ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹೊಸದಾಗಿ ಹಲವಾರು ಪ್ರವಾಸ ಪ್ಯಾಕೇಜ್‌ಗಳನ್ನು ಆರಂಭ ಮಾಡುತ್ತಿದೆ. ಈಗಾಗಲೇ ಅಂಡಮಾನ್ ಪ್ರವಾಸ ಪ್ಯಾಕೇಜ್ ಹಾಗೂ ಬಾಲಿ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡಿರುವ ಐಆರ್‌ಸಿಟಿಸಿ ಈಗ ತಿರುಪತಿ ಬಾಲಾಜಿಯ ದರ್ಶನ ಪಡೆಯಲು ಬಯಸುವವರಿಗೆ ವಿಶೇಷ ಪ್ಯಾಕೇಜ್ ಅನ್ನು ಆರಂಭ ಮಾಡಿದೆ. ಈ ಪ್ಯಾಕೇಜ್ ಬಗ್ಗೆ ನಾವಿಲ್ಲಿ ವಿವರಣೆ ನೀಡಿದ್ದೇವೆ.
ಈ ಹಿಂದೆ ಐಆರ್‌ಸಿಟಿಸಿ ಹೊಸದಾಗಿ ಪ್ರವಾಸವನ್ನು ಆರಂಭ ಮಾಡಿದೆ. ಭಾರತ್ ಗೌರವ್ ರೈಲು ಪ್ರವಾಸವನ್ನು ಐಆರ್‌ಸಿಟಿಸಿ ಆರಂಭ ಮಾಡಿದ್ದು, ಇದು ಜುಲೈ 1ರಿಂದ ಶುರುವಾಗಲಿದೆ. ಇದಕ್ಕೆ ಮಾ ವೈಷ್ಣೋ ದೇವಿ ದರ್ಶನ್ ಯಾತ್ರಾ ಎಂದು ಐಆರ್‌ಸಿಟಿಸಿ ಹೆಸರಿರಿಸಿದೆ. ಹಲವಾರು ಪ್ರದೇಶಗಳಿಗೆ ಈ ರೈಲು ಪ್ರವಾಸವಿದೆ. ಈಗ ತಿರುಪತಿ ಬಾಲಾಜಿಯ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ನೀಡುವ ಪ್ರವಾಸ ಪ್ಯಾಕೇಜ್ ಆರಂಭಿಸಲಾಗಿದೆ.

"ತಿರುಪತಿಯು ಹಿಂದೂಗಳಿಂದ ಪೂಜಿಸಲ್ಪಡುವ ದೇವಾಲಯಗಳ ಪಟ್ಟಣವಾಗಿದೆ. ಪ್ರತಿ ವರ್ಷವೂ ಕೂಡಾ ಲಕ್ಷಾಂತರ ಭಕ್ತರು ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಬರುತ್ತಾರೆ. ಈ ಅದ್ಭುತ ದೇವಾಲಯವು ತಿರುಮಲ ಬೆಟ್ಟದ ಮೇಲಿದ್ದು, ತಿರುಪತಿ ಪಟ್ಟಣ ಬೆಟ್ಟದ ಬುಡದಲ್ಲಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿರುವ ತಿರುಪತಿಗೆ ನಿಮ್ಮನ್ನು ಸ್ವಾಗತಿಸುತ್ತೇವೆ," ಎಂದು ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹೇಳಿದೆ.
ತಿರುಪತಿ ಬಾಲಾಜಿ ದರ್ಶನ ಪ್ಯಾಕೇಜ್ ವಿವರ
ತಿರುಪತಿ ಬಾಲಾಜಿ ದರ್ಶನ ಪ್ಯಾಕೇಜ್ ಸುಮಾರು ಎರಡು ರಾತ್ರಿಗಳು ಮತ್ತು ಮೂರು ದಿನಗಳ ಪ್ರವಾಸ ಪ್ಯಾಕೇಜ್ ಆಗಿದೆ. ಈ ಪ್ಯಾಕೇಜ್‌ನಲ್ಲಿ ಪ್ರವಾಸವು ವಿಶಾಖಪಟ್ಟಣದಿಂದ ಆರಂಭವಾಗಲಿದೆ. ವಿಮಾನಯಾನವನ್ನು ಒಳಗೊಂಡಿರುವ ಪ್ರವಾಸ ಪ್ಯಾಕೇಜ್ ಇದಾಗಿದೆ. ಪ್ಯಾಕೇಜ್‌ನ ಆರಂಭಿಕ ದರವು 16,275 ರೂಪಾಯಿ ಆಗಿದೆ.
ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಒಟ್ಟಾಗಿ ಮೂರು ಬಾರಿ ಈ ಪ್ರವಾಸ ಪ್ಯಾಕೇಜ್ ಲಭ್ಯವಿದೆ. ತಿರುಪತಿ, ಕನಿಪಾಕಾಮ್, ಶ್ರೀನಿವಾಸ ಮಂಗಪುರಂ, ಶ್ರೀಕಲಾಹಸ್ತಿ, ತಿರುಚರನೂರ್, ತಿರುಮಲಕ್ಕೆ ಮೂರು ದಿನಗಳ ಕಾಲ ಪ್ರವಾಸ ಇರಲಿದೆ. ನಾವು ಐಆರ್‌ಸಿಟಿಸಿ ಅಧಿಕೃತ ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.
ಆಗಸ್ಟ್ 14ರಂದು, ಸೆಪ್ಟೆಂಬರ್ 30ರಂದು ಈ ಪ್ರವಾಸ ಇರಲಿದೆ. ಆಗಸ್ಟ್ 14ರಂದು ವಿಶಾಲಪಟ್ಟಣದಿಂದ ವಿಮಾನದ ಮೂಲಕ ಪ್ರವಾಸ ಆರಂಭವಾದರೆ, ಆಗಸ್ಟ್ 16ರಂದು ತಿರುಪತಿಯಿಂದ ವಿಶಾಲಪಟ್ಟಣಕ್ಕೆ ಬರಲಾಗುತ್ತದೆ. ಇನ್ನು ಸೆಪ್ಟೆಂಬರ್ 30ರಂದು ವಿಶಾಲಪಟ್ಟಣದಿಂದ ವಿಮಾನದ ಮೂಲಕ ಪ್ರವಾಸ ಆರಂಭವಾದರೆ, ಅಕ್ಟೋಬರ್ 2ರಂದು ತಿರುಪತಿಯಿಂದ ವಿಶಾಲಪಟ್ಟಣಕ್ಕೆ ಬರಲಾಗುತ್ತದೆ.
ಪ್ರಯಾಣ ಪ್ಯಾಕೇಜ್ ದರ ಎಷ್ಟಿದೆ ನೋಡಿ
ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 19835 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 16465 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 16275 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಬೆಡ್ ಸಹಿತವಾಗಿ ಪ್ಯಾಕೇಜ್ ದರ 14650 ರೂಪಾಯಿ ಆಗಿದೆ. ಬೆಡ್ ಇಲ್ಲದೆ 5-11 ವರ್ಷದ ಮಗುವಿಗೆ ಪ್ಯಾಕೇಜ್ ದರ 14155 ರೂಪಾಯಿ ಆಗಿದೆ.
2ರಿಂದ 4 ವರ್ಷದ ಮಗುವಿಗೆ ಬೆಡ್ ಇಲ್ಲದೆ ಪ್ಯಾಕೇಜ್ ದರವು 9200 ರೂಪಾಯಿ ಆಗಿದೆ. ಇನ್ನು ಡ್ರೆಸ್ ಕೋಡ್ ಇದೆ. ಪುರುಷರು ದೋತಿ (ಬಿಳಿ), ಶರ್ಟ್, ಕುರ್ತಾ ಪೈಜಾಮ ಧರಿಸಬೇಕಾಗುತ್ತದೆ. ಮಹಿಳೆಯರು ಸೀರೆ, ಚೋಡಿದಾರ ಧರಿಸಬೇಕಾಗುತ್ತದೆ ಎಂದು ಐಆರ್‌ಸಿಟಿಸಿಯ ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಇನ್ನು ಪ್ರವಾಸದಲ್ಲಿ ವಸತಿ ಹಾಗೂ ಆಹಾರ ಸೌಲಭ್ಯವು ಲಭ್ಯವಿರುತ್ತದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications