ದೇಶದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿಯ ವಿವಾಹದ ಸಿದ್ಧತೆ ನಡೆಯುತ್ತಿದೆ. ಅನಂತ್ ಅಂಬಾನಿಯು ತನ್ನ ಬಾಲ್ಯದ ಸ್ನೇಹಿತೆ ರಾಧಿಕಾ ಮರ್ಚೆಂಟ್‌ರನ್ನು ವಿವಾಹವಾಗಲಿದ್ದಾರೆ. ಈ ಸಂದರ್ಭದಲ್ಲಿ ಮುಕೇಶ್ ಅಂಬಾನಿಯ ಪುತ್ರಿ ಇಶಾ ಅಂಬಾನಿಯ ಲುಕ್ ಹೇಗಿರಲಿದೆ ಎಂದು ಕಾತುದ ಹಲವಾರು ಮಂದಿಗೆ ಇದೆ.
ಮುಕೇಶ್ ಅಂಬಾನಿಯ ಪುತ್ರಿ ಇಶಾ ಅಂಬಾನಿಯು ತನ್ನ ವಿವಾಹದಲ್ಲಿ ರೋಯಲ್ ಲುಕ್ ಹೊಂದಿದ್ದರು, ಹಾಗೆಯೆ ಅತೀ ದುಬಾರಿ ಲೆಹೆಂಗಾವನ್ನು ಧರಿಸಿದ್ದರು. 2018ರಲ್ಲಿ ಇಶಾ ಅಂಬಾನಿ, ಅನಂತ್ ಪರಿಮಳ್‌ರನ್ನು ವಿವಾಹವಾಗಿದ್ದಾರೆ. ಈ ವಿವಾಹವನ್ನು ಸುಮಾರು 700 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಅದ್ದೂರಿಯಾಗಿ ನಡೆಸಲಾಗಿದೆ. ವಿವಾಹವನ್ನು ಒಂದು ಹಬ್ಬವಾಗಿಯೇ ಆಚರಿಸಲಾಗಿದೆ.
ಇಶಾ ಅಂಬಾನಿಯ ವಿವಾಹದ ವೇಳೆ ಜನರು ಇಶಾ ಅಂಬಾನಿಯ ನೋಟ, ಅದ್ದೂರಿ ಅರೆಂಜ್‌ಮೆಂಟ್‌ನಿಂದ ಆಕರ್ಷಿತರಾಗಿದ್ದರು. ಇಶಾ ಅಂಬಾನಿಯ ರೋಯಲ್ ಲೆಹೆಂಗಾವು ದೇಶದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅದರ ವಿಭಿನ್ನ ಡಿಸೈನ್‌ನಿಂದ ಮಾತ್ರವಲ್ಲ, ಅದರ ಬೆಲೆಯಿಂದಾಗಿ ಅತೀ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು.

ಲೆಹೆಂಗಾದ ಮೌಲ್ಯ ಎಷ್ಟಿದೆ ನೋಡಿ
ನಿಶಾ ಅಂಬಾನಿ ಕೂಡಾ ತನ್ನ ಬಾಲ್ಯದ ಸ್ನೇಹಿತನನ್ನು ವಿವಾಹವಾಗಿದ್ದಾರೆ. ಅನಂತ್ ಪರಿಮಳ್ ಜೊತೆ ವಿವಾಹದ ಸಂದರ್ಭದಲ್ಲಿ ಇಶಾ ಅಂಬಾನಿ ಅಬು ಜಾನಿ ಸಂದೀಪ್ ಕೋಸ್ಲಾ ಡಿಸೈನ್ ಮಾಡಿದ ಬೆಸ್‌ಪೋಕ್ ಲೆಹೆಂಗಾವನ್ನು ಧರಿಸಿದ್ದಾರೆ. ಈ ಲೆಹೆಂಗಾ ಸುಮಾರು 90 ಕೋಟಿ ರೂಪಾಯಿ ಮೌಲ್ಯವಾಗಿದೆ.
ಈ ವಿಶೇಷವಾದ ಲೆಹೆಂಗಾವು ಹೆಚ್ಚಿನ ಜನರ ಗಮನವನ್ನು ಸೆಳೆದಿದೆ. ಅಬು ಜಾನಿ ಸಂದೀಪ್ ಖೋಸ್ಲಾ ಅವರ ಆಫ್-ವೈಟ್ ಲೆಹೆಂಗಾವು ಕೆಂಪು ಬಾರ್ಡರ್ ಅನ್ನು ಕೂಡಾ ಹೊಂದಿದೆ. ಮುಕೈಶ್ ಮತ್ತು ನಕ್ಷಿ ಡಿಸೈನ್ ಕೂಡಾ ಇದೆ. ಲೆಹೆಂಗಾವು ಎರಡು ದುಪಟ್ಟಾವನ್ನು ಹೊಂದಿದೆ. ಕೆಂಪು ಬಣ್ಣದ ಕಸೂತಿ ಬಟ್ಟೆಯ ದುಪ್ಪಟ್ಟಾ ಮತ್ತು ತಲೆಯ ಮೇಲೆ ಇಟ್ಟ ಬಿಳಿ ಬಣ್ಣದ ಸೀಕ್ವಿನ್ ದುಪಟ್ಟಾ ಇದ್ದವು. 90 ಕೋಟಿ ರೂ.ಗಳ ಲೆಹೆಂಗಾದ ವಿಶೇಷತೆ ಏನೆಂದರೆ, ಇದು 35 ವರ್ಷ ಹಳೆಯ ಹೇರ್‌ಲೋಮ್ ಪೀಸ್ ಅನ್ನು ಹೊಂದಿರುವುದು ಆಗಿದೆ.
ಇಶಾ ಅಂಬಾನಿಯವರ ವಿವಾಹಕ್ಕೆ ಹಲವಾರು ಮಂದಿ ಸೆಲೆಬ್ರೆಟಿಗಳು ಹಾಜರಾಗಿದ್ದರು. ಅಂತರಾಷ್ಟ್ರೀಯ ಪಾಪ್ ಸ್ಟಾರ್ ಬೆಯೋನ್ಸ್ ಹಾಜರಾಗಿದ್ದರು. ಅಮಿತಾಭ್ ಬಚ್ಚನ್, ಪ್ರಿಯಾಂಕಾ ಚೋಪ್ರಾ, ಸಚಿನ್ ತೆಂಡೂಲ್ಕರ್, ಶಾರುಖ್ ಖಾನ್ ಮತ್ತು ಇತರೆ ಸೆಲೆಬ್ರೆಟಿಗಳು ಕೂಡಾ ಈ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.


Click it and Unblock the Notifications