ಭಾರತೀಯ ಜೀವ ವಿಮಾ ನಿಗಮದ ಪಿಂಚಣಿ ಯೋಜನೆಗಳ ಪೈಕಿ "ಎಲ್ಐಸಿ ಹೊಸ ಜೀವನ ಶಾಂತಿ ಯೋಜನೆ" ಯು ಪಾಲಿಸಿದಾರರಿಗೆ ನಿವೃತ್ತಿ ನಂತರ ಆರ್ಥಿಕ ನೆರವು ನೀಡುತ್ತದೆ. ನಿವೃತ್ತಿ ನಂತರದ ನೆಮ್ಮದಿಯ ಜೀವನಕ್ಕಾಗಿ "ನಿವೃತ್ತಿಗಾಗಿ ಪ್ಲ್ಯಾನ್" ಮಾಡಿಕೊಳ್ಳುವುದು ಜೀವನದ ಮುಖ್ಯ ಅಂಶವಾಗಿದೆ. ಭವಿಷ್ಯದ ಭದ್ರತೆಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಯೋಜನೆ ರೂಪಿಸಿಕೊಳ್ಳಬೇಕು. ಇದಕ್ಕಾಗಿ ಎಲ್ಐಸಿ ಹೊಸ ಜೀವನ ಶಾಂತಿ ಯೋಜನೆ (ಪ್ಲ್ಯಾನ್ ನಂಬರ್ 858) ಒಂದು ಉತ್ತಮ ಯೋಜನೆಯಾಗಿದ್ದು, ನಿವೃತ್ತಿ ನಂತರ ಆಜೀವ ಪಿಂಚಣಿ ಸೌಲಭ್ಯವನ್ನು ನೀಡುತ್ತದೆ.
ವರ್ಷಾಶನ ಯೋಜನೆ ಎರಡು ಆಯ್ಕೆ ಇಲ್ಲಿದೆ:
ಒಬ್ಬರಿಗೆ ಮತ್ತು ಜಂಟಿ ವ್ಯಕ್ತಿಗಳ ಜೀವನಕ್ಕಾಗಿ ಅನುಕೂಲ ಕಲ್ಪಿಸುವ ಯೋಜನೆ ಇದು. ಈ ಯೋಜನೆಯಲ್ಲಿ ವಾರ್ಷಿಕ, ಅರ್ಧವಾರ್ಷಿಕ, ತ್ರೈಮಾಸಿಕ ಅಥವಾ ಮಾಸಿಕ ಹೀಗೆ ವ್ಯಕ್ತಿಯ ಅವಶ್ಯಕತೆಗಳಿಗೆ ಅನುಗುಣವಾಗಿ ನಿಶ್ಚಿತ ಪಿಂಚಣಿ ಮೊತ್ತವನ್ನು ಪಡೆಯಬಹುದು. ವರ್ಷಾಶನ ಯೋಜನೆಯೂ ಒಂದು ರೀತಿಯ ವಿಮಾ ಒಪ್ಪಂದವಾಗಿದ್ದು ಇಲ್ಲಿ ಒಂದು ನಿಯಮಿತ ಪಾವತಿಯ ಬದಲು ವಿಮಾ ಕಂಪನಿಗೆ ಒಂದು ಬಾರಿ ದೊಡ್ದ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಈ ಯೋಜನೆ ಒಂದು ಪ್ರಮುಖ ಪ್ರಯೋಜನವೆಂದರೆ, ವ್ಯಕ್ತಿಯೂ ನೌಕರಿಯಲ್ಲಿರುವಾಗಲೇ ಯಾವುದೋ ಕಾರಣಕ್ಕೆ ಶಾಶ್ವತವಾಗಿ ನಿವೃತ್ತ ಹೊಂದಿದರೂ, ಪಿಂಚಣಿ ಸೌಲಭ್ಯ ದೊರೆಯುತ್ತದೆ. ಈ ವಿಮೆ ಪರಿಶೀಲನೆ ವೇಳೆ ಫಲಾನುಭವಿಗಳಿಗೆ ನೀಡುವ ವಾರ್ಷಿಕ ಮೊತ್ತವನ್ನು ನಿರ್ಧರಿಸಲಾಗುತ್ತದೆ ಹಾಗೂ ಅವಧಿ ಮುಗಿದ ಬಳಿಕ ಅದನ್ನು ಪಾವತಿಸಲಾಗುತ್ತದೆ. ಎಲ್‌ಐಸಿ 2023 ಜನವರಿ 5ರಿಂದ ಈ ಹೊಸ ಜೀವನ ಶಾಂತಿ ಯೋಜನೆಯ ವಾರ್ಷಿಕ ಮೊತ್ತವನ್ನು ಪರಿಷ್ಕರಿಸಲಾಗಿದೆ.
ಈ ಯೋಜನೆಯಡಿ ಗರಿಷ್ಟ ಮೊತ್ತ ಹೂಡಿಕೆಗೆ ಯಾವುದೇ ಮಿತಿ ಇಲ್ಲ ಆದರೆ ಯೋಜನೆಯ ಕನಿಷ್ಟ ಹೂಡಿಕೆ ಮೊತ್ತ 1.5 ಲಕ್ಷ ರೂ. ಆಗಿದೆ. ಒಂದು ವೇಳೆ ವ್ಯಕ್ತಿಯೊಬ್ಬರು 1.5 ಲಕ್ಷ ರೂ. ಹೂಡಿಕೆ ಮಾಡಿದರೆ ಅವರು ಮುಂದೆ ಮಾಸಿಕವಾಗಿ 1000 ರೂ.ವಿನಂತೆ ತಮ್ಮ ಜೀವಿತಾವಧಿವರೆಗೆ ಪಡೆಯುತ್ತಾರೆ. ಒಂದು ವೇಳೆ ವಿಮಾದಾರರು ಯಾವುದೇ ಕಾರಣದಿಂದ ಮೃತಪಟ್ಟರೆ ಠೇವಣಿ ಮೊತ್ತವನ್ನು ನಾಮಿನಿಗೆ ವರ್ಗಾಯಿಸಲಾಗುತ್ತದೆ.
ಒಬ್ಬರಿಗಷ್ಟೇ ಪಿಂಚಣಿ ಯೋಜನೆ ಮಾಡಿಸಿಕೊಂಡಿದ್ದ ಅಂತಹ ಸಂದರ್ಭದಲ್ಲಿ ಅವರ ಠೇವಣಿ ಮೊತ್ತವನ್ನು ನಾಮಿನಿಗೆ ವರ್ಗಾಯಿಸಲಾಗುತ್ತದೆ. ಇನ್ನು ಪಾಲಿಸಿದಾರರು ಬದುಕಿದ್ದರೆ ಪಿಂಚಣಿ ಅವರಿಗೆಯೇ ಲಭಿಸುತ್ತದೆ. ಒಂದು ವೇಳೆ ಜಂಟಿ ಪಾಲಿಸಿ ಮಾಡಿಸಿಕೊಂಡು ಒಬ್ಬರು ಮೃತಪಟ್ಟ ಸಂದರ್ಭದಲ್ಲಿ ಇನ್ನೊಬ್ಬರಿಗೆ ಪಿಂಚಣಿ ಲಭಿಸುತ್ತದೆ. ಇಬ್ಬರೂ ಮೃತಪಟ್ಟರೆ ಎಲ್ಲಾ ಹಣವನ್ನು ನಾಮಿನಿ ಪಡೆಯುತ್ತಾರೆ.


Click it and Unblock the Notifications