ಪ್ರವಾಸದ ವಿಚಾರಕ್ಕೆ ಬಂದಾಗ ನಾವು ಎಂದಿಗೂ ಕೂಡಾ ನಮ್ಮ ಅತೀ ನೆಚ್ಚಿನ ಸ್ಥಳಗಳನ್ನು ಆಯ್ಕೆ ಮಾಡುತ್ತೇವೆ. ಹಾಗೆಯೇ ಭಾರತದ ಶ್ರೀಮಂತವಾದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವುದು ಹಲವಾರು ಮಂದಿಯ ಆಸೆಯಾಗಿದೆ. ತಾಜ್‌ಮಹಲ್, ಮೈಸೂರು ಪ್ಯಾಲೇಸ್ ಮೊದಲಾದವುಗಳು ನಮ್ಮ ಪ್ರವಾಸ ಪಟ್ಟಿಯನಲ್ಲಿ ಇರುವಂತೆಯೇ ಕೆಲವೊಂದು ಪವಿತ್ರ ಸ್ಥಳಗಳಿಗೂ ಭೇಟಿ ನೀಡುವುದು ಕೂಡಾ ಆದ್ಯತೆಯಾಗಿರುತ್ತದೆ. ಅಂತಹ ಸ್ಥಳಗಳಿಗೆ ನಾವು ಭೇಟಿ ನೀಡುವ ಆಯ್ಕೆಯನ್ನು ನಮಗೆ ಭಾರತೀಯ ರೈಲ್ವೆಯು ನೀಡುತ್ತದೆ.
ಹೌದು, ಅಂತಹ ಉತ್ತಮ ಪ್ಯಾಕೇಜ್‌ಗಳಲ್ಲಿ ಅಯೋಧ್ಯೆಯಿಂದ ವೈಷ್ಣೋ ದೇವಿಯ ಪ್ರವಾಸ ಪ್ಯಾಕೇಜ್ ಕೂಡಾ ಒಂದಾಗಿದೆ. ಅಯೋಧ್ಯೆಯಿಂದ ವೈಷ್ಣೋ ದೇವಿಗೆ ಮಿತವ್ಯಯದ ರೈಲು ಪ್ರಯಾಣ ಪ್ಯಾಕೇಜ್ ಶೀಘ್ರದಲ್ಲೇ ಐಆರ್‌ಸಿಟಿಸಿಯ ಮೂಲಕ ಲಭ್ಯವಾಗಲಿದೆ. ಈ ಪ್ರವಾಸ ಪ್ಯಾಕೇಜ್‌ನಲ್ಲಿ ನೀವು ಅಯೋದ್ಯೆ, ವೈಷ್ಣೋ ದೇವಿ, ಪ್ರಯಾಗ್‌ರಾಜ್, ವಾರಾಣಾಸಿ ಹೋಗಬಹುದಾಗಿದೆ. ಇದು ಒಟ್ಟಾಗಿ 11 ದಿನಗಳು 10 ರಾತ್ರಿಗಳ ಪ್ಯಾಕೇಜ್ ಆಗಿದೆ. ಅಸ್ಸಾಂನಿಂದ ದಿಬ್ರುಗಢ್ ಈ ಪ್ಯಾಕೇಜ್‌ಗೆ ಆರಂಭಿಕ ಹಂತವಾಗಿದೆ.

ಭಾರತೀಯ ರೈಲ್ವೆಯ ಭಾರತ್ ಗೌರವ್ ಡಿಲಕ್ಸ್ ಟೂರಿಸ್ಟ್ ಎಸಿ ರೈಲುಗಳ ಮೂಲಕ ಈ ಪ್ರವಾಸ ಪ್ಯಾಕೇಜ್ ಪ್ರಯಾಣ ನಡೆಸಲಾಗುತ್ತದೆ. ಈ ಪ್ಯಾಕೇಜ್‌ನಲ್ಲಿ ಹೋಗುವ ನಗರಗಳಲ್ಲಿ ಮೇಘಾಲಯದ ಶಿಲ್ಲಾಂಗ್ ಮತ್ತು ಚಿರಾಪುಂಜಿ, ನಾಗಾಲ್ಯಾಂಡ್‌ನ ಉನಕೋಟಿ, ಅಗರ್ತಲಾ ಮತ್ತು ದಿಮಾಪುರ್, ಹಾಗೆಯೇ ಅಸ್ಸಾಂನ ಗುವಾಹಟಿ, ಶಿವಸಾಗರ್, ಫರ್ಕಟಿಂಗ್ ಮತ್ತು ಕಾಜಿರಂಗ ಕೂಡಾ ಸೇರಿದೆ.
ಅಯೋಧ್ಯೆಯಿಂದ ವೈಶ್ಣೋದೇವಿಗೆ ಐಆರ್‌ಸಿಟಿಸಿ ಪ್ರವಾಸದ ಸಂಪೂರ್ಣ ಮಾಹಿತಿ ಈ ಕೆಳಗಿದೆ
ಪ್ರವಾಸದ ದಿನಾಂಕ: ಮೇ 27, 2023ರಿಂದ ಜೂನ್ 6, 2023ರವರೆಗೆ.
ಬೋರ್ಡಿಂಗ್ ಸ್ಟೇಷನ್‌ಗಳು: ಈ ಪ್ರವಾಸಕ್ಕೆ ಭಾರತ್ ಗೌರವ್ ಪ್ರವಾಸ ರೈಲನ್ನು ಬಳಕೆ ಮಾಡಲಾಗುತ್ತದೆ. ದಿಬ್ರುಗಢ್, ಮರಿಯಾನಿ, ಲುಮ್ಡಿಂಗ್, ಗುವಾಹಟಿ, ನ್ಯೂ ಕೂಚ್ ಬೆಹರ್, ನ್ಯೂ ಜಲ್ಪೈಗುರಿ ಮತ್ತು ಕತಿಹಾರ್‌ನಲ್ಲಿ ಪ್ರಯಾಣಿಕರು ಹತ್ತಬಹುದಾಗಿದೆ. ಭಾರತ್ ಗೌರವ್ ವಿಶೇಷ ರೈಲಿನ ಉತ್ತರ ದರ್ಶನ ಎಂಬುದು ಪ್ಯಾಕೇಜ್‌ನ ಹೆಸರಾಗಿದೆ.
ಟಿಕೆಟ್ ದರ: ಈ ಪ್ರವಾಸ ಪ್ಯಾಕೇಜ್‌ನಲ್ಲಿ ಇಕಾನಮಿ ವಿಭಾಗದ ಟಿಕೆಟ್ ವೆಚ್ಚವು ಪ್ರತಿ ವ್ಯಕ್ತಿಗೆ 20,850 ರೂಪಾಯಿ ಆಗಿದ್ದರೆ, ಸ್ಟಾಂಡರ್ಡ್ ವಿಭಾಗದ ಟಿಕೆಟ್ ವೆಚ್ಚವು ಪ್ರತಿ ವ್ಯಕ್ತಿಗೆ 31,135 ರೂಪಾಯಿ ಆಗಿದೆ.
ಟಿಕೆಟ್ ಬುಕ್ ಹೀಗೆ ಮಾಡಿ: ಭಾರತ್ ಗೌರವ್ ಟೂರಿಸ್ಟ್ ಟ್ರೈನ್‌ನಲ್ಲಿ ಅಯೋಧ್ಯೆ ರಾಮಮಂದಿರದಿಂದ
ವೈಷ್ಣೋದೇವಿವರೆಗಿನ ಪ್ಯಾಕೇಜ್ ಅನ್ನು ನಾವು ಆನ್‌ಲೈನ್‌ನಲ್ಲಿ www.irctc.co.in/nget ಮೂಲಕ ಬುಕ್ ಮಾಡಿಕೊಳ್ಳಬಹುದಾಗಿದೆ.
ಯಾವೆಲ್ಲ ಪ್ರದೇಶಕ್ಕೆ ಭೇಟಿ ನೀಡಲಾಗುತ್ತದೆ?
ಅಯೋಧ್ಯೆ: ರಾಮ ಜನ್ಮ ಭೂಮಿ, ಹನುಮಾನ್ ಗರ್ಹಿ
ಕತ್ರಾ: ಶ್ಮತಾ ವಿಡಿ ಕತ್ರಾ
ಪ್ರಯಾಗರಾಜ್: ತ್ರಿವೇಣಿ ಸಂಗಮ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಅಲೋಪಿ ದೇವಿ ದೇವಸ್ಥಾನ
ವಾರಣಾಸಿ: ಕಾಶಿ ವಿಶ್ವನಾಥ ದೇವಸ್ಥಾನ
ಐಆರ್‌ಸಿಟಿಸಿಯ ರಾಮಾಯಣ ಯಾತ್ರೆ
ಭಾರತೀಯ ರೈಲ್ವೆಯು ಹಲವಾರು ಪ್ರವಾಸ ಪ್ಯಾಕೇಜ್ ಅನ್ನು ಆರಂಭಿಸುತ್ತಿದೆ. ಏಪ್ರಿಲ್ 7ರಿಂದ ರಾಮಾಯಾಣ ಯಾತ್ರಾ (ರಾಮಾಯಣ ಯಾತ್ರೆ) ಮತ್ತೆ ಆರಂಭ ಮಾಡಿದೆ. ನವದೆಹಲಿಯಿಂದ ಈ ಯಾತ್ರೆ ಆರಂಭವಾಗಲಿದ್ದು, ಭಗವಂತ ರಾಮನ ಜೀವನದಲ್ಲಿ ಬರುವ ಸ್ಥಳಗಳಾದ ಅಯೋಧ್ಯೆ, ಪ್ರಯಾಗ್‌ರಾಜ್, ವಾರಾಣಾಸಿ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಪ್ರವಾಸ ಇರಲಿದೆ. ಭಾರತ್ ಗೌರವ್ ಡಿಲಕ್ಸ್ ಎಸಿ ಟೂರಿಸ್ಟ್ ರೈಲಿನಲ್ಲಿ ಈ ಪ್ರವಾಸ ಇರಲಿದೆ. ಈವೆರೆಗೆ ಒಟ್ಟು 26 ಭಾರತ್ ಗೌರವ್ ರೈಲುಗಳನ್ನು ಆರಂಭಿಸಲಾಗಿದೆ.
ರಾಮ ಜನ್ಮಭೂಮಿ ದೇವಾಲಯ, ಹನುಮಾನ್ ಗರ್ಹಿ, ಭರತ-ಹನುಮಾನ್ ದೇವಾಲಯ, ಭರತ್ ಕುಂಡ್, ರಾಮ ಜಾನಕಿ ಮಂದಿರ, ಸೀತಾಮರ್ಹಿಯಲ್ಲಿನ ಜಾನಕಿ ಮಂದಿರ, ಪನೌರಾ ಧಾಮ, ರಾಮ್ ರೇಖ ಘಾಟ್, ರಾಮೇಶ್ವರ ನಾಥ ದೇವಾಲಯ, ತುಳಸಿ ಮಾನಸ ದೇವಾಲಯ, ಸಂಕಟ್ ಮೋಚನ್ ದೇವಾಲಯ, ವಿಶ್ವನಾಥ ದೇವಾಲಯ ಮೊದಲಾದವುಗಳಿಗೆ ಭೇಟಿ ನೀಡಬಹುದಾಗಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?



Click it and Unblock the Notifications