ರೂಮ್ ವ್ಯವಸ್ಥೆ ಇರುತ್ತದೆ. ಪ್ರವಾಸ ವಿಮೆ ಕೂಡಾ ಈ ಪ್ಯಾಕೇಜ್‌ನಲ್ಲಿ ಸೇರ್ಪಡೆಯಾಗುತ್ತದೆ. ನೀವು ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ.


Click it and Unblock the Notifications