ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಭಾರತ್ ಗೌರವ್ ವಿಶೇಷ ರೋಯಲ್ ರಾಜಸ್ಥಾನ ಪ್ರವಾಸ ಪ್ಯಾಕೇಜ್ ಅನ್ನು ಪ್ರಾರಂಭ ಮಾಡಿದೆ. ಈಗಾಗಲೇ ಐಆರ್‌ಸಿಟಿಸಿ ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಆರಂಭ ಮಾಡಿದೆ. ಈ ಪ್ರವಾಸ ಪ್ಯಾಕೇಜ್‌ನ ಪೂರ್ಣ ಹೆಸರು ಭಾರತ್ ಗೌರವ್ ವಿಶೇಷ ರೋಯರ್ ರಾಜಸ್ಥಾನ ಪ್ರವಾಸ ಪ್ಯಾಕೇಜ್ ಎಂದಾಗಿದೆ. ಇನ್ನು ಈಗಾಗಲೇ ಉದಯಪುರ ಪ್ರವಾಸ ಪ್ಯಾಕೇಜ್ ಅನ್ನು ಐಆರ್‌ಸಿಟಿಸಿ ಆರಂಭಿಸಿದೆ.
ಕೋಲ್ಕತ್ತಾದಲ್ಲಿ ಈ ಪ್ರವಾಸ ಪ್ರಾರಂಭವಾಗಲಿದ್ದು, ಅಜ್ಮೀರ್‌ನ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಉದಯಪುರದ ಅದ್ಭುತ ಸರೋವರಗಳು, ಚಿತ್ತೋರ್‌ಗಢದ ಕೋಟೆ ಮೊದಲಾದ ಪ್ರದೇಶಗಳಿಗೆ ಭೇಟಿ ನೀಡಲು ಅವಕಾಶವಿದೆ. ಹಾಗೆಯೇ ಜೋಧಪುರಕ್ಕೂ ಕೂಡಾ ಭೇಟಿ ನೀಡುವ ಅವಕಾಶವಿದೆ. ಜೈಪುರದ ರಾಜಮನೆತನದ ಅದ್ಭುತವಾದ ನೋಟವನ್ನು ನೀವು ನೋಡಬಹುದಾಗಿದೆ ಎಂದು ಐಆರ್‌ಸಿಟಿಸಿ ತಿಳಿಸಿದೆ.

ಈ ಯೋಜನೆಯ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ....
ಭಾರತ್ ಗೌರವ್ ಸ್ಪೆಷಲ್ ರೋಯಲ್ ರಾಜಸ್ಥಾನ ಪ್ರವಾಸ ಪ್ಯಾಕೇಜ್ 11 ರಾತ್ರಿಗಳು ಮತ್ತು 12 ದಿನದ ಪ್ರವಾಸ ಪ್ಯಾಕೇಜ್ ಆಗಿದೆ. ಅಕ್ಟೋಬರ್ 20, 2023 ರಿಂದ ಈ ಪ್ರವಾಸ ಪ್ಯಾಕೇಜ್ ಆರಂಭವಾಗಲಿದ್ದು, ಅಕ್ಟೋಬರ್ 31, 2023 ರವರೆಗೆ ಪ್ರವಾಸ ನಡೆಯಲಿದೆ. ಒಟ್ಟಾಗಿ 790 ಆಸನಗಳ ಪ್ರವಾಸ ಪ್ಯಾಕೇಜ್ ಇದಾಗಿದೆ. ಅಂದರೆ 790 ಮಂದಿ ಈ ಪ್ರವಾಸಕ್ಕೆ ಟಿಕೆಟ್ ಬುಕ್ ಮಾಡಿಕೊಳ್ಳಬಹುದಾಗಿದೆ.
ಯಾವೆಲ್ಲ ಪ್ರದೇಶಗಳಿಗೆ ಪ್ರವಾಸ?
ರೋಯರ್ ರಾಜಸ್ಥಾನ ಪ್ರವಾಸ ಪ್ಯಾಕೇಜ್‌ನಲ್ಲಿ ಅಜ್ಮೀರ್, ಉದಯಪುರ, ಚಿತ್ತೋರಗಢ, ಅಬು ರೋಡ್, ಜೋಧಪುರ, ಜೈಸಲ್ಮಾರ್, ಬಿಕಾನೆರ್, ಜೈಪುರಕ್ಕೆ ಭೇಟಿ ನೀಡಬಹುದಾಗಿದೆ. ಪ್ರವಾಸ ಮಾಡಲು ಬಯಸುವವರು ಕೋಲ್ಕತ್ತಾ, ಬಂಡೆಲ್ ಜಂಕ್ಷನ್, ಬರ್ಧಮಾನ್, ದುರ್ಗಾಪುರ್, ಅಸನ್ಸೋಲ್, ಧನ್ಬಾದ್, ಗೋಮೋಹ್, ಪರಸ್ನಾಥ್, ಹಜಾರಿಬಾಗ್ ರಸ್ತೆ, ಕೊಡೆರ್ಮಾ, ಗಯಾ, ಡೆಹ್ರಿ ಆನ್ ಸನ್, ಸಸಾರಾಮ್, ಡಿಡಿ ಉಪಾಧ್ಯಾಯದಲ್ಲಿ ನೀವು ರೈಲನ್ನು ಏರಬಹುದು ಮತ್ತು ಇಳಿಯಬಹುದಾಗಿದೆ.
ಅಜ್ಮೀರ್: ಅಜ್ಮೀರ್ ಶರೀಫ್ ದರ್ಗಾ, ಬ್ರಹ್ಮ ದೇವಾಲಯ ಮತ್ತು ಪುಷ್ಕರ್ ಸರೋವರ
ಉದಯಪುರ: ಸಿಟಿ ಪ್ಯಾಲೇಸ್, ಫತೇಹ್ ಸಾಗರ್ ಸರೋವರ, ಮೋತಿ ಮ್ಯಾಗ್ರಿ ಮತ್ತು ಸಹೇಲಿಯೋನ್ ಕಾ ಬಾರಿ
ಚಿತ್ತೋರಗಢ: ಚಿತ್ತೋರಗಢ ಕೋಟೆ
ಅಬು ರೋಡ್: ದಿಲ್ವಾರಾ ದೇವಸ್ಥಾನ, ನಕ್ಕಿ ಸರೋವರ, ಓಂ ಶಾಂತಿ ಭವನ
ಜೋಧಪುರ: ಮೆಹ್ರಾನ್‌ಗಢ ಕೋಟೆ ಮತ್ತು ಉಮೈದ್ ಭವನ
ಜೈಸಲ್ಮೇರ್: ಸೋನಾರ್ ಕೆಲ್ಲ, ಸನ್ ಸೆಟ್ ಪಾಯಿಂಟ್
ಬಿಕಾನೆರ್: ಜುನಾಗರ್ ಫೋರ್ಟ್, ಕ್ಯಾಮೆಲ್ ಬ್ರೀಡಿಂಗ್ ಸೆಂಟರ್
ಜೈಪುರ: ಅಂಬರ್ ಕೋಟೆ, ಸಿಟಿ ಪ್ಯಾಲೇಸ್, ಹವಾ ಮಹಲ್, ಗೋವಿಂದ ಮಂದಿರ
ಪ್ಯಾಕೇಜ್ ದರ ವಿವರ
ಇನ್ನು ಈ ಪ್ರವಾಸ ಪ್ಯಾಕೇಜ್‌ನಲ್ಲಿ ರೈಲು ಪ್ರವಾಸ, ಬಸ್‌ನ ಖರ್ಚು ಒಳಗೊಳ್ಳುತ್ತದೆ. ಹಾಗೆಯೇ ವಸತಿ, ಆಹಾರ, ವಿಮೆ ಕೂಡಾ ಈ ಪ್ಯಾಕೇಜ್ ಮೊತ್ತದಲ್ಲಿ ಸೇರ್ಪಡೆಯಾಗಿರುತ್ತದೆ. ಇಕಾನಮಿ ಕ್ಲಾಸ್‌ಗೆ 20,650 ರೂಪಾಯಿ, ಸ್ಟಾಡರ್ಡ್ ಕ್ಲಾಸ್‌ಗೆ 30,960 ರೂಪಾಯಿ ಮತ್ತು ಕಂಫರ್ಟ್ ಕ್ಲಾಸ್‌ಗೆ 34110 ರೂಪಾಯಿ ಪ್ಯಾಕೇಜ್ ದರವಾಗಿದೆ.
ಇತರೆ ಪ್ಯಾಕೇಜ್‌ಗಳ ಬಗ್ಗೆ ತಿಳಿಯಿರಿ
ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹೊಸದಾಗಿ ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಆರಂಭ ಮಾಡುತ್ತಿದೆ. ಈಗಾಗಲೇ ಅಂಡಮಾನ್ ಪ್ರವಾಸ ಪ್ಯಾಕೇಜ್ ಹಾಗೂ ಬಾಲಿ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡಿರುವ ಐಆರ್‌ಸಿಟಿಸಿ, ಇತ್ತೀಚೆಗೆ ತಿರುಪತಿ ಬಾಲಾಜಿಯ ದರ್ಶನ ಪಡೆಯಲು ಬಯಸುವವರಿಗೆ ವಿಶೇಷ ಪ್ಯಾಕೇಜ್ ಅನ್ನು ಆರಂಭ ಮಾಡಿದೆ.


Click it and Unblock the Notifications