PPF For Minor Child: ನಿಮ್ಮ ಅಪ್ರಾಪ್ತ ಮಗುವಿಗೆ ಪಿಪಿಎಫ್ ಖಾತೆ ಮಾಡಿಸುವುದು ಹೇಗೆ, ಪ್ರಯೋಜನಗಳೇನು?

ಪಿಪಿಎಫ್‌ ಅಂದರೆ ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌. ನಮ್ಮ ದೇಶದಲ್ಲಿ ಇದು ಸರ್ಕಾರಿ ಬೆಂಬಲಿತ ಉಳಿತಾಯ ಹಾಗೂ ಹೂಡಿಕೆಯ ಯೋಜನೆಯಾಗಿದೆ. ಆಕರ್ಷಕ ಬಡ್ಡಿ ದರಗಳು, ತೆರಿಗೆ ಅನುಕೂಲತೆಗಳು, ಹೂಡಿಕೆಯಲ್ಲಿ ಕಡಿಮೆ ರಿಸ್ಕ್‌ ಹೊಂದಿರುವ ಕಾರಣಳಿಂದಾಗಿ ಪಿಪಿಎಫ್‌ ದೇಶದ ಅತ್ಯಂತ ಜನಪ್ರಿಯ ಹಾಗೂ ವಿಶ್ವಾಸರ್ಹತೆಯ ಹೂಡಿಕೆ ಆಯ್ಕೆಗಳ ಪೈಕಿ ಒಂದಾಗಿದೆ.

ವ್ಯಕ್ತಿಗಳು ತಮ್ಮ ಸ್ವಂತ ಹೆಸರಿನಲ್ಲಿ ಜತೆಗೆ ಅಪ್ರಾಪ್ತರ ಹೆಸರಿನಲ್ಲಿ ಅಥವಾ ಮಾನಸಿಕವಾಗಿ ಅಸ್ವಸ್ಥತೆಯನ್ನು ಹೊಂದಿದವರ ಹೆಸರಿನಲ್ಲಿ ಪಿಪಿಎಫ್‌ ಖಾತೆಗಳನ್ನು ತೆರೆಯಬಹುದು. ಹೆತ್ತವರು ಕೂಡ ತಮ್ಮ ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಪಿಪಿಎಫ್‌ ಖಾತೆಗಳನ್ನು ತೆರೆಯಬಹುದು.

 ನಿಮ್ಮ ಅಪ್ರಾಪ್ತ ಮಗುವಿಗೆ ಪಿಪಿಎಫ್ ಖಾತೆ ಮಾಡಿಸುವುದು ಹೇಗೆ?

ಅಪ್ರಾಪ್ತ ಮಕ್ಕಳ ಹೆಸರಿನಲ್ಲಿ ಪಿಪಿಎಫ್‌ ಖಾತೆಗಳನ್ನು ಓಪನ್‌ ಮಾಡುವುದು ಅವರ ಭವಿಷ್ಯದಲ್ಲಿ ಹಣ ಉಳಿತಾಯ ಮಾಡುವುದಕ್ಕೆ ಇರುವ ಉತ್ತಮ ಮಾರ್ಗವಾಗಿದೆ. ಆಕರ್ಷಕ ಬಡ್ಡಿ ದರ ಹಾಗೂ ತೆರಿಗೆ ಅನುಕೂಲತೆಗಳನ್ನು ಪಡೆಯುವುದಕ್ಕೆ ಪಿಪಿಎಫ್‌ ಖಾತೆಯು ಮಕ್ಕಳಿಗೆ ಉತ್ತಮ ಹೂಡಿಕೆ ಯೋಜನೆಯಾಗಿದೆ.

ಅಪ್ರಾಪ್ತ ಮಕ್ಕಳಿಗೆ 18 ವರ್ಷ ತುಂಬುವವರೆಗೆ ಪಿಪಿಎಫ್‌ ಖಾತೆಗಳನ್ನು ಹೆತ್ತವರು ಅಥವಾ ಪೋಷಕರು ನಿರ್ವಹಿಸುತ್ತಾರೆ ಎನ್ನುವುದು ಗಮನಾರ್ಹವಾದ ಅಂಶ. 18 ವರ್ಷದ ಬಳಿಕ ಅಪ್ರಾಪ್ತರು ಪಿಪಿಎಫ್‌ ಖಾತೆಗಳನ್ನು ಸ್ವಂತವಾಗಿ ನಿರ್ವಹಿಸುತ್ತಾರೆ.

ಪಿಪಿಎಫ್‌ ಖಾತೆ ಫೀಚರ್‌ಗಳು

- ಹೂಡಿಕೆಯ ಮಿತಿಯು ವಾರ್ಷಿಕ ಕನಿಷ್ಠ 500 ರೂಪಾಯಿ ಹಾಗೂ ಗರಿಷ್ಠ 1,50,000 ರೂಪಾಯಿ ಆಗಿರುತ್ತದೆ.
- ಈ ಯೋಜನೆ ಕಾಲಾವಧಿ 15 ವರ್ಷಗಳು. ಅದರ ಬಳಿಕ ಚಂದಾದಾರರು ಅರ್ಜಿ ಸಲ್ಲಿಸಿದಾಗ ಅದನ್ನು 5 ವರ್ಷವರೆಗೆ ಒಂದು ಅಥವಾ ಹೆಚ್ಚಿನ ಬಾರಿಗೆ ವಿಸ್ತರಿಸಬಹುದು.
- ಈ ಯೋಜನೆ ಹೂಡಿಕೆಗೆ ಬಡ್ಡಿ ದರವನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಇದನ್ನು ತ್ರೈಮಾಸಿಕವಾಗಿ ನೀಡಲಾಗುತ್ತದೆ. ಸದ್ಯ ವಾರ್ಷಿಕ ಶೇಕಡ 7.1ರಷ್ಟು ಬಡ್ಡಿ ನೀಡಲಾಗುತ್ತಿದೆ.
- ಖಾತೆಯಲ್ಲಿರುವ ಬ್ಯಾಲೆನ್ಸ್‌ ಮೊತ್ತ ಹಾಗೂ ಖಾತೆಯ ಕಾಲಾವಧಿಗೆ ಹೊಂದಿಕೊಂಡಂತೆ ಸಾಲ ಪಡೆಯಲು ಹಾಗೂ ವಿತ್‌ಡ್ರಾ ಮಾಡುವ ಅವಕಾಶವನ್ನು ನೀಡಲಾಗುತ್ತದೆ.
- ಪಿಪಿಎಫ್‌ನಲ್ಲಿ ಮಾಡುವ ಹೂಡಿಕೆಗೆ ತೆರಿಗೆ ಕಾಯ್ದೆಯ ಸೆಕ್ಷನ್‌ 80ಸಿ ಸೆಕ್ಷನ್‌ನಡಿ ವಾರ್ಷಿಕ 1.5 ಲಕ್ಷ ರೂಪಾಯಿ ತೆರಿಗೆ ರಿಯಾಯಿತಿಯನ್ನು ನೀಡಲಾಗುತ್ತದೆ. ಪಿಪಿಎಫ್‌ಗೆ ನೀಡುವ ಬಡ್ಡಿ ಮೊತ್ತ ಕೂಡ ತೆರಿಗೆ ವಿನಾಯಿತಿಯನ್ನು ಪಡೆದುಕೊಂಡಿರುತ್ತದೆ.
- ಪಿಪಿಎಫ್‌ ಖಾತೆದಾರರು ಒಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಹೆಸರಿನಲ್ಲಿ ನಾಮಿನಿಯನ್ನು ಮಾಡಿಸಬಹುದು. ಚಂದಾದಾರರೇ ನಾಮಿನ್‌ಗೆ ನೀಡುವ ಷೇರಿನ ಮೊತ್ತವನ್ನು ವ್ಯಾಖ್ಯಾನಿಸಬಹುದು.
- ಪಿಪಿಎಫ್‌ ಖಾತೆಯನ್ನು ಚಂದಾದಾರರ ಕೋರಿಕೆ ಮೇರೆಗೆ ಇತರೆ ಶಾಖೆಗಳು/ ಇತರೆ ಬ್ಯಾಂಕ್‌ಗಳಿಗೆ ಅಥವಾ ಪೋಸ್ಟ್‌ ಆಫೀಸ್‌ಗಳಿಗೆ ವರ್ಗಾಯಿಸಬಹುದು.

ಗಮನದಲ್ಲಿಡಬೇಕಾದ ಅಂಶಗಳು:

- ಪಿಪಿಎಫ್‌ನಡಿ ಚಂದಾದಾರರು ವಾರ್ಷಿಕವಾಗಿ 1,50,000 ರೂಪಾಯಿಗಿಂತ ಹೆಚ್ಚಿನ ಮೊತ್ತದ ಠೇವಣಿಯನ್ನು ಮಾಡಬಾರದು. ಏಕೆಂದರೆ ಅದಕ್ಕಿಂತ ಹೆಚ್ಚಿನ ಮೊತ್ತವು ಯಾವುದೇ ಬಡ್ಡಿಯನ್ನು ಗಳಿಸುವುದಿಲ್ಲ. ಜತೆಗೆ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯುವುದಿಲ್ಲ. ಇಲ್ಲಿ ಹೂಡಿಕೆ ಮೊತ್ತವನ್ನು ಒಟ್ಟಿಗೆ ಅಥವಾ ಕಂತುಗಳಲ್ಲಿ ಡೆಪಾಸಿಟ್‌ ಮಾಡಬಹುದು.

- ಬಡ್ಡಿ ಮೊತ್ತವನ್ನು ಪ್ರತಿ 5ನೇ ತಾರೀಕು ಹಾಗೂ ತಿಂಗಳ ಅಂತ್ಯದಲ್ಲಿನ ಪಿಪಿಎಫ್‌ ಖಾತೆ ಬ್ಯಾಲೆನ್ಸ್‌ ಆಧರಿಸಿ ಲೆಕ್ಕ ಹಾಕಲಾಗುತ್ತದೆ. ಪ್ರತಿವರ್ಷ ಮಾರ್ಚ್‌ 31ಕ್ಕೆ ಬಡ್ಡಿ ಜಮೆ ಮಾಡಲಾಗುತ್ತದೆ.

ಪಿಪಿಎಫ್‌ ಖಾತೆ ತೆರೆಯುವುದು ಹೇಗೆ?

ಯಾವುದೇ ಅಧಿಕೃತ ಬ್ಯಾಂಕ್‌ ಅಥವಾ ಪೋಸ್ಟ್‌ ಆಫೀಸ್‌ನ ಯಾವುದೇ ಶಾಖೆಯಲ್ಲಿ ಪಿಪಿಎಫ್‌ ಖಾತೆಯನ್ನು ತೆರೆಯಬಹುದು. ಪಿಪಿಎಫ್‌ ಖಾತೆಯನ್ನು ತೆರೆಯುವುದಕ್ಕೆ ನೀವು ಖಾತೆ ತೆರೆಯುವ ಫಾರ್ಮ್‌ ಅನ್ನು ಭರ್ತಿ ಮಾಡಿ ನೀಡಬೇಕು. ಜತೆಗೆ, ಅದಕ್ಕೆ ಐಡಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಖಾತೆಯನ್ನು ತೆರೆದ ಬಳಿಕ ಯಾವುದೇ ಸಮಯದಲ್ಲಿ ನಿಮ್ಮ ಖಾತೆಗೆ ನಗದು ರೂಪದಲ್ಲಿ ಅಥವಾ ಆನ್‌ಲೈನ್‌ ಮೂಲಕ ಹಣವನ್ನು ಜಮೆ ಮಾಡಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+