ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡುತ್ತಿದೆ. ಇತ್ತೀಚೆಗೆ ಭಾರತ್ ಗೌರವ್ ವಿಶೇಷ ರೋಯರ್ ರಾಜಸ್ಥಾನ ಪ್ರವಾಸ ಪ್ಯಾಕೇಜ್, ಅಂಡಮಾನ್ ಪ್ಯಾಕೇಜ್ ಮೊದಲಾದವುಗಳನ್ನು ಆರಂಭ ಮಾಡಿರುವ ಐಆರ್‌ಸಿಟಿಸಿ ಈಗ ಸಿಕ್ಕಿಂ ಪ್ರವಾಸ ಪ್ಯಾಕೇಜ್ ಅನ್ನು ಕೂಡಾ ಆರಂಭ ಮಾಡಿದೆ.
ಅಷ್ಟಕ್ಕೂ ಇದು ಬರೀ ಸಿಕ್ಕಿಂ ಪ್ರವಾಸ ಮಾತ್ರವಲ್ಲ, ಒಟ್ಟಾಗಿ ಮೂರು ರಾಜ್ಯಗಳ ಪ್ರವಾಸವಾಗಿದೆ. ಈ ಪ್ರವಾಸ ಪ್ಯಾಕೇಜ್‌ನ ಪೂರ್ಣ ಹೆಸರು ಸಿಕ್ಕಿಂ ವಿಸ್ಮರಿಂಗ್ ಮೌಂಟೇನ್ಸ್- ದಿ ಹಿಮಾಲಯನ್ ಗೋಲ್ಡನ್ ಟ್ರೈಯಾಂಗಲ್ - ಕಾಲಿಂಪಾಂಗ್ - ಗ್ಯಾಂಗ್‌ಟಕ್ - ಡಾರ್ಜಿಲಿಂಗ್ - ಭುವನೇಶ್ವರ ಪ್ರವಾಸ ಪ್ಯಾಕೇಜ್ ಆಗಿದೆ. ಈ ಪ್ರವಾಸ ಪ್ಯಾಕೇಜ್ ಬಗ್ಗೆ ಒಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ಈ ಪ್ರವಾಸ ಪ್ಯಾಕೇಜ್‌ನ ವಿವರ ಇಲ್ಲಿದೆ
ಇದು ಸುಮಾರು 5 ರಾತ್ರಿಗಳು ಮತ್ತು ಆರು ದಿನಗಳ ಪ್ರವಾಸ ಪ್ಯಾಕೇಜ್ ಆಗಿದೆ. ಈ ಪ್ರವಾಸ ಪ್ಯಾಕೇಜ್‌ನಲ್ಲಿ ಒಡಿಶಾದ ಭುವನೇಶ್ವರ, ಪಶ್ಚಿಮ ಬಂಗಾಳದ ದಾರ್ಜೆಲಿಂಗ್, ಸಿಕ್ಕಿಂನ ಗಾಂಗ್ಟಾಕ್, ಪಶ್ಚಿಮ ಬಂಗಾಳದ ಕಾಲಿಂಪಾಂಗ್‌ಗೆ ಪ್ರವಾಸ ಮಾಡಬಹುದಾಗಿದೆ. ಇದು ವಿಮಾನಯಾನದ ಸೌಲಭ್ಯವನ್ನು ಹೊಂದಿರುವ ಪ್ರವಾಸ ಪ್ಯಾಕೇಜ್ ಆಗಿದೆ. ಈ ಪ್ಯಾಕೇಜ್‌ನಲ್ಲೇ ವಿಮಾನಯಾನವು ಒಳಗೊಂಡಿರುತ್ತದೆ.
ಇನ್ನು ಈ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಮಾಡಲಾಗುವ ಬಸ್ ಪ್ರಯಾಣ ಸೌಲಭ್ಯವು ಕೂಡಾ ಈ ಪ್ರವಾಸ ಪ್ಯಾಕೇಜ್‌ನ ದರದಲ್ಲಿಯೇ ಒಳಗೊಳ್ಳುತ್ತದೆ. ಹೊಟೇಲ್, ಆಹಾರ, ವಿಮೆಯೂ ಕೂಡಾ ಈ ಪ್ಯಾಕೇಜ್‌ನಲ್ಲಿ ಸೇರ್ಪಡೆಯಾಗುತ್ತದೆ. ಅಕ್ಟೋಬರ್ 28 ರಿಂದ ಈ ಪ್ರವಾಸ ಆರಂಭವಾಗಲಿದೆ. ಬೆಳಿಗ್ಗೆ 6:20 ಮತ್ತು ಬೆಳಿಗ್ಗೆ 10:05ರ ಸಮಯಕ್ಕೆ ವಿಮಾನವು ಇರಲಿದೆ. ಇದನ್ನು ಹೊರತುಪಡಿಸಿ ನವೆಂಬರ್ 2ರಂದು ಕೂಡಾ ಪ್ರವಾಸ ಇರಲಿದೆ.
ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 63390 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 51370 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 49670 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಬೆಡ್ ಸಹಿತವಾಗಿ ಪ್ಯಾಕೇಜ್ ದರ 46270 ರೂಪಾಯಿ ಆಗಿದೆ. ಬೆಡ್ ಇಲ್ಲದೆ 5-11 ವರ್ಷದ ಮಗುವಿಗೆ ಪ್ಯಾಕೇಜ್ ದರ 43540 ರೂಪಾಯಿ ಆಗಿದೆ.
2ರಿಂದ 4 ವರ್ಷದ ಮಗುವಿಗೆ ಬೆಡ್ ಇಲ್ಲದೆ ಪ್ಯಾಕೇಜ್ ದರವು 23340 ರೂಪಾಯಿ ಆಗಿದೆ. 2 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನ ಶಿಶುಗಳಿದ್ದರೆ, 1500 ರೂಪಾಯಿವರೆಗೆ ವಿಧಿಸಲಾಗುತ್ತದೆ. ಆದರೆ ಅದನ್ನು ವಿಮಾನ ನಿಲ್ದಾಣದ ಕೌಂಟರ್‌ನಲ್ಲಿ ಪಾವತಿ ಮಾಡಬೇಕಾಗುತ್ತದೆ. ಆನ್‌ಲೈನ್ ಮೂಲಕ ಪಾವತಿ ಮಾಡುವಂತಿಲ್ಲ.
ಹೆಸರು, ಲಿಂಗ, ವಯಸ್ಸು ಮೊದಲಾದವುಗಳಲ್ಲಿ ಯಾವುದೇ ಬದಲಾವಣೆಗಳಿದ್ದರೆ, ಒಂದು ಬಾರಿ ಮಾತ್ರ ಬದಲಾವಣೆ ಮಾಡಲು ಅವಕಾಶವಿದೆ. ಅದು ಕೂಡಾ ಪ್ರವಾಸಕ್ಕೂ 21 ದಿನಗಳಿಗೂ ಮುನ್ನ ಮಾಡಬೇಕಾಗುತ್ತದೆ. ವಿಮಾನಯಾನದ ಟಿಕೆಟ್ ಬುಕ್ ಆದ ಬಳಿಕ ಯಾವುದೇ ಬದಲಾವಣೆ ಮಾಡಲು ಅವಕಾಶವಿಲ್ಲ. ಇನ್ನು ಪ್ರವಾಸದಲ್ಲಿ ವಸತಿ ಹಾಗೂ ಆಹಾರ ಸೌಲಭ್ಯವು ಲಭ್ಯವಿರುತ್ತದೆ.
ಇತರೆ ಪ್ರವಾಸ ಪ್ಯಾಕೇಜ್‌ಗಳು
ಇತ್ತೀಚೆಗೆ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಭಾರತ್ ಗೌರವ್ ವಿಶೇಷ ರೋಯರ್ ರಾಜಸ್ಥಾನ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡಿದೆ. ಅಂಡಮಾನ್ ಪ್ರವಾಸ ಪ್ಯಾಕೇಜ್, ಬಾಲಿ ಪ್ರವಾಸ ಪ್ಯಾಕೇಜ್, ತಿರುಪತಿ ಬಾಲಾಜಿಯ ದರ್ಶನ ಪಡೆಯಲು ಬಯಸುವವರಿಗೆ ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡಲಿದೆ.


Click it and Unblock the Notifications