ನಾವು ಎಲ್ಲಿಗಾದರೂ ಪ್ರಯಾಣ ಮಾಡುವಾಗ ರೈಲು ಅಥವಾ ಬಸ್ ಪ್ರಯಾಣದ ನಡುವೆ ಆಯ್ಕೆ ಮಾಡಬೇಕಾದರೆ, ಬಹುತೇಕ ಜನರು ಆಯ್ಕೆ ಮಾಡುವುದು ರೈಲು ಪ್ರಯಾಣ. ನಾವು ಸಾಮಾನ್ಯವಾಗಿ ಒಬ್ಬರಿಗೆ ಐವರಿಗೆ ರೈಲು ಟಿಕೆಟ್ ಅನ್ನು ಬುಕ್ ಮಾಡುತ್ತೇವೆ, ಆದರೆ ನಮಗೆ ಸಂಪೂರ್ಣ ಭೋಗಿಯೇ ಬೇಕೆಂದಾದರೆ ಏನು ಮಾಡುವುದು? ಅಥವಾ ಸಂಪೂರ್ಣ ರೈಲಿನಲ್ಲಿ ನಮ್ಮವರೊಂದಿಗೆ ಪ್ರಯಾಣ ಮಾಡಬೇಕೆಂದಾದರೆ ಹೇಗೆ ಬುಕ್ ಮಾಡುವುದು?
ನೀವು ಸಂಪೂರ್ಣವಾಗಿ ರೈಲನ್ನು ಅಥವಾ ಸಂಪೂರ್ಣವಾಗಿ ಒಂದು ಕೋಚ್ ಅನ್ನು ಬುಕ್ ಮಾಡಬೇಕು ಎಂದಾದರೆ, ಹೇಗೆ, ಎಲ್ಲಿ ಯಾವ ರೀತಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭ ಮಾಡುವುದು ಎಂಬ ಗೊಂದಲಕ್ಕೆ ಒಳಗಾಗಿರಬಹುದು. ನೀವು ಸಂಪೂರ್ಣ ರೈಲು ಅಥವಾ ಭೋಗಿಯನ್ನು ಬುಕ್ ಮಾಡುವ ಬಗ್ಗೆ ತಿಳಿಯಬೇಕಾದ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ವಿವರಿಸಿದ್ದೇವೆ.

ಈ ಲೇಖನದಲ್ಲಿ ನಾವು ಟಿಕೆಟ್ ದರ, ಬುಕ್ಕಿಂಗ್ ಪ್ರಕ್ರಿಯೆ, ಬೇಕಾದ ದಾಖಲೆಗಳು, ಇತರೆ ಅಗತ್ಯ ಮಾಹಿತಿಗಳನ್ನು ಉಲ್ಲೇಖ ಮಾಡಿದ್ದೇವೆ. ಚಾರ್ಟರ್ ಟ್ರೈನ್ ಅಥವಾ ಕೋಚ್ ಅನ್ನು ಆನ್‌ಲೈನ್ ಮೂಲಕವೂ ನಾವು ಬುಕ್ ಮಾಡಿಕೊಳ್ಳಬಹುದಾಗಿದೆ. ಈ ಬುಕ್ಕಿಂಗ್ ಪ್ರಕ್ರಿಯೆಯನ್ನು ನಾವು ಐಆರ್‌ಸಿಟಿಸಿ ಎಫ್‌ಟಿಆರ್ ವೆಬ್‌ಸೈಟ್ ಮೂಲಕ ಮಾಡಬಹುದಾಗಿದೆ.
ನಾವು ಪ್ರಯಾಣವನ್ನು ಎಲ್ಲಿ ಬೇಕಾದರೂ ಆರಂಭ ಮಾಡಬಹುದು. ಅಂದರೆ ಯಾವುದೇ ಸ್ಟೇಷನ್‌ನಲ್ಲಾದರೂ ಆರಂಭ ಮಾಡಬಹುದು. ಆದರೆ 10 ನಿಮಿಷ ಅಥವಾ ಅದಕ್ಕಿಂತ ಅಧಿಕ ಸಮಯ ರೈಲು ತಂಗುವ ನಿಲ್ದಾಣದಲ್ಲಿ ಮಾತ್ರ ರೈಲಿನ ಭೋಗಿಯನ್ನು ಸೇರ್ಪಡೆ ಅಥವಾ ವಿಭಜನೆ ಮಾಡಬಹುದಾಗಿದೆ. ಎಲ್ಲ ನಿಲ್ದಾಣಗಳಲ್ಲಿ ರೈಲಿನ ಭೋಗಿಯನ್ನು ಸೇರ್ಪಡೆ ಮಾಡಲು ಸಾಧ್ಯವಾಗುವುದಿಲ್ಲ.
ಬುಕ್ಕಿಂಗ್ ಅವಧಿ: ಎಫ್‌ಟಿಆರ್ ಎಫ್‌ಟಿಆರ್ ನೋಂದಣಿಯನ್ನು ಗರಿಷ್ಠ 6 ತಿಂಗಳ ಮುಂಚಿತವಾಗಿ ಮತ್ತು ಪ್ರಯಾಣದ ದಿನಾಂಕಕ್ಕೆ ಕನಿಷ್ಠ 30 ದಿನಗಳ ಮೊದಲು ಮಾಡಬೇಕಾಗುತ್ತದೆ.
ಅನುಮತಿಸಲಾದ ಕೋಚ್‌ಗಳ ಸಂಖ್ಯೆ:
ಕೋಚ್ ಬುಕ್ಕಿಂಗ್: ತಾಂತ್ರಿಕವಾಗಿ ಎಲ್ಲ ಕಾರ್ಯಗಳನ್ನು ಅವಲಂಬಿಸಿ, ಒಂದು ಕುಟುಂಬ ಅಥವಾ ಒಂದು ಗುಂಪಿನ ಗ್ರಾಹಕರು ಒಂದೇ ರೈಲಿನಲ್ಲಿ ಎಫ್‌ಟಿಆರ್ ಮೂಲಕ ಗರಿಷ್ಠ 2 ಕೋಚ್‌ಗಳನ್ನು ಬುಕ್ ಮಾಡಬಹುದು. ಒಂದು ಗುಂಪು ಎಫ್‌ಟಿಆರ್ ಅಡಿಯಲ್ಲಿ ಗರಿಷ್ಠ 24 ಕೋಚ್‌ಗಳನ್ನು ಬುಕ್ ಮಾಡಬಹುದು. ಇದರಲ್ಲಿ ಎಸ್‌ಎಲ್‌ಆರ್ ಕೋಚ್/ ಜನರೇಟರ್ ಕಾರ್ ಇರುವುದು ಕೂಡಾ ಕಡ್ಡಾಯವಾಗಿದೆ. ಕನಿಷ್ಠ ಕೋಚ್ ಬುಕ್ಕಿಂಗ್ ಸಂಖ್ಯೆ 18 ಆಗಿದೆ.
ಸೆಕ್ಯೂರಿಟಿ ಡೆಪಾಸಿಟ್: ಕೋಚ್‌ಗಳನ್ನು ಅಥವಾ ರೈಲನ್ನು ಬುಕ್ ಮಾಡುವವರು ಬುಕ್ಕಿಂಗ್ ವಿಧಾನ, ಪ್ರಯಾಣ ವಿವರ, ಪ್ರಯಾಣ ಮಾರ್ಗ ಇತರೆ ಮಾಹಿತಿಯನ್ನು ಆನ್‌ಲೈನ್ ಫಾರ್ಮ್ ಮೂಲಕ ನೀಡಬೇಕಾಗುತ್ತದೆ. ರಿಜಿಸ್ಟ್ರೇಷನ್ ಶುಲ್ಕ ಮತ್ತು ಸೆಕ್ಯೂರಿಟಿ ಡೆಪಾಸಿಟ್ ಆಗಿ ಪ್ರತಿ ಭೋಗಿಗೆ 50 ಸಾವಿರ ರೂಪಾಯಿ ಪಾವತಿ ಮಾಡಬೇಕಾಗುತ್ತದೆ. 18 ಕೋಚ್‌ಗಳಿಗೂ ಕಡಿಮೆ ಭೋಗಿಯನ್ನು ಬುಕ್ ಮಾಡುವುದಾದರೂ, 18 ಕೋಚ್‌ಗಳ ರಿಜಿಸ್ಟ್ರೇಷನ್ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ.
ಸಂಪೂರ್ಣ ರೈಲು, ಕೋಚ್ ಬುಕ್ ಮಾಡುವುದು ಹೇಗೆ?
ಹಂತ 1: ಐಆರ್‌ಸಿಟಿಸಿ ಅಧಿಕೃತ ಎಫ್‌ಟಿಆರ್ ವೆಬ್‌ಸೈಟ್ www.ftr.irctc.co.in ಗೆ ಭೇಟಿ ನೀಡಿ
ಹಂತ 2: ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಮೂಲಕ ಲಾಗಿನ್ ಆಗಿ. ಈ ಕ್ರೆಡೆನ್ಶಿಯಲ್ ಇಲ್ಲವಾದರೆ ಕ್ರಿಯೇಟ್ ಮಾಡಿಕೊಳ್ಳಿ.
ಹಂತ 3: ಸಂಪೂರ್ಣ ಕೋಚ್ ಬುಕ್ ಮಾಡಬೇಕಾದರೆ ಎಫ್‌ಟಿಆರ್ ಸೇವಾ ಆಯ್ಕೆಯನ್ನು ಮಾಡಿಕೊಳ್ಳಿ,
ಹಂತ 4: ಪಾವತಿ ಮಾಡಬೇಕಾದರೆ ಎಲ್ಲ ಮಾಹಿತಿಯನ್ನು ನೀಡಬೇಕಾಗುತ್ತದೆ.
ಹಂತ 5: ಅದಾದ ಬಳಿಕ ಪಾವತಿ ಆಯ್ಕೆ ಮಾಡಿ
ಸಂಪೂರ್ಣ ಕೋಚ್ ಬುಕ್ ಮಾಡುವಾಗ ಈ ಮಾಹಿತಿ ತಿಳಿದಿರಿ
* ನೀವು ಮುಂಗಡವಾಗಿ ಕೋಚ್ ಬುಕ್ ಮಾಡಬೇಕಾಗುತ್ತದೆ. ಕನಿಷ್ಠವೆಂದರೆ ಆರು ತಿಂಗಳಿಗೂ ಮುನ್ನವೇ ಕೋಚ್ ಬುಕ್ ಮಾಡಬೇಕಾಗುತ್ತದೆ.
* ಸೆಕ್ಯೂರಿಟಿ ಡೆಪಾಸಿಟ್ ಅನ್ನು ನೀಡಬೇಕಾಗುತ್ತದೆ. ಅದು ಪ್ರಯಾಣ ಮುಕ್ತಾಯವಾದ ಬಳಿಕ ರಿಫಂಡ್ ಮಾಡಲಾಗುತ್ತದೆ.
* ಐಆರ್‌ಸಿಟಿಸಿ ನಿಮಗೆ ಕ್ಯಾಟೆರಿಂಗ್ ಸೇವೆಯನ್ನು ನೀಡುತ್ತದೆ. ನೀವು ಅದರಲ್ಲಿ ಬೇಕಾದ ಆಯ್ಕೆಗಳನ್ನು ಮಾಡಬಹುದು.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ



Click it and Unblock the Notifications