ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಈ ಪೈಕಿ ಬಹುತೇಕ ಧಾರ್ಮಿಕ ಸ್ಥಳಗಳಿಗೆ ಇರುವ ಪ್ರವಾಸ ಪ್ಯಾಕೇಜ್ ಆಗಿದ್ದರೆ, ಇನ್ನೂ ಹಲವಾರು ವಿದೇಶ ಪ್ರವಾಸ ಪ್ಯಾಕೇಜ್‌ಗಳನ್ನು ಕೂಡಾ ಐಆರ್‌ಸಿಟಿಸಿ ಪರಿಚಯಿಸಿದೆ.
ವಿದೇಶ ಪ್ರವಾಸ ಎಂದಾಗ ನೀವು ತಲೆ ಬಿಸಿಯಾಗಬೇಕಾಗಿಲ್ಲ. ಯಾಕೆಂದರೆ ಈ ಪ್ರವಾಸ ಪ್ಯಾಕೇಜ್‌ನಲ್ಲಿ ನೀವು ಕಡಿಮೆ ಹಣದಲ್ಲಿಯೇ ಪ್ರವಾಸ ಮಾಡಲು ಸಾಧ್ಯವಾಗುತ್ತದೆ. ಅಂದರೆ 50 ರಿಂದ 60 ಸಾವಿರ ರೂಪಾಯಿ ಇದ್ದರೆ, ಈ ಪ್ಯಾಕೇಜ್ ಖರೀದಿ ಮಾಡಿ ವಿದೇಶ ಪ್ರವಾಸ ಮಾಡಬಹುದು. ಈ ಪ್ಯಾಕೇಜ್ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಥೈಲ್ಯಾಂಡ್ ಪ್ರವಾಸ ಪ್ಯಾಕೇಜ್ ವಿವರ
ಪ್ಯಾಕೇಜ್ ಹೆಸರು: ಟ್ರೆಜರ್ಸ್ ಆಫ್ ಥೈಲ್ಯಾಂಡ್ ಎಕ್ಸ್ ಹೈದಾರಾಬಾದ್
ಯಾವೆಲ್ಲ ಸ್ಥಳ?: ಪಟ್ಟಾಯ, ಬ್ಯಾಂಕಾಕ್
ಪ್ರವಾಸ ಹೇಗೆ?: ವಿಮಾನ
ಎಷ್ಟು ದಿನ?: ಮೂರು ರಾತ್ರಿಗಳು, ನಾಲ್ಕು ದಿನಗಳ ಪ್ರವಾಸ
ಪ್ರವಾಸ ದಿನಾಂಕ: ಡಿಸೆಂಬರ್ 13ರಿಂದ ಡಿಸೆಂಬರ್ 16
ಪ್ಯಾಕೇಜ್ ದರ ಪರಿಶೀಲನೆ ಮಾಡಿ
ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 65180 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 55610 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 55610 ರೂಪಾಯಿ ಆಗಿದೆ. ಮಗುವಿಗೆ ಬೆಡ್ ಸಹಿತವಾಗಿ ಪ್ಯಾಕೇಜ್ ದರ 53450 ರೂಪಾಯಿ ಆಗಿದೆ. ಬೆಡ್ ಇಲ್ಲದೆ ಮಗುವಿಗೆ ಪ್ಯಾಕೇಜ್ ದರ 47710 ರೂಪಾಯಿ ಆಗಿದೆ.
ಯಾವೆಲ್ಲ ಪ್ರದೇಶಕ್ಕೆ ಪ್ರವಾಸ?
ದಿನ 1: ರಾತ್ರಿ 9 ಗಂಟೆಗೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವಾಸ ಆರಂಭ. 06:05 ಗಂಟೆಗೆ ಡಿಎಂಕೆಗೆ ಆಗಮಣ. ಪಟ್ಟಾಯಕ್ಕೆ ಹೋಗಿ ಅಲ್ಲಿಯೇ ಹೋಟೆಲ್‌ನಲ್ಲಿ ಚೆಕ್ ಇನ್. ಉಪಹಾರದ ನಂತರ, ಊಟದ ತನಕ ಹೋಟೆಲ್‌ನಲ್ಲಿ ವಿಶ್ರಾಂತಿ.
ಊಟದ ನಂತರ ಪಟ್ಟಾಯದಲ್ಲಿರುವ ಜೆಮ್ಸ್ ಗ್ಯಾಲರಿಗೆ ಭೇಟಿ. ಸಂಜೆ ಅಲ್ಕಾಜರ್ ಶೋ. ಭಾರತೀಯ ರೆಸ್ಟೋರೆಂಟ್‌ನಲ್ಲಿ ರಾತ್ರಿ ಊಟ. ಪಟ್ಟಾಯದಲ್ಲಿರುವ ಹೋಟೆಲ್‌ನಲ್ಲಿ ರಾತ್ರಿ ತಂಗುವುದು. ಉಪಾಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಪ್ಯಾಕೇಜ್‌ನಲ್ಲಿ ಸೇರಿರುತ್ತದೆ.
ದಿನ 2: ಬೆಳಗಿನ ಉಪಾಹಾರದ ನಂತರ, ಕೋರಲ್ ಐಲ್ಯಾಂಡ್ ಪ್ರವಾಸ. ಮಧ್ಯಾಹ್ನದ ಊಟ. ನಾಂಗ್ ನೂಚ್ ಟ್ರಾಪಿಕಲ್ ಗಾರ್ಡನ್‌ಗೆ ಭೇಟಿ. ಭಾರತೀಯ ರೆಸ್ಟೋರೆಂಟ್‌ನಲ್ಲಿ ಭೋಜನ. ಪಟ್ಟಾಯದಲ್ಲಿರುವ ಹೋಟೆಲ್‌ನಲ್ಲಿ ರಾತ್ರಿ ತಂಗುವುದು. ಉಪಾಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಪ್ಯಾಕೇಜ್‌ನಲ್ಲಿ ಸೇರಿರುತ್ತದೆ.
ದಿನ 3: ಹೋಟೆಲ್‌ನಲ್ಲಿ ಉಪಹಾರವಾಗಿ ಚೆಕ್ ಔಟ್. ಸಫಾರಿ ವಿಶ್ವ ಪ್ರವಾಸ ಮತ್ತು ಸಾಗರ ಉದ್ಯಾನವನಕ್ಕೆ ಭೇಟಿ. ಭಾರತೀಯ ರೆಸ್ಟೋರೆಂಟ್‌ನಲ್ಲಿ ಊಟ. ಊಟದ ನಂತರ ಹೋಟೆಲ್‌ಗೆ ಚೆಕ್-ಇನ್. ಭಾರತೀಯ ರೆಸ್ಟೋರೆಂಟ್‌ನಲ್ಲಿ ಸಂಜೆ ಊಟ. ಬ್ಯಾಂಕಾಕ್‌ನಲ್ಲಿರುವ ಹೋಟೆಲ್‌ನಲ್ಲಿ ರಾತ್ರಿ ತಂಗುವುದು. (ಚಾಫ್ರಾಯಾ ಕ್ರೂಸ್‌ನಲ್ಲಿ ರಾತ್ರಿ ಭೋಜನ - ಆಪ್‌ಷನಲ್). ಉಪಾಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಪ್ಯಾಕೇಜ್‌ನಲ್ಲಿ ಸೇರಿರುತ್ತದೆ.
ದಿನ 4: ಬೆಳಗಿನ ಉಪಾಹಾರದ ನಂತರ ಹೋಟೆಲ್ ಚೆಕ್ ಔಟ್. ಬ್ಯಾಂಕಾಕ್ ನಗರಕ್ಕೆ ಪ್ರವಾಸ. ಬ್ಯಾಂಕಾಕ್‌ನಲ್ಲಿರುವ ಭಾರತೀಯ ರೆಸ್ಟೋರೆಂಟ್‌ನಲ್ಲಿ ಊಟ. ವಾಟ್ ಟ್ರಿಮಿಟ್ (ಸಾಲಿಡ್ ಗೋಲ್ಡನ್ ಬುದ್ಧನ ದೇವಾಲಯ), ವಾಟ್ ಫೋ (ಒರಗಿರುವ ಬುದ್ಧನ ದೇವಾಲಯ) ಮತ್ತು ಇಂದ್ರ ಮಾರುಕಟ್ಟೆಯಲ್ಲಿ ಶಾಪಿಂಗ್. ಸಂಜೆ 6 ಗಂಟೆಗೆ ವಿಮಾನ ನಿಲ್ಧಾಣಕ್ಕೆ ತಲುಪಿ, ವಾಪಾಸ್ ಬರುವುದು. ಉಪಾಹಾರ, ಮಧ್ಯಾಹ್ನದ ಊಟ ಪ್ಯಾಕೇಜ್‌ನಲ್ಲಿ ಸೇರಿರುತ್ತದೆ.


Click it and Unblock the Notifications