ಪ್ರಯಾಣ ಮಾಡುವ ವಿಚಾರಕ್ಕೆ ಬಂದಾಗ ನಮಗೆ ರೈಲ್ವೆ ಪ್ರಯಾಣ ಎಂದಿಗೂ ಕೂಡಾ ಆರಾಮದಾಯಕವಾಗಿರುತ್ತದೆ. ಆದರೆ ರೈಲ್ವೆ ಟಿಕೆಟ್ ಎಂದಿಗೂ ಕೆಲವು ದಿನಗಳಿಗೂ ಮುನ್ನವೇ ಬುಕ್ ಮಾಡಬೇಕಾಗುತ್ತದೆ. ಆದರೆ ನೀವು ಪ್ರಯಾಣಕ್ಕೂ ಕೊನೆಯ ಕ್ಷಣದವರೆಗೂ ಟಿಕೆಟ್ ಬುಕ್ ಮಾಡದಿದ್ದರೆ ಏನು ಮಾಡುವುದು.
ಇನ್ನು ನೀವು ತುರ್ತಾಗಿ ಬೇರೆ ನಗರಕ್ಕೆ ಪ್ರಯಾಣ ಮಾಡಬೇಕಾದ ಸ್ಥಿತಿ ಉಂಟಾದಾಗ ಅಥವಾ ರೈಲ್ವೆ ಟಿಕೆಟ್ ಅನ್ನು ನೀವು ಬುಕ್ ಮಾಡದಿದ್ದರೆ ಏನು ಮಾಡುವುದು?. ಇಂತಹ ಸಂದರ್ಭ ಎದುರಾದಾಗ ನೀವು ಆತಂಕಕ್ಕೆ ಒಳಗಾಗಬೇಕಾಗಿಲ್ಲ. ನೀವು ಒಂದು ದಿನಕ್ಕೂ ಮುನ್ನವೇ ತತ್ಕಾಲ್ ಟಿಕೆಟ್ ಅನ್ನು ಬುಕ್ ಮಾಡುವ ಅವಕಾಶ ನಿಮಗೆ ಐಆರ್‌ಸಿಟಿಸಿ ನಿಮಗೆ ನೀಡುತ್ತದೆ. ಏನಿದು ತತ್ಕಾಲ್ ಟಿಕೆಟ್, ಹೇಗೆ ಬುಕ್ಕಿಂಗ್, ಶುಲ್ಕವೆಷ್ಟು ಎಂಬ ಬಗ್ಗೆ ತಿಳಿಯಿರಿ...

ತತ್ಕಾಲ್ ಟಿಕೆಟ್ ಎಂದರೇನು ತಿಳಿಯಿರಿ
ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಷನ್ ಮೂಲಕ ನಾವು ತತ್ಕಾಲ್ ಟಿಕೆಟ್ ಅನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ. ಕಡಿಮೆ ಲಭ್ಯತೆ ಹಾಗೂ ಅಧಿಕ ಬೇಡಿಕೆಯ ಕಾರಣದಿಂದಾಗಿ ಈ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಕೊಂಚ ಕಷ್ಟವಾಗಿದೆ. ಐಆರ್‌ಸಿಟಿಸಿಯ ತತ್ಕಾಲ್ ಯೋಜನೆಯು ಹೆಚ್ಚಿನ ಬೇಡಿಕೆಯ ಅವಧಿಯಲ್ಲಿ ರೈಲ್ವೆ ಟಿಕೆಟ್ ಅನ್ನು ಪಡೆಯಲು ಉತ್ತಮ ಮಾರ್ಗವಾಗಿದೆ.
ಸಾಮಾನ್ಯವಾಗಿಯೇ ರೈಲ್ವೆ ಟಿಕೆಟ್ ಬುಕ್ಕಿಂಗ್ ತಡವಾದರೆ ಆಸನ ಅಥವಾ ಸೀಟು ಲಭ್ಯವಾಗುವುದು ಕಷ್ಟವಾಗಿದೆ. ರೈಲು ಹೊರಡುವ ಮೊದಲು ಒಂದು ದಿನ ಮಾತ್ರ ತತ್ಕಾಲ್ ಟಿಕೆಟ್ ಲಭ್ಯವಿರುವುದರಿಂದ, ಟಿಕೆಟ್ ಬುಕ್ಕಿಂಗ್ ಸವಾಲಾಗಿರುತ್ತದೆ. ಐಆರ್‌ಸಿಟಿಸಿಯ ಮೂಲಕ ತತ್ಕಾಲ್ ಟಿಕೆಟ್ ಖರೀದಿಸುವುದು ಮತ್ತು ಬುಕ್ ಮಾಡುವುದು ಹೇಗೆ ಎಂಬುದನ್ನು ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ...
ತತ್ಕಾಲ್ ಟಿಕೆಟ್ ಬುಕ್ ಮಾಡುವುದು ಹೇಗೆ?
ಐಆರ್‌ಸಿಟಿಸಿ ಖಾತೆಯನ್ನು ರಚಿಸಿ: ತತ್ಕಾಲ್ ಟಿಕೆಟ್ ಬುಕ್ ಮಾಡಲು ನೀವು ಐಆರ್‌ಸಿಟಿಸಿ ಖಾತೆಯನ್ನು ಹೊಂದಿರಬೇಕಾಗುತ್ತದೆ. ನೀವು ಖಾತೆಯನ್ನು ಹೊಂದಿರದಿದ್ದರೆ, ನೀವು ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಖಾತೆಯನ್ನು ರಚನೆ ಮಾಡಬಹುದು. ನಿಮ್ಮ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ವಿಳಾಸವನ್ನು ನಮೂದಿಸುವ ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಪ್ರಯಾಣದ ಪ್ಲ್ಯಾನ್ ಅನ್ನು ಮಾಡಿ: ನೀವು ತತ್ಕಾಲ್ ಟಿಕೆಟ್ ಅನ್ನು ಖರೀದಿಸುವ ಮುನ್ನ ಸರಿಯಾದ ಪ್ರಯಾಣ ಪ್ಲ್ಯಾನ್ ಅನ್ನು ಹೊಂದಿರುವುದು ಮುಖ್ಯವಾಗುತ್ತದೆ. ಟ್ರೈನ್ ನಂಬರ್, ಬೋರ್ಡಿಂಗ್ ಸಮಯ, ನೀವು ತಲುಪಲು ಬಯಸುವ ಪ್ರದೇಶ, ಪ್ರಯಾಣ ಇತರೆ ಮಾಹಿತಿಯನ್ನು ಮೊದಲೇ ನಿರ್ಧಾರ ಮಾಡಿ.
ಹಂತ 1: ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಅಪ್ಲಿಕೇಷನ್ ಅನ್ನು ತೆರೆಯಿರಿ. ಖಾತೆಗೆ ಲಾಗಿನ್ ಆಗಿ.
ಹಂತ 2: Booking ಟ್ಯಾಬ್ ಮೇಲೆ ಕ್ಲಿಕ್ ಮಾಡಿ, ಬಳಿಕ Tatkal ಆಯ್ಕೆಯನ್ನು ಮಾಡಿ.
ಹಂತ 3: ರೈಲು ಸಂಖ್ಯೆ, ಪ್ರದೇಶ, ತಲುಪಲು ಬಯಸುವ ಪ್ರದೇಶ, ದಿನಾಂಕ ಸೇರಿದಂತೆ ನಿಮ್ಮ ಪ್ರಯಾಣದ ಸಂಪೂರ್ಣ ಮಾಹಿತಿಯನ್ನು ನಮೂದಿಸಿ
ಹಂತ 4: ಬಳಿಕ Search ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ತತ್ಕಾಲ್ ಲಭ್ಯತೆ ಪರಿಶೀಲಿಸಿ: ನಿಗದಿತ ಸಮಯದವರೆಗೆ ಮಾತ್ರ ತತ್ಕಾಲ್ ಟಿಕೆಟ್ ಲಭ್ಯವಿರುತ್ತದೆ. ಪ್ರಯಾಣ ಆರಂಭವಾಗುವುದಕ್ಕೂ ಒಂದು ದಿನಕ್ಕೂ ಮುನ್ನ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗುತ್ತದೆ. ರಾತ್ರಿ 10 ಗಂಟೆಯಿಂದ ಎಸಿ ಕ್ಲಾಸ್‌ಗೆ ಮತ್ತು ನಾನ್ ಎಸಿ ಕ್ಲಾಸ್‌ಗೆ ರಾತ್ರಿ 11 ಗಂಟೆಯಿಂದ ತತ್ಕಾಲ್ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗುತ್ತದೆ. ಇದನ್ನು ನೀವು ವೆಬ್‌ಸೈಟ್ ಅಥವಾ ಆಪ್ ಮೂಲಕ ಚೆಕ್ ಮಾಡಬೇಕು.
ಪ್ರಯಾಣಿಕರ ಮಾಹಿತಿಯನ್ನು ನಮೂದಿಸಿ: ರೈಲು ಹಾಗೂ ಕ್ಲಾಸ್ ಅನ್ನು ಆಯ್ಕೆ ಮಾಡಿದ ಬಳಿಕ ಪ್ರಯಾಣಿಕರ ಮಾಹಿತಿಯನ್ನು ನಮೂದಿಸಬೇಕು. ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ, ಗುರುತಿನ ಪುರಾವೆ ಮಾಹಿತಿಯನ್ನು ನಮೂದಿಸಿ. ಅದಕ್ಕಾಗಿ ನೀವು ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಎಲ್ಲ ಅಗತ್ಯ ದಾಖಲೆಗಳನ್ನು ನೀವು ಹೊಂದಿರಬೇಕಾಗುತ್ತದೆ.
ಪಾವತಿಯನ್ನು ನೀವು ಮಾಡಿ: ಪ್ರಯಾಣಿಕರ ಮಾಹಿತಿ ಭರ್ತಿ ಮಾಡಿದ ಬಳಿಕ ನೀವು ಟಿಕೆಟ್ ಬುಕ್ಕಿಂಗ್‌ಗೆ ಪಾವತಿ ಮಾಡಬೇಕಾಗುತ್ತದೆ. ಐಆರ್‌ಸಿಟಿಸಿಯಲ್ಲಿ ನೀವು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಮೊಬೈಲ್ ವ್ಯಾಲೆಟ್ ಮೂಲಕ ಪಾವತಿಯನ್ನು ಮಾಡಬಹುದಾಗಿದೆ. ನಿಮಗೆ ಉತ್ತಮವಾದ ಪಾವತಿ ವಿಧಾನವನ್ನು ಆಯ್ಕೆ ಮಾಡಿ, ವಹಿವಾಟು ಸಂಪೂರ್ಣಗೊಳಿಸಿ.
ಬುಕ್ಕಿಂಗ್ ಖಚಿತತೆ: ನಿಮಗೆ ಈ ಟಿಕೆಟ್ ಬುಕ್ಕಿಂಗ್‌ಗೆ ಕನ್‌ಫರ್ಮೇಷನ್ ಮೆಸೇಜ್ ಲಭ್ಯವಾಗುತ್ತದೆ. ಪಿಎನ್‌ಆರ್ ನಂಬರ್ ಲಭ್ಯವಾಗುತ್ತದೆ. ಅದರ ಪ್ರಿಂಟ್ಔಟ್ ಇಟ್ಟುಕೊಳ್ಳಬಹುದು ಅಥವಾ ಇ-ಟಿಕೆಟ್ ಡೌನ್‌ಲೋಡ್ ಮಾಡಬಹುದಾಗಿದೆ.
ಐಆರ್‌ಸಿಟಿಸಿ ತತ್ಕಾಲ್ ಟಿಕೆಟ್ ಶುಲ್ಕ: ಐಆರ್‌ಸಿಟಿಸಿ ತತ್ಕಾಲ್ ಯೋಜನೆಗೆ ಸೀಟುಗಳನ್ನು ಕಾಯ್ದಿರಿಸಬೇಕಾಗಿರುವುದರಿಂದ, ಬುಕಿಂಗ್‌ಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ. ಆದ್ದರಿಂದ, ಸಾಮಾನ್ಯ ಟಿಕೆಟ್‌ಗಳ ಬೆಲೆ 900 ರೂ ಆಗಿದ್ದರೆ, ತತ್ಕಾಲ್ ಟಿಕೆಟ್‌ಗಳ ಬೆಲೆ ಸುಮಾರು 1300 ರೂಪಾಯಿ ಆಗಿರುತ್ತದೆ. ಎರಡನೇ ದರ್ಜೆಯ ಟಿಕೆಟ್‌ಗೆ ಮೂಲ ದರದ ಶೇಕಡ 10ರಷ್ಟು ಶುಲ್ಕ ಮತ್ತು ಇತರೆ ಟಿಕೆಟ್‌ಗೆ ಮೂಲ ದರದ ಶೇಕಡ 30ರಷ್ಟು ಶುಲ್ಕ ವಿಧಿಸಲಾಗುತ್ತದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications