ಬೇಸಿಗೆ ರಜೆ ಆರಂಭವಾಗುವುದಕ್ಕೂ ಮುನ್ನವೇ ಹಲವಾರು ಕುಟುಂಬಗಳು ಪ್ರವಾಸಕ್ಕಾಗಿ ಪ್ಲ್ಯಾನಿಂಗ್‌ಗಳನ್ನು ಮಾಡಲು ಆರಂಭಿಸಿದೆ. ನಮ್ಮ ಈ ವರ್ಷದ ರಜಾ ಅವಧಿಯನ್ನು ಎಲ್ಲಿ ಕಳೆಯುವುದು ಎಂಬ ಚಿಂತನೆ ನಡೆಸುತ್ತಿದೆ, ಯೋಜನೆ ರೂಪಿಸುತ್ತಿದೆ. ಈ ನಡುವೆ ವಾರಾಂತ್ಯದಲ್ಲಿ ಸರೋವರಗಳ ನಗರವೆಂದೆ ಪ್ರಸಿದ್ಧವಾದ ಉದಯಪುರಕ್ಕೆ ಭೇಟಿ ನೀಡುವುದು ನಿಮ್ಮ ಉತ್ತಮ ಆಯ್ಕೆಯಾಗಿದೆ. ಅದು ಕೂಡಾ ಮುಖ್ಯವಾಗಿ ಹವಾಮಾನ ಬದಲಾವಣೆಯಾಗುವ ಸಂದರ್ಭದಲ್ಲಿ ಇಲ್ಲಿಗೆ ನೀವು ಪ್ರವಾಸ ಹೋಗುವುದು ಮನರಂಜಕ.
ಭಾರತೀಯ ರೈಲ್ವೆಯ ವಿಭಾಗವಾದ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ಮುಂದಿನ ವಾರ ಮಾರ್ಚ್ 30 ರಂದು ಉದಯಪುರಕ್ಕೆ ರೈಲಿನ ಪ್ರವಾಸ ಆರಂಭ ಮಾಡಲು ನಿರ್ಧಾರ ಮಾಡಿದೆ. ಇದು ಅತೀ ಕಡಿಮೆ ದರ ಪ್ರವಾಸ ಪ್ಯಾಕೇಜ್ ಆಗಿದೆ. ಅದು ಕೂಡಾ ಹೆಚ್ಚು ದಿನಗಳಿಗೆ. ಹೌದು, ಮೂರು ರಾತ್ರಿ ನಾಲ್ಕು ದಿನಗಳ ಪ್ಯಾಕೇಜ್ ಬರೀ 5,175 ರೂಪಾಯಿಗೆ ಲಭ್ಯವಾಗಲಿದೆ. ಅಂದರೆ ನಾವು 5,175 ರೂಪಾಯಿಯ ಪ್ಯಾಕೇಜ್‌ನಲ್ಲಿ ಉದಯಪುರ ಪ್ರವಾಸ ಪ್ಯಾಕೇಜ್ ಖರೀದಿಸಿ ಸರೋವರಗಳ ನಗರಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತದೆ.

ಪ್ಯಾಕೇಜ್‌ನಲ್ಲಿ ಏನೆಲ್ಲ ಇರಲಿದೆ?
ಈ 5,175 ರೂಪಾಯಿಯ ಉದಯಪುರ ಪ್ರವಾಸ ಪ್ಯಾಕೇಜ್‌ನಲ್ಲಿ ರೈಲಿನ ಟಿಕೆಟ್, ವಸತಿ ವ್ಯವಸ್ಥೆ, ಆಹಾರ, ಸ್ಥಳೀಯ ಸಾರಿಗೆ ವ್ಯವಸ್ಥೆಯು ಸೇರ್ಪಡೆಯಾಗಲಿದೆ. ಈ ಪ್ರವಾಸ ಪ್ಯಾಕೇಜ್‌ನಲ್ಲಿ ಪ್ರಮುಖವಾದ ರೋಮಾಂಚಕ ಸ್ಥಳ ಸರೋವರಗಳ ನಗರ ಉದಯಪುರವಾಗಿದೆ. ನೀವು ರಾಜಸ್ಥಾನದ ಆಹಾರವನ್ನು ಸೇವಿಸಲು ಇಷ್ಟಪಡುವುದಾದರೆ ರಾಜಸ್ಥಾನದ ಈ ನಗರಕ್ಕೆ ಈ ಪ್ಯಾಕೇಜ್ ಮೂಲಕ ಭೇಟಿ ನೀಡಬಹುದಾಗಿದೆ. ಹಾಗೆಯೇ ಸ್ಥಳೀಯ ನೃತ್ಯ, ಸಂಗೀತವನ್ನು ಆಹ್ಲಾದಿಸಬಹುದು ಮತ್ತು ನಿಮಗೆ ವೈಯಕ್ತಿಕವಾಗಿ ಬೇಕಾದ ವಸ್ತುಗಳನ್ನು ಖರೀದಿ ಕೂಡಾ ಮಾಡಬಹುದು.
ಪ್ರವಾಸದ ಪ್ಯಾಕೇಜ್ ದೆಹಲಿಯಿಂದ ಆರಂಭವಾಗುತ್ತದೆ. ಅಂದರೆ ರೈಲು ದೆಹಲಿಯಿಂದ ಹೊರಡುತ್ತದೆ. ಅಲ್ಲಿಂದ ಉದಯಪುರಕ್ಕೆ ತಲುಪಲಿದೆ. ಇನ್ನು ದೆಹಲಿಯಿಂದ ಉದಯಪುರಕ್ಕೆ ಹೋಗುವ ಅಥವಾ ಹಿಂದಿರುಗುವ ಒಂದು ನಿಗದಿತ ಸ್ಥಳದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಮೊದಲ ದಿನ ದೆಹಲಿ ರೈಲು ನಿಲ್ದಾಣದಿಂದ ಪ್ರಯಾಣ ಆರಂಭವಾಗಲಿದೆ. ಉದಯಪುರಕ್ಕೆ ಭೇಟಿ ನೀಡಿದ ಬಳಿಕ ಹೋಟೆಲ್‌ಗೆ ಭೇಟಿ ನೀಡಿ, ಇತರೆ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ಸಹೇಲಿಯೋನ್ ಕಿ ಬಾರಿ, ಸುಖದಿಯಾ ಸರ್ಕಲ್, ಸಿಟಿ ಪ್ಯಾಲೇಸ್ ಮ್ಯೂಸಿಯಂ ಮತ್ತು ಭಾರತೀಯ ಲೋಕ ಕಲಾ ಮಂಡಲಕ್ಕೆ ಭೇಟಿ ನೀಡಬಹುದಾಗಿದೆ.
ಪ್ರವಾಸಿಗರು ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ನಗರದಲ್ಲಿ ಸುತ್ತಾಡಲು, ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ವಾಹನವನ್ನು ಆಯ್ಕೆ ಮಾಡಬಹುದು. ಸ್ಥಳೀಯ ಸಾರಿಗೆಗೆ ಕಾರು ಲಭ್ಯವಾಗುತ್ತದೆ. ಪ್ರವಾಸದ ಪ್ಯಾಕೇಜ್ ರೈಲಿನಲ್ಲಿ ಉದಯಪುರಕ್ಕೆ ಪ್ರಯಾಣ, ವಸತಿ ಮತ್ತು ಊಟವನ್ನು ಒಳಗೊಂಡಿರುತ್ತದೆ. ಈ ಪ್ರವಾಸದ ಪ್ಯಾಕೇಜ್‌ನ ವೆಚ್ಚವು 5,100 ರೂಪಾಯಿಯಿಂದ 11,000 ರೂಪಾಯಿ ಆಗಿದೆ. ಪ್ರಯಾಣಿಕರು ತಮ್ಮ ಅಗತ್ಯತೆ ಮತ್ತು ಬೇಕಾದ ಸೌಲಭ್ಯಗಳಿಗೆ ಅನುಗುಣವಾಗಿ ಬೆಲೆಯನ್ನು ಆಯ್ಕೆ ಮಾಡಬಹುದು.
ಸರ್ಕಾರಿ ನೌಕರರಿಗೆ ಅನುಕೂಲ
ಸರ್ಕಾರಿ ನೌಕರರು ತಮ್ಮ ಎಲ್‌ಟಿಸಿ ಬಳಸುವ ಆಯ್ಕೆಯನ್ನು ಮಾಡಬಹುದು. ಇದಕ್ಕಾಗಿ, ನಿಮ್ಮ ಕಚೇರಿಯಲ್ಲಿ ನೀವು ಎಲ್ಲಾ ಬಿಲ್‌ಗಳನ್ನು ಸಲ್ಲಿಸಬೇಕಾಗುತ್ತದೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ, ನೀವು ಐಆರ್‌ಸಿಟಿಸಿ ಟೂರ್ ಪ್ಯಾಕೇಜ್ ಅನ್ನು ಆಯ್ಕೆ ಮಾಡಬಹುದು. ಇದು ಕಂಫರ್ಟ್ ಅಥವಾ ಸ್ಟ್ಯಾಂಡರ್ಡ್ ವಿಭಾಗಗಳಲ್ಲಿ ಲಭ್ಯವಾಗಲಿದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಚಿನ್ನದ ಬೆಲೆ ಇಳಿಕೆ: ಖರೀದಿಗೆ ಇದೇ ಸುವರ್ಣಾವಕಾಶವೇ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?



Click it and Unblock the Notifications