ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡುತ್ತಿದೆ. ಹಲವಾರು ಧಾರ್ಮಿಕ ಪ್ರದೇಶಗಳಿಗೆ ಪ್ರವಾಸ ಪ್ಯಾಕೇಜ್ ಅನ್ನು ಐಆರ್‌ಸಿಟಿಸಿ ಆರಂಭಿಸಿದೆ. ಅಯೋಧ್ಯೆ ಪ್ರವಾಸ ಪ್ಯಾಕೇಜ್ ಅನ್ನು ಈ ಹಿಂದೆ ಆರಂಭಿಸಿದ್ದ ಐಆರ್‌ಸಿಟಿಸಿ ಈಗ ಶ್ರೀಲಂಕಾ ರಾಮಾಯಣ ಪ್ರವಾಸ ಪ್ಯಾಕೇಜ್ ಅನ್ನು ಪ್ರಾರಂಭ ಮಾಡಿದೆ.
ಶ್ರೀಲಂಕಾ ಪ್ರವಾಸ ಪ್ಯಾಕೇಜ್ ಸುಮಾರು ಆರು ರಾತ್ರಿಗಳು ಮತ್ತು ಏಳು ರಾತ್ರಿಗಳ ಪ್ರವಾಸ ಪ್ಯಾಕೇಜ್ ಆಗಿದೆ. ಇದರಲ್ಲಿ ನಾವು ಕೊಲಂಬೊ, ಕ್ಯಾಂಡಿ, ನೆಗೊಂಬೊ, ನುವಾರ ಎಲಿಯಾ ಪ್ರವಾಸವನ್ನು ಮಾಡಲು ಸಾಧ್ಯವಾಗುತ್ತದೆ. ಈ ಪ್ಯಾಕೇಜ್‌ನಲ್ಲಿ ವಿಮಾನಯಾನವು ಸೇರ್ಪಡೆಯಾಗಿರುತ್ತದೆ. ಹಾಗೆಯೇ ಸ್ಥಳೀಯವಾಗಿ ಬಸ್‌ನಲ್ಲಿ ಪ್ರವಾಸ ಮಾಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಪ್ಯಾಕೇಜ್ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಶ್ರೀಲಂಕಾ ರಾಮಾಯಣ ಪ್ಯಾಕೇಜ್ ವಿವರ
ಪ್ಯಾಕೇಜ್ ಹೆಸರು: ಶ್ರೀಲಂಕಾ - ದಿ ರಾಮಾಯಣ ಸಾಗ
ಯಾವೆಲ್ಲ ಪ್ರದೇಶ: ಕೊಲಂಬೊ, ಕ್ಯಾಂಡಿ, ನೆಗೊಂಬೊ, ನುವಾರ ಎಲಿಯಾ
ಪ್ರಯಾಣ: ವಿಮಾನದಲ್ಲಿ ಪ್ರಯಾಣ
ಅವಧಿ: ಆರು ರಾತ್ರಿಗಳು, 7 ದಿನಗಳು
ದಿನಾಂಕ: ಸೆಪ್ಟೆಂಬರ್ 21-27, 22-28
ಪ್ಯಾಕೇಜ್ ದರ ಎಷ್ಟಿದೆ ನೋಡಿ
ಸೆಪ್ಟೆಂಬರ್ 21-27ರ ಪ್ಯಾಕೇಜ್‌ನಲ್ಲಿ ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 80500 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 65400 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 63600 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಬೆಡ್ ಇಲ್ಲದೆ ಪ್ಯಾಕೇಜ್ ದರ 51200 ರೂಪಾಯಿ ಆಗಿದೆ. 2-11 ವರ್ಷದ ಮಗುವಿಗೆ ಬೆಡ್ ಇಲ್ಲದೆ ಪ್ಯಾಕೇಜ್ ದರ 48900 ರೂಪಾಯಿ ಆಗಿದೆ.
ಸೆಪ್ಟೆಂಬರ್ 22-28ರ ಪ್ಯಾಕೇಜ್‌ನಲ್ಲಿ ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 80500 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 65900 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 64300 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಬೆಡ್ ಇಲ್ಲದೆ ಪ್ಯಾಕೇಜ್ ದರ 52400 ರೂಪಾಯಿ ಆಗಿದೆ. 2-11 ವರ್ಷದ ಮಗುವಿಗೆ ಬೆಡ್ ಇಲ್ಲದೆ ಪ್ಯಾಕೇಜ್ ದರ 50200 ರೂಪಾಯಿ ಆಗಿದೆ.
ಪ್ಯಾಕೇಜ್‌ನಲ್ಲಿ ಏನೆಲ್ಲ ಇದೆ?
* ಹೋಗುವ ಹಾಗೂ ಬರುವ ವಿಮಾನ ದರ
* ಟ್ವಿನ್/ಡಿಬಿಎಲ್/ಟ್ರಿಪಲ್ ಹಂಚಿಕೆ ಆಧಾರದ ಮೇಲೆ ಮೂರು ಸ್ಟಾರ್ ಹೋಟೆಲ್‌ನಲ್ಲಿ ಹೋಟೆಲ್ ವಸತಿ.
* 06 ಉಪಹಾರ + 06 ಮಧ್ಯಾಹ್ನ + 06 ರಾತ್ರಿಯ ಊಟ
* ಮೇಲೆ ತಿಳಿಸಿದಂತೆ ಪ್ರವೇಶ ಟಿಕೆಟ್‌ಗಳೊಂದಿಗೆ ಎಲ್ಲಾ ಸ್ಥಳಗಳಿಗೆ ವೆಚ್ಚ ಪ್ಯಾಕೇಜ್‌ನಲ್ಲಿ ಸೇರ್ಪಡೆ
* ಶೇಕಡ 5 ರಷ್ಟು ಜಿಎಸ್‌ಟಿ
* ಶೇಕಡ 0.5 ಟಿಸಿಎಸ್ (ಕ್ಲೈಂಟ್ ಆದಾಯ ತೆರಿಗೆ ದಾಖಲೆಯಲ್ಲಿ TCS ಮೊತ್ತವನ್ನು ಠೇವಣಿ ಮಾಡಲಾಗುತ್ತದೆ, ಆದಾಯ ತೆರಿಗೆ ನಿಯಮಗಳ ಪ್ರಕಾರ ಕ್ಲೈಂಟ್ ಐಟಿ ಇಲಾಖೆಯಿಂದ ಮರುಪಾವತಿಯನ್ನು ಪಡೆಯಲು ಸಾಧ್ಯವಾಗುತ್ತದೆ)
* ಪ್ರಯಾಣ ವಿಮೆ (80 ವರ್ಷಗಳವರೆಗೆ)
* ಐಆರ್‌ಸಿಟಿಸಿ ಟೂರ್ ಮ್ಯಾನೇಜರ್ ಸೇವೆಗಳು.
* ವೀಸಾ ಶುಲ್ಕಗಳು
ಪ್ಯಾಕೇಜ್‌ನಲ್ಲಿ ಏನು ಸೇರಿರುವುದಿಲ್ಲ?
* ವಿಮಾನ ನಿಲ್ದಾಣ ತೆರಿಗೆಗಳು ಹೆಚ್ಚಳವಾಗಿದ್ದರೆ, ಇಂಧನ ಸರ್ಚಾರ್ಜ್ ಸೇರಿರುವುದಿಲ್ಲ
* ಊಟದ ಮೆನುವಿನಲ್ಲಿ ಬೇರೆ ಆಯ್ಕೆಗಳು ಇಲ್ಲ
* ಚಾಲಕರು, ಮಾರ್ಗದರ್ಶಿಗಳು, ಪ್ರತಿನಿಧಿಗಳಿಗೆ ಟಿಪ್ಸ್
* ವೈಯಕ್ತಿಕ ವೆಚ್ಚಗಳು, ಉದಾಹರಣೆಗೆ ಲಾಂಡ್ರಿ ವೆಚ್ಚಗಳು, ವೈನ್, ಆಹಾರ ಮತ್ತು ಪಾನೀಯಗಳು


Click it and Unblock the Notifications