ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಷನ್ (ಐಆರ್‌ಸಿಟಿಸಿ) ಹಲವಾರು ವಿಶೇಷ ಪ್ರವಾಸ ಪ್ಯಾಕೇಜ್ ಅನ್ನು ಆರಂಭ ಮಾಡುತ್ತಿದೆ. ಕೆಲವು ದೇವಾಲಯಗಳ ಪ್ರವಾಸವಾದರೆ, ಇನ್ನು ಕೆಲವು ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸವಾಗಿದೆ. ಅದರಂತೆಯೇ ವೈಶ್ಣೋದೇವಿ ಪ್ರವಾಸ ಕೂಡಾ ಒಂದಾಗಿದೆ.
ಇದು ಸುಮಾರು 5 ರಾತ್ರಿಗಳು ಮತ್ತು ಆರು ದಿನಗಳ ಪ್ರವಾಸ ಪ್ಯಾಕೇಜ್ ಆಗಿದೆ. ವಿಮಾನ ಪ್ರವಾಸ ಇದಾಗಿದ್ದು, ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಕಾರಿನ ಮೂಲಕ ಪ್ರಯಾಣ ಮಾಡಬಹುದಾಗಿದೆ. ಹೊಟೇಲ್‌ನಲ್ಲಿ ತಂಗಲು ವ್ಯವಸ್ಥೆ ಇರುತ್ತದೆ. ಹಾಗೆಯೇ ಊಟದ ವ್ಯವಸ್ಥೆ ಇರುತ್ತದೆ. ವಿಮೆ ಕೂಡಾ ಪ್ಯಾಕೇಜ್‌ನಲ್ಲಿ ಸೇರ್ಪಡೆಯಾಗುತ್ತದೆ.

ಪ್ಯಾಕೇಜ್ ವಿವರ ಇಲ್ಲಿದೆ
ಪ್ಯಾಕೇಜ್‌ನ ಸಂಪೂರ್ಣ ಹೆಸರು: ಹೊಲಿ ಟ್ರಿಪ್ ಟು ವೈಶ್ಣೋ ದೇವಿ ವಿತ್ ಧರ್ಮಶಾಲಾ ಆಂಡ್ ಗೋಲ್ಡನ್ ಟೆಂಪಲ್ ಎಕ್ಸ್ ಚೆನ್ನೈ
ದಿನಗಳು: 5 ರಾತ್ರಿ, 6 ದಿನಗಳು
ಸ್ಟೇಷನ್: ಚೆನ್ನೈ ವಿಮಾನ ನಿಲ್ದಾಣ
ದಿನಾಂಕ: 2024ರ ಮಾರ್ಚ್ 18
ಕಮ್ಫಾರ್ಟ್‌ನಲ್ಲಿ ವಯಸ್ಕರಿಗೆ ಒಬ್ಬರಿಗೆ ಪ್ಯಾಕೇಜ್ ದರವು 57500 ರೂಪಾಯಿ ಆಗಿದೆ. ವಯಸ್ಕರು ಇಬ್ಬರಿದ್ದರೆ ಪ್ರತಿ ವ್ಯಕ್ತಿಯ ಪ್ಯಾಕೇಜ್ ದರವು 47500 ರೂಪಾಯಿ ಆಗಿದೆ. ವಯಸ್ಕರು ಮೂವರು ಇದ್ದರೆ, ಪ್ರತಿ ವ್ಯಕ್ತಿಯ ಪ್ಯಾಕೇಜ್ ದರ 46500 ರೂಪಾಯಿ ಆಗಿದೆ. 5-11 ವರ್ಷದ ಮಗುವಿಗೆ ಪ್ಯಾಕೇಜ್ ದರ 39500 ರೂಪಾಯಿ ಆಗಿದೆ. 2-4 ವರ್ಷದ ಮಗುವಿಗೆ ಬೆಡ್ ಇಲ್ಲದೆ ಪ್ಯಾಕೇಜ್ ದರ 34000 ರೂಪಾಯಿ ಆಗಿದೆ.
ದಿನ 1: 04.00 ಗಂಟೆಗೆ ಚೆನ್ನೈನಿಂದ ನಿರ್ಗಮನ (ನಿಗದಿತ ನಿರ್ಗಮನಕ್ಕೆ 02 ಗಂಟೆಗಳ ಮೊದಲು ಚೆನ್ನೈ ದೇಶೀಯ ವಿಮಾನ ನಿಲ್ದಾಣದಲ್ಲಿ ಇರಬೇಕು). ಸುಮಾರು 10.55 ಗಂಟೆಗೆ ಅಮೃತಸರ ವಿಮಾನ ನಿಲ್ದಾಣಕ್ಕೆ ಆಗಮನ. ಪಿಕ್ ಅಪ್ ಮತ್ತು ಅಟ್ಟಾರಿ ವಾಘಾ ಬಾರ್ಡರ್‌ಗೆ ರವಾನೆ. ಭೋಜನ ಮಾಡಿ ರಾತ್ರಿ ಅಲ್ಲಿಯೇ ತಂಗುವುದು.
ದಿನ 2: ಉಪಹಾರದ ನಂತರ, ಹೋಟೆಲ್‌ನಿಂದ ಚೆಕ್ ಔಟ್. ಗೋಲ್ಡನ್ ಟೆಂಪಲ್ ಮತ್ತು ಜಲಿಯನ್ ವಾಲಾ ಬಾಗ್‌ಗೆ ಭೇಟಿ. ಧರ್ಮಶಾಲಾಗೆ ಪ್ರಯಾಣ. Mcleodganj ನಲ್ಲಿ ಹೋಟೆಲ್‌ಗೆ ಚೆಕ್ ಇನ್ ಆಗಿ. ಭೋಜನ ಮಾಡಿ ರಾತ್ರಿ ಅಲ್ಲಿಯೇ ತಂಗುವುದು.
ದಿನ 3: ಉಪಹಾರದ ನಂತರ, ಸ್ಥಳೀಯ ಪ್ರವಾಸ. ಟಿಬೆಟಿಯನ್ ಮಠ, ಫೋಟೋ ಸ್ಟಾಪ್ ಕ್ರಿಕೆಟ್ ಸ್ಟೇಡಿಯಂ ಮತ್ತು ದಲೈ ಲಾಮಾ ಟೆಂಪಲ್ ಕಾಂಪ್ಲೆಕ್ಸ್, ಸೇಂಟ್ ಜಾನ್ಸ್ ಕ್ರುಚ್, ಭಾಗ್ಸುನಾಥ ದೇವಸ್ಥಾನಕ್ಕೆ ಭೇಟಿ. ಹೋಟೆಲ್‌ಗೆ ವಾಪಾಸ್ ಬಂದು ಭೋಜನ ಮಾಡಿ ರಾತ್ರಿ ಅಲ್ಲಿಯೇ ಉಳಿಯುವುದು.
ದಿನ 4: ಉಪಹಾರದ ನಂತರ, ಹೋಟೆಲ್‌ನಿಂದ ಚೆಕ್‌ಔಟ್. ಕತ್ರಾಗೆ ಪ್ರವಾಸ. ಹೊಟೇಲ್‌ಗೆ ಚೆಕ್‌ಇನ್ ಆಗಿ. ಅಲ್ಲಿಯೇ ಭೋಜನ ಮಾಡಿ, ರಾತ್ರಿ ಅಲ್ಲಿಯೇ ತಂಗುವುದು.
ದಿನ 5: ಉಪಹಾರದ ನಂತರ, ವೈಷ್ಣೋ ದೇವಿ ದೇವಸ್ಥಾನಕ್ಕೆ ಭೇಟಿ. ಸಂಜೆಯ ಹೊತ್ತಿಗೆ ಹೋಟೆಲ್‌ಗೆ ಹೋಗಿ. ರಾತ್ರ ಅಲ್ಲಿಯೇ ತಂಗುವುದು.
ದಿನ 6: ಉಪಹಾರದ ನಂತರ, ಹೋಟೆಲ್‌ನಿಂದ ಚೆಕ್‌ಔಟ್ ಆಗಿ. ರಘುನಾಥ ಮಂದಿರಕ್ಕೆ ಭೇಟಿ ನೀಡಿ. ಮಧ್ಯಾಹ್ನದ ನಂತರ, 14.00 ಗಂಟೆಗಳ ಹೊತ್ತಿಗೆ ಜಮ್ಮು ವಿಮಾನ ನಿಲ್ದಾಣದಲ್ಲಿ ಪ್ರಯಾಣ ಆರಂಭ 23.30 ಗಂಟೆಗೆ ಚೆನ್ನೈ ಆಗಮನ.


Click it and Unblock the Notifications