Punya Kshetra Yatra: ಪುಣ್ಯ ಕ್ಷೇತ್ರ ಯಾತ್ರಾ, ಕಡಿಮೆ ಹಣದಲ್ಲೇ 9 ದಿನ ಪ್ರವಾಸ ಮಾಡಿ, ಇಷ್ಟಿದೆ ಪ್ಯಾಕೇಜ್ ದರ!

ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಅದರಲ್ಲೂ ಮುಖ್ಯವಾಗಿ ದೇವಾಲಯಗಳಿಗೆ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಿರುತ್ತಾರೆ.

ಅದರಲ್ಲಿ ಪುಣ್ಯ ಕ್ಷೇತ್ರ ಯಾತ್ರೆ ಕೂಡ ಒಂದಾಗಿದೆ. ನೀವು ಈ ಪ್ರವಾಸ ಪ್ಯಾಕೇಜ್‌ನಲ್ಲಿ ಬರೀ 15 ಸಾವಿರ ರೂಪಾಯಿ ನೀಡಿ, 8 ರಾತ್ರಿಗಳು, 9 ದಿನಗಳು ಪ್ರವಾಸ ಮಾಡಬಹುದಾಗಿದೆ. ಈ ಪ್ರವಾಸ ಪ್ಯಾಕೇಜ್ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಪುಣ್ಯ ಕ್ಷೇತ್ರ ಯಾತ್ರಾ, ಕಡಿಮೆ ಹಣದಲ್ಲೇ 9 ದಿನ ಪ್ರವಾಸ ಮಾಡಿ!

ಪ್ಯಾಕೇಜ್ ವಿವರ ಇಲ್ಲಿದೆ

ಪ್ಯಾಕೇಜ್ ಹೆಸರು: ಪುಣ್ಯ ಕ್ಷೇತ್ರ ಯಾತ್ರಾ: ಪುರಿ, ಕಾಶಿ, ಅಯೋಧ್ಯೆ
ಪ್ರವಾಸ ದಿನಗಳು: 8 ರಾತ್ರಿಗಳು 9 ದಿನ
ಪ್ರವಾಸ ದಿನಾಂಕ: ಡಿಸೆಂಬರ್ 9
ಬೋರ್ಡಿಂಗ್, ಡಿಬೋರ್ಡಿಂಗ್: ಸಿಕಂದರಾಬಾದ್, ಕಾಜಿಪೇಟ್, ಖಮ್ಮಂ, ವಿಜಯವಾಡ, ಎಲೂರು, ರಾಜಮಂಡ್ರಿ, ಸಮಲ್ಕೋಟ್, ಪೆಂಡುರ್ಟಿ ಮತ್ತು ವಿಜಯನಗರಂ

ಪ್ಯಾಕೇಜ್ ದರ ಎಷ್ಟಿದೆ ನೋಡಿ

ಇಕಾನಮಿ ಕ್ಲಾಸ್: ಡಬಲ್/ ಟ್ರಿಪಲ್ 15,200 ರೂಪಾಯಿ, 5 ವರ್ಷದಿಂದ 11 ವರ್ಷದ ಮಕ್ಕಳಿಗೆ 14,200 ರೂಪಾಯಿ
ಸ್ಟಾರ್ಡರ್ಸ್ ಕ್ಲಾಸ್: ಡಬಲ್/ ಟ್ರಿಪಲ್ 24,000 ರೂಪಾಯಿ, 5 ವರ್ಷದಿಂದ 11 ವರ್ಷದ ಮಕ್ಕಳಿಗೆ 23,900 ರೂಪಾಯಿ
ಕನ್ಫಾರ್ಟ್ ಕ್ಲಾಸ್: ಡಬಲ್/ ಟ್ರಿಪಲ್ 31,500 ರೂಪಾಯಿ, 5 ವರ್ಷದಿಂದ 11 ವರ್ಷದ ಮಕ್ಕಳಿಗೆ 31,100 ರೂಪಾಯಿ

ಯಾವ ಸ್ಥಳಕ್ಕೆ ಪ್ರವಾಸ?

ಪುರಿ: ಜಗನ್ನಾಥ ದೇವಾಲಯ.
ಗಯಾ: ವಿಷ್ಣು ಪಾದ ದೇವಾಲಯ.
ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಕಾರಿಡಾರ್, ಕಾಶಿ ವಿಶಾಲಾಕ್ಷಿ ಮತ್ತು ಅನ್ನಪೂರ್ಣ ದೇವಿ ದೇವಸ್ಥಾನ. ಸಂಜೆ ಗಂಗಾ ಆರತಿ
ಅಯೋಧ್ಯೆ: ರಾಮ ಜನ್ಮ ಭೂಮಿ, ಹನುಮಾನ್‌ಗರ್ಹಿ ಮತ್ತು ಸರಯೂ ನದಿಯಲ್ಲಿ ಆರತಿ.
ಪ್ರಯಾಗ್‌ರಾಜ್: ತ್ರಿವೇಣಿ ಸಂಗಮ, ಹನುಮಾನ್ ಮಂದಿರ ಮತ್ತು ಶಂಕರ್ ವಿಮಾನ ಮಂಟಪ.

ಪ್ಯಾಕೇಜ್‌ನಲ್ಲಿ ಏನೆಲ್ಲ ಸೇರುತ್ತದೆ?

* ರೈಲು ಪ್ರಯಾಣ ವೆಚ್ಚ, ಹೊಟೇಲ್ ರೂಮ್‌ಗಳ ವೆಚ್ಚ ಪ್ಯಾಕೇಜ್‌ನಲ್ಲಿ ಸೇರುತ್ತದೆ. ಪ್ಯಾಕೇಜ್ ಆಧಾರದಲ್ಲಿ ಹೊಟೇಲ್ ರೂಮ್ ಲಭ್ಯವಾಗುತ್ತದೆ.
* ಬೆಳಗಿನ ಚಹಾ, ಉಪಹಾರ ಮಧ್ಯಾಹ್ನ ಮತ್ತು ರಾತ್ರಿಯ ಊಟ (ಸಸ್ಯಾಹಾರಿ ಮಾತ್ರ).
* ಪ್ರಯಾಣಿಕರಿಗೆ ಪ್ರಯಾಣ ವಿಮೆ.
* ವೃತ್ತಿಪರ ಬೆಂಗಾವಲು ಸೇವೆಗಳು.
* ರೈಲಿನಲ್ಲಿ ಭದ್ರತೆ
* ಅಗತ್ಯ ಸಹಾಯಕ್ಕಾಗಿ ಐಆರ್‌ಸಿಟಿಸಿ ಟೂರ್ ಮ್ಯಾನೇಜರ್‌ಗಳು ಪ್ರವಾಸದ ಉದ್ದಕ್ಕೂ ಪ್ರಯಾಣಿಸುತ್ತಾರೆ.
* ಎಲ್ಲಾ ಅನ್ವಯವಾಗುವ ತೆರಿಗೆಗಳು.

ಪ್ಯಾಕೇಜ್‌ನಲ್ಲಿ ಈ ಕೆಳಗಿನವು ಸೇರಿರಲ್ಲ

* ಸ್ಮಾರಕ ಪ್ರವೇಶ ಶುಲ್ಕಗಳು, ಬೋಟಿಂಗ್, ಸಾಹಸ ಕ್ರೀಡೆಗಳು ಇತ್ಯಾದಿ.
* ಊಟವನ್ನು ಮೊದಲೇ ನಿರ್ಧಾರ ಮಾಡಲಾಗಿರುತ್ತದೆ. ಮೆನುವಿನಲ್ಲಿ ಆಯ್ಕೆ ಲಭ್ಯವಿಲ್ಲ.
* ಯಾವುದೇ ಕೊಠಡಿ ಸೇವೆಗೆ ಪ್ರತ್ಯೇಕ ಶುಲ್ಕ ವಿಧಿಸಲಾಗುತ್ತದೆ.
* ಪ್ರೇಕ್ಷಣೀಯ ಸ್ಥಳಗಳ ವೆಚ್ಚ, ಪ್ರವೇಶ ಮತ್ತು ಸ್ಥಳೀಯ ಮಾರ್ಗದರ್ಶಕರು ಇತ್ಯಾದಿಗಳು ಪ್ಯಾಕೇಜ್‌ನಲ್ಲಿ ಸೇರುವುದಿಲ್ಲ.
* ಚಾಲಕರು, ಮಾರ್ಗದರ್ಶಿಗಳು, ಪ್ರತಿನಿಧಿಗಳು, ಇಂಧನ ಸರ್ಚಾರ್ಜ್
* ಲಾಂಡ್ರಿ ವೆಚ್ಚಗಳು, ವೈನ್‌ಗಳು, ಖನಿಜಯುಕ್ತ ನೀರು, ಆಹಾರ ಮತ್ತು ಪಾನೀಯದಂತಹ ವೆಚ್ಚಗಳು ಸೇರುವುದಿಲ್ಲ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+